Don't Miss!
- Lifestyle
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಹೆಣ್ಣು ಮಕ್ಕಳ ಒಳಿತಿಗಾಗಿ ಇರುವ ಸರ್ಕಾರಿ ಯೋಜನೆಗಳಿವು
- Sports
IND vs NZ 3rd ODI: ಸೆಹ್ವಾಗ್-ಗಂಭೀರ್ ಜೋಡಿಯ 14 ವರ್ಷಗಳ ದಾಖಲೆ ಮುರಿದ ರೋಹಿತ್- ಗಿಲ್ ಜೋಡಿ
- Technology
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- News
Namma Clinic: ಗಣರಾಜ್ಯೋತ್ಸವದ ವೇಳೆಗೆ ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್ಗಳು ಆರಂಭ ಎಂಬ ಸಚಿವರ ಮಾತು ನಿಜವಾಯಿತೇ?
- Automobiles
ವಿಚಿತ್ರ ಆಫರ್ ಘೋಷಿಸಿದ ಫೋರ್ಡ್: ಈ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ 2 ಲಕ್ಷ ರೂ. ನಗದು
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Marali Manasagide: ವಿಕ್ರಾಂತ್ ಕಣ್ಣು ತಪ್ಪಿಸಿ ಪರೀಕ್ಷೆಗೆ ಹೋಗುತ್ತಾಳಾ ಸ್ಪಂದನ?
ಶಮಂತ್ ಜೊತೆ ಎಂದಿಗೂ ಜೀವನ ಹಂಚಿಕೊಳ್ಳಲು ಸಾಧ್ಯ ಇಲ್ಲ ಎಂದು ವೈಷ್ಣವಿ ಮನದಲ್ಲಿ ಬಹಳ ಬೇಸರ ಪಟ್ಟುಕೊಳ್ಳುತ್ತಾಳೆ. ವಿಕ್ರಾಂತ್ ಮನದ ಅರಸಿ ಆಗಿದ್ದ ವೈಷ್ಣವಿ ಮದುವೆ ಆದ ಬಳಿಕ ತನ್ನ ಗಂಡ ಶಮಂತ್ ಮೇಲೂ ಪ್ರೀತಿ ಚಿಗುರಿರುತ್ತದೆ ಆದರೆ ಶಮಂತ್ ಇದನ್ನು ನಿರಾಕರಣೆ ಮಾಡುತ್ತಾನೆ. ಇದನ್ನು ನೋಡಿದ ವೈಷ್ಣವಿಗೆ ಬಹಳ ಬೇಸರ ಆಗುತ್ತದೆ ಏನು ಮಾಡುವುದು ಎಂದು ತಿಳಿಯದೇ ಜೋರಾಗಿ ಅಳುತ್ತಾಳೆ. ಇನ್ಯಾರಿಗಾಗಿ ನಾನು ಬದುಕಲಿ, ನೀವೇ ನನ್ನ ಬೇಡ ಎಂದು ದೂರ ತಳ್ಳುತ್ತಾ ಇದ್ದೀರಾ ಎಂದು ಬೇಸರ ವ್ಯಕ್ತಪಡಿಸುತ್ತಾಳೆ.
ಕಣ್ಣೀರು ಕೂಡ ಸುರಿಸುತ್ತಾ ಇರುತ್ತಾಳೆ. ಕೊನೆಗೆ ನೀವೇ ಈ ರೀತಿ ಮಾಡಿದರೆ ನನಗೆ ತಾಳಿ ಯಾಕೆ ಬೇಕು ಎಂದು ಹೇಳುತ್ತಾಳೆ. ಆ ವೇಳೆ ಶಮಂತ್ ನೀನು ವಿಕ್ರಾಂತ್ ಅನ್ನು ಪ್ರೀತಿ ಮಾಡುತ್ತಾ ಇದ್ದಿದ್ದು ನನ್ನ ಮನದಲಿ ಕುಳಿತು ಬಿಟ್ಟಿದೆ ಆದ ಕಾರಣ ನನಗೆ ನಿನ್ನ ಜೊತೆ ಹೆಚ್ಚು ಬೆರೆಯಲು ಆಗುತ್ತಾ ಇಲ್ಲ ಎಂದು ಬೇಸರ ಹೊರಹಾಕುತ್ತಾನೆ. ಇನ್ನು ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ಇಟ್ಟುಕೊಳ್ಳುತ್ತಾರೆ. ಈ ವೇಳೆ ಮನೆಯವರೆಲ್ಲ ಬಹಳ ಖುಷಿ ಇಂದ ಇರುತ್ತಾರೆ.
ವಿಕ್ರಾಂತ್ ದೊಡ್ಡಮ್ಮ ತನ್ನ ತಂಗಿ ಬಳಿ ಎಲ್ಲಿ ನಿನ್ನ ಸೊಸೆ ಇನ್ನೂ ಕಾಣಿಸುತ್ತ ಇಲ್ಲ ಎಂದು ಕೇಳುತ್ತಾರೆ. ಇದನ್ನು ಕೇಳಿದ ಎಲ್ಲರೂ ಸ್ತಬ್ಧರಾಗುತ್ತಾರೆ. ಇನ್ನು ಪಂಚಮಿ ಸ್ಪಂದನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾಳೆ. ಆದರೆ ಕವನ ಮಾತ್ರ ಪಂಚಮಿಯನ್ನು ಬಿಟ್ಟುಕೊಡಲಿಲ್ಲ. ಈ ವೇಳೆ ಸ್ಪಂದನ ಅವರ ಅತ್ತೆ ಇಬ್ಬರ ಬಾಯಿ ಮುಚ್ಚಿಸುತ್ತಾರೆ. ಸ್ಪಂದನಾಗೆ ಬಹಳ ಓದಲು ಇದೆಯಂತೆ ಅದಕ್ಕೆ ಬರಲಿಲ್ಲ ಎಂದು ಹೇಳಿದಾಗ ವಿಕ್ರಾಂತ್ ದೊಡ್ಡಮ್ಮ ಕೊಂಚ ತಕರಾರು ಎತ್ತಿದ್ದರು.

ಕಿಡಿಕಾರಿದ ಸುಜಾತಾ
ಇಷ್ಟು ದಿನ ಸುಜಾತ ಮಾತ್ರ ಸಪೋರ್ಟ್ ಮಾಡುತ್ತಾ ಇದ್ದಳು.. ಆದರೆ ಈಗ ಅವಳ ಪರ ದೊಡ್ಡಪ್ಪ ಸೇರಿಕೊಂಡು ಬಿಟ್ಟರು ಎಂದು ಜೋರಾಗಿ ಹೇಳುತ್ತಾಳೆ. ಬಳಿಕ ಸ್ಪಂದನ ಬಗ್ಗೆ ಸಿಡುಕಿದ ಸುಜಾತ ಮನೆಯಲ್ಲಿ ಇಲ್ಲದೆ ಇರುವುದು, ಮನೆಯಲ್ಲಿ ಕಾರ್ಯಕ್ರಮ ಇದ್ದರೂ ಅವರು ಬಾರದೆ ಇರುವುದು ಸೊಸೆ ಆದವರ ಲಕ್ಷಣನ, ನಿನಗೆ ಯಾಕೆ ಅರ್ಥ ಆಗುತ್ತಾ ಇಲ್ಲ ಎಂದು ಜೋರಾಗಿ ಕೇಳುತ್ತಾಳೆ. ಈ ವೇಳೆ ಉಮಾ ಕೂಡ ಒಂದೆರಡು ಕೊಂಕು ಮಾತುಗಳನ್ನು ಹೇಳುತ್ತಾರೆ.

ಸ್ಪಂದನ ಬಗ್ಗೆ ಕೊಂಕು ಮಾತು ಆಡಿದ ಉಮಾ
ಬೆಳಗ್ಗೆಯಿಂದ ನಾನು ಕೆಲಸ ಮಾಡುತ್ತಾ ಇದ್ದೇನೆ ಇದೆಲ್ಲ ನಿಮಗೆ ಗೊತ್ತೇ ಆಗುತ್ತಾ ಇಲ್ಲವಲ್ಲ, ಸ್ಪಂದನ ಮಾಡುವ ಎಲ್ಲಾ ಕೆಲಸ ನಾನೇ ಮಾಡಿದ್ದೇನೆ ಎಂದು ಉಮಾ ಹೇಳಿದಾಗ ಸುಜಾತ ನಿನ್ನ ಸೊಸೆ ಇವತ್ತು ಕಾಲೇಜಿಗೆ ಹೋಗುತ್ತಾಳಾ ಎಂದು ಕೇಳುತ್ತಾಳೆ ಇದನ್ನು ಕೇಳಿದ ಸುಜಾತಾ ಸುಮ್ಮನೆ ಆಗುತ್ತಾಳೆ. ಸ್ಪಂದನಗೆ ಕೆಲಸ ಮಾಡಲು ಮೈಗಳ್ಳತನ ಅದಕ್ಕೆ ಓದಿನ ನೆಪ ಹೇಳಿ ರೂಮ್ ನಲ್ಲಿ ಇದ್ದಾಳೆ ಎಂದು ಹೇಳುತ್ತಾಳೆ. ಈ ವೇಳೆ ಸ್ಪಂದಾನಳನ್ನು ರೂಮ್‌ನಿಂದ ಹೊರಗೆ ಕರೆದುಕೊಂಡು ಬರಲು ಕವನಾಗೆ ಹೇಳುತ್ತಾರೆ. ಈ ವೇಳೆ ವಿಕ್ರಾಂತ್ ಬರುತ್ತಾನೆ.

ವಿಕ್ರಾಂತ್ ಮಾತಿಗೆ ಶಾಕ್ ಆದ ಮನೆಮಂದಿ
ವಿಕ್ರಾಂತ್ ಏನು ನಡೆಯುತ್ತಿದೆ ಸ್ಪಂದನ ಬಗ್ಗೆ ಮಾತನಾಡಿದ ಹಾಗೆ ಇತ್ತು ಎಂದು ವಿಚಾರಿಸಿದಾಗ ಸುಜಾತ ಕೂಡ ಮಗನ ಬಳಿ ಕಂಪ್ಲೇಂಟ್ ಮಾಡುತ್ತಾಳೆ. ಇದನ್ನು ಕೇಳಿದ ವಿಕ್ರಾಂತ್ ಅವರು ಹೇಳಿದ್ದು ಸರಿಯಾಗಿ ಇದೆ, ಕಾಲೇಜ್ ಇದೆ ಎಂದು ಮನೆಯಲ್ಲಿ ಏನಾದರು ಕಾರ್ಯಕ್ರಮ ಇರಬೇಕಾದರೆ ಹೋಗುವುದು ಸರಿಯ ಎಂದೆಲ್ಲ ಹೇಳುತ್ತಾನೆ. ಬಳಿಕ ಸ್ಪಂದನ ಇವತ್ತು ಎಲ್ಲಿಗೂ ಹೋಗಲ್ಲ ಯಾಕೆ ಎಂದರೆ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿ ಸುಜಾತಾಗೆ ಹಾಗೂ ಮನೆಯವರಿಗೆ ಶಾಕ್ ಆಗುತ್ತದೆ. ಇನ್ನು ರೂಮ್‌ನಲ್ಲಿ ಇರುವ ಸ್ಪಂದನ ನನ್ನ ರೂಮ್ ನಲ್ಲಿ ಕೂಡಿ ಹಾಕಿ ತಪ್ಪು ಮಾಡಿದಿರಿ, ನಿಮಗೆ ನನ್ನ ಮೇಲೆ ಕೋಪ ಇತ್ತು ಅದಕ್ಕೆ ಈ ರೀತಿ ಮಾಡಿದಿರಿ ಆದರೆ ಇದು ಸರಿಯಲ್ಲ ಎಂದು ಹೇಳುತ್ತ ಇರುತ್ತಾಳೆ.