Lakshmi Nivasa : ಹಾಸಿಗೆ ಹಿಡಿದ ಸಿದ್ದುಗೆ ಮಮತೆಯ ಧಾರೆ ಎರೆದ ಖುಷಿ,ಪಶ್ಚಾತಾಪ ಪಡ್ತಿದ್ದಾರೆ ಸಿದ್ದೇಗೌಡರು..!

By ಪೂರ್ವ

ಸಿದ್ದೇಗೌಡರಿಗೆ ಯಾವಾಗ ತಾನೇ ಆಕ್ಸಿಡೆಂಟ್ ಮಾಡಿರುವುದು ಎಂದು ತಿಳಿದ ಬಳಿಕ ಬಹಳಷ್ಟು ನೋವಾಗುತ್ತದೆ. ಶ್ರೀಕಾಂತ್ ಅವರ ತಾಯಿ ಹಾಗೂ ಶ್ರೀಕಾಂತ್ ಸಾವಿನ ಹಿಂದೆ ಇರುವುದು ಬೇರೆ ಯಾರು ಅಲ್ಲ ನಾನೇ ಎನ್ನುವ ವಿಚಾರ ಸಿದ್ದೇಗೌಡರಿಗೆ ಈಗಾಗಲೇ ಅವರ ತಂದೆ ಜವರೇಗೌಡರು ಮನದಟ್ಟು ಮಾಡಿದ್ದಾರೆ ಜವರೇಗೌಡರು ಅದೆಷ್ಟೇ ಬಾರಿ ಸಿದ್ದೇಗೌಡರ ಬಳಿ ವಿಚಾರವನ್ನು ಹೇಳುವ ಪ್ರಯತ್ನ ಮಾಡುತ್ತಾರೆ ಕೊನೆಗೊಂದು ದಿನ ಈ ವಿಚಾರ ಯಾರಿಗೂ ತಿಳಿಯದ ಹಾಗೆ ಆಗಲಿ ಎಂದು ಅಂದುಕೊಳ್ಳುತ್ತಾರೆ ಆದರೂ ಕೂಡ ಕೊನೆಗೊಂದು ದಿನ ಈ ವಿಚಾರ ಬಯಲಿಗೆ ಬಂದೇ ಬಿಟ್ಟಿತು.

ಸಿದ್ದೇಗೌಡ ಹಾಗೂ ಭಾವನ ಹೇಗಾದರೂ ಮಾಡಿ ಖುಷಿಯ ತಂದೆ ಹೇಗೆ ಸತ್ತರು ಎನ್ನುವ ವಿಚಾರವನ್ನು ಎಲ್ಲರೆದುರು ಬಯಲಿಗೆಳೆಯಬೇಕು ಎನ್ನುವ ಕಾರಣಕ್ಕಾಗಿ ಹೋರಾಟಗಳನ್ನು ಮಾಡುತ್ತಾರೆ. ಆದರೆ ಇದರಿಂದ ಕೋಪಗೊಂಡ ಮನೆ ಮಂದಿ ಸಿದ್ದೇಗೌಡ ಹಾಗೂ ಭಾವನಾಳನ ಮನೆಯೊಳಗೆ ಸೇರಿಸಿಕೊಳ್ಳುವುದಿಲ್ಲ ಇಬ್ಬರೂ ಮನೆಯಿಂದ ಹೊರಗೆ ಹೋಗುತ್ತಾರೆ. ಕೊನೆಗೆ ಜವರೇ ಗೌಡರ ಮಾತುಗಳನ್ನು ಕೇಳಿ ಭಾವನಾ ಹಾಗೂ ಸಿದ್ದೇಗೌಡರು ಮನೆಗೆ ವಾಪಸ್ ಹಿಂದಿರುಗುತ್ತಾರೆ ಇದಾದ ಬಳಿಕ ಸಿದ್ದೇಗೌಡರ ಬಳಿ ಜವರೇಗೌಡರು ನಡೆದ ಸತ್ಯವನ್ನು ವಿವರಿಸುತ್ತಾರೆ. ಇದನ್ನು ಕೇಳಿದ ಸಿದ್ದೇಗೌಡರಿಗೆ ಆಕಾಶವೇ ಕಳಚಿ ಮೇಲೆ ಬಿದ್ದ ಹಾಗಾಗುತ್ತದೆ ಜ್ವರ ಬರುತ್ತದೆ. ತನ್ನ ಮನದಲ್ಲಿಯೇ ಸಿದ್ದೇಗೌಡರು ನೋವು ಅನುಭವಿಸುತ್ತಿರುತ್ತಾರೆ .

kannada-serial-lakshmi-nivasa-written-update-29th-january

ಭಾವನಾಗೆ ಈ ನಿಜ ವಿಚಾರ ತಿಳಿದರೆ ಮಾತ್ರ ಖಂಡಿತವಾಗಿಯೂ ಅವರು ನನ್ನನ್ನು ಕ್ಷಮಿಸುವುದಿಲ್ಲ ಎಂದು ತಂದೆಯ ಜೊತೆಗೆ ಸಿದ್ದೇಗೌಡರು ಬೇಸರ ತೋಡಿಕೊಳ್ಳುತ್ತಾರೆ. ಮಾನಸಿಕವಾಗಿ ಬಹಳ ಕುಗ್ಗಿದ ಸಿದ್ದೇಗೌಡರು ತನ್ನ ತಂದೆಯ ಜೊತೆ ಮಾತನಾಡುವತ್ತ ಗಮನ ಹರಿಸುತ್ತಾರೆ. ತನ್ನ ತಂದೆಯ ಬಳಿ ಮನದ ದುಃಖವನ್ನು ಹೇಳಿಕೊಳ್ಳುತ್ತಾರೆ. ನಾನು ಭಾವನೆಗೆ ಅದೆಷ್ಟೋ ಬಾರಿ ಮೋಸ ಮಾಡುತ್ತಿದೆ ಆದರೆ ಈ ಬಾರಿ ನನಗೆ ಖಂಡಿತವಾಗಲೂ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಯಾರೋ ಮೂರನೇ ವ್ಯಕ್ತಿ ಈ ನಿಜವನ್ನ ಹೇಳುವ ಮೊದಲು ನಾನು ನನ್ನ ಹೆಂಡತಿಯ ಬಳಿ ಈ ವಿಚಾರವನ್ನು ಹೇಳಬೇಕು ಎಂದುಕೊಂಡಿದ್ದೇನೆ ಎಂದು ಸಿದ್ದೇಗೌಡರು ಹೇಳಿದಾಗ ಜವರೇಗೌಡರು ಬಹಳ ಭಯಪಡುತ್ತಾರೆ

ಮಗನ ಸ್ಥಿತಿ ಕಂಡು ಬೇಸರ ಪಟ್ಟ ಜವರೇಗೌಡ

ಎಲ್ಲಿ ತನ್ನ ಮಗನ ಜೀವನ ಹಾಳಾಗಿ ಹೋಗುತ್ತದೆ ಎನ್ನುವ ಆತಂಕ ಅವರಿಗೆ. ಹೀಗಾಗಿ ಕೂಡಲೇ ಭಾವನ ಸಿದ್ದೇಗೌಡರಿಗೆ ಕರೆ ಮಾಡುತ್ತಾಳೆ. ಭಾವನ ಕರೆಯನ್ನ ನೋಡಿ ಸಿದ್ದೇಗೌಡರು ಎಲ್ಲ ನಿಜವನ್ನು ಹೇಳುವ ಎಂದು ಅಂದುಕೊಳ್ಳುತ್ತಾರೆ ಆದರೆ ಅವರ ಜೊತೆ ಮಾತನಾಡಲು ಸಿದ್ದೇಗೌಡರಿಗೆ ಧೈರ್ಯ ಸಾಲುವುದಿಲ್ಲ. ಸಿದ್ದೇಗೌಡರಿಗೆ ಇರುವ ಅನಾರೋಗ್ಯದ ವಿಚಾರ ತಿಳಿದು ಸೌಪರ್ಣಿಕ ಹಾಗೂ ಆಕೆಯ ಗಂಡ ಸಿದ್ದು ಮನೆಗೆ ಬರುತ್ತಾರೆ ಹಾಗೆಯೇ ಸಿದ್ದುವಿನ ಕ್ಷೇಮ ಸಮಾಚಾರವನ್ನು ವಿಚಾರಣೆ ಮಾಡುತ್ತಾರೆ ಆಗ ಅಲ್ಲಿಗೆ ಬಂದ ಖುಷಿ ಸಿದ್ದೇಗೌಡರ ಜೊತೆ ಮಾತನಾಡಲು ತೊಡಗುತ್ತಾಳೆ. ನನ್ನ ಜೊತೆ ಸಿದ್ದು ಅಪ್ಪ ಮಾತನಾಡುವುದೇ ಇಲ್ಲ ಇದೀಗ ನನ್ನ ಜೊತೆ ಸಿದ್ದು ಅಪ್ಪ ಆಡುವುದು ಕೂಡ ಇಲ್ಲ ಸಿದ್ದು ಅಪ್ಪ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ನೇರವಾಗಿ ಭಾವನ ಎದುರು ಸಿದ್ದೇಗೌಡರ ಬಳಿ ಕೇಳಿ ಬಿಡುತ್ತಾಳೆ.

ಖುಷಿ ಮಾತು ಕೇಳಿ ನೊಂದ ಸಿದ್ದು

ಸಿದ್ದೇಗೌಡರಿಗೆ ಮನದಲ್ಲಿ ಬಹಳ ನೋವಾಗುತ್ತದೆ ನಿನ್ನನ್ನು ತಂದೆಯ ಪ್ರೀತಿಯಿಂದ ವಂಚಿಸಿದ್ದು ನಾನೇ. ನಿನ್ನ ತಂದೆ ಬದುಕಿದ್ದರೆ ನಿನಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ. ನೀ ನು ಅನಾಥೆ ಆಗುತ್ತಿರಲಿಲ್ಲ. ಇಷ್ಟೆಲ್ಲ ಆದ ಮೇಲೆ ನಾನು ನಿನ್ನ ಜೊತೆ ಇರುವುದು ಹೇಗೆ ಹಾಗೆಯೇ ನಿನ್ನ ಜೊತೆ ಹೇಗೆ ಮಾತನಾಡಲಿ ಪುಟ್ಟ ಎಂದು ಬಹಳಷ್ಟು ನೋವು ಪಡುತ್ತಾನೆ. ಸಿದ್ದು ಇಷ್ಟೊಂದು ನೋವು ಪಡುವುದನ್ನು ನೋಡಿದ ಭಾವನಗೆ ಕಾರಣ ಏನೆಂದು ತಿಳಿದು ಕಂಗಾಲಾಗುತ್ತಾಳೆ. ಭಾವನಗೆ ಸಿದ್ದೆಗೌಡರ ಮೇಲೆ ಇದೀಗ ಕೊಂಚ ಪ್ರೀತಿ ಬಂದಿದೆ. ಆದರೆ ಶ್ರೀಕಾಂತ್ ಸಾವಿನ ವಿಚಾರದ ಸತ್ಯಾಸತ್ಯತೆ ಭಾವನ ಗೆ ತಿಳಿದರೆ? ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X