Lakshmi Nivasa ; ಮಗನ ಮಾತು ಕೇಳಿ ಬೇಸರಗೊಂಡ ಶ್ರೀನಿವಾಸ್, ಹೆತ್ತ ಮಕ್ಕಳಿಗೆ ಹೆತ್ತವರೇ ಬೇಡ !
ಹೆತ್ತವರನ್ನು ಹಂಚಿಕೊಳ್ಳುವ ವಿಚಾರ ಇದೀಗ ಲಕ್ಷ್ಮೀ ಹಾಗೂ ಶ್ರೀನಿವಾಸ್ ಕಿವಿಗೆ ಬಿದ್ದಿದೆ. ಮಕ್ಕಳ ಮಾತು ಕೇಳಿ ಇವರಿಬ್ಬರೂ ಕುಸಿದು ಹೋಗಿದ್ದಾರೆ. ಲಕ್ಷ್ಮೀ ಶ್ರೀನಿವಾಸ್ ಗೆ ಮಕ್ಕಳ ಮೇಲೆ ಸಾಕಷ್ಟು ಭರವಸೆ ಇತ್ತು. ಆದರೆ ಇದೀಗ ಮಕ್ಕಳ ಮೇಲೆ ಇರುವ ಭರವಸೆ ಕಮರಿ ಹೋಗಿದೆ. ತನ್ನ ಮಕ್ಕಳು ಖಂಡಿತವಾಗಿಯೂ ನಮ್ಮನ್ನು ಉದ್ದಾರ ಮಾಡಲು ಬಂದಿದ್ದಾರೆ ಎಂದುಕೊಂಡಿದ್ದ ಲಕ್ಷ್ಮೀ ಶ್ರೀನಿವಾಸ್ ಗೆ ಬಹಳ ಬೇಸರ ಮೂಡುತ್ತದೆ.ಇತ್ತ ಹರೀಶ್ ತನ್ನ ಹೆಂಡತಿ ಸಿಂಚನ ಬಳಿ ಪೀಠಿಕೆ ತೆಗೆಯುತ್ತಾನೆ. ಸಿಂಚನ ನಾವೇನೂ ಬೇರೆ ಮನೆಗೆ ಹೋಗುತ್ತಿದ್ದೇವೆ ಅಲ್ಲಿ ನಮಗೆ ಯಾರಾದರೂ ಅಡುಗೆ ಮಾಡಿಕೊಡಲು ಮನೆ ಕ್ಲೀನ್ ಮಾಡಲು ಯಾರಾದರೂ ಬೇಕಲ್ವಾ ಅದಕ್ಕೆ ಅಮ್ಮನ ಕರೆದುಕೊಂಡು ಹೋಗೋಣ ಎಂದು ಹೇಳುತ್ತಾನೆ.
ಮಗನ ಮಾತು ಲಕ್ಷ್ಮಿ ಗೆ ಕೇಳಿಸುತ್ತದೆ. ಇತ್ತ ಸಿಂಚನ ಮಾತ್ರ ಹರೀಶ್ ಬಳಿ ನಮ್ಮ ಜೊತೆಗೆ ಯಾರು ಬರುವ ಅಗತ್ಯವಿಲ್ಲ. ನನಗೆ ಯಾರು ಕೂಡ ಇಷ್ಟವಿಲ್ಲ. ನಮಗೆ ಇದುವರೆಗೆ ಪ್ರೈವೆಸಿ ಸಿಕ್ಕಿಲ್ಲ. ಇನ್ನು ಮುಂದೆಯೂ ನಮಗೆ ಪ್ರೈವಸಿ ಸಿಗಬಾರದು ಎಂಬುದು ನಿನ್ನ ಮಾತಿನ ಅರ್ಥವೇ ನನಗೆ ಅದ್ಯಾವುದೂ ಇಷ್ಟ ಆಗುವುದಿಲ್ಲ ಎಂದು ಹೇಳಿದಾಗ ಹರೀಶ್ ಮೆತ್ತಗೆ ಬೆಣ್ಣೆ ಸವರಿ ಸಿಂಚನ ಜೊತೆ ಮಾತನಾಡುತ್ತಾನೆ. ನೋಡು ಸಿಂಚನ ಅಮ್ಮ ಮನೆಗೆ ಬಂದರೆ ನನಗೆ ಬಹಳ ಸಹಾಯ ಆಗುತ್ತದೆ. ಅಡುಗೆ ಮಾಡಲಾಗಿರಬಹುದು ಮನೆ ಕ್ಲೀನ್ ಮಾಡಲು ಆಗಿರಬಹುದು ಒಳ್ಳೆಯದಾಗುತ್ತದೆ. ಅದಕ್ಕೆ ಅಮ್ಮನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗೋಣ ಎಂದು ಹೇಳುತ್ತಾನೆ.

ಹರೀಶ್ ಮಾತಿಗೆ ಸಿಂಚನ ಓಕೆ ಎನ್ನುತ್ತಾಳೆ. ಇತ್ತ ವೀಣಾ ಜೊತೆಗೆ ಸಂತೋಷ್ ಡಿಸ್ಕಶನ್ ಮಾಡುತ್ತಿರುತ್ತಾನೆ. ನೋಡೇ ಮೀನಾ ನಾವು ಬೇರೆ ಮನೆಗೆ ಹೋಗಬೇಕಾದರೆ ನನ್ನ ಅಪ್ಪನನ್ನು ಒಟ್ಟಿಗೆ ಕರೆದುಕೊಂಡು ಹೋಗೋಣ, ಬೇರೆ ಬೇರೆ ಮನೆಯಿಂದ ಬಳಿಕ ಜವಾಬ್ದಾರಿಗಳು ಕೂಡ ಬೇರೆ ಬೇರೆ ಆಗಿರುತ್ತದೆ. ಅಮ್ಮನನ್ನು ಹರೀಶ ಕರೆದುಕೊಂಡು ಹೋಗುತ್ತಾನಂತೆ. ಅವರಿಗೆ ಬೇರೆ ಪದೇ ಪದೇ ಆರೋಗ್ಯ ಕೆಡುತಿರುತ್ತದೆ. ಅವರನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಹಾಗೆಯೇ ಸಿಂಚನ ತಂದೆ ಮಂತ್ರಿಯಾಗಿರುವುದರಿಂದ ಖಂಡಿತವಾಗಿಯೂ ಅವರಿಗೆ ಹಣದ ಕೊರತೆ ಮಾತ್ರ ಬರಲಿಕ್ಕಿಲ್ಲ. ನಾವು ಅಪ್ಪನನ್ನು ಕರೆದುಕೊಂಡು ಹೋಗೋಣ ಅಪ್ಪ ಅವರ ಕೆಲಸವನ್ನು ಅವರೇ ಮಾಡುತ್ತಾರೆ. ಏನು ತೊಂದರೆ ಇಲ್ಲ ಎಂದು ಹೇಳುತ್ತಾನೆ.
ವೀಣಾ ಮಾತಿಗೆ ಸಿಡುಕಿದ ಸಂತೋಷ್
ಇದನ್ನು ಕೇಳಿದ ವೀಣಾ ನನಗೆ ಚೆನ್ನಾಗಿಯೇ ತಿಳಿದಿದೆ ನೀವು ಮಾವನನ್ನು ಯಾಕೆ ನಮ್ಮ ಜೊತೆ ಇರಲಿ ಎನ್ನುತ್ತಿರುವುದು ಎಂದು . ಮಾವ ದುಡಿಯುವ ಹಣವನ್ನು ನೀವು ಇಟ್ಟುಕೊಳ್ಳುವ ಆಸೆಯಲ್ಲಿ ಹೀಗೆ ಮಾಡುತ್ತಿದ್ದೀರಿ. ಈ ಇಳಿ ವಯಸ್ಸಿನಲ್ಲಿ ಗಂಡ ಹೆಂಡತಿಯನ್ನು ದೂರ ಮಾಡಿದರೆ ಖಂಡಿತವಾಗಿಯೂ ನಮಗೆ ಒಳ್ಳೇದು ಆಗುವುದಿಲ್ಲ. ಹಾಗೆಯೇ ಅವರಿಬ್ಬರೂ ಬಹಳ ಪ್ರೀತಿಸಿ ಮದುವೆ ಆದವರು. ಅವರು ಕೊನೆಯವರೆಗೆ ಒಟ್ಟಿಗೆ ಇದ್ದರೆ ಚೆಂದ ಎಂದಾಗ ಹರೀಶ್ ಆಕೆಯ ಮಾತನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ.
ಮಕ್ಕಳ ಮಾತಿಗೆ ನೊಂದ ಶ್ರೀನಿವಾಸ್ ಲಕ್ಷ್ಮೀ
ಇದೆಲ್ಲವನ್ನೂ ದೂರದಿಂದಲೇ ಶ್ರೀನಿವಾಸ್ ಕೇಳಿಸಿಕೊಳ್ಳುತ್ತಾನೆ . ಮಕ್ಕಳ ಮಾತು ಕೇಳಿ ಶ್ರೀನಿವಾಸ್ ಗೆ ಬಹಳ ನೋವಾಗುತ್ತದೆ. ಮಕ್ಕಳು ಸಣ್ಣ ವಯಸ್ಸಿನಲ್ಲಿ ಇರಬೇಕಾದರೆ ಅವರ ಲಾಲನೆ ಪಾಲನೆ ಎಂದು ಎಲ್ಲಾ ಹಣವನ್ನು ಅವರಿಗೆ ಖರ್ಚು ಮಾಡಿದರೆ ಮಕ್ಕಳು ದೊಡ್ಡವರಾದ ಮೇಲೆ ಅಪ್ಪ ಅಮ್ಮನನ್ನು ನೋಡಿಕೊಳ್ಳಲು ಕಷ್ಟ ಆಗುತ್ತದಲ್ಲ. ಇಂತಹ ಮಕ್ಕಳು ಬೇಕಾ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ.
ಇನ್ನು ಜಾಹ್ನವಿ ವಿಶ್ವನ ಮನೆಯಿಂದ ದೂರ ಹೋಗಬೇಕು ಎಂದು ಅಂದುಕೊಂಡರೆ ಲಲಿತಾ ದೇವಿ ಜಾಹ್ನವಿಯನ್ನು ತಡೆಯುತ್ತಾಳೆ . ಯಾಕೆ ಜಾಹ್ನವಿ ಮನೆ ಬಿಟ್ಟು ಹೋಗುತ್ತಿಯ? ಅಂತಹದ್ದು ಏನಾಯಿತು ? ಮನೆ ಬಿಟ್ಟು ನೀನು ಎಲ್ಲಿಗೆ ಹೊಗುತ್ತಿಯಾ ಎಂದು ಪ್ರಶ್ನೆ ಮೇಲೆ ಪ್ರಜ್ಞೆ ಮಾಡುತ್ತಾರೆ.


Click it and Unblock the Notifications











