ಮರಳಿ ಮನಸಾಗಿದೆ: ಗಂಡನ ಮೇಲೆ ಮುನಿಸಿಕೊಂಡ ಸ್ಪಂದನಾ
'ಮರಳಿ ಮನಸಾಗಿದೆ' ಧಾರವಾಹಿ ನೋಡುಗರಿಗೆ ಮುದ ನೀಡುತ್ತಿದೆ. ಸ್ಪಂದನಾಗೆ ಮೊದಲಿನಿಂದಲೂ ಚಂದ್ರ ಲೇಖ ವಾರ್ನಿಂಗ್ ಮೇಲೆ ವಾರ್ನಿಂಗ್ ಮಾಡುತ್ತಾ ಬಂದಿದ್ದಾಳೆ. ತನ್ನ ಸೊಸೆ ಬಗ್ಗೆ ಮಾತನಾಡಿದ ಸ್ಪಂದನಾಗೆ ಕಠಿಣ ಮಾತುಗಳನ್ನು ಆಡುತ್ತಿದ್ದಾರೆ. ಸ್ಪಂದನಾಳದ್ದು ನೇರ ನುಡಿ ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತಾಳೆ. ಮದುವೆಗೂ ಮುಂಚೆ ವೈಷ್ಣವಿ ಹಾಗೂ ವಿಕ್ರಾಂತ್ ಮಧ್ಯೆ ಪ್ರೀತಿ ಇತ್ತು ಎಂಬುದು ಸ್ಪಂದನಾಗೆ ತಿಳಿದು ಹೋಗಿದೆ. ಇದನ್ನು ಮನೆಯವರ ಮುಂದೆ ಹೇಳಲು ಹೊರಟರೆ ಇದನ್ನು ಚಂದ್ರಲೇಖ ಹೇಳಲು ಬಿಡದೆ ತಡೆಯುತ್ತಿದ್ದಾಳೆ.
ವೈಷ್ಣವಿ ಕೂಡ ಸ್ಪಂದನ ವಿರುದ್ದ ಮಾತನಾಡುತ್ತಾಳೆ. ''ನೋಡು ಸ್ಪಂದನ ನಿನಗೆ ನನ್ನ ಕಂಡರೆ ಆಗಲ್ಲ ಎನ್ನುವುದು ಇಡೀ ಮನೆಯವರಿಗೆ ತಿಳಿದಿದೆ. ನೀನು ನನ್ನ ಬಗ್ಗೆ ಏನೇ ಹೇಳಿದರು ಅದನ್ನು ನಂಬಲು ಇಲ್ಲಿ ಯಾರು ರೆಡಿ ಇಲ್ಲ. ಇಷ್ಟೆಲ್ಲ ನಾಟಕ ಮಾಡುತ್ತಿದ್ದೀಯ ಇದರಿಂದ ನಿಮಗೆ ಎನು ಲಾಭ'' ಎಂದು ಕೊಂಕು ಮಾತುಗಳನ್ನು ಹೇಳುತ್ತಾಳೆ. ಆ ವೇಳೆ ಸ್ಪಂದನ ಪಾಪ ವೈಶೂ ಅಕ್ಕ ನಾನು ನಿಮಗೆ ಹೆಲ್ಪ್ ಮಾಡುತ್ತಿರುವುದು ನಿಮಗೂ ಗೊತ್ತಾಗುತ್ತಿಲ್ಲ ಎಂದೆಲ್ಲ ಕೊಂಕಿನಿಂದ ಹೇಳುತ್ತಾಳೆ.
ಇದರಿಂದ ಕೊಂಚ ಶಾಕ್ ಆದ ವೈಷ್ಣವಿ, ಸ್ಪಂದನಾ ಮುಖ ನೋಡುತ್ತಾಳೆ. ಬಳಿಕ ವಿಕ್ರಾಂತ್ ಕೂಡ ಬಹಳ ಕೋಪ ಮಾಡಿಕೊಳ್ಳುತ್ತಾನೆ. ಬಳಿಕ ಸ್ಪಂದನಾ ತಾನು ಮನೆ ಬಿಟ್ಟು ಹೋಗುವುದಾಗಿ ಹೇಳುತ್ತಾಳೆ. ನಾನು ಮನೆ ಬಿಟ್ಟು ಹೋದರೆ ನಿಮ್ಮ ಮಧ್ಯೆ ಇರುವ ಗೋಡೆ ಹೋದ ಹಾಗೆ, ಆಮೇಲೆ ನೀವು ಅಂದುಕೊಂಡಿರುವುದನ್ನು ಸುಲಭವಾಗಿ ಸಾಧಿಸಿಕೊಳ್ಳಬಹುದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೈಷ್ಣವಿಗೆ ಕೊಂಚ ಭಯ ಆಗುತ್ತದೆ. ತಾನು ಮುಚ್ಚಿಟ್ಟಿರುವ ಸತ್ಯ ಇಲ್ಲಿ ಬಯಲಾಗುತ್ತ ಎನ್ನುವ ಆತಂಕದಲ್ಲಿ ಇದ್ದಾಳೆ ವೈಷ್ಣವಿ.

ಸ್ಪಂದನಾ ಮನೆಬಿಟ್ಟು ಹೋಗದಂತೆ ತಡೆಯುಟ್ಟಿರುವ ಅತ್ತೆ
ಆ ವೇಳೆ ವಿಕ್ರಾಂತ್ ತಾಯಿ, 'ಸ್ಪಂದನಾ ನೀನು ನಿಜವಾಗಿಯೂ ಮನೆ ಬಿಟ್ಟು ಹೋಗುತ್ತಿಯಾ ಎಂದು ಆತಂಕದಿಂದ ಕೇಳುತ್ತಾಳೆ ಆ ವೇಳೆ ಮನೆಯಲ್ಲಿ ಇರುವವರೆಲ್ಲ ಹೇಳುತ್ತಾರೆ ಈಕೆ ಬಂದಾಗಿನಿಂದ ಇವತ್ತು ಹೋಗುತ್ತೇನೆ ನಾಳೆ ಹೋಗುತ್ತೇನೆ ಎಂದು ಹೇಳುತ್ತಾ ಬಂದಿದ್ದಾಳೆ ಸುಮ್ಮನಿರು ಆಕೆ ಎಲ್ಲಿಗೂ ಹೋಗಲ್ಲ ಎಂದು ಹೇಳುತ್ತಾರೆ. ಆಗ ಚಂದ್ರಲೇಖಾ ಹೇಳುತ್ತಾರೆ ಈಕೆಗೆ ಎಲ್ಲರ ಬಳಿ ಜಗಳ ಮಾಡಿ ಮನೆ ನೆಮ್ಮದಿಯನ್ನು ಹಾಳು ಮಾಡಲು ಕಾಯುತ್ತಾ ಇರುತ್ತಾರೆ ಎಂದು ಕೋಪದಿಂದ ಹೇಳುತ್ತಾರೆ.

ಸ್ಪಂದನ ಮಾತಿಗೆ ಕೋಪಗೊಂಡ ಚಂದ್ರಲೇಖ
ಆಗ ಸ್ಪಂದನ ಕೋಪದಿಂದ, ''ಈ ಮನೆಯಲ್ಲಿ ಇರಲು ನನಗೆ ಆಸೆ ಇಲ್ಲ ಬಿಡಿ'' ಎಂದಾಗ ಎಲ್ಲರಿಗೂ ಶಾಕ್ ಆಗುತ್ತದೆ. ಆಗ ಚಂದ್ರ ಲೇಖ ಸ್ಪಂದನಾಳನ್ನು ಅಣಕವಾಡುತ್ತಾಳೆ. ಈ ಬಾರಿ ಈಕೆ ಹೋದರೆ ವಿಕ್ರಾಂತ್ ಮಾತ್ರ ಈಕೆಯನ್ನು ಕರೆತರಲು ಹೋಗಲ್ಲ ಎಂದು ಹೇಳುತ್ತಾಳೆ. ಈಕೆಯಿಂದ ಅದೆಷ್ಟು ಅವಮಾನಗಳನ್ನು ಸಹಿಸಿಕೊಂಡು ಇದ್ದೇನೆ. ಎಂದು ಹೇಳುತ್ತಾರೆ. ಆ ವೇಳೆ ಸ್ಪಂದನಾ ಅತ್ತೆ ಸ್ಪಂದನಾ ಬಳಿ ಮನವಿ ಮಾಡುತ್ತಾಳೆ. ಸ್ಪಂದನಾ ನಾನು ಎಷ್ಟು ಬಾರಿ ಹೇಳಿದ್ದೇನೆ. ಮನೆ ಬಿಟ್ಟು ಹೋಗುವ ಮಾತು ಆಡಬೇಡ ಎಂದು, ನೀನು ಮತ್ತು ವಿಕ್ರಾಂತ್ ಗಂಡ ಹೆಂಡತಿ ನೀವಿಬ್ಬರೂ ಕೂಡಿ ಬಾಳಬೇಕು ಈ ರೀತಿ ಜಗಳ ಮಾಡಿಕೊಂಡು ನಿಮ್ಮ ಮಧ್ಯೆ ಬಿರುಕು ಆಗೋದು ಬೇಡ. ನೀವಿಬ್ಬರೂ ಚೆನ್ನಾಗಿ ಇರಿ ಎನ್ನುವುದು ನನ್ನ ಆಸೆ'' ಆಂದಾಗ ಸ್ಪಂದನ ಅದಕ್ಕೆ ಒಪ್ಪಲೇ ಇಲ್ಲ. ''ಇಲ್ಯಾರು ನನ್ನ ಒಳಿತು ಬಯಸುವವರು ಇಲ್ಲ. ನನ್ನ ಕೆಡುಕು ಬಯಸುವವರು ಮಾತ್ರ ಇಲ್ಲಿ ಇರುವುದು'' ಎಂದು ಖಡಕ್ ಆಗಿ ಹೇಳುತ್ತಾಳೆ.

ಮಗನ ಜೀವನ ಹಾಳಾಗುತ್ತದೆಂಬ ಆತಂಕದಲ್ಲಿ ವಿಕ್ರಾಂತ್ ತಾಯಿ
ವಿಕ್ರಾಂತ್ ತಾಯಿಗೆ ತನ್ನ ಸೊಸೆ ಮನೆ ಬಿಟ್ಟು ಹೋದರೆ ಅಲ್ಲೋಲ ಕಲ್ಲೋಲ ಆಗುತ್ತದೆ. ತನ್ನ ಮಗನ ಜೀವನ ಹಾಳಾಗಿ ಹೋಗುತ್ತದೆ ಎಂಬುವುದು ಎಲ್ಲಾ ತಲೆಗೆ ಹಾಕಿ ತಲೆಕೆಡಿಸಿಕೊಳ್ಳುತ್ತಾರೆ. ಆದರೆ ವಿಕ್ರಾಂತ್ ಮಾತ್ರ ತನ್ನ ಮನೆಯಲ್ಲಿ ಆಗುತ್ತಿರುವ ಜಗಳಗಳನ್ನು ನೋಡಿ ತಲೆಕೆಡಿಸಿಕೊಂಡಿದ್ದಾರೆ. ಇದಕ್ಕೆ ಯಾವಾಗ ಮುಕ್ತಿ ಎಂದು ತಲೆ ಬಿಸಿ ಮಾಡಿಕೊಳ್ಳುತ್ತಾ ಇರುತ್ತಾನೆ. ಸ್ಪಂದನಾ ಅತ್ತೆಯ ಬಳಿ ಹೇಳುತ್ತಾಳೆ. ಅತ್ತೆ ನೀವು ಕೆಳುತ್ತಿದ್ದಿರಿ ನಿನಗೂ ವೈಷ್ಣವಿಗೆ ಯಾಕೆ ಜಗಳ ಆಗುತ್ತಿದೆ ಎಂದೆಲ್ಲ. ಆದರೆ ವೈಷ್ಣವಿ ಮಾತ್ರ ಇದಕ್ಕೆ ಉತ್ತರ ಕೊಡುತ್ತಾ ಇರಲಿಲ್ಲ. ಆದರೆ ಇದೀಗ ನಾನು ಸತ್ಯ ಹೇಳುತ್ತಿದ್ದೇನೆ ಎಂದು ಹೇಳಿದಾಗ ವಿಕ್ರಾಂತ್ ಗೆ ಎನು ಮಾಡಬೇಕು ತಿಳಿಯುವುದಿಲ್ಲ.

ತಾರಕಕ್ಕೆ ಏರಿದ ವಿಕ್ರಾಂತ್ ಸ್ಪಂದನ ಜಗಳ
ವಿಕ್ರಾಂತ್ ಹಾಗೂ ವೈಷ್ಣವಿ ಈ ಸತ್ಯವನ್ನು ಒಪ್ಪಿಕೊಂಡರೆ ನನ್ನ ನೋಡಿ ಜಗಳ ಮಾಡುವುದು ಇರುವುದೇ ಇಲ್ಲ ಎಂದು ಸ್ಪಂದನಾ ಹೇಳುತ್ತಾಳೆ. ಸ್ಪಂದನಾ ಮಾತಿಗೆ ಮನೆಯ ಹಿರಿ ಅತ್ತೆ ಕೋಪಗೊಳ್ಳುತ್ತಾರೆ. ಚಂದ್ರ ಲೇಖ ತನ್ನ ಸೊಸೆ ಪರ ಬ್ಯಾಟಿಂಗ್ ಬೀಸುತ್ತಾರೆ. ನನ್ನ ಸೊಸೆ ಇಂದಲ್ಲ ನಾಳೆ ತನ್ನ ಗಂಡ ಬಂದೆ ಬರುತ್ತಾರೆ ಎಂದು ನೋವಿನಿಂದ ಕಾಯುತ್ತಿದ್ದಾಳೆ ಅಂತವಳ ಮೇಲೆ ಇಂಥ ಹಣೆ ಪಟ್ಟಿ ಕಟ್ಟಿರುವುದು ಸರಿಯಲ್ಲ ಎಂದು ಹೇಳುತ್ತಾರೆ. ಈ ವೇಳೆ ಸಾಹಿತ್ಯ ಹೆಸರು ಕೂಡ ಬರುತ್ತದೆ. ಸಾಹಿತ್ಯನಿಗೆ ವೈಷ್ಣವಿ ಏನು ಎಂಬುವುದು ತಿಳಿದಿದೆ ಎಂದರೆ ವೈಷ್ಣವಿ ಬುದ್ಧಿ ಈ ಮನೆಯವರಿಗೆ ತಿಳಿಯದೇ ಏನಿಲ್ಲ ಎಂದು ಹೇಳುತ್ತಾಳೆ ಸ್ಪಂದನ. ಬಳಿಕ ವಿಕ್ರಾಂತ್ ಬಳಿಯೂ ಹೇಳುತ್ತಾಳೆ ಸತ್ಯ ಒಪ್ಪಿಕೊಳ್ಳಲು ನಿಮಗೂ ಧೈರ್ಯ ಇಲ್ಲ ಎಂಬುವುದು ಸ್ಪಷ್ಟವಾಗಿ ಅರ್ಥ ಆಯಿತು ಎಂದು ಹೇಳುತ್ತಾಳೆ. ಇನ್ನು ಸ್ಪಂದನ ಮಾತ್ರ ತನ್ನ ನೇರ ನುಡಿಯಿಂದ ಗಂಡನನ್ನು ಒಲಿಸಿಕೊಳ್ಳುವ ಭರದಲ್ಲಿ ಗಂಡನನ್ನು ಕಳೆದುಕೊಳ್ಳುವ ಲಕ್ಷಣ ಎದ್ದು ಕಾಣುತ್ತಿದೆ.


Click it and Unblock the Notifications











