Lakshmi Nivasa :ಜಯಂತ್ ನಡವಳಿಕೆ ಮೇಲೆ ಜಾಹ್ನವಿಗೆ ಅನುಮಾನ,ಸಿಸಿ ಕ್ಯಾಮರಾ ವಿಚಾರ ಅಮ್ಮನ ಬಳಿ ಹಾಕ್ತಾಳಾ ಜಾಹ್ನವಿ!

By ಪೂರ್ವ

ಜಯಂತ್ ಬಗ್ಗೆ ಜಾಹ್ನವಿ ಗೆ ಅರ್ಥ ಆಗುವಂತಹದ್ದು ಬಹಳಷ್ಟಿದೆ. ತನ್ನ ಗಂಡ ಒಬ್ಬ ಸೈಕೋ ಎಂದು ತಿಳಿದರೆ ಜಾಹ್ನವಿ ಗೆ ಬಹಳಷ್ಟು ಆಘಾತ ಆಗುವುದು ಖಚಿತ. ಜಯಂತ್ ಇದೀಗ ಮನೆ ತುಂಬಾ ಕ್ಯಾಮರ ಇಟ್ಟಿರುವುದು ಜಾಹ್ನವಿ ಗೆ ತಿಳಿದಿದೆ. ಆದರೆ ಮೊದಲಿಗೆ ಗಂಡನ ಮೊಬೈಲ್ ಚೆಕ್ ಮಾಡುತ್ತೇನೆ. ಆ ಬಳಿಕ ತಾನು ಪರಾಮರ್ಶಿಸಿ ನೋಡಿ ತನ್ನ ಗಂಡನ ಬಗ್ಗೆಯಿರುವ ಸಂಶಯವನ್ನು ಕ್ಲಿಯರ್ ಮಾಡಿಕೊಳ್ಳುತ್ತೇನೆ ಎಂದು ಮನದಲ್ಲಿ ಹೇಳುತ್ತಾಳೆ. ಮನೆಯಲ್ಲಿ ಸಿಸಿ ಕ್ಯಾಮರ ಇರುವುದು ಜಾಹ್ನವಿಗೆ ಗೊತ್ತಿಲ್ಲ ಎಂದುಕೊಂಡಿದ್ದಾನೆ ಜಯಂತ್. ಆದರೆ ಜಯಂತ್ ಮಲಗಿದ ಬಳಿಕ ಜಾಹ್ನವಿ ಮನೆಯನ್ನೆಲ್ಲ ಸರ್ಚ್ ಮಾಡುತ್ತಾಳೆ.

ಹಾಗೆಯೇ ಜಯಂತ್ ಮೊಬೈಲ್ ಚೆಕ್ ಮಾಡಲು ನಿರ್ಧಾರ ಮಾಡುತ್ತಾಳೆ. ಆದರೆ ಮೊಬೈಲ್ ಲಾಕ್ ಆಗಿದ್ದ ಕಾರಣ ಜಾಹ್ನವಿ ಗೆ ಜಯಂತ್ ಮೊಬೈಲ್ ಚೆಕ್ ಮಾಡಲು ಸಾಧ್ಯ ಆಗುವುದಿಲ್ಲ. ಮನೆಯಲ್ಲಿ ಸಿಸಿ ಕ್ಯಾಮರ ಎಷ್ಟು ಅಳವಡಿಸಲಾಗಿದೆ ಎಂಬುವುದನ್ನು ತಿಳಿದುಕೊಳ್ಳಲು ಜಾಹ್ನವಿ ಮುಂದಾಗುತ್ತಾಳೆ. ಬಹಳಷ್ಟು ಹುಡುಕಾಡಿದಾಗ ಟಿವಿಯ ಮೇಲೆ ಸಿಸಿ ಕ್ಯಾಮರ ಕಾಣಿಸುತ್ತದೆ. ಅದನ್ನು ನೋಡಿದ ಜಾಹ್ನವಿ ದಂಗಾಗಿ ಹೋಗುತ್ತಾಳೆ. ತಾನು ಹೋಗುವುದು ಬರುವುದು ಎಲ್ಲದು ಕೂಡ ಇದರಲ್ಲಿ ಗೊತ್ತಾಗುತ್ತದೆ . ತಾನು ಮನೆಯಿಂದ ಎಲ್ಲಿಗೆ ಹೋಗುತ್ತೇನೆ ಎನು ಮಾಡುತ್ತೇನೆ ಇದೆಲ್ಲವೂ ಇದರಲ್ಲಿ ತಿಳಿದುಕೊಳ್ಳಬಹುದು ಎಂದು ಆಂದುಕೊಳ್ಳುತ್ತಾಳೆ.

kannada serial Lakshmi nivasa written update 3th February

ಜಾಹ್ನವಿ ಗೆ ಕೂಡಲೇ ತನ್ನ ತಾಯಿಯ ನೆನಪು ಆಗಿಬಿಡುತ್ತದೆ . ಜಯಂತ್ ಮಾಡುತ್ತಿರುವ ಸಿಸಿ ಕ್ಯಾಮಾರದ ವಿಚಾರವನ್ನು ಲಕ್ಷ್ಮೀ ಗೆ ತಿಳಿಸಬೇಕು ಎಂದುಕೊಂಡು ಬೆಡ್ ರೂಮ್ ಗೆ ಮೊಬೈಲ್ ತೆಗೆದುಕೊಂಡು ಹಾಲ್ ಗೆ ಬಂದು ಅಮ್ಮನಿಗೆ ಕರೆ ಮಾಡುತ್ತಾಳೆ ಜಾಹ್ನವಿ. ತನ್ನ ಗಂಡನ ನಿಜ ಸ್ವರೂಪವನ್ನು ತನ್ನ ತಾಯಿಗೆ ತೋರಿಸಬೇಕು ಎಂದು ಆಲೋಚನೆ ಮಾಡುತ್ತಾಳೆ. ಇತ್ತ ಸಿಂಚನ ಬರ್ತ್ ಡೇ ಪಾರ್ಟಿ ಗೆ ಹಾಕಿಕೊಳ್ಳಲು ಗೋಲ್ಡ್ ನ್ನು ಬೀರುವಿನಿಂದ ತೆಗೆದು ಹಾಕಿಕೊಂಡು ತನ್ನ ಗಂಡನ ಬಳಿ ಯಾವ ಚಿನ್ನ ಚೆನ್ನಾಗಿದೆ ಎಂದೆಲ್ಲ ತೋರಿಸಿ ಬರ್ತ್ ಡೇ ಪಾರ್ಟಿ ಗೆ ಹೋಗುತ್ತಾಳೆ . ಹರೀಶನಿಗೆ ಬಹಳಷ್ಟು ಭಯ ಯಾಕೆಂದರೆ ಸಿಂಚನ ಹಾಕಿಕೊಂಡಿರುವ ಎಲ್ಲ ಚಿನ್ನವು ಡುಬ್ಲಿಕೇಟ್ ಆಗಿರುತ್ತದೆ ಸಿಂಚನಾಗೆ ಗೊತ್ತಿಲ್ಲದೆ ಆಕೆಯ ಚಿನ್ನವನ್ನೆಲ್ಲ ತೆಗೆದುಕೊಂಡು ಹೋಗಿ ಮಾರಾಟ ಮಾಡಿರುತ್ತಾನೆ ಹರೀಶ್.

ಗಂಡನ ಆಸಲಿಮುಖ ಸಿಂಚನ ಮುಂದೆ ಬಯಲು?

ಸಿಂಚನ ಗೆ ತನ್ನ ಗಂಡನ ಅಸಲಿ ಮುಖ ಇನ್ನಷ್ಟೇ ತಿಳಿಯಬೇಕಿದೆ. ಆದರೆ ಅದೇ ರೀತಿ ಚಿನ್ನವನ್ನು ಡುಬ್ಲಿಕೇಟ್ ಮಾಡಿಸಿ ಸಿಂಚನ ಬೀರಲ್ಲಿ ಇಟ್ಟಿರುತ್ತಾನೆ. ಆದರೆ ಈ ವಿಚಾರ ಸಿಂಚನ ತಿಳಿದೇ ಇರುವುದಿಲ್ಲ ಬಂಗಾರವನ್ನೆಲ್ಲಾ ನೋಡಿದ ಕೂಡಲೇ ಇದ್ಯಾಕೆ ಈ ರೀತಿಯಾಗಿದೆ ಇದನ್ನ ಪಾಲಿಶ್ ಮಾಡಬೇಕೆಂದು ಅಂದುಕೊಂಡಿರುತ್ತಾಳೆ. ಅದೇ ರೀತಿ ಪಾಲೀಶ್ ಮಾಡಬೇಕೆಂದು ಅಂದುಕೊಂಡಿರುತ್ತಾಳೆ. ಆದರೆ ಚಿನ್ನ ಪಾಲೀಶ್ ಮಾಡಿಸಲು ತೆಗೆದುಕೊಂಡು ಹೋದಾಗ ಸಿಂಚನ ಗೆ ತನ್ನದು ನಕಲಿ ಒಡವೆ ಎಂದು ಗೊತ್ತಾಗುತ್ತದೆ ಮನೆಗೆ ಬಂದ ಸಿಂಚನ ತನ್ನ ಗಂಡನ ಮುಂದೆ ಗೋಳು ಎಂದು ಅಳುತ್ತಾಳೆ ತನ್ನ ಒರಿಜಿನಲ್ ಚಿನ್ನ ಎಲ್ಲಿ ಹೋಯಿತು ಎಂದು ಬಹಳಷ್ಟು ಹುಡುಕುತ್ತಾಳೆ. ಆದರೆ ಸಿಂಚನಾಗೆ ತನಗೆ ಎಲ್ಲೋ ಮೋಸ ಆಗಿದೆ ಎನ್ನುವ ವಿಚಾರ ತಕ್ಷಣ ತಿಳಿಯುತ್ತದೆ.

ಭಯದಲ್ಲಿರುವ ಹರೀಶ ಹೆಂಡತಿ ಬಳಿ ಮತ್ತೆ ಸುಳ್ಳು ಹೇಳುತ್ತಾನ?

ಆದರೆ ಇದೀಗ ಹರೀಶನಿಗೆ ಬಹಳಷ್ಟು ಭಯ ಶುರುವಾಗುತ್ತದೆ ಎಲ್ಲಾದರೂ ಸಿಂಚನಾಗೆ ನಾನೇ ಆಕೆಯ ಚಿನ್ನವನ್ನು ತೆಗೆದುಕೊಂಡಿದ್ದೇನೆ ಎಂದು ಗೊತ್ತಾದರೆ ಖಂಡಿತವಾಗಿಯೂ ಹಾಗೆ ಸುಮ್ಮನೆ ಇರುವುದಿಲ್ಲ ಎನ್ನುವುದು ಹರೀಶ್ಗೆ ಮತ್ತಷ್ಟು ಭಯ ಮೂಡುತ್ತದೆ . ಆತನೇ ಚಿನ್ನ ಕದ್ದಿದ್ದರೂ ಕೂಡ ತಾನು ಏನು ಚಿನ್ನ ಕದ್ದೆ ಇಲ್ಲ ಎನ್ನುವ ಹಾಗೆ ಸುಮ್ಮನಿದ್ದಾನೆ. ಆದರೆ ಸಿಂಚನ ಅಳು ಮುಗಿಲು ಮುಟ್ಟಿದೆ. ಸಿಂಚನ ಹೆತ್ತವರು ಮೊದಲೇ ಆಕೆಯ ಪ್ರೀತಿಗೆ ಅಬ್ಜೆಕ್ಷನ್ ಹಾಕಿದ್ದರು ಆದರೂ ಸಿಂಚನ ಹರೀಶ್ ನನ್ನು ಮದುವೆ ಆಗುತ್ತಾಳೆ ಆದರೆ ಹರೀಶ ಬಹಳಷ್ಟು ಸೋಮಾರಿ. ಇದೀಗ ಆತ ಆತನ ಹೆಂಡತಿಯ ಚಿನ್ನ ಕೂಡ ಬಿಡದೆ ಮಾರಾಟ ಮಾಡಿದ್ದಾನೆ ಆದರೆ ಸಿಂಚನ ಮಾತ್ರ ತನ್ನ ಗಂಡ ಶ್ರೀರಾಮ ಚಂದ್ರ ಎಂದುಕೊಂಡಿದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X