ಅಮ್ಮನಿಗೆ ವಾರ್ನಿಂಗ್ ಕೊಟ್ಟ ಸಿದ್ದೇಗೌಡ; ಇತ್ತ ಜಯಂತ್ ಮನೆಗೆ ಹೊರಟ ವೆಂಕಿಗೆ ನಿಜ ವಿಚಾರ ತಿಳಿಯುತ್ತಾ?
ಸಿದ್ದೇಗೌಡ ಭಾವನಾಳನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿರುತ್ತಾನೆ. ಆದರೆ, ಭಾವನಾಳನ್ನು ಕಂಡರೆ ಸಿದ್ದೇಗೌಡರ ತಾಯಿಗೆ ಸ್ವಲ್ಪವೂ ಇಷ್ಟವಿಲ್ಲ. ಸಿದ್ದೇಗೌಡರ ಬಳಿ ಆಗಾಗ ಬಂದು ಭಾವನಾಳನ್ನು ಅವಳ ಮನೆಯಲ್ಲಿ ಬಿಟ್ಟು ಬಾ. ದಯವಿಟ್ಟು ಈ ಮನೆಗೆ ಮತ್ತೆ ಕರೆದುಕೊಂಡು ಬರಬೇಡ ಎಂದು ಹೇಳಿ ಹಲವಾರು ಬಾರಿ ಗಲಾಟೆ ಮಾಡಿದ್ದಾಳೆ. ಆದರೆ ಇದೀಗ ಮತ್ತೊಮ್ಮೆ ಸಿದ್ದೇಗೌಡರ ಬಳಿ ಭಾವನಾ ಬಗ್ಗೆ ಕಿರಿಕ್ ಮಾಡಿದ್ದಾರೆ.
"ಸಿದ್ದು, ನಿನ್ನ ಹಾಗೂ ಭಾವನಾ ಮದುವೆ ಶಾಸ್ತ್ರೋಕ್ತವಾಗಿ ಆಗಲಿಲ್ಲ. ಮುತ್ತೈದೆಯರು ಬಂಧು ನಿಮ್ಮನ್ನು ಹರಸಲಿಲ್ಲ. ದಯವಿಟ್ಟು ನೀವು ಇಬ್ಬರು ಬೇರೆ ಬೇರೆ ಆಗುವುದೇ ಸರಿ ಎಂದು ನನಗೆ ಅನಿಸುತ್ತಿದೆ" ಎಂದು ಹೇಳಿದಾಗ ಸಿದ್ದೇಗೌಡರು "ಅಮ್ಮ ದಯವಿಟ್ಟು ನೀನು ಆ ರೀತಿ ಮಾತುಗಳನ್ನು ಮಾಡಬೇಡ. ನನಗೆ ಭಾವನಾ ಅಂದರೆ ಬಹಳ ಪ್ರೀತಿ. ಆಕೆಯನ್ನು ಪಡೆದುಕೊಳ್ಳಲು ಬಹಳಷ್ಟು ಕಷ್ಟಪಟ್ಟಿದ್ದೇನೆ. ಈ ಜನ್ಮಕ್ಕೆ ನನಗೆ ಭಾವನಾ ಅವರೇ ಸಾಕು" ಎಂದು ಅಮ್ಮನಿಗೆ ಖಡಕ್ ಆಗಿ ಹೇಳುತ್ತಾನೆ. ಮಗನ ಮಾತು ಕೇಳಿದ ಆತನ ತಾಯಿಗೆ ಸಂಕಟ ಆಗುತ್ತೆ. ಆದರೆ ಸಿದ್ದೇಗೌಡನ ಅತ್ತಿಗೆಗೆ ಬಹಳ ಖುಷಿ ಆಗುತ್ತೆ. ಸಿದ್ದೇಗೌಡನನ್ನು ಕಂಡರೆ ಆತನ ಅತ್ತಿಗೆಗೆ ಅಷ್ಟಕ್ಕಷ್ಟೆ.

ರಾಜಕಾರಣದಲ್ಲಿ ಸಿದ್ದೇಗೌಡರನ್ನು ಮೀರಿಸುವವರು ಯಾರು ಇಲ್ಲ ಎನ್ನುವುದು ಆತನ ಅತ್ತಿಗೆಗೆ ಗೊತ್ತಿದೆ. ಆದ ಕಾರಣ ಸಿದ್ದೇಗೌಡನನ್ನು ಹೇಗಾದರೂ ಮಾಡಿ ಮಟ್ಟ ಹಾಕಬೇಕು ಎನ್ನುವುದು ಆಕೆಯ ಕೆಟ್ಟ ಆಲೋಚನೆ. ಜಯಂತ್ ಇದೀಗ ಜಾಹ್ನವಿ ಮನೆ ಅವರಿಗೆ ಮನೆಗೆ ಬರಲು ಗ್ರೀನ್ ಸಿಗ್ನಲ್ ನೀಡಿದ್ದಾನೆ. ಜಾಹ್ನವಿ ಜಯಂತ್ ಮನೆಯಲ್ಲಿ ಒಬ್ಬೊಂಟಿಯಾಗಿ ಇರುತ್ತಾಳೆ. ಏನಾದರು ಆದರೆ ಎನ್ನುವ ಭಯ ಡಾಕ್ಟರ್‌ಗೆ ಕೂಡ ಕಾಡುತ್ತಿದೆ. ಜಾಹ್ನವಿ ಹಾಗೂ ಜಯಂತ್ ಬಳಿ ಡಾಕ್ಟರ್ ಮಾತನಾಡುತ್ತಾರೆ.
ಜಾಹ್ನವಿ ಮನೆಗೆ ಹೋಗುವ ಖುಷಿಯಲ್ಲಿ ಲಕ್ಷ್ಮೀ
ಜಾಹ್ನವಿಗೆ ಬೇಕಾದ ಸಿಹಿ ತಿನಿಸುಗಳನ್ನು ಲಕ್ಷ್ಮೀ ಮನೆಯಲ್ಲಿ ರೆಡಿ ಮಾಡುತ್ತಾಳೆ. ಲಕ್ಷ್ಮೀಗೆ ಆಕೆಯ ಸೂಸೆ ಸಾಥ್ ನೀಡುತ್ತಾಳೆ. ಆದರೆ ಹರಿ ಮೆತ್ತಗೆ ಬಂದು ತಿಂಡಿಗಳನ್ನು ಸವಿದು ತನ್ನ ಹೆಂಡತಿಗೆ ಅದನ್ನು ತೆಗೆದುಕೊಂಡು ಹೋಗುತ್ತಾನೆ. ಇದನ್ನು ನೋಡಿ ಲಕ್ಷ್ಮೀಗೆ ನಗು ಬರುತ್ತದೆ. ಇತ್ತ ಶ್ರೀನಿವಾಸ ರಾಯರು ವೆಂಕಿಯ ಬಳಿಗೆ ಹೋಗಿ, ನೀನು ಅಜ್ಜಿಯನ್ನು ಜಯಂತ್ ಮನೆಗೆ ಕರೆದುಕೊಂಡು ಹೋಗಬಹುದಾ ಎಂದು ಕೇಳಿದಾಗ ವೆಂಕಿ ಬಹಳ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ.

ಮನೆಯವರನ್ನು ಕಾಣಲು ಜಾಹ್ನವಿಗೆ ಕಾತರ
ಜಾಹ್ನವಿ ತನ್ನ ಗಂಡನ ಬಳಿ ತನ್ನ ಮನೆಯಿಂದ ಯಾರೆಲ್ಲ ಬರುತ್ತಾರೆ? ಅಂತ ಊಹೆ ಮಾಡಿಕೊಂಡಿಕೊಳ್ಳುತ್ತಾಳೆ. ಜಾಹ್ನವಿಗೆ ಹೆತ್ತ ತಂದೆ ತಾಯಿಯನ್ನು ನೋಡುವ ಆಸೆ. ಅಣ್ಣ ತಮ್ಮಂದಿರನ್ನು ನೋಡುವ ಕಾತರ. ಆದರೆ ಮನೆಗೆ ಯಾರು ಬರುತ್ತಾರೆ ಎನ್ನುವ ವಿಚಾರ ಯಾರಿಗೂ ತಿಳಿದಿಲ್ಲ. ನನ್ನನ್ನು ನೋಡಿಕೊಳ್ಳಲು ಅಮ್ಮ ಖಂಡಿತ ಬರುತ್ತಾರೆ ಎಂದು ಜಾಹ್ನವಿ ಅಂದುಕೊಂಡಿರುತ್ತಾಳೆ. ಜಯಂತ್ ಮನದಲ್ಲಿ ಸಣ್ಣ ಅಳುಕು ಆತನಿಗೆ ತಾನು ಮತ್ತು ಜಾಹ್ನವಿ ಇಬ್ಬರು ಒಟ್ಟಾಗಿ ಇರಬೇಕು ಎನ್ನುವ ಆಸೆ. ಆದರೆ, ಆತನಿಗೆ ಬೇರೆಯವರು ಮನೆಗೆ ಬಂದರೆ ಸ್ವಲ್ಪವೂ ಇಷ್ಟ ಆಗುವುದಿಲ್ಲ. ಇದೀಗ ಜಯಂತ್ ಮನೆಗೆ ಅಜ್ಜಿ ಬರುತ್ತಿದ್ದಾರೆ. ಬೇರೆ ಏನು ಅನಾಹುತ ಆಗದಿರಲಿ ಎಂದು ಸೀರಿಯಲ್ ಪ್ರೇಮಿಗಳು ಆಶಿಸುತ್ತಿದ್ದಾರೆ.


Click it and Unblock the Notifications











