Lakshmi Nivasa : ಕಂಡ ಕಂಡಲೆಲ್ಲಾ ಸಿಸಿಟಿವಿ ಕ್ಯಾಮರಾ, ಬೆಚ್ಚಿ ಬಿದ್ದ ಜಾಹ್ನವಿ, ಸೈಕೋ ಜಯಂತ್ ಮುಂದೇನ್ಮಾಡ್ತಾನೆ ?

By ಪೂರ್ವ

ಜಾಹ್ನವಿಗೆ ತನ್ನ ಗಂಡನ ಮೇಲೆ ಅನುಮಾನ ಶುರುವಾಗಿದೆ. ಜಯಂತ್ ಅಜ್ಜಿಯ ರೂಮಿನಲ್ಲಿ ಕ್ಯಾಮರಾ ಇಟ್ಟಿರುವುದು ಜಾಹ್ನವಿಗೆ ತಿಳಿದಿದೆ. ಆದರೆ ಮನೆಯಲ್ಲಿ ಜಯಂತ್ ಕ್ಯಾಮರವನ್ನ ಇಟ್ಟಿದ್ದಾನೆ ಅನ್ನೋದು ಮಾತ್ರ ಜಾಹ್ನವಿ ಗೆ ತಿಳಿದಿಲ್ಲ. ಜಾಹ್ನವಿ ಗೆ ಬಹಳಷ್ಟು ಶಾಕ್ ಆಗುವ ವಿಚಾರಗಳು ಒಂದೊಂದು ಬಯಲಾಗುತ್ತಿದೆ. ಜಾಹ್ನವಿ ತನ್ನ ಗಂಡನ ಬಗ್ಗೆ ಬಹಳಷ್ಟು ಆಸೆ ಆಕಾಂಕ್ಷೆಯನ್ನು ಇಟ್ಟುಕೊಂಡಿರುತ್ತಾಳೆ. ಆದರೆ ಆತನಿಗೆ ತನ್ನ ಗಂಡ ಒಬ್ಬ ಸೈಕೋ ಎಂದು ತಿಳಿದರೆ ಇನ್ನೆಷ್ಟು ಆತಂಕ ಆಗುತ್ತೆ ಎನ್ನುವುದು ಮಾತ್ರ ತಿಳಿಯಬೇಕಾಗಿದೆ. ಜಾಹ್ನವಿ ಗೆ ಅಜ್ಜಿ ಎಂದರೆ ಬಹಳ ಇಷ್ಟ.

ತನ್ನ ಅಜ್ಜಿಗೆ ಈ ಪರಿಸ್ಥಿತಿ ಬರಲು ಜಯಂತ್ ಕಾರಣವಾಗಬಹುದು ಎಂಬ ಸಣ್ಣ ಊಹೆಯನ್ನು ಆಕೆ ಮಾಡುವುದಿಲ್ಲ. ಆದರೆ ನಿಜ ಸಂಗತಿ ಮಾತ್ರ ಜಯಂತ್ ಒಬ್ಬ ಸೈಕೋ . ಆತನ ವಿಚಾರ ಯಾರಿಗೆಲ್ಲ ತಿಳಿಯುತ್ತೋ ಅವರೆಲ್ಲರೂ ಕೂಡ ಹೆಣವಾಗಿ ಕಾಣ ಸಿಗುತ್ತಿದ್ದಾರೆ. ಜಯಂತ್ ಜಾಹ್ನವಿ ಜೀವನದಲ್ಲಿ ಆಡುತ್ತಿರುವ ಆಟಗಳು ಒಂದಾ ಎರಡಾ. ಇದೀಗ ಜಾಹ್ನವಿಗೆ ಜಯಂತ್ ಒಂದು ಮುದ್ದಾದ ಗೊಂಬೆಯನ್ನು ಕೊಡುತ್ತಾನೆ ಇದನ್ನು ನೋಡಿದ ಜಾಹ್ನವಿ ಬಹಳಷ್ಟು ಖುಷಿ ಪಡುತ್ತಾಳೆ. ತನ್ನ ಮಗು ಹುಟ್ಟುವ ವೇಳೆ ಹೀಗೆಯೇ ಇರಬಹುದು ಎನ್ನುವ ಆಲೋಚನೆ ಆಕೆಗೆ.

kannada serial Lakshmi nivasa written update 31th January

ಆದರೆ ಜಯಂತ್ ಮಾಡಿರುವ ಕೆಟ್ಟಕೆಲಸ ಜಾಹ್ನವಿಗೆ ಗೊತ್ತೇ ಆಗುವುದಿಲ್ಲ. ಜಾಹ್ನವಿ ಗೆ ಗೊಂಬೆ ಕೊಡುವ ಮೊದಲು ಸಿಸಿ ಕ್ಯಾಮರವನ್ನು ಫಿಟ್ ಮಾಡುತ್ತಾನೆ. ಆದರೆ ಮೊದಲಿಗೆ ಜಾಹ್ನವಿಗೆ ಗೊಂಬೆಯನ್ನು ನೋಡಿದಾಗ ಖುಷಿ ಆಗುತ್ತದೆ. ಅಜ್ಜಿಯ ಜೊತೆಗೆಲ್ಲ ಖುಷಿಯ ಸುದ್ದಿಯನ್ನು ಹಂಚಿಕೊಳ್ಳುತ್ತಾಳೆ. ಹಾಗೆಯೇ ಜಾಹ್ನವಿ ಗೊಂಬೆಯ ಕಣ್ಣನ್ನೇ ನೋಡಿದಾಗ ಅದರಲ್ಲಿ ಕ್ಯಾಮರ ಫಿಟ್ ಆಗಿರುವುದು ಜಾಹ್ನವಿ ಗಮನಿಸುತ್ತಾಳೆ. ಮನೆಯಲ್ಲಿ ಎಲ್ಲಾ ಕಡೆ ಕೂಡ ಸಿಸಿ ಕ್ಯಾಮರ ಇರುವುದು ಜಾಹ್ನವಿ ಗೆ ತಿಳಿಯುತ್ತದೆ. ತಾನು ಎನು ಮಾಡಿದರು ಕೂಡ ಜಯಂತ್ ಗೆ ತಿಳಿಯುತ್ತದೆ ಎನ್ನುವ ವಿಚಾರ ಜಾಹ್ನವಿ ಜೊತೆ ಬಹಿರಂಗ ಆಗುತ್ತದೆ.

ಗಂಡನ ನಡೆ ಕಂಡು ಜಾಹ್ನವಿ ಬೇಸರ

ಜಾಹ್ನವಿ ಗೆ ಬಹಳಷ್ಟು ಬೇಸರ ಆಗುತ್ತದೆ. ಜಯಂತ್ ನಡವಳಿಕೆ ಜಾಹ್ನವಿ ಗೆ ಸರಿ ಕಾಣಿಸುವುದಿಲ್ಲ. ಆದರೂ ಆಕೆ ತನ್ನ ಗಂಡ ಆ ರೀತಿ ಮಾಡುವವರಲ್ಲ. ಮೊದಲಿಗೆ ಅವರ ಮೊಬೈಲ್ ಚೆಕ್ ಮಾಡಿ ನೋಡುವ ಆ ಬಳಿಕ ಅವರು ಸಿ ಕ್ಯಾಮರ ಇಟ್ಟಿದ್ದಾರ ಇಲ್ವಾ ಎನ್ನುವುದನ್ನು ನಿರ್ಧಾರ ಮಾಡೋಣ ಎಂದು ಅಂದುಕೊಳ್ಳುತ್ತಾರೆ. ಅಜ್ಜಿ ಮಾತ್ರ ಜಯಂತ್ ನಿಂದಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ವೆಂಕಿ ತಾನು ಅಜ್ಜಿಯನ್ನು ನೋಡಿಕೊಳ್ಳುತ್ತೇನೆ ಎಂದಾಗ ಕುಪಿತಗೊಂಡ ಜಯಂತ್ ಕೆಟ್ಟ ಮಾತುಗಳಿಂದ ಏನೇನೋ ಹೇಳಿರುತ್ತಾನೆ. ಆದರೆ ಜಾಹ್ನವಿ ಆಗೆಲ್ಲ ತನ್ನ ಗಂಡ ಅಜ್ಜಿ ಮೇಲಿನ ಪ್ರೀತಿಯಿಂದ ಹೀಗೆಲ್ಲ ಮಾತನಾಡುತ್ತಾರೆ ಎಂದುಕೊಂಡು ಇರುತ್ತಾರೆ ಆದರೆ ನಿಜ ವಿಚಾರ ಜಾಹ್ನವಿ ಗೆ ತಿಳಿದರೆ ಮಾತ್ರ ತಲೆ ತಿರುಗಿ ಬೀಳುವುದು ಖಚಿತ.

ಗಂಡನ ಕಷ್ಟಗಳಿಗೆ ಬೆನ್ನೆಲುಬಾಗಿ ನಿಂತ ಲಕ್ಷ್ಮೀ

ಶ್ರೀನಿವಾಸ್ ರಾಯರು ಹಾಗೂ ಲಕ್ಷ್ಮೀ ಕುಳಿತು ಕುಶಲೋಪರಿ ಮಾತನಾಡುತ್ತಿರುತ್ತಾರೆ. ಲಕ್ಷ್ಮೀ ತನ್ನ ಗಂಡನದ್ದೆ ಯೋಚನೆ. ತನ್ನ ಗಂಡ ಕಷ್ಟ ಪಡುತ್ತಿರುವುದನ್ನು ನೋಡಲಾಗದೆ ಲಕ್ಷ್ಮೀ ಬಹಳಷ್ಟು ನೊಂದು ಕೊಂಡಿರುತ್ತಾಳೆ. ಶ್ರೀನಿವಾಸರಾಯರ ಮಕ್ಕಳು ತಂದೆಯ ಬಗ್ಗೆ ಯೋಚನೆ ಏನು ಮಾಡುವುದಿಲ್ಲ ತನ್ನ ಮಕ್ಕಳಿಗಾಗಿ ತಂದೆ ಬಹಳಷ್ಟು ಕಷ್ಟಪಡುತ್ತಾರೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ಜೀವನಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆದರೆ ಬೆಳೆದ ಮಕ್ಕಳಿಗೆ ತಂದೆ ಮಾಡಿದ ತ್ಯಾಗ ಯಾವುದು ನೆನಪಿಗೆ ಇರುವುದಿಲ್ಲ. ಸಂತೋಷ , ಹರೀಶ್ ಗೆ ತನ್ನ ತಂದೆಯ ಅವಶ್ಯಕತೆ ಮುಗಿದು ಹೋಗಿದೆ. ಆದರೆ ಶ್ರೀನಿವಾಸ ರಾಯರು ಮಾತ್ರ ತನ್ನ ಮಗಳು ಜಾಹ್ನವಿ ಬಾಣಂತನಕ್ಕೆ ಮನೆಗೆ ಬರುವಾಗ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಆಸೆಯಿಂದ ಕೆಲಸಕ್ಕೆ ಹೋಗುತ್ತಿದ್ದಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X