ವೈಷ್ಣವಿ ತವರು ಮನೆಯಲ್ಲಿ ಸ್ಪಂದನಾಗೆ ಅವಮಾನ!
'ಮರಳಿ ಮನಸ್ಸಾಗಿದೆ' ಧಾರಾವಾಹಿ ಬಹಳ ಕುತೂಹಲ ಭರಿತವಾಗಿದೆ. ನೋಡುಗರ ಮನಸ್ಸಿಗೆ ಮುದನೀಡುತ್ತಿದೆ. ವೈಷ್ಣವಿಗೆ ವಿಕ್ರಾಂತ್ ಕಂಡರೆ ಪ್ರಾಣ. ಅವರಿಬ್ಬರೂ ಮದುವೆಯಾಗಬೇಕು ಎಂದು ಕನಸು ಕಂಡವರು ಆದರೆ ದಿಢೀರ್ ಆಗಿ ವೈಷ್ಣವಿ ಮದುವೆ ಶಮಂತ್ ಜೊತೆ ನಡೆದು ಹೋಯಿತು. ಇದರಿಂದ ಈಗಲೂ ಕೂಡ ವಿಕ್ರಾಂತ್‌ನನ್ನು ಹೇಗಾದರೂ ಮದುವೆ ಮಾಡಿಕೊಳ್ಳಬೇಕು ಎಂದು ಹೊಂಚು ಹಾಕುತ್ತಿದ್ದಾಳೆ ವೈಷ್ಣವಿ. ಇನ್ನು ವೈಷ್ಣವಿ ಎಷ್ಟೇ ಡ್ರಾಮಾ ಮಾಡಿದರು ಸ್ಪಂದನ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ.
ಮದುವೆಗಿಂತ ಮುಂಚೆ ತನ್ನ ಗಂಡ ವೈಷ್ಣವಿ ಮಧ್ಯೆ ಪ್ರೀತಿ ಇತ್ತು ಎಂಬ ನಿಜ ವಿಚಾರ ಆಕೆಗೆ ಗೊತ್ತಿದೆ. ಆದರೆ ಅದನ್ನು ಆಕೆ ಇನ್ನೂ ಬಹಿರಂಗ ಮಾಡಿಲ್ಲ. ಇನ್ನು ವೈಷ್ಣವಿ ಮನೆಗೆ ಆಗಮಿಸಿದ ಸ್ಪಂದನ ಹಾಗೂ ವಿಕ್ರಾಂತ್, ವೈಷ್ಣವಿ ಯನ್ನು ನೋಡಿ ಖುಷಿ ಪಡುತ್ತಾರೆ. ತಮ್ಮ ಪ್ರೀತಿಯ ಮಗಳನ್ನು ಆದರದಿಂದ ಸ್ವಾಗತ ಮಾಡುತ್ತಾರೆ. ಈ ವೇಳೆ ಶಮಂತ್ ನನ್ನು ನೆನೆದು ವೈಷ್ಣವಿ ತಂದೆ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಅವರನ್ನು ಸಮಾಧಾನ ಮಾಡುತ್ತಾನೆ.
ಬಳಿಕ, ವಿಕ್ರಾಂತ್ ವೈಷ್ಣವಿ ತಂದೆಯ ಬಳಿ ಹೇಳುತ್ತಾನೆ, ನಾನು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತೇನೆ. ನಿಮ್ಮ ದುಃಖ ನನಗೆ ಅರ್ಥ ಆಗುತ್ತಿದೆ, ನಾವು ಕೂಡ ಶಮಂತ್ ಬಗ್ಗೆ ಯೋಚನೆ ಮಾಡದೆ ಇರುವ ದಿನವೇ ಇಲ್ಲ. ಆದರೆ ಆ ನೆನಪುಗಳು ನಮಗೆ ಸರಪಳಿ ಆಗಬಾರದು ಅಲ್ವಾ. ಇರುವ ಸತ್ಯವನ್ನು ಅರಿತು ಲೈಫಲ್ಲಿ ಮುಂದೆ ಸಾಗುತ್ತಾ ಇರಬೇಕು ಆದೆ ಜೀವನ ಎಂದೆಲ್ಲ ವೈಷ್ಣವಿ ತಂದೆಗೆ ಅರ್ಥ ಮಾಡಿಸುತ್ತಾನೆ. ಆದರೆ ತನ್ನ ಮಗಳ ಜೀವನ ಹಾಳಾಗಿ ಹೋಯಿತಲ್ಲ ಎಂದು ಬಹಳ ಬೇಸರಪಟ್ಟುಕೊಳ್ಳುತ್ತ ಇದ್ದರೂ. ಶಮಂತ್ ಯಾವತ್ತಾದರೂ ಬಂದೆ ಬರುತ್ತಾನೆ ಎಂದು ಕಾಯುತ್ತಾ ಇರುತ್ತಾರೆ.

ವೈಷ್ಣವಿ ತಾಯಿಗೆ ವಿಶ್ ಮಾಡಿದ ಸ್ಪಂದನಾ
ಈ ವೇಳೆ ಅಲ್ಲಿಗೆ ಬಂದ ಸ್ಪಂದನ ಹೇಳುತ್ತಾಳೆ. ಅಂಕಲ್ ದಯಮಾಡಿ ಬೇಸರ ಮಾಡಿಕೊಳ್ಳಬೇಡಿ. ಇವತ್ತು ನೀವು ಮದುವೆ ಆಗಿರುವ ದಿನ ಅದು ಅಲ್ಲದೆ ದೀಪಾವಳಿ ಹಬ್ಬ ಕೂಡ ನಿಮಾಗಿಬ್ಬರಿಗು ಒಳ್ಳೆಯದಾಗಲಿ. ನೀವು ಇಬ್ಬರು ದೀಪದ ಹಾಗೆ ಬೆಳಗುತ್ತ. ನಿಮ್ಮನ್ನು ನಂಬಿದವರಿಗೆ ಬೆಳಕು ಕೊಡುತ್ತಿರಿ. ಆ ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಶುಭ ಹಾರೈಸುತ್ತಾರೆ.

ಸ್ಪಂದನಾ ಮುಂದೆ ಹೊಸ ಖ್ಯಾತೆ ತೆಗೆದ ವೈಷ್ಣವಿ
ಈ ವೇಳೆ ಕ್ಯಾತೆ ತೆಗೆಯುವ ವೈಷ್ಣವಿ, 'ನೀನು ಹೇಳುವ ಮಾತಿಗೆ ಅರ್ಥ ಇದೆಯಾ ಸ್ಪಂದನಾ. ನನ್ನ ಹಣೆಬರಹದಲ್ಲಿ ಅಪ್ಪ ಅಮ್ಮ ಅದು ಹೇಗೆ ಮದುವೆ ದಿನಗಳಿಂದ ಖುಷಿಯಿಂದ ಇದ್ದಾರೋ ಹಾಗೆ ನನಗೆ ಇರಲು ಆಗಲ್ಲ ಎಂದು ಹೇಳುತ್ತ ಇದ್ದೀರಾ?' ಎಂದು ಕೇಳುತ್ತಾಳೆ. ಇದರಿಂದಾಗಿ ಕೊಂಚ ಸ್ಪಂದನಾಗೆ ಬೇಸರ ಆದರೂ ಸುಮ್ಮನಿರುತ್ತಾಳೆ. ಬಳಿಕ ಸ್ಪಂದನಾ ವೈಷ್ಣವಿಗೆ ನೀವು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾ ಇದ್ದೀರಾ. ನಾನು ಅಂಕಲ್‌ನ ಖುಷಿ ಪಡಿಸಲು ಹೇಳಿದೆ ಎಂದು ಹೇಳುತ್ತಾಳೆ. ಇದನ್ನು ಕೇಳದೆ ವೈಷ್ಣವಿ ಸ್ಪಂದನ ಮೇಲೆ ಕೋಪಗೊಳ್ಳುತ್ತಾಳೆ.

ಸ್ಪಂದನಾ ವೈಷ್ಣವಿ ಮಧ್ಯೆ ವಿಕ್ರಾಂತ್ ಎಂಟ್ರಿ
ಇಬ್ಬರು ಮಾತಿಗೆ ಮಾತು ಬೆಳೆದರೆ ಇವರಿಬ್ಬರನ್ನು ತಡೆದು ನಿಲ್ಲಿಸುವುದು ಬಹಳ ಕಷ್ಟದ ವಿಚಾರ. ಈ ವೇಳೆ ಮದ್ಯ ಬಂದ ವಿಕ್ರಾಂತ್, ವೈಷ್ಣವಿಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಾನೆ. ಯಾರು ಇಲ್ಲಿ ತಾಂಟ್ ಕೊಟ್ಟು ಮಾತನಾಡಲು ಬಂದಿಲ್ಲ ವೈಷ್ಣವಿ. ಆಕೆ ಹಾಗೆ ಹೇಳುತ್ತಿಲ್ಲ. ನೀನು ತಪ್ಪಾಗಿ ತಿಳಿಬೇಡ ಎಂದು ವೈಷ್ಣವಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಆದರೆ ವೈಷ್ಣವಿ ಇದನ್ನು ಯಾವುದನ್ನು ಅರ್ಥ ಮಾಡಿಕೊಳ್ಳದೆ ಸಿಕ್ಕಾ ಪಟ್ಟೆ ಕೋಪದಲ್ಲಿ ಕಿಡಿಕಾರುತ್ತಾಳೆ. ಈ ವೇಳೆ ಮಾತನಾಡಿದ ವೈಷ್ಣವಿ ತಾಯಿ, ನನ್ನ ಮಗಳ ವೇದನೆ ಯಾರಿಗೂ ಅರ್ಥ ಆಗಲ್ಲ ಎಂದು ಹೇಳಿದ ಕೂಡಲೇ ಸ್ಪಂದನ ಎಲ್ಲರ ಮುಂದು ಕ್ಷಮೆ ಕೇಳುತ್ತಾಳೆ.

ಸ್ಪಂದನಾಗೆ ಗಿಫ್ಟ್ ವಾಪಸ್ ನೀಡಿದ ವೈಷ್ಣವಿ ತಾಯಿ
ನಾನು ಆ ಅರ್ಥದಿಂದ ನಿಮ್ಮ ಬಳಿ ಮಾತನಾಡಿ ಇಲ್ಲ. ನಿಮ್ಮ ಅಪ್ಪ ಅಮ್ಮನ ಖುಷಿಯಲ್ಲಿ ಭಾಗಿ ಆಗುವ ಎಲ್ಲ ಹಕ್ಕು ನಿಮಗಿದೆ. ಬಳಿಕ ವೈಷ್ಣವಿ ತಾಯಿಗೆ ಗಿಫ್ಟ್ ಕೊಡುತ್ತಾಳೆ. ನಂತರ ಇಬ್ಬರ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುತ್ತಾನೆ. ಬಳಿಕ ಬಾಕ್ಸ್ ಬಿಚ್ಚಿ ನೋಡಿದಾಗ ಸೀರೆ ನೋಡಿ ಈ ಸಾರಿ ತುಂಬಾ ಬೆಲೆಬಾಳುವ ಹಾಗೆ ಕಾಣುತ್ತದೆ. ಇಷ್ಟು ದುಬಾರಿ ಸೀರೆ ಯಾಕೆ ತರಲು ಹೋದೆ ಎಂದೆಲ್ಲ ಕೇಳುತ್ತಾಳೆ. ಈ ವೇಳೆ ವೈಷ್ಣವಿ ಸ್ಪಂದನಾಗೆ ಅವಮಾನ ಆಗುವ ರೀತಿ ಮಾತನಾಡುತ್ತಾ ಇರುತ್ತಾಳೆ. ಹೆಂಡತಿಗೆ ಅವಮಾನ ಆಗುತ್ತಿರುವುದನ್ನು ಕಂಡ ವಿಕ್ರಾಂತ್ ವೈಷ್ಣವಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು ಆತನ ಮೇಲೆ ಕೂಡ ವೈಷ್ಣವಿ ಹರಿಹಾಯುತ್ತಾಳೆ. ಕೊನೆಗೆ ವೈಷ್ಣವಿಯ ತಾಯಿ ಸೀರೆಯನ್ನು ಬೇಡ ಎಂದು ಸ್ಪಂದನಾಗೆ ಕೊಡುತ್ತಾರೆ. ಇದನ್ನು ನೋಡಿದ ಸ್ಪಂದನಾ, ವಿಕ್ರಾಂತ್‌ಗೆ ಅವಮಾನ ಆಗುತ್ತದೆ.


Click it and Unblock the Notifications











