Lakshmi Nivasa ; ಸಿದ್ದೇಗೌಡ್ರ ಎದುರು ಪ್ರೀತಿ ವ್ಯಕ್ತಪಡಿಸಿದ ಭಾವನಾ, ವೆಂಕಿ ವಿಚಾರ ಗೊತ್ತಾದರೆ ?
ಲಕ್ಷ್ಮಿ ನಿವಾಸದಲ್ಲಿ ಸಿದ್ದೇಗೌಡ್ರು ಮತ್ತು ಭಾವನಾ ನಡುವಿನ ಪ್ರೇಮಕಥೆ ಮುಂದುವರೆದಿದೆ. ಸಿದ್ದು ಮೇಲಿನ ಪ್ರೀತಿಯನ್ನು ಭಾವನಾ ವ್ಯಕ್ತಪಡಿಸಿದ್ದಾಳೆ. ಮತ್ತೊಂದೆಡೆ ವೆಂಕಿ ಜೈಲಿನಲ್ಲಿದ್ದಾನೆ. ಈ ವಿಚಾರ ಗೊತ್ತಾದರೆ ಭಾವನಾಳಿಂದ ಸಿದ್ದು ದೂರವಾದರೆ ಎನ್ನುವ ಆತಂಕ ಸದ್ಯ ಪ್ರೇಕ್ಷಕರನ್ನು ಕಾಡುತ್ತಿದೆ.
ಸಿದ್ದು ಮತ್ತು ಭಾವನಾ ಪ್ರೇಮಕಥೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಸಿದ್ದು ಮೇಲಿನ ತನ್ನ ಪ್ರೀತಿಯನ್ನು ಭಾವನಾ ಬಹಿರಂಗವಾಗಿ ಹೇಳಿದ್ದಾಳೆ. ಪ್ರೀತಿಯನ್ನು ವ್ಯಕ್ತಪಡಿಸಿ ಅಪ್ಪಿಕೊಂಡಿದ್ಧಾಳೆ. ಆದರೆ ವೆಂಕಿ ಜೈಲಿನಲ್ಲಿರುವ ಬಗ್ಗೆ ತಿಳಿದರೆ ಅದು ಅವರ ನಡುವೆ ಬಿರುಕು ಉಂಟಾಗಬಹುದು ಎಂಬ ಚಿಂತೆ ಈಗ ಪ್ರೇಕ್ಷಕರನ್ನು ಕಾಡುತ್ತಿದೆ. ಯಾಕೆಂದರೆ ವೆಂಕಿ ಜೈಲಿನಲ್ಲಿರುವ ವಿಷಯ ಬೇರೆಯವರಿಗೆ ಗೊತ್ತಾಗಿಲ್ಲ. ಅಪ್ಪಿ ತಪ್ಪಿ ಈ ವಿಷಯ ಭಾವನಾಗೆ ಗೊತ್ತಾದರೆ ಸಿದ್ದುಳಿಂದ ಅವಳಿಂದ ದೂರ ಆಗ್ತಾಳೆ.

ಮನೆಯವರ ಹೃದಯ ಗೆದ್ದ ಭಾವನಾ
ಇನ್ನು ಸಿದ್ದೇಗೌಡ್ರು ಮತ್ತು ಭಾವನ ಸಂಬಂಧ ಲಕ್ಷ್ಮೀ ನಿವಾಸ ಕಥಾಹಂದರದ ಕೇಂದ್ರ ಬಿಂದು. ಆರಂಭದಿಂದಲೂ ಭಾವನ ಮೇಲೆ ಸಿದ್ದುಗೆ ಪ್ರೀತಿ ಇರುತ್ತೆ. ಅದ್ಹೇಗೋ ನಾನಾ ಕಸರತ್ತು ಮಾಡಿ ಭಾವನಾ ಜೊತೆ ಮದುವೆಯಾಗುವಲ್ಲಿ ಸಿದ್ದೇಗೌಡ್ರು ಯಶಸ್ವಿಯಾಗಿದ್ದು ಭಾವನಾ ಈಗ ಸಿದ್ದು ತಂದೆ ಮತ್ತು ಅಣ್ಣನ ಮನಸನ್ನು ಕೂಡ ಗೆದ್ದಿದ್ದಾಳೆ. ಸಿದ್ದು ಮಾಡಿದ ನಿರಂತರ ಪ್ರಯತ್ನಗಳಿಂದ ಈಗ ಫಲ ಸಿಗುತ್ತಿದೆ.
ದಂಗಾದ ಸಿದ್ದು
ಭಾವನಾ ತಾನಾಗಿಯೇ ಮುಂದೆ ಬಂದು ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದೇ ತಡ, ಸಿದ್ದು ದಂಗಾಗಿ ನಿಲ್ಲುತ್ತಾನೆ. ಇದು ಕನಸಾ., ನನಸಾ ಎನ್ನುವ ಗೊಂದಲ ಸಿದ್ದುನ ಕಾಡಲು ಶುರುವಾಗುತ್ತೆ. ಯಾಕೆಂದರೆ ಭಾವನಾ ತನ್ನ ಭಾವನೆಗಳನ್ನು ಇಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಸಿದ್ಧೇಗೌಡ್ರು ನಿರೀಕ್ಷೆ ಮಾಡಿರುವುದಿಲ್ಲ. ಆದರೆ ಈಗ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ.
ಶ್ರೀಕಾಂತ್ ವಿಚಾರ ಗೊತ್ತಾದರೆ
ಹಾಗೇ ನೋಡಿದರೆ ಶ್ರೀಕಾಂತ್ ಜೊತೆ ಭಾವನಾ ಮದುವೆಯಾಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಮಾಡದಿದ್ದರೂ ಸಿದ್ದು ಕಡೆಯಿಂದ ಅಚಾತುರ್ಯ ನಡೆದಿದೆ. ಅಪಘಾತದಲ್ಲಿ ಶ್ರೀಕಾಂತ್ ಸಾವನ್ನಪ್ಪಿದ್ದಾನೆ. ಶ್ರೀಕಾಂತ್ ಸಾವಿಗೆ ನಾನೇ ಕಾರಣ ಎಂದು ವೆಂಕಿ ಈ ಕೇಸ್ ನಲ್ಲಿ ಸರೆಂಡರ್ ಆಗಿದ್ದಾನೆ. ಶ್ರೀಕಾಂತ್ ಸಾವಿಗೆ ಕಾರಣನಾದ ಸಿದ್ದುಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ.ಮತ್ತೊಂದೆಡೆ ಈ ಎಲ್ಲ ವಿಚಾರ ಭಾವನಾಗೆ ಗೊತ್ತಾದರೆ ಮುಂದೇನು ? ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.
ಮುಂದೇನಾಗಲಿದೆ ?
ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿ ಕುತೂಹಲ ಕೆರಳಿಸಿದೆ. ಒಂದಿಲ್ಲೊಂದು ದಿನ ವೆಂಕಿ ಜೈಲಿನಲ್ಲಿರುವುದಕ್ಕೆ ನಿಜವಾದ ಕಾರಣವೇನು ಎನ್ನುವುದು ಗೊತ್ತಾಗಲೇಬೇಕಿದೆ. ಶ್ರೀಕಾಂತ್ ಸಾವಿಗೆ ಕಾರಣ ಯಾರು ಎನ್ನುವ ವಿಚಾರ ಕೂಡ ಗೊತ್ತಾಗಿಯೇ ಆಗುತ್ತೆ. ಆಗ ಭಾವನಾ ಮತ್ತು ಸಿದ್ದೇಗೌಡ್ರ ಸಂಬಂಧ ಮುರಿದು ಬೀಳುತ್ತಾ ? ಕಥೆ ಮುಂದೆ ಯಾವ ತಿರುವು ಪಡೆಯಲಿದೆ ? ಎಂದು ಸದ್ಯ ಪ್ರೇಕ್ಷಕರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ವೆಂಕಿಯನ್ನು ಜೈಲಿಂದ ಬಿಡುಗಡೆ ಮಾಡಬೇಕೆಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











