Lakshmi Nivasa ; ಜಾಹ್ನವಿ ಪ್ರಾಣಕ್ಕೆ ಸಂಚಕಾರ,ಮುಂದೇನು ಮಾಡುತ್ತಾಳೆ ಜಾಹ್ನವಿ?
ಭಾವನ ಗೆ ಸಿದ್ದೇ ಗೌಡರ ಬಗ್ಗೆ ಅಪಾರವಾದ ಕಾಳಜಿ ಇದೆ. ಸಿದ್ದೇಗೌಡರು ಭಾವನ ಗೋಸ್ಕರ ಮನೆ ಮಂದಿಯನ್ನೆಲ್ಲ ಎದುರು ಹಾಕಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಸಿದ್ದೇಗೌಡರ ತಂದೆ ಯಾವತ್ತೂ ಕೂಡ ಸಿದ್ದೇಗೌಡರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಆದರೆ ಈಗ ಮನೆ ಮಂದಿಯನ್ನೆಲ್ಲ ಎದುರು ಹಾಕಿಕೊಂಡು ಭಾವನ ಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿ ಇಟ್ಟುಕೊಂಡಿದ್ದಾರೆ. ಇದೆಲ್ಲವನ್ನು ನೋಡಿದ ಭಾವನಗೆ ಬಹಳ ಬೇಸರವಾಗುತ್ತದೆ. ಸಿದ್ದೇಗೌಡರಿಗೆ ಮನೆಯಲ್ಲಿ ಸಿಗುತ್ತಿದ್ದ ಮರ್ಯಾದೆಯನ್ನು ನೋಡಿ ಭಾವನಗೆ ತಡೆದುಕೊಳ್ಳಲು ಆಗುವುದಿಲ್ಲ ಆ ದುಃಖವನ್ನು ಯಾರ ಬಳಿಯೂ ಕೂಡ ಹೇಳಿಕೊಳ್ಳಲು ಆಗದೆ ತನ್ನಲ್ಲಿ ಮುಚ್ಚಿಟ್ಟುಕೊಂಡು ಇರುತ್ತಾಳೆ.
ಸಿದ್ದೇಗೌಡರಿಗೆ ಇಷ್ಟು ಕಷ್ಟವಾಗುತ್ತಿದೆ ಎಂದು ತಿಳಿದು ಮತ್ತೆ ಯಾಕೆ ನನ್ನ ಮದುವೆ ಆದರೂ ಎನ್ನುವುದೇ ಭಾವನ ಪ್ರಶ್ನೆ ಆಗಿದೆ. ಸಿದ್ದೇಗೌಡರ ಕುಟುಂಬಕ್ಕೆ ತನ್ನನ್ನು ನೋಡಿದರೂ ಕೂಡ ಆಗುವುದಿಲ್ಲ, ಹಾಗೆಯೇ ಸಿದ್ದೇಗೌಡರನ್ನು ಕೂಡ ನೋಡಿದರೆ ಆಗುವುದಿಲ್ಲ ಆದರೂ ಕೂಡ ಸಿದ್ದೇಗೌಡರು ಎಲ್ಲವನ ಸಹಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಇತ್ತ ಭಾವನ ತನಗೆ ಏನೇ ಕಷ್ಟ ಇದ್ದರೂ ಕೂಡ ಮೊದಲು ಅದನ್ನ ಗೌಡ್ರಿಗೆ ಹೇಳುತ್ತಿದ್ದಳು ಆ ಪರಿಚಿತ ಯಾರು ಎನ್ನುವುದು ಭಾವನೆಗೆ ಇನ್ನೂ ತಿಳಿದಿಲ್ಲ ಆದರೆ ಅದು ಬೇರೆ ಯಾರು ಅಲ್ಲ ಸಿದ್ದೇಗೌಡರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ

ಭಾವನ ಗೌಡ್ರ ಬಳಿ ಏನೇ ವಿಚಾರವಿದ್ದರೂ ಅದನ್ನು ಹಂಚಿಕೊಳ್ಳುತ್ತಾಳೆ ಹಾಗೆಯೇ ಈಗ ಸಿದ್ದೇಗೌಡರ ಪರಿಸ್ಥಿತಿಯನ್ನು ಕೂಡ ಭಾವನ ಗೌಡ್ರ ಬಳಿ ಹೇಳುತ್ತಾಳೆ. ಗೌಡ್ರೆ ನಾನು ನಿಮಗೆ ಫೋನ್ ಮಾಡಿರುವುದು ಸಿದ್ದೇಗೌಡರ ಬಗ್ಗೆ ಹೇಳಲು ಸಿದ್ದೇಗೌಡರು ನನ್ನನ್ನು ಮದುವೆಯಾದ ಬಳಿಕ ಮನೆಯವರೆಲ್ಲರ ಬಳಿಯೂ ಬಹಳ ತಿರಸ್ಕಾರದ ಮಾತನ್ನು ಕೇಳುತ್ತ ಬಂದಿದ್ದಾರೆ ಯಾವತ್ತು ಅವರಿಗೆ ಅವರತನಕ್ಕೆ ಬೆಲೆಯನ್ನು ಈ ಮನೆಯಲ್ಲಿ ನೀಡುತ್ತಿಲ್ಲ ಇದರಿಂದಾಗಿ ನನಗೆ ಬಹಳ ಬೇಸರವಾಗುತ್ತಿದೆ ನನ್ನಿಂದಾಗಿ ಸಿದ್ದೇಗೌಡರು ಕೂಡ ಮನೆಯಿಂದ ದೂರವಾಗಿದ್ದಾರೆ
ಭಾವನ ಮಾತಿಗೆ ಖುಷಿಪಟ್ಟ ಸಿದ್ದೇ ಗೌಡರು
ಈ ಕಾರಣಕ್ಕೆ ನನ್ನನ್ನು ಮದುವೆಯಾಗಿದ್ದಾದರೂ ಯಾಕೆ ಎನ್ನುವುದು ಕೂಡ ನನಗೆ ಅರ್ಥವಾಗುತ್ತಿಲ್ಲ ಎಂದು ಬಹಳ ನೋವಿನಲ್ಲಿ ಇದ್ದಾಗ ಸಿದ್ದೇ ಗೌಡರಿಗೆ ಬಹಳ ಖುಷಿ ಆಗುತ್ತದೆ. ತನ್ನ ಬಗ್ಗೆ ಭಾವನ ಮೇಡಂ ಕೂಡ ಯೋಚನೆ ಮಾಡುತ್ತಾರೆ ಎನ್ನುವುದನ್ನು ತಿಳಿದ ಸಿದ್ದೆಗೌಡರು ಆಕೆಗೆ ಸಮಾಧಾನ ಹೇಳುತ್ತಾನೆ. ಹಾಗೆಯೇ ಸಿದ್ದೇ ಗೌಡರ ಪ್ರೀತಿಯ ಬಗ್ಗೆ ಕೂಡ ಭಾವನ ಗೆ ಅರ್ಥ ಮಾಡಿಸುತ್ತಾನೆ. ಭಾವನ ಬಳಿ ಗೌಡರು ಹೇಳುತ್ತಾರೆ ಈ ವೇಳೆ ಸಿದ್ದೇ ಗೌಡರ ಜೊತೆ ನೀವು ನಿಂತರೆ ಅವರಿಗೆ ಅಷ್ಟು ನೋವು ಆಗುವುದಿಲ್ಲ ಎಂದು ಹೇಳುತ್ತಾನೆ ಇದನ್ನು ಕೇಳಿದ ಭಾವನ ಫೋನ್ ಇರುತ್ತಾಳೆ
ತರಕಾರಿ ತರಲೆಂದು ಹೊರಟ ಜಾಹ್ನವಿ
ಇತ್ತ ಜಾಹ್ನವಿ ಮನೆಯಲ್ಲಿ ತರಕಾರಿ ಮುಗಿದಿದ್ದ ಕಾರಣ ಮಾರ್ಕೆಟ್ ಗೆ ಹೋಗಿ ತರಕಾರಿ ತರೋಣ ಎಂದು ಹೋಗುತ್ತಾಳೆ . ಹೋಗುವ ದಾರಿಯಲ್ಲಿ ಜಾಹ್ನವಿಯನ್ನು ಯಾರೋ ಫಾಲೋ ಮಾಡುವುದು ತಿಳಿಯುತ್ತದೆ. ಆಕೆ ಕೂಡಲೇ ಆತ ಯಾರು ಎನ್ನುವುದು ತಿಳಿಯಬೇಕು ಎಂದುಕೊಂಡಾಗ ಆತ ಜಾಹ್ನವಿ ಎದುರು ಬಂದು ಮುಖದ ಮುಖವಾಡ ತೆಗೆಯುತ್ತಾನೆ. ಜಾಹ್ನವಿ ಎನಿಸಿಕೊಂಡ ಹಾಗೆ ಆತ ಕಳ್ಳ ಆಗಿರುವುದಿಲ್ಲ. ಆತ ಆಕೆಯ ಮನೆಯ ಹಳೆಯ ವಾಚ್ ಮ್ಯಾನ್ ಆಗಿರುತ್ತಾನೆ ಆತ ಜಾಹ್ನವಿ ಬಳಿಗೆ ಬಂದು ಆತನ ಬಳಿ ಎಲ್ಲಾ ವಿಚಾರವನ್ನು ಹೇಳುತ್ತಾನೆ.
ವಾಚ್ ಮ್ಯಾನ್ ಮಾತಿಗೆ ಶಾಕ್ ಆದ ಜಾಹ್ನವಿ
ಜಾಹ್ನವಿ ಗೆ ತಲೆ ಕೆಟ್ಟು ಹೋಗುತ್ತದೆ ಏನಾಗುತ್ತಿದೆ ಎನ್ನುವ ಅರಿವು ಆಕೆಗೆ ಆಗುವುದಿಲ್ಲ. ಜಾಹ್ನವಿಗೆ ಜಯಂತ್ ನ ಅಸಲಿ ಆಟ ಒಂದೊಂದೇ ಗೊತ್ತಾಗುತ್ತಿದೆ. ಜಾಹ್ನವಿ ಬಳಿ ವಾಚ್ ಮ್ಯಾನ್ ನಿಮ್ಮ ಗಂಡ ಸರಿ ಇಲ್ಲ. ನನ್ನನ್ನು ಸಾಯಿಸಲು ನೋಡಿದರೂ ಆದರೆ ನಾನು ಅದೇಗೋ ಬಚಾವ್ ಆದೆ..ಆದರೆ ನೀವು ಅವರ ಜೊತೆ ಇರುವುದು ಬಹಳ ರಿಸ್ಕ್ ನೀವು ಅವನ ಕೈಯಿಂದ ತಪ್ಪಿಸಿಕೊಂಡು ಎಲ್ಲಿಯಾದರೂ ಹೋಗಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ ಜಾಹ್ನವಿಗೆ ಏನು ಮಾಡಬೇಕು ಎಂದು ತಿಳಿಯದೇ ದಿಕ್ಕೇ ತೋಚದ ಹಾಗೆ ಆಗುತ್ತದೆ.


Click it and Unblock the Notifications











