Lakshmi Nivasa ; ಅಪ್ಪ ಅಮ್ಮನನ್ನು ಬೇರೆ ಮಾಡಲು ಹೊರಟ ಮಕ್ಕಳು, ಮಕ್ಕಳ ನಿರ್ಧಾರ ಲಕ್ಷ್ಮೀ ಶ್ರೀನಿವಾಸ್ ಗೆ ಗೊತ್ತಾದರೆ?
ಹರೀಶ್, ಸಿಂಚನ ಈಗಾಗಲೇ ಬೇರೆ ಮನೆಗೆ ಹೋಗಬೇಕು ಎಂದು ಡಿಸೈಡ್ ಮಾಡಿದ್ದಾರೆ. ಅದಕ್ಕೆ ಜವರೇಗೌಡ ರ ಕುಮ್ಮಕ್ಕು ಬೇರೆ. ಸಿಂಚನಾ ಆಕೆಯ ಅತ್ತೆ ಮನೆಯಲ್ಲಿ ಏನಾದರೂ ಕೊಂಚ ಪ್ರಾಬ್ಲಂ ಆದರೆ ತವರು ಮನೆಗೆ ಹೋಗುತ್ತಿದ್ದಳು. ಅಲ್ಲಿ ಭಾವನಗೆ ಎಲ್ಲಿ ಕಾಟ ಕೊಡುತ್ತಾಳೋ ಎಂದು ಬಹಳ ಆತಂಕ ಜವರೆ ಗೌಡರಿಗೆ ಕಾಡುತ್ತಿರುತ್ತದೆ.
ಸಿಂಚನಾ ಮಾತಿಗೆ ಜವರೆ ಗೌಡರು ಎನು ಮಾತನಾಡದೆ ಒಂದು ಮನೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಇದರಿಂದ ಸಿಂಚನಾ ಗೆ ಬಹಳ ಖುಷಿ ಆಗುತ್ತದೆ . ಅತ್ತೆ ಮನೆಗೆ ಬಂದ ಸಿಂಚನ ನನಗೆ ನನ್ನ ತಂದೆ ಮನೆ ಗಿಫ್ಟ್ ಮಾಡಿದ್ದಾರೆ ಅದಕ್ಕೆ ವೀಣಾ ಅಕ್ಕ ನೀವೇ ಕಾರಣ ಎಂದು ಹೇಳಿ ಸ್ವೀಟ್ ಕೊಡುತ್ತಾಳೆ.

ಆಕೆಯ ಮಾತು ಕೇಳಿದ ವೀಣಾಗೆ ತುಂಬಾ ನೋವು ಆಗುತ್ತದೆ. ನಾನು ಹಾಗೆಲ್ಲ ಎನು ಅಂದುಕೊಂಡಿಲ್ಲ. ಹಾಗೆಯೇ ನಿನಗೆ ಬೇಕು ಎಂದು ನಾನು ಹರ್ಟ್ ಮಾಡಿಲ್ಲ ಎಂದು ಹೇಳಿದಾಗ ಸಿಂಚನ ಮಾತ್ರ ನೀವೇನೇ ಹೇಳಿ ನಿಮ್ಮಿಂದಾಗಿಯೇ ನಾನು ಬೇರೆ ಮನೆ ಮಾಡಿದ್ದು ಎಂದು ಸಿಂಚನ ಹೇಳುತ್ತಾಳೆ.
ಆಕೆಯ ಮಾತು ವೀಣಾ ಬೇಸರ ಮಾಡಿಕೊಳ್ಳುತ್ತಾಳೆ. ದೂರದಲ್ಲಿ ಇದೆಲ್ಲವನ್ನೂ ಲಕ್ಷ್ಮೀ ಗಮನಿಸುತ್ತಿರುತ್ತಾಳೆ. ಸಿಂಚನ ಮಾತು ಕೇಳಿ ಲಕ್ಷ್ಮೀಗೆ ಬಹಳ ಆತಂಕವಾಗುತ್ತದೆ.ಮನೆ ಇಬ್ಭಾಗ ಆಗಿ ಬಿಡುತ್ತದೆ. ಮಕ್ಕಳು ಒಬ್ಬೊಬ್ಬರಾಗಿ ತನ್ನ ಹಾದಿಯಲ್ಲಿ ಬದುಕುತ್ತಿದ್ದಾರೆ ಎಂದು ನೊಂದುಕೊಳ್ಳುತ್ತಾರೆ .
ಇತ್ತ ಹರೀಶ್ ಹಾಗೂ ಸಿಂಚನ ಹೊಸ ಮನೆಯನ್ನು ನೋಡಿಕೊಂಡು ಬಂದು ಖುಶಿಯಲ್ಲಿರುತ್ತಾಳೆ. ಇದೆಲ್ಲವನ್ನೂ ನೋಡಿದ ಸಂತೋಷ ಹರೀಶನನ್ನು ಪಕ್ಕಕ್ಕೆ ಕರೆದು ಹೇಳುತ್ತಾನೆ. ಲೋ ಹರೀಶ್ ನೀನು ಬೇರೆ ಮನೆಗೆ ಹೋಗುವ ಖುಷಿಯಲ್ಲಿ ಇದ್ದೀಯಾ.
ಆದರೆ ಇದೀಗ ಇನ್ನೊಂದು ವಿಚಾರ ಇತ್ಯರ್ಥ ಆಗಬೇಕು. ನೀನು ಅಪ್ಪ ಅಮ್ಮನ ಜವಾಬ್ದಾರಿಯನ್ನು ಮರೆತಿದ್ದೀಯಾ ನೀನು ಅಪ್ಪ ಅಮ್ಮನಲ್ಲಿ ಒಬ್ಬರನ್ನ ಕರೆದುಕೊಂಡು ಹೋಗು ಒಬ್ಬರನ್ನ ನಾನು ನೋಡಿಕೊಳ್ಳುತ್ತೇನೆ ಅವರಿಗೆ ಬೇರೆ ವಯಸ್ಸಾಗುತ್ತಾ ಬಂತು ನಾವಿಬ್ಬರು ಬೇರೆ ಬೇರೆ ಕಡೆ ಹೋದರೆ ಖಂಡಿತವಾಗಿಯೂ ಅವರಿಗೆ ಕಷ್ಟ ಆಗಬಹುದು ಆದ ಕಾರಣ ಅಪ್ಪ-ಅಮ್ಮನನ್ನು ಡಿವೈಡ್ ಮಾಡುವುದೇ ಬೆಟರ್ ಎಂದು ಸಂತೋಷ ಹೇಳುತ್ತಾನೆ.
ಸಂತೋಷ್ ಮಾತಿಗೆ ಮೌನಿಯಾದ ಹರೀಶ್
ಈ ಮಾತು ಕೇಳಿದ ಹರೀಶ್ ಕೊಂಚ ಮೌನಿಯಾಗುತ್ತಾನೆ. ಹಾಗೆಯೇ ಸಿಂಚನ ಬಳಿ ನಾನು ಈ ಬಗ್ಗೆ ಮಾತನಾಡಿ ನಿನ್ನ ಬಳಿ ಹೇಳುತ್ತೇನೆ ಎಂದು ಹೇಳಿ ಹೆಂಡತಿಯ ಬಳಿಗೆ ಹೋಗುತ್ತಾನೆ. ಸಿಂಚನ ಮನೆಯಲ್ಲಿ ಡ್ರೆಸ್ ಗಳನ್ನೆಲ್ಲಾ ಜೋಡಿಸುತ್ತಿರುತ್ತಾಳೆ. ಆಕೆಗೆ ಬಹಳ ಖುಷಿ ತಾನು ಬೇರೆ ಮನೆಗೆ ಹೋಗಿ ಖುಷಿಯಾಗಿ ಇರಬಹುದು ಎನ್ನುವ ಆಲೋಚನೆ ಆಕೆಗೆ ಮೂಡುತ್ತದೆ. ಇನ್ನು ಹರೀಶ್ ಮಾತು ಕೇಳಿ ಸಿಂಚನಗೆ ಬಹಳ ಕೋಪ ಬರುತ್ತದೆ. ಹರೀಶ್ ಮಾತನ್ನು ಸಿಂಚನ ಕೇಳಲು ರೆಡಿ ಇರುವುದಿಲ್ಲ.
ವಿಶ್ವನ ಮನೆ ಬಿಟ್ಟು ಹೋದ ಜಾಹ್ನವಿ
ಇತ್ತ ಜಾಹ್ನವಿ ಮನೆ ಬಿಟ್ಟು ಹೋಗುತ್ತಾಳೆ ಆಕೆಗೆ ಜಯಂತ್ ನ ಭಯ ಕಾಡುತ್ತದೆ. ತಾನು ಇರುವ ವಿಚಾರ ಜಯಂತ್ ಗೆ ತಿಳಿದರೆ ಬಹಳ ಕಷ್ಟ ಎಂದುಕೊಂಡು ವಿಶ್ವ ನ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡುತ್ತಾಳೆ. ಆಕೆಗೆ ಜಯಂತ್ ಖಂಡಿತವಾಗಿಯೂ ನನ್ನನ್ನು ಪತ್ತೆ ಹಚ್ಚಿ ಹಚ್ಚುತ್ತಾನೆ ಎನ್ನುವ ಭಯ . ತಾನು ಜಯಂತ್ ಕೈ ಗೆ ಸಿಕ್ಕಿ ಬಿದ್ದರೆ ಖಂಡಿತವಾಗಿಯೂ ಜೀವಂತ ಶವ ಆಗುವುದು ಖಂಡಿತ ಎಂದು ಮನದಲ್ಲಿಯೇ ಅಂದುಕೊಳ್ಳುತ್ತಾಳೆ.


Click it and Unblock the Notifications











