Lakshmi Nivasa ; ಜೈಲು ಪಾಲಾದ ವೆಂಕಿ ಭಾವನ ಸಿದ್ದು ಜೀವನದಲ್ಲಿ ಹೊಸ ತಿರುವು?
ಜಾಹ್ನವಿ ಜಯಂತ್ ಹಾಗೆಯೇ ಭಾವನ ಸಿದ್ದೆ ಗೌಡರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಒಬ್ಬೊಬ್ಬರ ಬದುಕು ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ ಎಂದು ಹೇಳಿದರೆ ತಪ್ಪಾಗದು.ಭಾವನ ಈಗಾಗಲೇ ಸಿದ್ದೆ ಗೌಡರನ್ನು ಅತಿಯಾಗಿ ಮೆಚ್ಚಿಕೊಂಡಿದ್ದಾರೆ. ಸಿದ್ದು ಪ್ರೀತಿ ಭಾವನ ಬಹಳಷ್ಟು ಹೆಚ್ಚು ಬದಲಾವಣೆ ಮಾಡಿದೆ. ಸಿದ್ದುಗೆ ಭಾವನ ಎಂದರೆ ಬಹಳ ಪ್ರೀತಿ. ಆಕೆಯನ್ನು ಒಂದು ದಿನ ಬಿಟ್ಟಿರುವುದಿಲ್ಲ. ಇದೀಗ ಹನಿಮೂನ್ ಗೆ ತೆರಳಿರುವ ನವ ಜೋಡಿಗಳು ಖುಷಿಯಾಗಿದ್ದಾರೆ. ಆದರೆ ಅವರ ಖುಷಿಗೆ ಇದೀಗ ಫುಲ್ ಸ್ಟಾಪ್ ಬಿದ್ದಿದೆ.
ಶ್ರೀಕಾಂತ್ ಸಾವಿಗೆ ಯಾರು ಕಾರಣ ಎನ್ನುವುದರ ಹುಡುಕಾಟದಲ್ಲಿ ಭಾವನ ಇರುತ್ತಿದ್ದಳು. ಇದನ್ನರಿತ ಆಕೆಯ ಮಾವ ಇಬ್ಬರನ್ನು ಹನಿಮೂನ್ ಗೆ ಕಳಿಸಿ ಇಲ್ಲಿ ಏನಾದರೂ ಒಂದು ವ್ಯವಸ್ಥೆಯನ್ನು ಮಾಡಬೇಕು ಇಲ್ಲವಾದರೆ ಸಿದ್ದು ಇದರಲ್ಲಿ ಸಿಕ್ಕಿ ಹಾಕಿಕೊಳ್ಳುವುದಂತೂ ಖಂಡಿತ ಇದರಿಂದ ನಾನು ಬೇಗನೆ ಎಚ್ಚೆತ್ತುಕೊಂಡರೆ ಒಳ್ಳೆಯದು ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಇತ್ತ ವೆಂಕಿ ಗೆ ಹಣದ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅತ್ತೆಯ ಕಣ್ಣಿನ ಆಪರೇಶನ್ ಮಾಡಿಸಬೇಕು ಹಾಗೆಯೇ ಅವರ ಜೊತೆ ಖುಷಿಯಾಗಿರಬೇಕು. ಅವರಿಗೊಂದು ಆಧಾರವಾಗಿ ಇರಬೇಕು ಎಂದು ಯೋಚನೆ ಮಾಡುತ್ತಿರುತ್ತಾನೆ. ಇದರಿಂದಾಗಿ ಹಣದ ವಿಚಾರದಲ್ಲಿ ವೆಂಕಿಯನ್ನೂ ಪುಸಲಾಯಿಸುತ್ತಾರೆ.

ವೆಂಕಿಗೆ ಹಣದ ಅಗತ್ಯ ಇದ್ದ ಕಾರಣ ತಾನೇ ಆ ಆಕ್ಸಿಡೆಂಟ್ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿ ಪೊಲೀಸರ ಎದುರು ಸರಂಡರ್ ಆಗುತ್ತಾನೆ. ಈ ವಿಚಾರ ಗಾಳಿ ಸುದ್ದಿಯಂತೆ ಎಲ್ಲೆಡೆ ಹರಿದಾಡಿತು. ವೆಂಕಿ ಶ್ರೀಕಾಂತ್ ಕಾರಿಗೆ ಗುದ್ಧಿದ್ದು ಇದರಿಂದಲೇ ಶ್ರೀಕಾಂತ್ ತಾಯಿ ಹಾಗೂ ಶ್ರೀಕಾಂತ್ ಸ್ಥಳ ದಲ್ಲೇ ಮೃತಪಟ್ಟಿರುವುದು ಎಂದು ಸುಳ್ಳು ಸುದ್ದಿ ಎಲ್ಲೆಡೆ ಹರಿದಾಡುತ್ತದೆ. ಈ ವಿಚಾರ ಭಾವನ ಗೆ ತಿಳಿಯುತ್ತದೆ. ಶ್ರೀಕಾಂತ್ ಸಾವಿಗೆ ಕಾರಣನಾದವನು ಸಿಕ್ಕಿ ಬಿದ್ದ ಎಂದಷ್ಟೇ ಹೇಳಿದರು ಆದರೆ ಆತ ಯಾರೆಂಬುವುದನ್ನು ಭಾವನ ಬಳಿ ಹೇಳಲಿಲ್ಲ. ಇದರಿಂದ ಭಾವನಾಗೆ ಬಹಳ ಖುಷಿ ಆಗುತ್ತದೆ. ಶ್ರೀಕಾಂತ್ ಸಾವಿಗೆ ನ್ಯಾಯ ಒದಗಿಸಿಕೊಟ್ಟೆ ಎನ್ನುವ ಆಲೋಚನೆ ಆಕೆಗೆ ಮೂಡುತ್ತದೆ.
ಭಾವನ ಮಾತು ಕೇಳಿ ಶಾಕ್ ಆದ ಸಿದ್ದು
ಇನ್ನು ಸಿದ್ದು ಅಲ್ಲಿಯೇ ಕುಳಿತು ಯೋಚನೆ ಮಾಡುತ್ತಾನೆ. ಯಾರನ್ನು ಈ ಕೇಸ್ ನಲ್ಲಿ ಫಿಟ್ ಮಾಡಿಸಿದರು ಎನ್ನುವ ಆಲೋಚನೆಯಲ್ಲಿ ಮುಳುಗಿದ್ದಾರೆ. ಆತನಿಗೆ ಬಹಳಷ್ಟು ನೋವು ಆಗುತ್ತದೆ. ತನ್ನಿಂದಾಗಿ ಹೀಗಾಗಲು ಸಾಧ್ಯ ಎಂದೆಲ್ಲ ಬಹಳ ನೋವು ಪಡುತ್ತಾನೆ ಸಿದ್ದೇಗೌಡಗೆ ಮನದಲ್ಲಿ ಸಾಕಷ್ಟು ನೋವಿರುತ್ತದೆ ಈ ವಿಚಾರವನ್ನು ಹೇಗಾದರೂ ಮಾಡಿ ಭಾವನಾ ಬಳಿ ಹೇಳಿಕೊಳ್ಳಬೇಕೆಂದು ಸಾಕಷ್ಟು ಬಾರಿ ಸಿದ್ದೇಗೌಡ ಯೋಚನೆ ಮಾಡಿರುತ್ತಾರೆ ಆದರೆ ಯಾರು ಸಿದ್ದೇಗೌಡರ ಮಾತನ್ನು ಕೇಳಲು ಹೋಗುವುದಿಲ್ಲ.
ಅತ್ತೆಗಾಗಿ ತನ್ನ ಮೇಲೆ ಆಪಾದನೆ ಹೋರಿಸಿಕೊಂಡ ವೆಂಕಿ
ಇದರಿಂದಾಗಿ ಪ್ರತಿ ವಿಚಾರವನ್ನು ಯಾವ ರೀತಿ ಹೇಳುವುದು ಎನ್ನುವ ಯೋಚನೆಯಲ್ಲಿಯೇ ಸಿದ್ದೇಗೌಡ ಇರುತ್ತಾನೆ ಆದರೆ ಈಗ ಶ್ರೀಕಾಂತ್ ಕೇಸ್ನಲ್ಲಿ ವೆಂಕಿಯನ್ನು ಅರೆಸ್ಟ್ ಮಾಡಲಾಗಿದೆ. ಇದರಿಂದಾಗಿ ಲಕ್ಷ್ಮಿ ಹಾಗೂ ಶ್ರೀನಿವಾಸ್ಗೆ ಬಹಳಷ್ಟು ಶಾಕ್ ಆಗಿದೆ ಬೆಂಕಿ ಈ ಕೆಲಸವನ್ನ ಮಾಡಲು ಖಂಡಿತವಾಗಿಯೂ ಸಾಧ್ಯವಿಲ್ಲ ವೆಂಕಿ ಈ ಸಂದರ್ಭ ಮನೆಯಲ್ಲಿ ಇದ್ದ . ಆದರೆ ಇದೀಗ ಆತ ಆಕ್ಸಿಡೆಂಟ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ ಇದು ಹೇಗೆ ಸಾಧ್ಯ ಎಂದು ಶಾಕ್ ನಲ್ಲಿರುತ್ತಾರೆ. ಇತ್ತ ಜಾಹ್ನವಿ ಗೆ ಜಯಂತ್ ಮೇಲೆ ಬಹಳ ಸಿಟ್ಟಿರುತ್ತದೆ. ಆದರೆ ಜಯಂತ್ ಜೊತೆ ಮುನಿಸಿಕೊಂಡರೆ ಖಂಡಿತವಾಗಿಯೂ ನನ್ನ ಕೆಲಸ ಮಾಡಲು ಸಾಧ್ಯವಿಲ್ಲ ಇದರಿಂದಾಗಿ ಗಂಡನ ಜೊತೆ ಪ್ರೀತಿಯಲ್ಲಿ ಜಾಹ್ನವಿ ಇರಬೇಕೆಂದುಕೊಳ್ಳುತ್ತಾಳೆ.
ಜಯಂತ್ ನನ್ನು ಕೊಲ್ಲಲು ಸಂಚು ರೂಪಿಸಿದ ಜಾಹ್ನವಿ
ಜಾಹ್ನವಿ ತನ್ನ ಗಂಡನ ಜೊತೆ ಬಹಳ ಪ್ರೀತಿಯಿಂದ ನನಗೆ ಬೀಚ್ ಗೆ ಹೋಗಬೇಕು ಎಂದು ಅನ್ನಿಸುತ್ತಿದೆ ನನ್ನನ್ನು ದಯವಿಟ್ಟು ಕರೆದುಕೊಂಡು ಹೋಗುತ್ತಿರಾ ಎಂದು ಜಯಂತ್ ಬಳಿ ಕೇಳಿಕೊಳ್ಳುತ್ತಾಳೆ. ಹೆಂಡತಿ ಮಾತು ಕೇಳಿ ಜಯಂತ್ ಗೆ ಬಹಳ ಖುಷಿ ಆಗುತ್ತದೆ. ಸರಿ ಆಯಿತು ಎಂದು ಒಪ್ಪಿಗೆ ಕೇಳುತ್ತಾನೆ. ಜಾಹ್ನವಿ ಬಹಳಷ್ಟು ನೋವಲ್ಲಿರುತ್ತಾಳೆ. ನನಗೆ ಇಂತಹ ಗಂಡ ಸಿಗುತ್ತಾನೆಂದು ಜಾಹ್ನವಿ ಅಂದುಕೊಂಡಿರುವುದಿಲ್ಲ. ಇದೀಗ ಜಯಂತ್ ಬಾಲ್ಯ ಸ್ನೇಹಿತ ಜಾಹ್ನವಿ ಬಳಿ ಹೇಳುತ್ತಾನೆ. ನಾನು ಒಂದು ಮಾತು ಹೇಳುತ್ತೇನೆ ನೀವು ನಿಮ್ಮ ಗಂಡನನ್ನು ಕೊಲೆ ಮಾಡಿ. ಇಲ್ಲವಾದರೆ ಖಂಡಿತವಾಗಿಯೂ ಆತನಿಂದ ನಿಮಗೆ ಉಳಿಗಾಲ ಇಲ್ಲ ಎಂದಾಗ ಜಾಹ್ನವಿ ಆಯಿತು ಎನ್ನುತ್ತಾಳೆ ಜಯಂತ್ ನನ್ನು ಕೊಲ್ಲಲು ನೋಡುತ್ತಾಳೆ ಆದರೆ ಅದು ಸಾಧ್ಯವಾಗುವುದಿಲ್ಲ. ಜಯಂತ್ ಭೂಮಿ ಮೇಲೆ ಇರಬಾರದು ಆತನನ್ನು ಸಾಯಿಸಿ ಎಂದು ಜಯಂತ್ ಗೆಳೆಯ ಹೇಳಿದಾಗ ಜಾಹ್ನವಿಗೆ ಬಹಳ ನೋವಾಗುತ್ತದೆ. ಜಯಂತ್ ಮಾಡುತ್ತಿದ್ದ ಕೆಟ್ಟ ಕೆಲಸಗಳನ್ನು ನೋಡಿ ಬಹಳ ಕೋಪ ಬರುತ್ತದೆ.


Click it and Unblock the Notifications











