Lakshmi Nivasa : ಕೂಡು ಕುಟುಂಬದಲ್ಲಿ ಎರಡು ಭಾಗ, ಮುಂದೇನಾಗುತ್ತೆ ಎಲ್ಲರ ನೆಚ್ಚಿನ ಲಕ್ಷ್ಮೀ ನಿವಾಸದಲ್ಲಿ..?

By ಪೂರ್ವ

ಕೂಡು ಕುಟುಂಬವಾಗಿದ್ದ ಲಕ್ಷ್ಮಿ ಶ್ರೀನಿವಾಸ್ ಅವರ ಮನೆ ಇದೀಗ ಈ ಭಾಗವಾಗಿದೆ ಒಂದೇ ಮನೆಯಲ್ಲಿ ಎರಡು ಒಲೆ ಉರಿಯಲು ಶುರುವಾಗಿದೆ. ಸಿಂಚನ ಮಾಡಿದ ಒಂದೇ ಒಂದು ಎಡಬಟ್ಟು ಕೆಲಸದಿಂದಾಗಿ ಅಣ್ಣತಮ್ಮಂದಿರ ಮಧ್ಯೆ ಬಹಳ ದೊಡ್ಡ ಜಗಳ ನಡೆದು ಹೋಗಿದೆ. ಜಗಳವನ್ನು ನಿಲ್ಲಿಸಲು ಲಕ್ಷ್ಮೀ ಶ್ರೀನಿವಾಸರು ಬಹಳಷ್ಟು ಪ್ರಯತ್ನ ಪಡುತ್ತಾರೆ ಆದರೆ ಅವರಿಬ್ಬರೂ ಕೂಡ ಕೈ ಕೈ ಮಿಲಾಯಿಸುವ ಮಟ್ಟಿಗೆ ಜಗಳ ಮಾಡಿಕೊಳ್ಳುತ್ತಾರೆ. ಇದೆಲ್ಲ ಆಗಿದ್ದು ಮಾತ್ರ ಹರೀಶನಿಂದ ಹರೀಶ ಒಬ್ಬ ಸರಿ ಇದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ.

ಹರೀಶ ಅರೆಸ್ಟ್ ಆಗಿರುವ ವಿಚಾರ ತಿಳಿದ ವೇಳೆ ಸಿಂಚನ ಬಹಳಷ್ಟು ಗಾಬರಿಗೊಂಡಿರುತ್ತಾಳೆ ತನ್ನ ತಂದೆಯ ಬಳಿ ಓಡೋಡಿ ಬಂದು ತನ್ನ ಗಂಡನನ್ನು ಬಿಡಿಸಿಕೊಡುವಂತೆ ಭೇಟಿ ಕೊಡುತ್ತಾಳೆ ಸಿಂಚನ ಸ್ಥಿತಿಯನ್ನು ನೋಡಿದ ಜವರೇಗೌಡರಿಗೆ ಬಹಳ ಬೇಸರವಾಗುತ್ತದೆ. ತನ್ನ ಮಗಳಿಗೆ ಇದೆಂತಹ ಪರಿಸ್ಥಿತಿ ಬಂತು ಎಂದು ನೊಂದುಕೊಳ್ಳುತ್ತಾರೆ. ಕೂಡಲೇ ಹರೀಶನನ್ನು ಪೊಲೀಸರಿಂದ ಬಚಾವ್ ಮಾಡುತ್ತಾರೆ ಜವರೆ ಗೌಡರು. ಹರೀಶ ಜವರೇಗೌಡರ ಮನೆಗೆ ಬರುತ್ತಿದ್ದಂತೆಯೇ ಅವನಿಗೆ ಸಖತ್ತಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ.

kannada serial Lakshmi nivasa written update 6th February

ಹರೀಶ್ ನೀನು ಮಾಡಿದ್ದು ಸರಿ ಎಂದು ನಿನಗೆ ಅನಿಸುತ್ತದೆ ಹಲವು ತಿಂಗಳುಗಳ ಹಿಂದೆ ಫರ್ನಿಚರ್ ಗಳ ಅಂಗಡಿ ಹಾಕಿ ಕೈ ಸುಟ್ಟುಕೊಂಡಿದ್ದೆ ಆದರೆ ಇದೀಗ ಮತ್ತೆ ಚೀಟಿ ವ್ಯವಹಾರವನ್ನು ಶುರು ಮಾಡಿದೆ. ಇರಲು ಕೂಡ ಸಾಕಷ್ಟು ಸಮಸ್ಯೆಗಳನ್ನ ಎದುರಿಸಿದ್ರಿ. ಇದೆಲ್ಲ ಯಾಕೆ ನಿಮಗೆಲ್ಲ ಬೇಕು ನನ್ನ ಮಾನ ಮರ್ಯಾದೆಯನ್ನ ಯಾಕೆ ನೀವಿಬ್ಬರು ಹರಾಜಿಗೆ ಹಾಕುತ್ತಿದ್ದೀರ ಎಂದು ಜವರೇಗೌಡರು ಬಹಳ ಕೋಪದಿಂದ ಹೇಳಿದಾಗ ಅಲ್ಲಿಯೆ ಇದ್ದ ತಾಯವ್ವ ಬಹಳ ಕೋಪದಿಂದ ಹೇಳುತ್ತಾರೆ.

ಹರೀಶ್ ಮೇಲೆ ಕೋಪಿಸಿಕೊಂಡ ಜವರೆ ಗೌಡರು

ಹರೀಶ ನೀನು ಸಿಂಚನಗಳನ್ನ ಮದುವೆಯಾಗಿದ್ದೀಯ ಇಲ್ವಾ ಕಾರಣಕ್ಕಾಗಿ ನಾನು ಸುಮ್ಮನಿದ್ದೇನೆ ಇಲ್ಲವಾದರೆ ಖಂಡಿತವಾಗಿಯೂ ನಾನು ನಿನಗೆ ಹೊಡೆಯುತ್ತಿದೆ ಎಂದು ಬಹಳ ಜೋರಾಗಿ ಹೇಳುತ್ತಾರೆ. ಸಿಂಚನಾಗೆ ಏನು ಮಾಡಬೇಕೆಂದು ತಿಳಿಯದಾಗುತ್ತದೆ. ಬಂಗಾರದ ವಿಚಾರವನ್ನ ಸಿಂಚನ ಮನೆಯಲ್ಲಿ ಯಾರಿಗೂ ಹೇಳದೆ ನೇರವಾಗಿ ಲಕ್ಷ್ಮೀ ಶ್ರೀನಿವಾಸರ ಮನೆಗೆ ಬಂದ ಸಿಂಚನ ಬಹಳ ಕೋಪದಿಂದ ಎಲ್ಲರನ್ನೂ ಕರೆಯುತ್ತಾಳೆ.


ವೀಣಾ ಮೇಲೆ ಕಳ್ಳತನದ ಆಪಾದನೆ ಹೊರಿಸಿದ ಸಿಂಚನ

ನಾನು ಈ ಮನೆಯಲ್ಲಿ ಇರುವುದಿಲ್ಲ ಎಂದು ಅದೆಷ್ಟೇ ಹೇಳಿದರು ಯಾರು ಕೂಡ ನನ್ನ ಮಾತನ್ನು ಕೇಳುತ್ತಿರಲಿಲ್ಲ. ಇದೀಗ ಈ ಮನೆಯಲ್ಲಿ ನನ್ನ ಚಿನ್ನದ ಒಡವೆಗಳು ಕಳ್ಳತನವಾಗಿದೆ. ನನ್ನ ಒಡವೆಯನ್ನು ಕದ್ದಿದ್ದು ಬೇರೆ ಯಾರು ಅಲ್ಲ ಅದು ವೀಣಾನೆ ಎಂದು ಹೇಳಿದಾಗ ವೀಣಾಗೆ ಬಹಳ ಭಯ ಆಗುತ್ತದೆ. ತಾನು ಮಾಡದ ತಪ್ಪಿಗೆ ಏನೇನೆಲ್ಲ ಅನುಭವಿಸಬೇಕಪ್ಪ ಎಂದು ಬಹಳ ನೊಂದುಕೊಳ್ಳುತ್ತಾಳೆ. ಆಕೆ ತಾನು ಅಂತಹ ತಪ್ಪು ಮಾಡಿಲ್ಲ.ದಯವಿಟ್ಟು ನನ್ನ ಮೇಲೆ ತಪ್ಪು ಹೋರಿಸಬೇಡಿ, ಅತ್ತೆ ಮಾವ ನಾನು ತಪ್ಪು ಮಾಡಿಲ್ಲ ಎಂದು ಅಳುತ್ತಾಳೆ ಇದನ್ನು ನೋಡಿದ ಸಂತೋಷ್ ಗೆ ಸಿಂಚನ ಮೇಲೆ ಕೋಪ ಬರುತ್ತದೆ. ನನ್ನ ಹೆಂಡತಿ ಹಾಗೆಲ್ಲ ತಪ್ಪು ಮಾಡಲು ಸಾಧ್ಯವೇ ಇಲ್ಲ. ನೀವು ಹೇಗೆ ಈ ರೀತಿ ಎಲ್ಲಾ ಮಾತನಾಡುತ್ತೀರಿ. ನನ್ನ ಐದು ಲಕ್ಷ ರೂಪಾಯಿ ಕಳೆದು ಹೋಯಿತು ಅದಕ್ಕೆ ಕಾರಣ ಹರೀಶ್ ಎಂದು ಹೇಳಿದರೆ ನಿನಗೆ ಹೇಗಾಗಬಹುದು ಎಂದಾಗ ಹರೀಶ್ ಗೆ ಮನದಲ್ಲಿ ಭಯ ಆಗುತ್ತದೆ.

ಅಣ್ಣನ ಮೇಲೆ ಕೈ ಮಾಡಿದ ತಮ್ಮ

ಏಕೆಂದರೆ ಸಂತೋಷ್ ಹಣ ಕದ್ದಿದ್ದು ಮಾತ್ರ ಹರೀಶ್ . ಇದೆಲ್ಲವನ್ನೂ ಕೇಳಿಸಿಕೊಂಡ ಹರೀಶ್ ಸಿಂಚನ ಗೆ ತನ್ನ ಮೇಲೆ ಅನುಮಾನ ಬರಬಾರದು ಎಂದುಕೊಂಡು ಸಂತೋಷ್ ಮೇಲೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ತನಕ ಬರುತ್ತದೆ. ಇದೆಲ್ಲವನ್ನೂ ನೋಡಿದ ಲಕ್ಷ್ಮೀ ಗೆ ಬಹಳ ನೋವಾಗುತ್ತದೆ. ಜಾಹ್ನವಿ ಜಯಂತ್ ಬಗ್ಗೆ ಎಲ್ಲಾ ವಿಚಾರ ಹೇಳಬೇಕೆಂದು ಮನೆಗೆ ಬರುತ್ತಾಳೆ ಆದರೆ ಮನೆ ರಣ ರಂಗವಾಗಿರುವುದನ್ನು ನೋಡಿ ಅಲ್ಲಿಯೇ ಮೂಕರಾಗಿ ನಿಂತು ಬಿಡುತ್ತಾಳೆ ಅಣ್ಣ ತಮ್ಮಂದಿರು ಬರು ಬರುತ್ತಾ ದಾಯಾದಿ ಆಗುತ್ತಿದ್ದಾರೆ ಎನ್ನುವ ಬೇಜಾರು ಆಕೆಗೆ ಈ ಸಮಯದಲ್ಲಿ, ಜಯಂತ್ ಬಗ್ಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಇರುತ್ತಾಳೆ. ಇತ್ತ ಹರೀಶ ಮನೆಯನ್ನೇ ಇಬ್ಭಾಗ ಮಾಡಿ ಬಿಡುತ್ತಾನೆ ಇದೆಲ್ಲವನ್ನೂ ನೋಡಿದ ಲಕ್ಷ್ಮೀ ಅಳುತ್ತಾ ಮನೆಯ ಒಳಗೆ ಓಡುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X