Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಮಂತ್ ಕಂಡು ವೈಷ್ಣವಿಗೆ ಶಾಕ್, ಮುಂದೇನು ಮಾಡುತ್ತಾಳೆ ವೈಷ್ಣವಿ?
ವಿಕ್ರಾಂತ್ ಹಾಗೂ ಸ್ಪಂದನಾ ಮೇಲೆ ರೌಡಿಗಳಿಂದ ಅಟ್ಯಾಕ್ ಆಗುತ್ತದೆ. ಸ್ಪಂದನಾ ಹೇಗೊ ತಪ್ಪಿಸಿಕೊಂಡು ಓಡುತ್ತಿರುವುದನ್ನು ನೋಡಿದ ಒಬ್ಬಾತ ಹೇಳುತ್ತಾನೆ ಹೇ ಬನ್ರೊ ಅವರು ಅಲ್ಲಿ ಹೋಗ್ತಾ ಇದ್ದಾರೆ ಎಂದು ಹೇಳಿ ಸ್ಪಂದನಾಳನ್ನು ಓಡಿಸಿಕೊಂಡು ಹೋಗುತ್ತಾರೆ. ಈ ವೇಳೆ ಶಮಂತ್ ಅಲ್ಲಿಗೆ ಬರುತ್ತಾನೆ. ವೈಷ್ಣವಿ ಗಂಡ ಶಮಂತ್ ಈತನೇ ಎಂಬ ವಿಚಾರ ಸ್ಪಂದನಾಗೆ ಗೊತ್ತಿರುವುದಿಲ್ಲ.
ಇನ್ನೂ ಸ್ಪಂದನಾ ಅವರೆಲ್ಲರ ಬಳಿ ಬೇಡಿಕೊಳ್ಳುತ್ತಾಳೆ. ನನ್ನನ್ನು ಬಿಟ್ಟು ಬಿಡಿ ನನ್ನ ಗಂಡ ವಿಕ್ರಾಂತ್ ನಾಯಕ್ ಎಂದು ಹೇಳಿದರು ಶಮಂತ್ ಮಾತ್ರ ಅದನ್ನು ಕೇಳಿಸಿಕೊಳ್ಳದೆ ಹೇ ಆಕೆಯನ್ನು ಎಳೆದುಕೊಂಡು ಹೋಗಿ ಎಂದು ಹೇಳುತ್ತಾಳೆ. ಇನ್ನು ವಿಕ್ರಾಂತ್ ಹೆಂಡತಿ ಎಂದು ತಿಳಿದ ಶಮಂತ್ ಸ್ಪಂದನಾಳನ್ನು ಆಕೆಯ ಊರಿಗೆ ಬಿಡುವ ಸಲುವಾಗಿ ಸ್ಪಂದನಾಳನ್ನು ಕರೆದುಕೊಂಡು ಬರುತ್ತಾನೆ. ಪೊಲೀಸ್ ಹೆಂಡತಿ ಎಂದು ಬಿಟ್ಟು ಕಳುಹಿಸುತ್ತಾ ಇದ್ದೇವೆ ನಿಮ್ಮ ಊರಿಗೆ ನೀವು ಸೇರಿಕೊಳ್ಳಿ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸ್ಪಂದನಾ ಮಾತ್ರ ನಾನು ಪೊಲೀಸ್ ಹೆಂಡತಿ ಎಂದು ಬಿಟ್ಟು ಕಳುಹಿಸುತ್ತಾ ಇದ್ದೀರಾ ಎಲ್ಲಾದರೂ ಕಾಮನ್ ಮ್ಯನ್ ಆಗ್ತಿದ್ದರೆ ಎಂದಾಗ ಸ್ಪಂದನಾ ಬಳಿ ಶಮಂತ್ ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳುತ್ತಾನೆ. ಆದರೆ ಸ್ಪಂದನಾ ಮಾತ್ರ ಆ ವ್ಯಕ್ತಿಯನ್ನು ನೋಡಿ ನೀವು ಶಮಂತ್ ಅಣ್ಣ ಎಂದು ನನಗೆ ಅನ್ನಿಸುತ್ತಿದೆ ಎಂದಾಗ ಅದನ್ನು ಶಮಂತ್ ಮಾತ್ರ ಒಪ್ಪಿಕೊಳ್ಳಲೇ ಇಲ್ಲ.

ಸ್ಪಂದನಾಳನ್ನು ಅರ್ಧ ದಾರಿಯಲ್ಲಿ ಬಿಟ್ಟು ಬಂದ ಶಮಂತ್
ಇನ್ನು ಸ್ಪಂದನಾಳನ್ನು ರೋಡಿನ ಸರ್ಕಲ್ ಬಳಿ ಬಿಟ್ಟು ಅಲ್ಲಿಂದ ತೆರಳುತ್ತಾನೆ ಈ ವಿಚಾರ ವಿಕ್ರಾಂತ್‌ಗೆ ತಿಳಿಸಿ ರೌಡಿಗಳ ಗುಂಪು ಇರುವ ಕಡೆ ಬರುತ್ತಾರೆ. ಇದನ್ನು ನೋಡಿದ ರೌಡಿ ಗುಂಪಿನ ನಾಯಕ ಅವರಿಬ್ಬರನ್ನು ಹೊಡೆದು ಹಾಕಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ವಿಕ್ರಾಂತ್ ಅಲ್ಲಿ ಇರುವವರನ್ನು ಎಲ್ಲರನ್ನೂ ಹೊಡೆದು ಹಾಕುತ್ತಾನೆ. ಬಳಿಕ ಶಮಂತ್ ಬಳಿಗೆ ಬರುತ್ತಾನೆ. ಶಮಂತ್ ನನ್ನು ನೋಡಿದ ವಿಕ್ರಾಂತ್ ಮಾತ್ರ ತನ್ನ ಅಣ್ಣ ನನಗೆ ಸಿಕ್ಕಿಬಿಟ್ಟ ಎಂದು ಬಹಳ ಖುಷಿ ಆಗುತ್ತಾನೆ.

ದೋಸ್ತ್ ಸಿಕ್ಕ ಖುಷಿಯಲ್ಲಿ ವಿಕ್ರಾಂತ್
ಬಳಿಕ ಅಣ್ಣನ ಬಳಿ ಮನೆಗೆ ಹೋಗೋಣ ಎಂದಾಗ ಶಮಂತ್ ಬರುವುದಿಲ್ಲ ಎಂದು ಹೇಳುತ್ತಾನೆ ಅದಕ್ಕೆ ವಿಕ್ರಾಂತ್ ಹೇಳುತ್ತಾನೆ ಸಾಯುವವರೆಗೂ ವೈಷ್ಣವಿ ನಿನ್ನ ದಾರಿ ಕಾಯುತ್ತಾ ಇರಬೇಕಾ ಎಂದಾಗ ಶಮಂತ್ ಗೆ ಮಾತೇ ಬಾರದ ಹಾಗೆ ಆಗುತ್ತದೆ. ಈ ವೇಳೆ ಸ್ಪಂದನಾ ಹಾಗೂ ವಿಕ್ರಾಂತ್ ಹೇಗಾದರೂ ಮಾಡಿ ಶಮಂತ್ ಮನ ಒಲಿಸಿ ಮದುವೆಗೆ ಕರೆದುಕೊಂಡು ಹೋಗುವ ಎಲ್ಲಾ ನಿರ್ಧಾರಗಳನ್ನು ಮಾಡುತ್ತಾರೆ. ಇದನ್ನು ನೋಡಿದ ಸ್ಪಂದನ ಗೆ ಬಹಳ ಖುಷಿ ಆಗುತ್ತದೆ.

ವೈಷ್ಣವಿಗೆ ಗಿಫ್ಟ್ ಕೊಡಲು ಹೊರಟ ಸ್ಪಂದನಾ
ವಿಕ್ರಾಂತ್ ಕೂಡ ತನ್ನ ದೋಸ್ತ್ ಸಿಕ್ಕಿಬಿಟ್ಟನಲ್ಲ ಎಂದು ಖುಷಿಯಲ್ಲಿ ಇರುತ್ತಾನೆ. ಇನ್ನು ಶಮಂತ್ ಅನ್ನುವ ಗಿಫ್ಟ್ ನ್ನೂ ಮನೆಗೆ ತೆಗೆದುಕೊಂಡು ಹೋಗುತ್ತಿರುವುದು ಖುಷಿಯ ವಿಚಾರವೇ ಸರಿ ಇದರಿಂದ ಮನೆಯವರಿಗೆ ಎಲ್ಲರಿಗೂ ಬಹಳ ಖುಷಿ ಆಗುತ್ತದೆ ಎಂದು ಸ್ಪಂದನಾ ಯೋಚನೆ ಮಾಡುತ್ತಾ ಇರುತ್ತಾರೆ. ಇನ್ನು ಮನೆಗೆ ಬಂದ ಸ್ಪಂದನಾ ಹಾಗೂ ವಿಕ್ರಾಂತ್ ಖುಷಿ ಸುದ್ದಿ ಹೇಳಬೇಕು ಎಂದ ಕೂಡಲೇ ವೈಷ್ಣವಿ ಮನೆ ಬಿಟ್ಟು ಹೊರಟು ನಿಂತಿರುತ್ತಾಳೆ.

ಶಾಕ್ ಆದ ವೈಷ್ಣವಿ
ಇದನ್ನು ನೋಡಿದ ಸ್ಪಂದನ ಮಾತ್ರ ವೈಷ್ಣವಿ ಅಕ್ಕ ನಿಮಗೆ ಒಂದು ದೊಡ್ಡ ಗಿಫ್ಟ್ ಇದೆ. ಆ ಗಿಫ್ಟ್ ಏನು ಎಂದು ಕೇಳುತ್ತೀರಾ? ನೀವು ಆ ಗಿಫ್ಟ್ ನೋಡಿದರೆ ಬಹಳ ಖುಷಿ ಪಡುತ್ತಿರಾ ಎಂದಾಗ ವೈಷ್ಣವಿ, ನೀವು ನನ್ನ ಶತ್ರುಗಳು ನನಗಾಗಿ ನೀವು ಏನು ಗಿಫ್ಟ್ ಕೊಡುತ್ತೀರಿ ಎಂದು ವ್ಯಂಗ್ಯವಾಗಿ ಹೇಳುತ್ತಾಳೆ ಇದನ್ನು ನೋಡಿದ ವಿಕ್ರಾಂತ್, ವೈಷ್ಣವಿ ಹಾಗೆ ಯಾಕೆ ಅಂದುಕೊಳ್ಳುತ್ತಿಯಾ ನಮ್ಮನ್ನು ಶತ್ರುಗಳಾಗಿ ಯಾಕೆ ನೋಡುತ್ತಾ ಇದ್ದೀಯಾ ಎಂದಾಗ ವೈಷ್ಣವಿ, ನಾನು ಈ ಮನೆ ಬಿಟ್ಟು ಹೋಗುತ್ತಾ ಇದ್ದೇನೆ. ನಾನು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಇದ್ದೇನೆ ಇಲ್ಲಿಯೇ ಇದ್ದರೆ ನಾನು ಹುಚ್ಚಿ ಆಗುತ್ತೇನೆ ಅಷ್ಟೇ ಎಂದು ಹೇಳುತ್ತಾರೆ. ಇನ್ನು ಆ ಸರ್ಪ್ರೈಸ್ ಏನೆಂದು ತೋರಿಸಲು ವಿಕ್ರಾಂತ್ ವೈಷ್ಣವಿ ತಾಯಿಯನ್ನು ಕರೆದುಕೊಂಡು ಹೋಗುತ್ತಾನೆ. ಬನ್ನಿ ಎಂದು ವೈಷ್ಣವಿ ಕರೆದಾಗ ಶಮಂತ್ ಆಗಮಿಸುತ್ತಾರೆ ಇದನ್ನು ನೋಡಿದ ವೈಷ್ಣವಿ ತಾಯಿ ಬಹಳ ಖುಷಿ ಪಡುತ್ತಾರೆ. ಸತ್ತು ಹೋಗಿದ್ದ ಶಮಂತ್ ಇನ್ನೂ ಬದುಕಿದ್ದಾನೆ ಎಂದು ತಿಳಿದು ಬಹಳ ಖುಷಿ ಪಡುತ್ತಾರೆ .ಆದರೆ ಇದರಿಂದ ವೈಷ್ಣವಿ ಗೆ ಶಾಕ್ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.