Lakshmi Nivasa: ಸೌಪರ್ಣಿಕಾ ಮನೆಗೆ ಓಡೋಡಿ ಬಂದ ಭಾವನಾ; ಖುಷಿಯನ್ನು ನೋಡಿ ಭಾವುಕ!

By ಪೂರ್ವ

ಜಾಹ್ನವಿಗೆ ತನ್ನ ಅಣ್ಣನದೇ ಚಿಂತೆ. ವೆಂಕಿ ಅಣ್ಣನಿಗೆ ಆತನ ಬಾಲ್ಯದ ಗೆಳೆಯನನ್ನು ಹೇಗಾದರೂ ಮಾಡಿ ಹುಡುಕಬೇಕು. ಆತ ಜೀವನದಲ್ಲಿ ಖುಷಿ ಆಗಿರಬೇಕು ಎನ್ನುವ ಆಸೆ ಜಾಹ್ನವಿಗೆ. ವೆಂಕಿ ಚಿಕ್ಕ ವಯಸ್ಸಿನಿಂದ ಕೂಡ ಯಾರೆ ಏನೇ ಹೇಳಿದರೂ ಯಾರ ಜೊತೆಯೂ ಜಗಳ ಆಡದೆ ಬೆಳೆದವನು. ಆತನಿಗೆ ತನ್ನ ಅಮ್ಮ ಎಂದರೆ ಬಹಳಷ್ಟು ಪ್ರೀತಿ. ಆದರೆ, ಇದೀಗ ಮನೆಯ ಹೊರಗೆ ಹೋಗಿ ಜೀವನ ನಡೆಸುವ ಸ್ಥಿತಿ ವೆಂಕಿಗೆ ಬಂದಿದೆ. ಆತನಿಗೆ ಏನು ಮಾಡಲು ಆಗುತ್ತಿಲ್ಲ. ಯಾರ ಜೊತೆಯೂ ತನ್ನ ದುಃಖವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಇದೀಗ ಹೆಂಡತಿಯ ಮನೆಯಲ್ಲಿ ಸುಖವಾಗಿ ಜೀವನ ಸಾಗಿಸುತ್ತಿದ್ದಾನೆ.

ಭಾವನಾಗೆ ಖುಷಿಯನ್ನು ಸೌಪರ್ಣಿಕಾ ಕರೆದುಕೊಂಡು ಹೋಗಿರುವ ವಿಚಾರ ಹೇಗೋ ತಿಳೀತು. ಖುಷಿ ಎಂದರೆ ಭಾವನಾಗೆ ಬಹಳ ಪ್ರೀತಿ. ಭಾವನಾ ಜೊತೆಗೆ ಬಹಳ ಪ್ರೀತಿಯಿಂದ ಇದ್ದ ಮಗು, ತನ್ನ ತಾಯಿ ಭಾವನಾ ಎಂದುಕೊಂಡ ಮಗು, ಇದೀಗ ಸೌಪರ್ಣಿಕಾ ಜೊತೆಯಿದೆ. ಈ ವಿಚಾರ ತಿಳಿದ ಭಾವನಾಗೆ ಬಹಳಷ್ಟು ದುಃಖ ಆಗುತ್ತದೆ. ಸೌಪರ್ಣಿಕಾಗೆ ಖುಷಿಯೇ ಬೇಕು. ಮನೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಹೇಳುತ್ತಾಳೆ. ಆದರೆ ಮನೆಗೆ ಕರೆದುಕೊಂಡು ಹೋದರೆ ಖುಷಿಯನ್ನು ಬಹಳ ಕೆಟ್ಟದಾಗಿ ಸೌಪರ್ಣಿಕಾ ನಡೆಸಿಕೊಡುತ್ತಾಳೆ. ತನ್ನ ಅಣ್ಣನ ಮಗಳು ಎಂದು ಕೂಡ ನೋಡದೆ ಆಕೆಯ ಜೊತೆ ಬಹಳ ಕೆಟ್ಟದಾಗಿ ಗದರುತ್ತಾಳೆ.

Kannada serial Lakshmi Nivasa written update on December 30th episode

ಖುಷಿ ಕರೆದುಕೊಂಡಿದ್ದು ನೋಡಿ ಭಾವನಾ ಓಡೋಡಿ ಬರುತ್ತಾಳೆ. ಆಕೆಗೆ ನೋವು ಆಗುತ್ತೆ. ತನ್ನ ಮಗಳು ಖುಷಿ ಹೇಗಿದ್ದಾಳೋ ಏನೋ ಎಂದೆಲ್ಲ ಆಲೋಚನೆ ಮಾಡುತ್ತಾ ತನ್ನ ಗಂಡ ಸಿದ್ದೇ ಗೌಡನ ಜೊತೆ ಸೌಪರ್ಣಿಕಾ ಮನೆಗೆ ಬರುತ್ತಾಳೆ. ಭಾವನಾ ಬರುವ ವೇಳೆಗೆ ಸೌಪರ್ಣಿಕಾ ಎದುರಿನಲ್ಲಿ ಕುಳಿತಿರುತ್ತಾಳೆ. ಭಾವನಾ ಬಹಳ ತೀಕ್ಷ್ಣವಾಗಿ ಈ ಮನೆಗೆ ಬರುವ ಅಗತ್ಯ ಇಲ್ಲ ಎಂಬಂತೆ ಮಾತನಾಡುತ್ತಾಳೆ. ಆದರೆ ಭಾವನಾ ಆಕೆಯ ಮಾತನ್ನು ಕೇಳದೆ ನಾನು ಖುಷಿಯನ್ನು ಈ ಕ್ಷಣವೇ ನೋಡಬೇಕು. ಯಾಕೆ ಆಕೆ ಇನ್ನೂ ಬಂದಿಲ್ಲ. ಖುಷಿ ಪುಟ್ಟ ಎಂದು ಜೋರಾಗಿ ಭಾವನಾ ಕರೆಯುತ್ತಾಳೆ.

ಅಮ್ಮನ ಬಳಿ ಓಡೋಡಿ ಬಂದ ಖುಷಿ

ಭಾವನಾ ಕರೆಯುವ ಸದ್ದಿಗೆ ಖುಷಿ ಬಹಳ ಖುಷಿಯಿಂದ ಓಡಿಕೊಂಡು ಬಂದು ಅಮ್ಮನನ್ನು ತಬ್ಬಿಕೊಳ್ಳುತ್ತಾಳೆ. ಆ ಕೂಡಲೇ ಸೌಪರ್ಣಿಕಾ ನಾನು ಖುಷಿಯನ್ನು ಪೊಲೀಸರ ಮೂಲಕ ನಿಮ್ಮ ಮನೆಯಿಂದ ಕರೆದುಕೊಂಡು ಬಂದಿದ್ದೇನೆ. ಆಕೆಯನ್ನು ನಾನು ಎಲ್ಲಿಗೆ ಕೂಡ ಕಳುಹಿಸಿಕೊಡುವುದು ಇಲ್ಲ ಎಂದು ಸೌಪರ್ಣಿಕಾ ಬಹಳ ಕಟುವಾಗಿ ಹೇಳುತ್ತಾಳೆ. ಆದರೆ, ಇದಕ್ಕೆ ಭಾವನಾ ಒಪ್ಪುವುದು ಇಲ್ಲ. ನನಗೆ ನನ್ನ ಮಗಳು ಖುಷಿ ಬೇಕು. ಆಕೆಯನ್ನು ನಾನು ಬಿಟ್ಟು ಕೊಡುವ ಮಾತೆ ಇಲ್ಲ ಎಂದು ಬಹಳ ಬೇಸರದಿಂದ ಹೇಳುತ್ತಾಳೆ. ಆಕೆಯ ಮಾತನ್ನು ಕೇಳಿದ ಖುಷಿಗೆ ಬಹಳ ಸಂತಸ ಆಗುತ್ತದೆ.

Kannada serial Lakshmi Nivasa written update on December 30th episode

ಖುಷಿಯನ್ನು ನೋಡಿ ರೇಣುಕಾ ಕೋಪ

ಖುಷಿ ತನ್ನ ತಾಯಿಯ ಬಳಿ ಹೇಳುತ್ತಾಳೆ. ಅಮ್ಮ ನೀನು ನನ್ನನ್ನು ಕರೆದುಕೊಂಡು ಹೋಗು. ದಯವಿಟ್ಟು ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡ. ನನಗೆ ನೀನು ಬೇಕು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಭಾವನಾಗೆ ದುಃಖ ಬರುತ್ತದೆ. ಸೌಪರ್ಣಿಕಾ ಮಾತಿಗೆ ಮಾತು ಕೊಟ್ಟು ಖುಷಿಯನ್ನು ಸಿದ್ದೆಗೌಡರು ಮನೆಗೆ ಕರೆದುಕೊಂಡು ಬರುತ್ತಾರೆ. ಸಿದ್ದೇಗೌಡರು ಮಗುವನ್ನು ಮನೆಗೆ ಕರೆದುಕೊಂಡು ಬರುವುದೇ ತಡ ಸಿದ್ದು ತಾಯಿ ರೇಣುಕಾಗೆ ಬಹಳ ಕೋಪ ಬರುತ್ತದೆ. ಆಕೆಗೆ ಮೊದಲೇ ಭಾವನಾ ಎಂದರೆ ಬಹಳಷ್ಟು ಕೋಪ ಇತ್ತು. ಆದರೆ ಇದೀಗ ಖುಷಿಯೂ ಮನೆಗೆ ಬಂದಿರುವುದು ನೋಡಿ ಮತ್ತಷ್ಟು ಮುನಿಸಿಕೊಂಡಿದ್ದಾಳೆ.

More from Filmibeat

English summary
Kannada serial Lakshmi Nivasa written update on December 30th episode;
Read more about: serial filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X