ಜಯಂತ್‌ಗೆ ವೆಂಕಿ ಸ್ನೇಹಿತ ಎನ್ನುವ ವಿಚಾರ ಗೊತ್ತಾಗಿದೆ; ಇವರಿಬ್ಬರ ಸ್ನೇಹದ ಗುಟ್ಟು ಬಯಲಾಗುತ್ತಾ?
ವೆಂಕಿ ಹಾಗೂ ಜಯಂತ್ ಸ್ನೇಹ ಎಲ್ಲರೆದುರು ರಟ್ಟಾಗುವ ಸಮಯ ಬಂದೇ ಬಿಟ್ಟಿದೆ. ವೆಂಕಿಗೆ ತನ್ನ ಗೆಳೆಯ ಎಂದರೆ ಪಂಚ ಪ್ರಾಣ. ಬಾಲ್ಯದಲ್ಲಿ ಒಂದು ದಿನವೂ ವೆಂಕಿ ತನ್ನ ಗೆಳೆಯನನ್ನು ಬಿಟ್ಟು ಇರಲಿಲ್ಲ. ಆದರೆ, ಇದೀಗ ತನ್ನ ಬಾಲ್ಯದ ಗೆಳೆಯನನ್ನು ನೆನಪಿಸಿಕೊಂಡು ಬಹಳ ಜೋರಾಗಿಯೇ ಅಳುತ್ತಾನೆ. ಜಯಂತ್‌ಗೆ ವೆಂಕಿಯನ್ನು ನೋಡುವಾಗ ಆತನ ಜೊತೆ ಮಾತನಾಡುವಾಗ ತನ್ನ ಬಾಲ್ಯದ ಗೆಳೆಯನ ನೆನಪು ಬರುತ್ತದೆ. ಇದೀಗ ಜಯಂತ್‌ಗೆ ತನ್ನ ಬಾಲ್ಯದ ಗೆಳೆಯ ವೆಂಕಿ ಎಂದು ತಿಳಿದ ಬಳಿಕ ಆತನ ಜೊತೆ ಬೆರೆಯುವ ಲಕ್ಷಣ ಕಾಣುತ್ತಿಲ್ಲ.
ಆತನನ್ನು ಬೇರೆ ಯಾರೋ ಎನ್ನುವ ಹಾಗೆ ನೋಡುತ್ತಿದ್ದಾನೆ. ಅಣ್ಣನ ಅಳುವನ್ನು ನೋಡಲಾಗದೆ ಜಾಹ್ನವಿ ಬಹಳಷ್ಟು ನೋವು ಅನುಭವಿಸುತ್ತಾಳೆ. ಆಕೆಗೆ ವೆಂಕಿ ಎಂದರೆ ಬಹಳಷ್ಟು ಪ್ರೀತಿ. ಪ್ರೀತಿಯ ಅಣ್ಣನ ಬಾಲ್ಯದ ಗೆಳೆಯನನ್ನು ಹೇಗಾದರೂ ಮಾಡಿ ಹುಡುಕಿಕೊಡಬೇಕು ಎಂದು ಜಾಹ್ನವಿ ಎದುರಿಗೆ ಬಂದಿದ್ದೆ ಜಯಂತ್. ತನ್ನ ಗಂಡನ ಬಳಿ ತನ್ನ ಅಣ್ಣನ ದುಃಖದ ಬಗ್ಗೆ ಬಹಳ ನೋವಿನಲ್ಲಿ ಹೇಳುತ್ತಾಳೆ. ತನ್ನ ಗಂಡನ ಬಳಿ ಹೇಗಾದರೂ ಮಾಡಿ ತನ್ನ ಅಣ್ಣನ ಬಾಲ್ಯದ ಗೆಳೆಯನನ್ನು ಹುಡುಕಿ ಕರೆದುಕೊಂಡು ಬನ್ನಿ ಎಂದು ಹೇಳಿದಾಗ, ಆಕೆಗೆ ನೋವು ಆಗಬಾರದು ಎಂದು ಒಪ್ಪಿಕೊಳ್ಳುತ್ತಾನೆ ಎಂದು ಜಯಂತ್.

ಗಂಡನ ಮಾತು ಕೇಳಿದ ಜಾಹ್ನವಿಗೆ ನೆಮ್ಮದಿ ಎಂದು ಅನ್ನಿಸುತ್ತದೆ. ಆದರೆ, ಜಯಂತ್ ಮನದಲ್ಲಿ ಮಾತ್ರ ಬಹಳಷ್ಟು ನೋವು ಇರುತ್ತೆ. ಆತನಿಗೆ ವೆಂಕಿ ಜೊತೆ ಬೆರೆಯಲು ಮಾತ್ರ ಆಗುವುದಿಲ್ಲ. ವೆಂಕಿ ತನ್ನ ಬಾಲ್ಯದ ಸ್ನೇಹಿತ ಎಂದು ತಿಳಿದ ಬಳಿಕ ಜಯಂತ್‌ಗೆ ಆತನ ಮೇಲೆ ಇರುವ ಪ್ರೀತಿ ಮರೆಮಾಚಿ ಹೋಗಿದೆ. ಬಾಲ್ಯದ ಗೆಳೆಯನ ಬಗ್ಗೆ ಅಷ್ಟೊಂದು ಜಯಂತ್ ತಲೆ ಕೆಡಿಸಿಕೊಳ್ಳುವ ಮಾತೇ ಇಲ್ಲ.
ಸಿದ್ದು ಜೊತೆ ಪ್ರೀತಿಯಲ್ಲಿ ಬಿದ್ದಳೇ ಭಾವನಾ?
ಇತ್ತ ಸಿದ್ದು ಹಾಗೂ ಭಾವನಾ ಜೀವನದಲ್ಲಿ ಇದೀಗ ಕೊಂಚ ಮಟ್ಟಿಗೆ ಸರಿಯಾಗುತ್ತ ಬಂದಿದೆ. ಭಾವನಾಗೆ ಸಿದ್ದೇ ಗೌಡರ ಮೇಲೆ ಕೊಂಚ ಮಟ್ಟಿಗೆ ಸಾಫ್ಟ್ ಕಾರ್ನರ್ ಬರುತ್ತಿದೆ. ಸಿದ್ದೇಗೌಡರ ಬಳಿ ಆಗಾಗ ಭಾವನಾ ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ಮನೆಯಲ್ಲಿ ಎಷ್ಟೆಲ್ಲ ನೋವು ಇದ್ದರೂ ಕೂಡಾ ಅದೆಲ್ಲವನ್ನೂ ತಾನು ತಡೆದುಕೊಂಡು ಸಿದ್ದು ಜೊತೆ ಕಾಲ ಕಳೆಯುತ್ತಿದ್ದಾರೆ. ತನ್ನ ಮಗಳ ಖುಷಿಗಾಗಿ ತಾನು ಏನು ಬೇಕಾದರೂ ಮಾಡಲು ರೆಡಿ ಇರುತ್ತಾಳೆ. ಸಿದ್ದು ಕೂಡ ಹಾಗೆಯೇ ತನ್ನ ಹೆಂಡತಿ ಭಾವನಾ ಹಾಗೂ ಆಕೆಯ ಮಗಳ ಬಗ್ಗೆ ಬಹಳಷ್ಟು ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದಾನೆ. ಅವರಿಬ್ಬರಿಗೂ ತನ್ನಿಂದ ಏನಾದರು ಸಹಾಯ ಮಾಡಬೇಕು ಎಂದು ಅಂದುಕೊಂಡು ಇರುತ್ತಾನೆ. ಇದೀಗ ಖುಷಿಯನ್ನು ತನ್ನ ಮನೆಯಿಂದ ಬೇರೆ ಮಾಡಬೇಕು ಎಂದು ಸಂತೋಷ್ ಆಗಾಗ ಪ್ಲಾನ್ ಮಾಡುತ್ತಿರುತ್ತಾನೆ.

ಖುಷಿಯನ್ನು ಹೊರ ಹಾಕಲು ಸಂತೋಷ್ ಪ್ಲಾನ್
ಸಂತೋಷ್, ಸೌಪರ್ಣಿಕಾ ಜೊತೆ ಸೇರಿ ಖುಷಿಯನ್ನು ಹೇಗಾದರೂ ಮಾಡಿ ಮನೆಯಿಂದ ಕಳುಹಿಸಬೇಕು ಎಂದು ಪ್ಲಾನ್ ಮಾಡುತ್ತಾನೆ. ಆತನಿಗೆ ಖುಷಿಯನ್ನು ಕಂಡರೆ ಎಲ್ಲಿಲ್ಲದ ಕೋಪ. ನಮಗೆ ಈ ಮನೆಯಲ್ಲಿ ಇರಲು ಕಷ್ಟ ಆಗುತ್ತಿದೆ. ಇನ್ನೂ ಈ ಮಗುವನ್ನೂ ನಾವೇ ನೋಡಿಕೊಳ್ಳಬೇಕು. ಹೇಗಾದರೂ ಮಾಡಿ ಆಕೆಯನ್ನು ಸೌಪರ್ಣಿಕಾ ಜೊತೆ ಆಕೆಯನ್ನು ಕಳಿಸಬೇಕು ಎಂದು ಅಂದುಕೊಂಡಿದ್ದಾನೆ. ಇದೀಗ ಸಂತೋಷ್ ಏನು ಅಂದುಕೊಂಡಿದ್ದಾನೋ ಅದನ್ನು ಮಾಡಲು ಹೊರಟಿರುವಾಗಲೇ, ಸೌಪರ್ಣಿಕಾ ಇದೀಗ ಲಕ್ಷ್ಮಿ ಶ್ರೀನಿವಾಸ್ ಮನೆಗೆ ಪೊಲೀಸ್ ಸಮೇತವಾಗಿ ಬಂದು ಖುಷಿಯನ್ನು ಕರೆದುಕೊಂಡು ಹೋಗಿದ್ದಾಳೆ.


Click it and Unblock the Notifications











