Don't Miss!
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- News
ಆವಲಗುರ್ಕಿ: ಆದಿಯೋಗಿ ಪ್ರತಿಮೆ ನೋಡಲು ಬರುವ ಭಕ್ತರಿಂದ ಸುಂಕ ವಸೂಲಿ ಆರೋಪ, ಭುಗಿಲೆದ್ದ ಆಕ್ರೋಶ
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಕ್ರಾಂತ್ ವರ್ಗಾವಣೆ ಕ್ಯಾನ್ಸಲ್; ಮನೆಯವರನ್ನು ಎದುರು ಹಾಕಿಕೊಂಡ ಸ್ಪಂದನ?
ಸ್ಪಂದನ ಮನೆಯವರ ವಿರುದ್ದವಾಗಿ ನಡೆದುಕೊಂಡಿದ್ದಾಳೆ. ಮನೆಯಲ್ಲಿ ಪೂಜೆ ಇದ್ದರೂ ತನಗೆ ಪೂಜೆಗಿಂತ ಓದೇ ಮುಖ್ಯ ಎಂದು ಸ್ಪಂದನ ಮನೆಯಿಂದ ಅದೇಗೋ ಹೊರಗೆ ಹೋಗುತ್ತಾಳೆ. ಈ ವೇಳೆ ಕಾಲೇಜಿನಲ್ಲಿ ಪೂಜೆಗೆ ಯಾಕೆ ಹೋಗಲಿಲ್ಲ ಎಂದು ಸ್ಪಂದನಾ ಬಳಿ ಕೇಳುತ್ತಾರೆ. ಆದರೆ ಸ್ಪಂದನ ನನಗೆ ಮನೆಯಲ್ಲಿ ಬಹಳ ಕಷ್ಟ ಇದೆ ಆದರೆ ಏನು ಮಾಡುವುದು ನನಗೆ ಓದು ಬಿಟ್ಟು ಬೇರೆ ಯಾವುದೂ ಇಷ್ಟ ಇಲ್ಲ, ಏನು ಮಾಡುವುದು ತಿಳಿಯದೇ ಮನೆಯಿಂದ ಅದು ಹೇಗೋ ಓಡಿ ಬಂದೆ ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಸ್ಪಂದನ ಗೆಳೆಯ ಈಗ ಮನೆಯವರನ್ನು ಹೇಗೆ ಸಂಭಾಳಿಸುತ್ತ ಇದ್ದೀಯಾ, ಕಷ್ಟ ಅಲ್ವಾ ಎಂದೆಲ್ಲ ಕೇಳುತ್ತಾನೆ. ನಾನು ಎಲ್ಲದಕ್ಕು ತಯಾರಾಗಿ ಬಂದಿದ್ದೇನೆ ಎಂದು ಧೃಢ ನಿರ್ಧಾರ ಮಾಡಿದ್ದೇನೆ ಎಂದು ಸ್ಪಂದನ ಹೇಳುತ್ತಾಳೆ. ಇನ್ನು ಸ್ಪಂದನಾಳನ್ನು ಮನೆಯೆಲ್ಲಾ ಹುಡುಕಾಡಿದರೂ ಸ್ಪಂದನ ಇರುವುದಿಲ್ಲ. ಆಕೆ ಈಗಾಗಲೇ ಮನೆಯಿಂದ ಹೊರಹೋಗಿ ಓದುವ ಯೋಚನೆ ಮಾಡುತ್ತಾ ಇರುತ್ತಾಳೆ.
ಮನೆಯಿಂದ ಹೊರ ಹೋಗಿ ಓದಿದರೆ ಮನೆಯಲ್ಲಿ ಜಂಜಾಟ ಇರುವುದಿಲ್ಲ ಎನ್ನುವುದು ಅವಳ ಭಾವನೆ. ಸ್ಪಂದನ ಮನೆಯಲ್ಲಿ ಕಾಣಿಸದೆ ಇರುವುದನ್ನು ನೋಡಿದ ವಿಕ್ರಾಂತ್ ಸ್ಪಂದನಾಳನ್ನು ಹುಡುಕುತ್ತಾ ಇರುತ್ತಾನೆ. ಸ್ಪಂದನ ಎಲ್ಲಿ ಇದ್ದೀಯಾ, ಆಟ ಆಡ ಬೇಡ ಎಲ್ಲಿದಿಯಾ ಎಂದು ಕರೆಯುತ್ತಾ ಇರುತ್ತಾನೆ. ಸ್ಪಂದನ ಮನೆಯಲ್ಲಿ ಇಲ್ಲದನ್ನು ಕಂಡು ಮನೆ ಮಂದಿ ಎಲ್ಲಾ ವಿಕ್ರಾಂತ್ ನನ್ನು ಕೇಳುತ್ತಾ ಇರುತ್ತಾರೆ.

ಎಲ್ಲರ ಕೆಂಗಣ್ಣಿಗೆ ಗುರಿ ಆದ ಸ್ಪಂದನ
ಇನ್ನು ಆ ವೇಳೆ ಕೂಡ ಸ್ಪಂದನ ತಪ್ಪಿಸಿಕೊಂಡು ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾಳೆ.. ಇದೀಗ ಇನ್ನೊಂದು ಬಾರಿ ಸ್ಪಂದನ ಎಲ್ಲರ ಕೆಂಗಣ್ಣಿಗೂ ಗುರಿ ಆಗುವ ಸಾಧ್ಯತೆ ಕಾಣುತ್ತಿದೆ. ಇನ್ನು ಎಲ್ಲರೂ ಕುಳಿತು ಡೈನಿಂಗ್ ರೂಮ್ ನಲ್ಲಿ ಮಾತನಾಡುತ್ತಾ ವಿಕ್ರಾಂತ್ ನನ್ನು ಎಲ್ಲರ ಮುಂದು ಅವಮಾನ ಮಾಡಿದ ಹಾಗೆ ಮಾತನಾಡಿದಾಗ ಶಮಂತ್ ಅಮ್ಮನ ಬಾಯಿ ಮುಚ್ಚಿಸಿ ಬಿಡುತ್ತಾನೆ. ಈ ವೇಳೆ ವಿಕ್ರಾಂತ್ ಚಿಕ್ಕಪ್ಪ ಕೂಡ ಸ್ಪಂದನ ಬಗ್ಗೆ ಬಹಳ ಕೋಪಗೊಂಡಿರುತ್ತಾರೆ. ವಿಕ್ರಾಂತ್ ವರ್ಗಾವಣೆ ಮಾಡದೇ ಇರಲು ವಿಕ್ರಾಂತ್ ನ ಮೇಲಿನ ಆಫೀಸರ್ ಬಳಿ ಕೇಳಿಕೊಂಡಿದ್ದಾನೆ.

ಮನೆ ಮಂದಿಗೆ ಸ್ಪಂದನ ಮೇಲೆ ಸಿಟ್ಟು
ವರ್ಗಾವಣೆ ಕ್ಯಾನ್ಸಲ್ ಆಯಿತು. ಇದರಿಂದಾಗಿ ಮನೆ ಮಂದಿ ಬಹಳ ಕೋಪ ಮಾಡಿಕೊಂಡಿರುತ್ತಾರೆ. ಇನ್ನು ಈ ವಿಚಾರವನ್ನೇ ಇಲ್ಲಿ ಪ್ರಸ್ತಾಪ ಮಾಡುತ್ತಾ ಇದ್ದಾರೆ. ಇದನ್ನೆಲ್ಲ ಕೇಳಿದ ವಿಕ್ರಾಂತ್ ಜೋರಾಗಿ ಹೇಳುತ್ತಾನೆ ಪ್ಲೀಸ್ ಸ್ವಲ್ಪ ಎಲ್ಲರೂ ನಿಲ್ಲಿಸುತ್ತಿರಾ.. ಎಂದೆಲ್ಲ ಹೇಳಿ ಕೋಪದಿಂದ ಒಂದೆರಡು ಮಾತುಗಳನ್ನು ಆಡಿ ಅಲ್ಲಿಂದ ಊಟ ಮಾಡದೇ ಹೊರಟು ಹೋಗಲು ನೋಡುತ್ತಾನೆ. ಆಗ ಆತನ ತಾಯಿ ಬಂದು ತಿಂಡಿ ತಿಂದು ಹೋಗಲು ಹೇಳುತ್ತಾರೆ.. ಆ ವೇಳೆ ಅಲ್ಲಿಗೆ ಸ್ಪಂದನ ಕಾಲೇಜಿಗೆ ಹೋಗಲು ಹೊರಟು ನಿಂತಿರುತ್ತಾಳೆ

ಸೊಸೆ ಪರ ವಹಿಸಿದ ಅತ್ತೆ
ಆಕೆಯನ್ನು ನೋಡಿದ ವಿಕ್ರಾಂತ್ ತಾಯಿ ತಿಂಡಿ ತಿಂದು ಹೋಗಲು ಹೇಳಿದರು ಬೇಡ ಎನ್ನುತ್ತಾನೆ. ಕೊನೆಗೂ ವಿಕ್ರಾಂತ್ ತಾಯಿ ಹಠ ಹಿಡಿದು ತಿಂಡಿ ತಿನ್ನಿಸಿ ಕರೆದುಕೊಂಡು ಹೋಗುತ್ತಾಳೆ.. ಸುಜಾತ ತನ್ನ ಸೊಸೆಯ ಮೇಲಿನ ಪ್ರೀತಿ ಕಂಡು ಅಲ್ಲಿರುವ ಮನೆ ಮಂದಿಗೆ ಹೊಟ್ಟೆ ಉರಿದು ಹೋಗುತ್ತದೆ. ಅದನ್ನೆಲ್ಲ ಕ್ಯಾರೇ ಮಾಡದೆ ಅವರು ತಮ್ಮ ಪಾಡಿಗೆ ಇರುತ್ತಾರೆ . ಇನ್ನು ವೈಷ್ಣವಿ ಮಾತ್ರ ಆಗಾಗ ಸ್ಪಂದನ ಕಾಲು ಎಳೆಯುತ್ತಾ ಇರುತ್ತಾರೆ. ಮುಂದೇನಾಗುತ್ತದೆ ಕಾದು ನೋಡಬೇಕಿದೆ.