Don't Miss!
- Sports
ಆ ಒಂದು ಸ್ಥಾನಕ್ಕೆ ಮುಂದುವರಿದ ಭಾರೀ ಚರ್ಚೆ: ಮತ್ತೆ ಅಡಕತ್ತರಿಯಲ್ಲಿ ಸಿಲುಕಿಕೊಂಡ ಕನ್ನಡಿಗ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- News
Vande Metro Rail; ಬೆಂಗಳೂರಿಗೆ ಬರಲಿದೆ ದೇಶದ ಮೊದಲ ರೈಲು
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Marali Manasagide Serial: ವೈಷ್ಣವಿ ಮಾತಿಗೆ ವಿಕ್ರಾಂತ್ ಶಾಕ್
ವಿಕ್ರಾಂತ್‌ಗೆ ಜ್ವರ ಬಂದಿರುವ ವಿಚಾರ ಸ್ಪಂದನಾಗೆ ತಿಳಿದಿರುವುದಿಲ್ಲ. ಇನ್ನು ಸ್ಪಂದನ ರೂಮ್ ಬಳಿ ಬಂದಾಗ ವಿಕ್ರಾಂತ್ ಮೊಬೈಲ್‌ಗೆ ಡಾಕ್ಟರ್ ಕರೆ ಮಾಡುತ್ತಾರೆ. ವಿಕ್ರಾಂತ್ ಮೊಬೈಲ್ ರಿಂಗ್ ಆಗುತ್ತಾ ಇರುವುದನ್ನು ಕಂಡ ಸ್ಪಂದನ ಅರೆ ವಿಕ್ರಾಂತ್ ಸರ್ ಮೊಬೈಲ್ ಬಿಟ್ಟು ಹೋಗಿದ್ದಾರ ಎಂದು ಹೇಳಿ ಕರೆ ಸ್ವೀಕರಿಸಿ ಮಾತನಾಡುತ್ತಾಳೆ ..
ಅತ್ತ ಕಡೆಯಿಂದ ಹಲೋ ನಾನು ಡಾಕ್ಟರ್ ಮಾತನಾಡುತ್ತಾ ಇರುವುದು ನೀವು ವಿಕ್ರಾಂತ್ ಮಿಸಸ್ ಮಾತನಾಡುತ್ತಾ ಇರುವುದ, ವಿಕ್ರಾಂತ್ ಅವರಿಗೆ ಜ್ವರ ಬಂದಿತ್ತು ಅಲ್ವಾ ಈಗ ಹೇಗಿದ್ದಾರೆ ಎಂದು ತಿಳಿಯಲು ಕರೆ ಮಾಡಿದೆ. ಏಕೆಂದರೆ ಅವರಿಗೆ ಬಂದಿರುವ ಜ್ವರ ಸಾಮಾನ್ಯ ಅಲ್ಲ ಅದರಿಂದಾಗಿ ಅವರು ಹೇಗಿದ್ದಾರೆ ಎಂದು ತಿಳಿಯಲು ಕರೆ ಮಾಡಿದೆ. ಅವರು ಇಲ್ಲಿ ಟ್ರೀಟ್ ಮೆಂಟ್ ತೆಗೆದುಕೊಂಡ ಬಳಿಕ ನಮಗೆ ಏನು ರಿಪೋರ್ಟ್ ಮಾಡಿಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಸ್ಪಂದನಾಗೆ ಕೊಂಚ ಶಾಕ್ ಆಗುತ್ತದೆ ಅರೆ ವಿಕ್ರಾಂತ್ ಸರ್ ಗೆ ಜ್ವರನ, ಎನು ಹೇಳಲಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಕರೆ ಕಟ್ ಆದ ಬಳಿಕ ವಿಕ್ರಾಂತ್ ಹೊರಗಿನಿಂದ ಬರುತ್ತಾನೆ.
ವಿಕ್ರಾಂತನನ್ನು ಸ್ಪಂದನ ಹಿಡಿದುಕೊಳ್ಳುತ್ತಾಳೆ. ಯಾಕೆ ವಿಕ್ರಾಂತ್ ಸರ್ ನಿಮಗೆ ಏನಾಗಿದೆ ಜ್ವರ ಬರುವ ಹಾಗೆ ಕಾಣುತ್ತಿದೆ, ಡಾಕ್ಟರ್ ಅನ್ನು ಮೀಟ್ ಆಗಿದ್ದೀರ ಅದನ್ನು ಹೇಳಿಲ್ಲ, ಜ್ವರ ಬಂದಿದ್ದು ನನಗೆ ಹೇಳಿಲ್ಲ, ಯಾಕೆ ಸರ್ ಹೀಗೆ ಮಾಡುತ್ತಾ ಇದ್ದೀರಿ, ಎಂದಾಗ ಕೋಪಿಸಿಕೊಂಡ ವಿಕ್ರಾಂತ್ ನನ್ನನ್ನು ಪ್ರಶ್ನೆ ಮಾಡುವ ಅಧಿಕಾರ ನಾನು ಯಾರಿಗೂ ಕೊಟ್ಟಿಲ್ಲ ಕೊಡೋದು ಇಲ್ಲ ಎನ್ನುತ್ತಾನೆ.

ವಿಕ್ರಾಂತ್ ನನ್ನು ಪ್ರಶ್ನೆ ಮಾಡಿದ ಸ್ಪಂದನ
ಯಾಕೆ ಇಲ್ಲ, ನನಗೆ ಎಲ್ಲಾ ಅಧಿಕಾರ ಇದೆ. ಯಾಕೆ ಎಂದರೆ ನಾನು ನಿಮ್ಮ ಹೆಂಡತಿ. ನಿಮಗೆ ನಾನು ಹೇಗೆ ಜವಾಬ್ದಾರಯೋ ಹಾಗೆ ನನಗೂ ನೀವು ಜವಾಬ್ದಾರಿ ಎಂದು ಹೇಳುತ್ತ ಇರುತ್ತಾಳೆ. ಇದನ್ನು ಕೇಳಿದ ವಿಕ್ರಾಂತ್ ಏನು ಹೆಂಡತಿ... ನೀನು ನನ್ನ ಮೇಲೆ ಹಕ್ಕು ಚಲಾಯಿಸಲು ಬರಬೇಡ. ಎಂದಾಗ ಸ್ಪಂದನ ಮಾತ್ರ ಸುಮ್ಮನೆ ಆಯ್ತು ಬಿಡಿ ನಿಮ್ಮ ಆರೋಗ್ಯ ನೋಡಿಕೊಳ್ಳಿ, ಸರಿ ನೀವು ಮೆಡಿಸಿನ್ ತೆಗೆದುಕೊಂಡು ಇದ್ದೀರಾ ಎನ್ನುತ್ತಾಳೆ.

ಹೆಂಡತಿ ಬಳಿ ಕೋಪದಿಂದ ನಡೆದುಕೊಂಡ ವಿಕ್ರಾಂತ್
ಹೆಂಡತಿ ಸಲಹೆಗೆ ಪ್ರತಿಕ್ರಿಯಿಸುವ ವಿಕ್ರಾಂತ್ ಅದನ್ನೆಲ್ಲ ನಿನ್ನ ಜೊತೆ ಹೇಳುವ ಅವಶ್ಯಕತೆ ಇಲ್ಲ, ನಾನು ರೆಸ್ಟ್ ಮಾಡಬೇಕು, ನನಗೆ ನಿದ್ದೆ ಬರುತ್ತಿದೆ.ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ನನ್ನ ತಲೆ ತಿನ್ನಬೇಡ ಎಂದು ಹೇಳುತ್ತಾನೆ.ಇದನ್ನೆಲ್ಲ ಕೇಳಿದ ಸ್ಪಂದನ ನಿಮಗೆ ಏನಾದರೂ ತಲೆ ಕೆಟ್ಟಿದೆಯ ನಿಮಗೆ ಜ್ವರ ಬಂದಿದೆ ನಾನು ನಿಮ್ಮನ್ನು ನೋಡಿಕೊಳ್ಳೋಣ ಎಂದು ಹೇಳುತ್ತ ಇದ್ದೇನೆ, ನನ್ನ ಒಂಟಿಯಾಗಿ ಇರಲು ಬಿಡು ಎಂದು ಹೇಳುತ್ತ ಇದ್ದೀರಿ ಅಲ್ವಾ. ನಾನು ನಿಮ್ಮನ್ನ ಒಂಟಿಯಾಗಿ ಬಿಡಲ್ಲ ನೀವು ಹುಷಾರಾಗುವವರೆಗೂ ನಾನು ನಿಮ್ಮ ಜೊತೆ ಇಲ್ಲಿಯೇ ಇರುತ್ತೇನೆ.ಎನ್ನುತ್ತಾಳೆ

ಸ್ಪಂದನ ಹಠಕ್ಕೆ ಮಣಿದ ವಿಕ್ರಾಂತ್
ಆದರೆ ವಿಕ್ರಾಂತ್ ಮಾತ್ರ ಒಂದೇ ಹಠ. ನನಗೆ ಯಾರ ಹಂಗೂ ಬೇಡ ಕರುಣೆ ಕೂಡ ಬೇಡ ಎಂದಾಗ ಸ್ಪಂದನ ಕರುಣೆಯಿಂದ ಮಾಡಿದ್ದು ಎಂದು ಅನ್ನಿಸುತ್ತಾ ಇದೆಯಾ ನಿಮಗೆ ಎಂದೆಲ್ಲ ಹೇಳಿ ವಿಕ್ರಾಂತ್ ಕೈಯನ್ನೆ ಕಟ್ಟಿ ಹಾಕಿ ಬಳಿಕ ಟಾಬ್ಲೆಟ್ ಕೊಡುತ್ತಾಳೆ. ಬಳಿಕ ವಿಕ್ರಾಂತ್ ಕೈ ಬಿಚ್ಚಿ ಮಲಗಲು ಹೇಳುತ್ತಾಳೆ.

ವೈಷ್ಣವಿ ಜೊತೆ ಇದ್ದ ವಿಕ್ರಾಂತ್
ಜ್ವರ ವಾಸಿ ಆಗುವವರೆಗೂ ಸ್ಪಂದನ ವಿಕ್ರಾಂತ್ ಜೊತೆಗೆ ಇರುತ್ತಾಳೆ. ಇನ್ನು ವಿಕ್ರಾಂತ್ ನನ್ನು ಹೋಟೆಲ್ ಗೆ ಕರೆಸಿಕೊಂಡ ವೈಷ್ಣವಿ ವಿಕ್ರಾಂತ್ ದಯಮಾಡಿ ನಿನ್ನ ಮರೆಯಲು ಸಾಧ್ಯ ಇಲ್ಲ. ಐ ಲವ್ ಯು ಸೋ ಮಚ್ ವಿಕ್ಕಿ.. ದಯಮಾಡಿ ನಾನು ನೀನು ಜೊತೆ ಇರೋಣ. ಜೊತೆಗೆ ಜೀವನ ಮಾಡೋಣ .. ನಾವಿಬ್ಬರೂ ಜೊತೆಯಾಗಿ ಬದುಕೋಣ ಎಂದು ವಿಕ್ರಾಂತ್ ಕೈ ಹಿಡಿದು ಅಳುತ್ತಾ ಇರುತ್ತಾಳೆ ಈ ವೇಳೆ ಅಲ್ಲಿಗೆ ಬಂದ ಸ್ಪಂದನಗೆ ವೈಷ್ಣವಿ ಮಾತು ಕೇಳಿಸುತ್ತದೆ.. ಆಕೆ ಸ್ತಬ್ದಳಗುತ್ತಾರೆ ಇದನ್ನು ನೋಡಿದ ವಿಕ್ರಾಂತ್ ಶಾಕ್ ಆಗುತ್ತಾನೆ... ಸ್ಪಂದನಗೆ ಇದೀಗ ಎಲ್ಲಾ ತಿಳಿಯುತ್ತದೆ. ಯಾಕಾಗಿ ವೈಷ್ಣವಿ ಈ ರೀತಿ ಮಾಡುತ್ತಾ ಒದ್ದಾಳೋಮ ಇದರಿಂದ ಅವಳಿಗೆ ಎನು ಉಪಯೋಗ ಎಂಬುವುದನ್ನು ಯೋಚಿಸುತ್ತ ಇದ್ದಾಳೆ. ಇನ್ನು ಸ್ಪಂದನ ಮುಂದೆ ಎನು ಮಾಡುತ್ತಾಳೆ ಎಂಬುವುದನ್ನು ಕಾದು ನೋಡಬೇಕಿದೆ.