Lakshmi Nivasa ; ಜಾಹ್ನವಿ ಪ್ರೀತಿಯ ಮೊಲ ಕಾಣೆಯಾಗಿದೆ. ಜಯಂತ್ ವಕ್ರ ದೃಷ್ಟಿ ಮೊಲದ ಮೇಲು ಬಿತ್ತಾ?
ಜಯಂತ್ ತನ್ನ ಪ್ರೀತಿಯ ಮುದ್ದು ಚಿನ್ನು ಮರಿಗಾಗಿ ಮೊಲದ ಮರಿಯನ್ನು ತಂದಿರುತ್ತಾನೆ. ಜಾಹ್ನವಿ ಗೆ ಈ ಮೊದಲೇ ಜಯಂತ್ ಮನೆಯಲ್ಲಿ ಒಬ್ಬಂಟಿ ಎನ್ನುವ ಫೀಲ್ ಆಕೆಗೆ ಇತ್ತು. ಆದರೆ ಈ ಬಗ್ಗೆ ಜಾಹ್ನವಿ ಬಳಿ ಭಾವನ ಈ ಮೊದಲೇ ಹೇಳಿರುತ್ತಾಳೆ. ಜಾಹ್ನವಿ ನೀನು ಮನೆಯಲ್ಲಿ ಪಟ ಪಟ ಎಂದು ಮಾತನಾಡುತ್ತಾ ಇರುತ್ತಿಯಾ? ಆದರೆ ಈ ಮನೆಯಲ್ಲಿ ನೀನು ಒಬ್ಬಂಟಿಯಾಗಿ ಹೇಗೆ ಕಾಲ ಕಳೆಯುತ್ತಿದ್ದಿಯಾ? ನಿನಗೆ ಇಲ್ಲಿ ಇರಲು ಆಗುತ್ತಾ ಎಂದಾಗ ಆಕೆ ಮಾತ್ರ ತನ್ನ ನೋವನ್ನು ಅಕ್ಕನ ಬಳಿ ತೋರ್ಪಡಿಸದೆ ಸುಮ್ಮನೆ ಇದ್ದಳು. ಮೊನ್ನೆ ಭಾವನ ಮನೆಗೆ ಬಂದಾಗಲೂ ಜಾಹ್ನವಿ ಜೊತೆ ಅದನ್ನೇ ಹೇಳುತ್ತಾಳೆ. ಹಾಗೆಯೇ ಜಯಂತ್ ಗೆ ಈ ಬಗ್ಗೆ ಅರ್ಥ ಮಾಡಿಸಿಕೊಡಬೇಕು ಎಂದುಕೊಂಡು ಇರುತ್ತಾಳೆ.
ಜಾಹ್ನವಿಗೆ ತನ್ನ ಗಂಡ ಏನೇ ಅಂದರೂ, ಏನೇ ಹೇಳಿದರೂ ಕೂಡ ಅದರಲ್ಲಿ ಆಕೆಗೆ ತಪ್ಪು ಕಾಣುವುದೇ ಇಲ್ಲ. ಇತ್ತ ಜಾಹ್ನವಿ ಈಕೆಯ ಮನೆಗೆ ಬಂದ ಕೂಡಲೇ ಜಯಂತ ಸರ್ಪ್ರೈಸ್ ಆಗಿ ಆಕೆಗೆ ಮೊಲದ ಮರಿಯನ್ನು ಗಿಫ್ಟ್ ಆಗಿ ಕೊಡುತ್ತಾನೆ. ಜಾಹ್ನವಿಗೆ ಮೊಲದ ಮರಿಯನ್ನು ನೋಡಿ ಬಹಳ ಖುಷಿಯಾಗುತ್ತದೆ. ತನ್ನ ಗಂಡ ನನ್ನ ಬಗ್ಗೆ ಇಷ್ಟು ಪ್ರೀತಿ ಇದೆಯಲ್ಲ ಎಂದು ಸಂತಸ ಪಡುತ್ತಾಳೆ. ಜಾಹ್ನವಿಗೆ ತನ್ನ ಗಂಡ ಸಂಶಯದ ಪಿಶಾಚಿ ಹಾಗೆಯೇ ಸೈಕೋ ಎನ್ನುವ ವಿಚಾರ ಇನ್ನಷ್ಟೇ ತಿಳಿಯಬೇಕಾಗಿದೆ. ಆದರೆ ಮುಗ್ಧ ಜಾಹ್ನವಿ ಮಾತ್ರ ತನ್ನ ಗಂಡನನ್ನು ನಂಬಿರುತ್ತಾಳೆ. ಇತ್ತ ಮೊಲದ ಜೊತೆ ಬಹಳ ಚೆನ್ನಾಗಿ ಜಾಹ್ನವಿ ಕಾಲ ಕಳೆಯುತ್ತಿರುತ್ತಾಳೆ. ಮೊಲದ ಆಟವನ್ನು ನೋಡುತ್ತಾ ಕ್ಷಣ ಕ್ಷಣಕ್ಕೂ ಎಂಜಾಯ್ ಮಾಡುತ್ತಿರುತ್ತಾಳೆ.

ಜಾಹ್ನವಿ ಖುಷಿಯ ಜೀವನವನ್ನು ನೋಡಿದ ಜಯಂತ್ ಗೆ ಇನ್ನೂ ಕೋಪ ಬರುತ್ತದೆ ಅಸೂಯೆ ಆಗುತ್ತದೆ. ಆತನಿಗೆ ತನ್ನ ಹೆಂಡತಿ ನನ್ನ ಜೊತೆಯೇ ಇರಬೇಕು. ಆಕೆಯ ಜೊತೆ ಕಾಲ ಕಳೆಯಬೇಕು, ನಾನು ಆಕೆಗೆ ಮೊಲ ಗಿಫ್ಟ್ ಮಾಡಿದ ಬಳಿಕ ಆಕೆ ಹೆಚ್ಚಾಗಿ ಆ ಮೊಲದ ಜೊತೆಯೇ ಕಾಲ ಕಳೆಯುತ್ತಿರುತ್ತಾಳೆ. ನನ್ನ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಹೇಗಾದರೂ ಮಾಡಿ ನಾನು ಆಕೆಯಿಂದ ಮೊಲವನ್ನು ದೂರ ಮಾಡಬೇಕು ಎಂದುಕೊಂಡು ಇರುತ್ತಾನೆ. ಮನೆಗೆ ಬಂದ ಜಯಂತ್ ಗೆ ಹೆಂಡತಿಯ ವರ್ತನೆ ನೋಡಿ ಬೇರೆ ರೀತಿಯ ಹಾಗೆ ಕಾಣಿಸುತ್ತದೆ. ಆದರೆ ಜಾಹ್ನವಿ ಜಯಂತ್ ಜೊತೆಗೆ ಬಹಳ ಖುಷಿಯಲ್ಲಿ ಇರುತ್ತಾಳೆ . ಆದರೆ ಇದನ್ನು ತಿಳಿದುಕೊಳ್ಳದ ಜಯಂತ್ ಗೆ ಮಾತ್ರ ಬಹಳ ಕೋಪ ಬರುತ್ತದೆ.
ಮೊಲದ ಜೊತೆ ಆಡಿದ ಕ್ಷಣವನ್ನು ಗಂಡನ ಜೊತೆ ಮೆಲುಕು ಹಾಕಿದ ಜಾಹ್ನವಿ
ಇನ್ನು ಮನೆಗೆ ಬಂದ ಜಯಂತ್ ಗೆ ಊಟ ಮಾಡಲು ಯಾವ ರೀತಿ ಸಾರು ಬೇಕು ಎಂದೆಲ್ಲ ಕೇಳುತ್ತಿರುತ್ತಾಳೆ. ಆಗ ಆತ ನನಗೆ ಸೊಪ್ಪಿನ ಸಾರು ಬೇಕು ಎಂದು ಹೇಳಿದಾಗ ಜಾಹ್ನವಿ ಆಯಿತು ಎಂದು ಹೇಳಿ ಅಡುಗೆ ಮಾಡಲು ಹೋಗುತ್ತಾಳೆ. ಅಡುಗೆ ಮಾಡಿ ವಾಪಸ್ ಬರಬೇಕಾದರೆ ಮೊಲ ಕಾಣಿಸುವುದೇ ಇಲ್ಲ. ಇದನ್ನು ನೋಡಿದ ಜಾಹ್ನವಿಗೆ ಆತಂಕ ಶುರು ಆಗುತ್ತದೆ. ನನ್ನ ಮೊಲದ ಮರಿ ಎಲ್ಲಿ ಹೋಯಿತು ಎಂದು ತನ್ನ ಗಂಡನ ಬಳಿ ನಾನು ಕೇಳುವಾಗ ಕುಕ್ಕರ್ ವಿಷಲ್ ಆಗುತ್ತದೆ. ಆದರೆ ಮೊಲದ ಬಗ್ಗೆ ಮಾತ್ರ ಜಯಂತ್ ಎನು ಹೇಳಲೇ ಇಲ್ಲ. ಇತ್ತ ದೇವಸ್ಥಾನದಲ್ಲಿ ಲಕ್ಷ್ಮೀ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುವಾಗ ವಿಶ್ವ ಬರುತ್ತಾನೆ.
ವಿಶ್ವನನ್ನೂ ನೋಡಿ ಖುಷಿಪಟ್ಟ ಲಕ್ಷ್ಮೀ
ವಿಶ್ವನನ್ನು ನೋಡಿದ ಜಾಹ್ನವಿ ಅಮ್ಮನಿಗೆ ಮಾತ್ರ ಬಹಳ ಖುಷಿ ಆಗುತ್ತದೆ.ಆಕೆ ವಿಶ್ವನ ಜೊತೆ ಬಹಳ ಖುಷಿಯಲ್ಲಿ ಮಾತನಾಡುತ್ತಿರುತ್ತಾರೆ. ಆದರೆ ಆಕೆಗೆ ತಿಳಿದಿಲ್ಲ. ಆತ ತನ್ನ ಸ್ವಂತ ಅಣ್ಣನ ಮಗ ಎನ್ನುವ ವಿಚಾರ. ಇತ್ತ ಲಕ್ಷ್ಮೀ ಅತ್ತಿಗೆ ಮರೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತ ನಿಂತಿರುತ್ತಾರೆ. ಲಕ್ಷ್ಮೀ ಹಾಗೆಯೇ ವಿಶ್ವ ಕ್ಲೋಸ್ ಆಗಿ ಮಾತನಾಡುತ್ತಿರುವುದನ್ನೂ ನೋಡಿದ ಲಕ್ಷ್ಮೀ ಯ ಅತ್ತಿಗೆ ಶಾಕ್ ಆಗುತ್ತದೆ.


Click it and Unblock the Notifications











