Lakshmi Nivasa ; ಜಯಂತ್ ವ್ಯಾಘ್ರ ಮುಖ ಜಾಹ್ನವಿ ಮುಂದೆ ಅನಾವರಣ,ವಾಚ್ ಮ್ಯಾನ್‌ನಿಂದ ಜಯಂತ್ ಗೆ ನಿಜ ಗೊತ್ತಾಗುತ್ತಾ?

By ಪೂರ್ವ

ಜಾಹ್ನವಿ ಗೆ ಜಯಂತ್ ಬಗ್ಗೆ ಎಲ್ಲವೂ ಎಳೆ ಎಳೆಯಾಗಿ ತಿಳಿಯುತ್ತಿದೆ. ಇಷ್ಟು ದಿನ ಜಯಂತ್ ಜಾಹ್ನವಿ ಜೊತೆ ಸಜ್ಜನರ ಹಾಗೆ ಇರುತ್ತಿದ್ದ ಆದರೆ ಈ ಬಗ್ಗೆ ಜಾಹ್ನವಿ ಗೆ ಸುಳಿವು ಕೂಡ ಇರಲಿಲ್ಲ. ಯಾವಾಗ ಜಾಹ್ನವಿ ಗೆ ವಾಚ್ ಮ್ಯಾನ್ ಎಲ್ಲಾ ವಿಚಾರವನ್ನು ಹೇಳಿ ಬಿಟ್ಟನೋ ಆಕೆಗೆ ಆ ಬಳಿಕ ಜಯಂತ್ ಚಲನವಲನವನ್ನು ಸರಿಯಾಗಿ ನೋಡುತ್ತಾಳೆ. ಆಗ ಆಕೆಗೆ ತಿಳಿಯುತ್ತದೆ ತನ್ನ ಗಂಡನಿಗೆ ಏನೋ ಪ್ರಾಬ್ಲಂ ಆಗಿದೆ. ಆದರೆ ಯಾರು ನನ್ನ ಜೊತೆ ಏನು ಹೇಳುತ್ತಿಲ್ಲ ಎನ್ನುವ ಅನುಮಾನ ಆಕೆಗೆ ಮೂಡುತ್ತದೆ.

ಇನ್ನೂ ಜಯಂತ್ ಮಧ್ಯೆ ರಾತ್ರಿ ಎದ್ದು ಎಲ್ಲಾ ಕೆಲಸವನ್ನು ಮಾಡಿ ಮುಗಿಸುತ್ತಾನೆ.ಮನೆಯ ಎಲ್ಲ ಕೆಲಸವನ್ನೂ ಜಾಹ್ನವಿ ಮಾಡಲು ಹೋದರೆ ಜಯಂತ್ ಗೆ ಅದು ಸಮಾಧಾನ ಆಗುತ್ತಿರಲಿಲ್ಲ. ಆದ ಕಾರಣ ಆತನೇ ಮಧ್ಯ ರಾತ್ರಿ ಎದ್ದು ಎಲ್ಲಾ ಕೆಲಸವನ್ನು ಮಾಡುತ್ತಿರುತ್ತಾನೆ. ಇದೆಲ್ಲವನ್ನೂ ನೋಡಿದ ಜಾಹ್ನವಿ ಗೆ ಶಾಕ್ ಆಗುತ್ತದೆ. ಇವರೊಬ್ಬರೇ ಮಧ್ಯರಾತ್ರಿ ಎದ್ದು ಕೆಲಸ ಮಾಡುತ್ತಾರೆ. ನನ್ನ ಬಳಿ ಕೆಲಸದವರು ಮಾಡುತ್ತಾರೆ ಎಂದು ಸುಳ್ಳು ಹೇಳುತ್ತಾರೆ. ಹೀಗೆಲ್ಲ ಮಾಡುವ ಅಗತ್ಯ ಏನಿದೆ. ನಿಜವಾಗಿಯೂ ಈ ಮನೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಅರ್ಥ ಆಗಬೇಕಿದೆ ಎಂದು ಜಾಹ್ನವಿ ಅಂದುಕೊಂಡು ಇರುತ್ತಾಳೆ.

kannada-serial-lakshmi-nivasa-written-update11th-november

ಮನೆ ಕ್ಲೀನ್ ಮಾಡುವ ವೇಳೆ ಜಯಂತ್ ಗಿಡಗಳ ಬಳಿ ಎಲ್ಲಾ ಮಾತನಾಡುತ್ತಿರುವುದನ್ನು ನೋಡಿದ ಜಾಹ್ನವಿಗೆ ಭಯ ಆಗುತ್ತದೆ. ಇತ್ತ ಜಯಂತ್ ಮನೆಯ ವಾಚ್ ಮ್ಯಾನ್ ಅನ್ನು ಹುಡುಕಿಕೊಂಡು ಹೋಗುತ್ತಾನೆ. ಈತ ಜಾಹ್ನವಿ ಜೊತೆ ಎನು ಹೇಳಿದ್ದಾನೆ ಎಂದು ತಿಳಿಯಲು ಹೀಗೆಲ್ಲ ಮಾಡುತ್ತಿರುತ್ತಾನೆ. ಕೊನೆಗೂ ಆತನ ಮನೆಯಲ್ಲಿ ಮೊದಲು ಇದ್ದ ವಾಚ್ ಮ್ಯಾನ್ ಸಿಗುತ್ತಾನೆ. ಮೊದಲಿಗೆ ಜಯಂತ್ ಕೈಯಿಂದ ಆತ ತಪ್ಪಿಸಿಕೊಂಡರು ಕೊನೆಗೆ ಜಯಂತ್ ಕೈ ಗೆ ಸಿಕ್ಕಿ ಬೀಳುತ್ತಾನೆ. ಇತ್ತ ಜಾಹ್ನವಿ ಮಾತ್ರ ತನ್ನ ಗಂಡ ಯಾಕೆ ಈ ರೀತಿ ನಡೆದುಕೊಂಡು ಇದ್ದಾರೆ ನಾನು ಈ ವಿಚಾರವನ್ನು ಯಾರ ಬಳಿ ಹೇಳಿ ನನಗೆ ತಲೆ ಕೆಟ್ಟು ಹೋಗುತ್ತಿದೆ. ಎಂದು ಬಹಳ ಯೋಚನೆ ಮಾಡುತ್ತಿರುತ್ತಾಳೆ.

ತಂದೆ ತಾಯಿ ನೆನಪಾಗಿ ಕಣ್ಣೀರಿಟ್ಟ ಜಾನು

ಮೊದಲಿಗೆ ಜಾಹ್ನವಿಗೆ ನೆನಪಾಗಿದ್ದೆ ತಂದೆ ಹಾಗೂ ತಾಯಿ. ಆದರೆ ಅವರ ಜೊತೆ ಯಾವುದೇ ವಿಚಾರ ಹೇಳಿಕೊಳ್ಳಲು ಜಾಹ್ನವಿ ಮನಸ್ಸು ಒಪ್ಪಲಿಲ್ಲ. ಇನ್ನೂ ತಂದೆಯ ಹಣದ ಮೇಲೆ ಹರೀಶ ಕೂಡ ಕಣ್ಣು ಹಾಕಿದ್ದಾನೆ. ಐದು ಲಕ್ಷ ದಷ್ಟು ಹಣ ಲಾಸ್ ಆಗಿದೆ ಎಂದೆಲ್ಲ ಹೇಳಿ ಮನೆ ಮಂಡಿಯವರ ಎದುರು ಸುಮ್ಮನೆ ಹೇಳುತ್ತಾನೆ. ಲಕ್ಷ್ಮೀ ಹಾಗೂ ಆಕೆಯ ಗಂಡ ಬಹಳ ಕಷ್ಟಪಟ್ಟು ಹಣ ಸಂಗ್ರಹಿಸಿ ಇಟ್ಟಿರುತ್ತಾರೆ. ತಾನು ಒಂದು ಮನೆ ಕಟ್ಟಿಸಬೇಕು ಎನ್ನುವ ಆಸೆ ಆಕೆಗೆ ಇರುತ್ತದೆ. ಆದರೆ ಅದ್ಯಾಕೋ ಈಡೇರುವ ಹಾಗೆ ಕಾಣಿಸುತ್ತಿಲ್ಲ.

ಹಣಕ್ಕಾಗಿ ಮನೆಯವರ ಬಳಿ ಸುಳ್ಳು ಹೇಳಿದ ಹರೀಶ

ಹರೀಶ್ ಗೆ ಹಣ ದ ಅಗತ್ಯ ಇದೆ ಆದ ಕಾರಣ ಆತ ಹೇಗಾದರೂ ಮಾಸ್ತಿ ತಂದೆಯ ಹಣವನ್ನು ಸ್ವಲ್ಪವಾದರೂ ತೆಗೆದುಕೊಂಡರೆ ನನ್ನ ಆರ್ಥಿಕ ಸ್ಥಿತಿಕೊಂಚ ಮಟ್ಟಿಗೆ ಕಡಿಮೆ ಮಾಡಬಹುದು ಅಂದುಕೊಳ್ಳುತ್ತಾನೆ. ತನ್ನ ತಂದೆಗೆ ನಡೆದ ವಿಚಾರವನ್ನು ಹೇಳುತ್ತಾನೆ. ಆಗ ಮನೆ ಮಂದಿಗೆ ಇನ್ನೂ ಆತಂಕ ಹೆಚ್ಚಾಗುತ್ತದೆ. ಲಕ್ಷ್ಮೀ ಗೆ ಮಾತ್ರ ಆಕಾಶವೇ ಕಳಚಿ ಮೈ ಮೇಲೆ ಬಿದ್ದ ಹಾಗೆ ಆಗುತ್ತದೆ. ಹರೀಶ್ ಹೆಂಡತಿ ಕೂಡ ಹರೀಶ್ ಬಳಿ ಬಹಳ ಕೋಪದಿಂದ ನಡೆದುಕೊಳ್ಳುತ್ತಾರೆ.ನಾನು ಅವತ್ತೇ ಕೇಳಿದೆ ಹೇಗೆ ಸಾಗುತ್ತಿದೆ ಎಲ್ಲಾ ಸರಿಯಾಗಿ ಇದೆಯಾ ಎಂದೆಲ್ಲ ಕೇಳಿದ್ದೆ ಆದರೆ ನೀನು ನನ್ನ ಬಳಿ ಎಲ್ಲ ವಿಚಾರ ಮುಚ್ಚಿತ್ತಿದ್ದಿಯಾ ಎಂದು ಕೇಳುತ್ತಾಳೆ. ಇನ್ನೂ ಹರೀಶ್ ಮಾತ್ರ ಯಾರ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ಇರುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X