Lakshmi Nivasa ; ಶ್ರೀಲಂಕಾಗೆ ಹೊರಟ ಭಾವನ ಸಿದ್ದು,ಜವರೇಗೌಡರ ಪ್ಲಾನ್ ಸಕ್ಸಸ್ ಆಗುತ್ತಾ?

By ಪೂರ್ವ

ಭಾವನ ಹಾಗೂ ಸಿದ್ದೇಗೌಡರು ಮಧುಚಂದ್ರಕ್ಕೆ ಹೋಗಲು ರೆಡಿಯಾಗಿದ್ದಾರೆ. ಇದಕ್ಕಾಗಿ ಹನಿಮೂನ್ ಪ್ಲಾನ್‌ನ ಕೂಡ ಸಿದ್ದೇಗೌಡರ ಅಣ್ಣ ಹಾಗೂ ಮಾವ ಮಾಡಿ ಬಿಟ್ಟಿದ್ದಾರೆ. ಈ ಮೊದಲು ಭಾವನಾ ಬಳಿ ಹನಿಮೂನ್ ಬಗ್ಗೆ ಪ್ರಸ್ತಾಪ ಮಾಡಿದಾಗ, ಭಾವನ ಬಹಳಷ್ಟು ಕೋಪ ಮಾಡಿಕೊಂಡಿರುತ್ತಾಳೆ. ಆಕೆಯ ಕೋಪವನ್ನು ಕಂಡು ಸಿದ್ದೇಗೌಡರಿಗೆ ಬಹಳಷ್ಟು ಭಯವಾಗುತ್ತದೆ. ಈಗಷ್ಟೇ ನಮ್ಮಿಬ್ಬರ ಸಂಸಾರ ಸರಿ ಹೋಗುತ್ತಿದೆ ದಿಡೀರಾಗಿ ಸಂಸಾರ ಶುರು ಮಾಡಿ ಎಂದರೆ ಬಹುತೇಕರಿಗೆ ಕಸಿವಿಸಿ ಆಗುತ್ತದೆ ಅದೇ ರೀತಿ ಹೆಂಡತಿಗೂ ಕೂಡ ಈ ವಿಚಾರ ಕೋಪ ತರಿಸಿದೆ ಎಂದು ಅನ್ನಿಸುತ್ತಿದೆ ಎಂದು ಸಿದ್ದೇಗೌಡರು ಒಳಗೊಳಗೆ ಭಯಪಡುತ್ತಾರೆ

ಭಾವನ ಕೋಪದಲ್ಲಿದು ಇದನ್ನು ಕಂಡು ಸಿದ್ದೇಗೌಡರು ತನ್ನ ತಂದೆಯ ಬಳಿಗೆ ಬಂದು ನೀವು ಹನಿಮೂನ್ ವಿಚಾರವನ್ನು ಮೇಡಂ ಬಳಿ ಕೇಳಿದ್ದೀರಾ ಎಂದು ಪ್ರಶ್ನೆ ಕೇಳುತ್ತಾನೆ. ಆತನ ಮಾತು ಕೇಳಿದ ಯಾಕಪ್ಪ ಭಾವನಾ ಬಳಿ ಈ ವಿಚಾರವನ್ನು ಪ್ರಸ್ತಾಪ ಮಾಡಲು ಹೋದೆ ಎಂದು ಹೇಳಿದಾಗ ಸಿದ್ದೇಗೌಡರ ತಂದೆ ಜವರೆಗೌಡ್ರು ನೀವಿಬ್ಬರು ಮದುವೆ ಆಗಿದ್ದೀರಾ? ಸತಿಪತಿಗಳಾಗಿದ್ದೀರ ಅಂದಮೇಲೆ ನೀವು ಇಬ್ಬರು ಸಂಸಾರವನ್ನು ಶುರು ಮಾಡಲೇಬೇಕು ಹಾಗೆಯೇ ನೀವಿಬ್ಬರು ಶ್ರೀಲಂಕಾಗೆ ಹನಿಮೂನ್ ಗೆ ಹೋಗಲೇಬೇಕು, ನೀವು ಹನಿಮೂನ್ ಮುಗಿಸಿಕೊಂಡು ಬರಬೇಕಾದರೆ ನಾನು ಶ್ರೀಕಾಂತ ಕೇಸ್ ನ ಮುಚ್ಚಿ ಹಾಕಿ ಬಿಡುತ್ತೇನೆ, ಇಲ್ಲವಾದರೆ ನಿಮ್ಮಿಬ್ಬರ ಸಂಸಾರವೂ ಕೂಡ ಹಾಳಾಗಿ ಬಿಡುತ್ತದೆ ಎನ್ನುವ ಆಲೋಚನೆ ನನಗೆ ಕಾಡಿದೆ ಎಂದು ಸಿದ್ದೇಗೌಡರ ಬಳಿ ಹೇಳುತ್ತಾರೆ.

kannada serial Lakshmi nivasa written update 21th March

ಸಿದ್ದೇಗೌಡರಿಗೆ ತನ್ನ ತಂದೆಯ ಮಾತನ್ನು ಕೇಳಿ ತಾನು ತಪ್ಪು ಮಾಡುತ್ತಿದ್ದೇನೆ ಎಂದು ಅನಿಸುತ್ತದೆ, ಇತ್ತ ಶ್ರೀನಿವಾಸ ರಾಯರಿಗೆ ಕರೆ ಮಾಡಿದ ಜವರೇಗೌಡರು ಸಿದ್ದೇಗೌಡ ಹಾಗೂ ಭಾವನ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಸಿದ್ದು ಹಾಗೂ ಭಾವನ ಮದುವೆಯಾಗಿ ಸುಖವಾದ ಸಂಸಾರ ಮಾಡುತ್ತಿದ್ದಾರೆ ಎಂದು ನಾವು ಅಂದುಕೊಳ್ಳುತ್ತಿದ್ದೇವೆ ಆದರೆ ಅವರಿಬ್ಬರ ನಡುವೆ ಸಂಸಾರ ಇನ್ನು ಶುರುವೆಯಾಗಿಲ್ಲ ಇದರಿಂದಾಗಿ ನಮಗೆ ಬಹಳಷ್ಟು ಆತಂಕವಾಗುತ್ತಿದೆ. ಇವರಿಬ್ಬರನ ನಾವು ಹನಿಮೂನ್ ಗೆ ಶ್ರೀಲಂಕಾಕ್ಕೆ ಕಳಿಸಬೇಕು ಎಂದು ಅಂದುಕೊಂಡಿದ್ದೇವೆ, ಅದಕ್ಕೆ ನಿಮ್ಮ ಮಗಳನ್ನ ನೀವು ಒಪ್ಪಿಸಬೇಕು ಎಂದು ಜವರೇಗೌಡರು ಆ ಕಡೆಯಿಂದ ವಿನಮ್ರವಾಗಿ ಶ್ರೀನಿವಾಸ ರಾಯರ ಬಳಿ ಬೇಡಿಕೊಳ್ಳುತ್ತಾರೆ.

ಖುಷಿಯಲ್ಲಿರುವ ಲಕ್ಷ್ಮೀ ಶ್ರೀನಿವಾಸ್ ದಂಪತಿ

ಜವರೆ ಗೌಡರ ಮಾತಿಗೆ ದಂಪತಿಗಳಿಗೆ ಖುಷಿ ಆಗುತ್ತದೆ. ಇದನ್ನು ಕೇಳಿಸಿಕೊಂಡ ಶ್ರೀನಿವಾಸ ಹಾಗೂ ಲಕ್ಷ್ಮಿ ತನ್ನ ಮಗಳಿಗೆ ಬುದ್ಧಿವಾದವನ್ನ ಹೇಳುತ್ತಾರೆ ತನ್ನ ತಾಯಿಯ ಮಾತು ಕೇಳಿದ ಭಾವನ ಶ್ರೀಲಂಕಕ್ಕೆ ಹೋಗಲು ತಯಾರಿಯನ್ನು ನಡೆಸುತ್ತಾಳೆ. ಇತ್ತ ಲಕ್ಷ್ಮಿ ಹಾಗೂ ಶ್ರೀನಿವಾಸ್ ಗೆ ಬಹಳ ಖುಷಿಯಾಗುತ್ತದೆ. ತನ್ನ ಮಗಳಿಗಾಗಿ ಚಕ್ಲಿ ಕೋಡುಬಳೆ ಇದೆಲ್ಲವನ್ನ ಮಾಡಿ ಕೊಡುತ್ತಾರೆ. ಇದೆಲ್ಲವನ್ನೂ ನೋಡಿದ ಸಂತೋಷ್ ಗೆ ಕೊಂಕು ಮಾತುಗಳೇ ಬರುತ್ತದೆ. ಕೊಂಕು ಮಾತುಗಳಿಂದ ಭಾವನ ಬಗ್ಗೆ ಮಾತನಾಡುತ್ತಾನೆ ಅವರಿಬ್ಬರೂ ಹನಿಮೂನ್ ಗೆ ಹೋಗುತ್ತಿದ್ದಾರೆ ಎನು ಸುಖವಾದ ಜೀವನ . ಎಲ್ಲೋ ಮದುವೆಯಾಗಿ ಇದೀಗ ಹನಿಮೂನ್ ಗೆ ಹೋಗುವ ಯೋಗ ಇದೆ ಭಾವನ ಗೆ ಎಂದು ಹೇಳುತ್ತಾನೆ.

ಸಂತೋಷ್ ಮಾತಿಗೆ ಕಿವಿಗೊಡದೆ ಲಕ್ಷ್ಮೀ

ಭಾವನ ಮಾತನ್ನು ಕೇಳಿದ ಶ್ರೀನಿವಾಸ್ ಹಾಗೂ ಲಕ್ಷ್ಮೀ ಗೆ ಬೇಸರವಾಗುತ್ತದೆ. ಇತ್ತ ಗಂಡ ಹೆಂಡತಿ ಹನಿಮೂನ್ ಗೆ ಹೊರಟು ನಿಂತಿದ್ದಾರೆ. ಜವರೇ ಗೌಡ ಬಹಳಷ್ಟು ಖುಷಿ ಪಡುತ್ತಾನೆ. ಹನಿಮೂನ್ ಗೆ ಹೋದ ಬಳಿಕ ಗುಡ್ ನ್ಯೂಸ್ ಕೊಡಬೇಕು ಎಂದು ಹೇಳಿದಾಗ ಭಾವನ ನಾಚಿ ನೀರಾಗುತ್ತಾಳೆ. ಇತ್ತ ಜಯಂತ್ ಜಾಹ್ನವಿ ಗೆ ರಾತ್ರಿ ನಿದ್ದೆ ಮಾತ್ರೆ ಕೊಟ್ಟು ನಿದ್ದೆ ಮಾಡಿಸುತ್ತಿದ್ದಾನೆ. ಜಾಹ್ನವಿ ಜೀವದ ಜೊತೆಗೆ ಆಟವಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.ಜಾಹ್ನವಿ ತನ್ನ ಗಂಡ ಎಂದರೆ ಸಾಕಷ್ಟು ಕೋಪ ಬರುತ್ತದೆ. ಗಂಡನ ಮೇಲೆ ಜಾಹ್ನವಿ ಗೆ ಸ್ವಲ್ಪ ಕೂಡ ಇಷ್ಟ ಇರುವುದಿಲ್ಲ. ಆದರೆ ಅದನ್ನು ಯಾರ ಜೊತೆಯೂ ಹೇಳಿಕೊಳ್ಳಲು ಆಗದೆ ಬಹಳಷ್ಟು ನೊಂದುಕೊಂಡಿರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X