LakshmiNivasa ; ಲಕ್ಷ್ಮೀ ನಿವಾಸ ಧಾರಾವಾಹಿ ಯಲ್ಲಿ ಬದಲಾದ ಖುಷಿ, ನಿಶಿತಾನ ಕಾಣದೆ ಬೇಸರಗೊಂಡ ಫ್ಯಾನ್ಸ್.!

By ಪೂರ್ವ

ಇತ್ತೀಚಿನ ದಿನಗಳಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿ ಹೊರಹೊಮ್ಮಿದೆ. ಎಲ್ಲಾ ಪಾತ್ರಧಾರಿಗಳ ಅಭಿನಯ ಒಬ್ಬರನ್ನೊಬ್ಬರು ಮೀರಿಸುವ ಹಾಗೆ ಇದೆ. ಇದೀಗ ಭಾವನ ಗೆ ಮದುವೆ ಆಗಿದೆ. ಆಕೆಗೆ ತನ್ನ ಮಗು ಖುಷಿಯನ್ನು ಗಂಡನ ಮನೆಗೆ ಕರೆದುಕೊಂಡು ಹೋಗಲು ಸಾಧ್ಯ ಆಗುತ್ತಿಲ್ಲ. ಅಲ್ಲಿ ಜವರೆ ಗೌಡರಿಗೆ ಭಾವನ ಇರುವುದನ್ನು ಕಂಡರೆ ಸ್ವಲ್ಪವೂ ಇಷ್ಟ ಇಲ್ಲ. ಅಂತಹದರಲ್ಲಿ ಖುಷಿಯನ್ನು ನೋಡಿದರೆ ಜವರೆ ಗೌಡರಿಗೆ ಕೋಪ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಭಾವನ ಖುಷಿಯನ್ನು ತವರು ಮನೆಯಲ್ಲಿಯೇ ಬಿಟ್ಟು ಹೋಗುತ್ತಾಳೆ.

ಇದನ್ನು ತನ್ನ ಸದುದ್ದೇಶಕ್ಕೆ ಬಳಸಿಕೊಂಡ ಸೌಪರ್ಣಿಕಾ ಇದೀಗ ಅಣ್ಣನ ಮಗಳನ್ನು ಎತ್ತಿಕೊಂಡು ಮನೆಗೆ ಹೋಗಿದ್ದಾಳೆ. ಆದರೆ ಈ ವಿಚಾರ ಭಾವನ ಗೆ ತಿಳಿದಿಲ್ಲ. ಸೌಪರ್ಣಿಕಾ ಖುಷಿಯನ್ನು ನಡೆಸಿಕೊಳ್ಳುವ ರೀತಿ ಭಾವನ ಗೆ ಇಷ್ಟ ಆಗಿಲ್ಲ. ಭಾವನ ಗೆ ಚೆನ್ನಾಗಿಯೇ ತಿಳಿದಿದೆ. ಖುಷಿಯನ್ನು ಕೇವಲ ಆಸ್ತಿಗಾಗಿ ಸೌಪರ್ಣಿಕಾ ನೋಡಿಕೊಳ್ಳುತ್ತಿರುವುದು ಎಂದು. ಆದರೆ ಇಷ್ಟರವರೆಗೆ ಮುದ್ದು ಮುದ್ದು ಮಾತುಗಳನ್ನಾಡುತ್ತಾ ಎಲ್ಲರ ಮನಸನ್ನು ಗೆದ್ದ ಖುಷಿ ನಿಜವಾದ ಹೆಸರು ನಿಶಿತಾ. ಈಕೆಯ ಅಭಿನಯ ನೋಡಿದ ಜನರು ಈಕೆಯ ಫ್ಯಾನ್ಸ್ ಆಗಿ ಬಿಟ್ಟಿದ್ದಾರೆ.

kannada serial Lakshmi nivasa written update 28th November

ಆದರೆ ಇದೀಗ ಲಕ್ಷ್ಮೀ ನಿವಾಸದಿಂದ ನಿಶಿತಾ ಹೊರ ನಡೆದಿದ್ದಾಳೆ. ಆದರೆ ಇದಕ್ಕೆ ಕಾರಣ ಎನು ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಖುಷಿಯ ಜಾಗಕ್ಕೆ ಇದೀಗ ಬೇರೆ ಮಗು ಬಂದಿದ್ದು ಖುಷಿ ಸ್ಥಾನವನ್ನು ತುಂಬುವ ಕೆಲಸವನ್ನು ಆ ಪುಟ್ಟ ಮಗು ಮಾಡುತ್ತಿದೆ. ಪುಟ್ಟ ಮಕ್ಕಳು ಯಾವುದೇ ರೀತಿಯ ನಟನೆ ಮಾಡಿದರು ಅದನ್ನು ನೋಡುವುದೇ ಒಂದು ಥರ ಚೆಂದ ಎಂದು ಸೀರಿಯಲ್ ಅಭಿಮಾನಿಗಳು ಹೇಳಿಕೊಳ್ಳುತ್ತಾರೆ. ಇನ್ನೂ ನಿಶಿತಾ ಎಲ್ಲರ ಮನಸನ್ನು ಕದ್ದ ಮುದ್ದು ಮೊಗದ ಚೋರಿ ಎಂದು ಹೇಳಿದರೆ ತಪ್ಪಾಗದು.

ಅದ್ಭುತವಾದ ಬಾಲ ನಟಿ ನಿಶಿತಾ

ಡ್ಯಾನ್ಸ್ ಮಾಡಲು ಸೈ, ನಟನೆ ಮಾಡುವುದಕ್ಕೂ ಸೈ. ಯಾವುದೇ ಹೊಸ ಹಾಡು ಟ್ರೆಂಡಿಂಗ್ ನಲ್ಲಿ ಇದ್ದರೆ ಆ ಹಾಡಿಗೆ ರೀಲ್ಸ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿರುತ್ತಾಳೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಈಕೆ ಮಾಡುವ ಯಾವುದೇ ರೀಲ್ಸ್ ಬಹಳ ವೈರಲ್ ಆಗುತ್ತದೆ. ಇದೀಗ ಲಕ್ಷ್ಮೀ ನಿವಾಸ ಧಾರವಾಹಿಯಿಂದ ನಿಶಿತಾ ಹೊರ ನಡೆದಿರುವುದು ಮಾತ್ರ ಆಕೆಯ ಅಭಿಮಾನಿಗಳಿಗೆ ಬಹಳ ದುಃಖವನ್ನು ನೀಡಿದೆ. ಮೊದಲಿಗೆ ಭಾವನ ಶ್ರೀಕಾಂತ್ ರನ್ನು ಮದುವೆ ಆಗಬೇಕಾಗಿತ್ತು. ಆದರೆ ಶ್ರೀಕಾಂತ್ ಮದುವೆ ದಿನವೇ ಕಾರು ಆಕ್ಸಿಡೆಂಟ್ ನಿಂದ ಸಾವನ್ನಪ್ಪುತ್ತಾರೆ.

ಖುಷಿಯನ್ನು ನೋಡಿಕೊಳ್ಳುತ್ತಿರುವ ಭಾವನ

ಇದರಿಂದ ಭಾವನಾಗೆ ಬಹಳ ನೋವು ಆಗುತ್ತೆ. ಖುಷಿ ತಂದೆ ತಾಯಿ ಇಲ್ಲದೆ ಅನಾಥೆ ಆಗುತ್ತಾಳೆ. ಖುಷಿ ಭಾವನಳನ್ನು ಬಿಟ್ಟು ಸೌಪರ್ಣಿಕಾ ಬಳಿ ಹೋಗಲು ಕೇಳಲೇ ಇಲ್ಲ. ಆದ ಕಾರಣ ಖುಷಿ ಜವಾಬ್ಧಾರಿಯನ್ನು ಭಾವನ ಹೊತ್ತುಕೊಂಡಿದ್ದಾಳೆ. ಆದರೆ ಇದೀಗ ಪುನಃ ಸೌಪರ್ಣಿಕಾ ಖುಷಿಯನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X