'ಮಗಳು ಜಾನಕಿ'ಯನ್ನು ಭೇಟಿ ಮಾಡಿ, ಪ್ರಶ್ನೆ ಕೇಳಿ
'ಮಗಳು ಜಾನಕಿ' ಧಾರಾವಾಹಿ ಸದ್ಯ ಯಶಸ್ವಿಯಾಗಿ ಮುನ್ನುಗುತ್ತಿದೆ. ಅದೇನೇ ಕೆಲಸ ಇದ್ದರೂ ವೀಕ್ಷಕರು ಪ್ರತಿ ದಿನ ತಪ್ಪದೇ ಈ ಧಾರಾವಾಹಿಯನ್ನು ನೋಡುತ್ತಿದ್ದಾರೆ.
ಧಾರಾವಾಹಿ ನೋಡುವ ಅನೇಕರಿಗೆ ಅನೇಕ ಪ್ರಶ್ನೆಗಳು ಹುಟ್ಟಬಹುದು. ಕೆಲವರು ಅದನ್ನು ತಮ್ಮ ಸ್ನೇಹಿತರ ಹಾಗೂ ಮನೆಯವರ ಜೊತೆಗೆ ಚರ್ಚೆ ಮಾಡುವುದೂ ಉಂಟು. ಆದರೆ, ಈಗ ನಿಮ್ಮ ಅಂತಹ ಪ್ರಶ್ನೆಗಳನ್ನು ನೇರವಾಗಿ ಧಾರಾವಾಹಿ ತಂಡಕ್ಕೆ ಕೇಳಬಹುದಾಗಿದೆ.
ಟಿ ಎನ್ ಸೀತಾರಂ ತಮ್ಮ ಧಾರಾವಾಹಿಗಳ ಬಗ್ಗೆ ಸಂವಾದ ಕಾರ್ಯಕ್ರಮ ಮಾಡುತಿರುತ್ತಾರೆ. ಅದೇ ರೀತಿ ಈಗ 'ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮಕ್ಕೆ ಸಿದ್ಧತೆ ಶುರುವಾಗಿದೆ. ವಿಶೇಷ ಅಂದರೆ, ಈ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮ ಇದಾಗಿದೆ. ಮುಂದೆ ಓದಿ...

ದಾವಣಗೆರೆಯಲ್ಲಿ 'ಮಗಳು ಜಾನಕಿ'
'ಮಗಳು ಜಾನಕಿ' ಧಾರಾವಾಹಿಯ ಸಂವಾದ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ವಿಶೇಷ ಅಂದರೆ, ಈ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮ ಇದಾಗಿದೆ. ಜುಲೈ 2 ರಿಂದ ಧಾರಾವಾಹಿ ಪ್ರಾರಂಭ ಆಗಿದ್ದು, ಈಗ ಮೂರು ತಿಂಗಳ ನಂತರ ಸಂವಾದ ಕಾರ್ಯಕ್ರಮ ನಡೆಯುತ್ತಿದೆ.
ದಾವಣಗೆರೆಯೇ ಯಾಕೆ?
ಈ ಧಾರಾವಾಹಿಯ ಮೊದಲ ಸಂವಾದ ಕಾರ್ಯಕ್ರಮ ದಾವಣಗೆರೆಯಲ್ಲಿಯೇ ಯಾಕೆ ಎನ್ನುವ ಪ್ರಶ್ನೆ ನಿಮಗೆ ಇದ್ದರೆ ಅದಕ್ಕೂ ಉತ್ತರವಿದೆ. ಸೀತಾರಂ ಅವರು ಈ ಕ್ಷೇತ್ರಕ್ಕೆ ಬರಲು ದಾವಣಗೆರೆ ಹಾಗೂ ಅಲ್ಲಿನ ಸ್ನೇಹಿತರು ಬಹು ಮುಖ್ಯ ಪಾತ್ರವಹಿಸಿದ್ದಾರಂತೆ. ಅದೇ ಕಾರಣಕ್ಕೆ ಈ ಧಾರಾವಾಹಿಯ ಮೊದಲ ಸಂವಾದವನ್ನು ಅಲ್ಲಿಂದ ಶುರು ಮಾಡಿದ್ದಾರೆ.

ಯಾವ ದಿನ ?
ನವೆಂಬರ್ 18 ರಂದು ಬೆಳಗ್ಗೆ 10 ಗಂಟೆಗೆ, ಬಾಪೂಜಿ ಸಭಾಂಗಣದಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಬರಲು ಆಸಕ್ತಿ ಇರುವವರು ಪಾಸುಗಳನ್ನು ಕಲೆಕ್ಷನ್ಸ್ ಎಂ.ಜಿ.ಎಂ ಸ್ಕ್ವೇರ್, ಎಂ.ಸಿ.ಸಿ 'ಬಿ' ಬ್ಲಾಕ್ ದಾವಣಗೆರೆ ಯಲ್ಲಿ ಪಡೆಯಬಹುದಾಗಿದೆ.
ಇಡೀ ತಂಡ ಭಾಗಿ
ವೀಕ್ಷಕರ ಪ್ರಶ್ನೆ ಹಾಗೂ ಅವರ ಅಭಿಪ್ರಾಯ ತಿಳಿದುಕೊಳ್ಳಲು ಸೀತಾರಂ ಮತ್ತು ತಂಡ ಕಾಯುತ್ತಿದೆ. ಈ ಕಾರ್ಯಕ್ರಮದಲ್ಲಿ ಧಾರಾವಾಹಿಯ ಕಲಾವಿದರಾದ ಗಾನವಿ, ರಾಕೇಶ್ ಮೈಯ್ಯ ಹಾಗೂ ತಾಂತ್ರಿಕ ವರ್ಗ ಭಾಗಿಯಾಗಲಿದ್ದಾರೆ.


Click it and Unblock the Notifications











