ಸ್ಪಂದನಾ-ವಿಕ್ರಾಂತ್ ಅನ್ನು ಒಂದು ಮಾಡುತ್ತಾನ ಅಜಿತ್?

By ಪೂರ್ವ

ವಿಕ್ರಾಂತ್ ಹಾಗೂ ಸ್ಪಂದನ ಜೋಡಿ ನೋಡಿ ಹೊಟ್ಟೆ ಉರಿದುಕೊಳ್ಳುವವರು ಅದೆಷ್ಟೋ ಮಂದಿ ಅದೆಷ್ಟೋ ಅದರಲ್ಲಿ ವೈಷ್ಣವಿ ಕೂಡ ಒಬ್ಬಳು. ಆಕೆ ವಿಕ್ರಾಂತ್ ಹಾಗೂ ಸ್ಪಂದನಾಳನ್ನು ದೂರ ಮಾಡಲು ನೋಡುತ್ತಿದ್ದಾಳೆ ಆದರೆ ಅದು ವಿಕ್ರಾಂತ್‌ಗೆ ತಿಳಿಯುತ್ತಿಲ್ಲ. ಇತ್ತ ಸ್ಪಂದನಾ ಈಗ ವಿಕ್ರಾಂತ್ ಅನುಮಾನಕ್ಕೇ ಸಿಕ್ಕಿ ನಲುಗಿದ್ದಾಳೆ ತನ್ನ ಸಹಪಾಠಿ ತನ್ನ ಜೊತೆ ಮಾತನಾಡಿರುವುದನ್ನು ತಪ್ಪಾಗಿ ತಿಳಿದುಕೊಂಡ ವಿಕ್ರಾಂತ್, ವೈಷ್ಣವಿ ಮಾತಿಗೆ ಮಣೆ ಹಾಕುತ್ತಿರುವುದು ಆಕೆಗೆ ಬೇಸರ ಮೂಡಸಿದೆ. ಇದೀಗ ಕೋಪದಿಂದ ಮನೆಯ ಹೊರಗೆ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾದರೆ ವೈಷ್ಣವಿ ಗೆ ಕಾರು ಡಿಕ್ಕಿ ಆಗಿ ರಸ್ತೆಗೆ ಬೀಳುತ್ತಾಳೆ ಇದನ್ನು ಕಂಡ ವಿಕ್ರಾಂತ್‌ಗೆ ಶಾಕ್ ಆಗುತ್ತದೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಸ್ಪಂದನಾಗೆ ಇಂಥ ಸ್ಥಿತಿ ಬಂತಲ್ಲ ಎಂದು ಹಲವರು ಮರುಗಿದರೆ ಇನ್ನು ಕೆಲವರು ದುರಹಂಕಾರಿ ಸ್ಪಂದನಾಗೆ ಈ ರೀತಿ ಆಗಿದ್ದು ಒಳ್ಳೆಯದೇ ಆಯಿತು ಎಂದು ನಗುತ್ತಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಸ್ಪಂದನಾ ಬಳಿ ಬಂದ ವಿಕ್ರಾಂತ್, ಸ್ಪಂದನಾ ನೀನು ಈ ಸ್ಥಿತಿಗೆ ಬರಲು ನಾನೇ ಕಾರಣ ಆಗಿ ಬಟ್ಟೆ ನನ್ನ ಕ್ಷಮಿಸು ಬಿಡು, ಇನ್ನೂ ಮುಂದೆ ಈ ತಪ್ಪು ಆಗದ ಹಾಗೆ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ ಆದರೆ ಇದಾವುದೂ ಸ್ಪಂದನಾಗೆ ತಿಳಿಯುತ್ತಿಲ್ಲ. ವಿಕ್ರಾಂತ್ ಇಷ್ಟೆಲ್ಲ ಹೇಳುತ್ತಿರುವ ವೇಳೆ ಸ್ಪಂದನಾ, ಅಪ್ಪಯ್ಯ ಎಂದು ಕನವರಿಸುತ್ತ ಇರುತ್ತಾಳೆ. ಬಳಿಕ ಸ್ಪಂದನಾ ಮೆತ್ತಗೆ ಕಣ್ಣು ಬಿಡುತ್ತಾಳೆ.

ಹಾಸಿಗೆ ಬೆಡ್‌ ಮೇಲೆ ಸ್ಪಂದನಾ

ಹಾಸಿಗೆ ಬೆಡ್‌ ಮೇಲೆ ಸ್ಪಂದನಾ

ಈ ವೇಳೆ ವಿಕ್ರಾಂತ್ ಎದುರಿಗೆ ಇರುವುದನ್ನು ಕಂಡು ಹಳೆಯದನ್ನೆಲ್ಲ ಮೆಲುಕು ಹಾಕುತ್ತಾಳೆ ಸ್ಪಂದನಾ. ಅಜಿತ್ ಮತ್ತೆ ನೀನು ನಮ್ಮ ರೂಮ್‌ನಲ್ಲಿ ಏನು ಮಾಡುತ್ತಿದ್ದೀರಿ ಎಂದು ವಿಕ್ರಾಂತ್ ಕೇಳಿರುವ ಮಾತುಗಳೇ ಸ್ಪಂದನಾ ಮನದಲ್ಲಿ ನಾಟಿದ ಹಾಗೆ ಇದೆ. ಇನ್ನು ಸ್ಪಂದನಾ ಬಳಿ ಬಂದ ವಿಕ್ರಾಂತ್ ಸ್ಪಂದನಾ ಬಳಿ ಕ್ಷಮೆ ಕೇಳುತ್ತಾನೆ. ಆದರೆ ಸ್ಪಂದನಾ ಮಾತ್ರ ಮುಖ ತಿರುಗಿಸಿ ದಯಮಾಡಿ ಇಲ್ಲಿಂದ ಹೊರಟು ಹೋಗಿ ಎಂದು ಹೇಳುತ್ತಾಳೆ ಇದನ್ನು ಕೇಳಿದ ವಿಕ್ರಾಂತ್ ಹೇಳುತ್ತಾನೆ ನನಗೆ ತಿಳಿದಿದೆ ಈ ಆಕ್ಸಿಡೆಂಟ್‌ಗೆ ನಾನೇ ಕಾರಣ ಎಂದು ಆದರೂ ನಾನು ಓಡಬೇಡ ಎಂದು ಹೇಳಿದರು ನೀನು ಯಾಕೆ ಓಡಿ ಹೋದೆ, ನಾವಿಬ್ಬರೂ ಕುಳಿತು ಈ ವಿಚಾರವನ್ನು ಬಗೆಹರಿಸಿಕೊಳ್ಳ ಬಹುದಿತ್ತಲ್ಲ ಎಂದು ದುಃಖದಲ್ಲಿ ಹೇಳುತ್ತಾನೆ.

ವಿಕ್ರಾಂತ್ ಮಾತು ಕೇಳಿಸಿಕೊಳ್ಳದ ಸ್ಪಂದನಾ

ವಿಕ್ರಾಂತ್ ಮಾತು ಕೇಳಿಸಿಕೊಳ್ಳದ ಸ್ಪಂದನಾ

ಅದಕ್ಕೆ ಸ್ಪಂದನಾ, 'ಬಗೆಹರಿಸಿಕೊಳ್ಳಲು ಏನಾದರು ಉಳಿದಿತ್ತಾ ವಿಕ್ರಾಂತ್ ಸರ್, ನಾನು ಸರಿ ಇಲ್ಲ ಎಂದು ಹೇಳಿದ ಮೇಲೂ ನಿಮ್ಮ ಜೊತೆ ನಾನು ಎಂದು ದುಃಖದಲ್ಲಿ ಹೇಳುತ್ತಿರುವಾಗ ವಿಕ್ರಾಂತ್ ಅದೆಷ್ಟು ಸಮಾಜಾಯಿಷಿ ಕೊಟ್ಟರು ಸ್ಪಂದನಾ ಮಾತ್ರ ಅದನ್ನೇ ಮನದಲ್ಲಿ ಇಟ್ಟುಕೊಂಡು ಮಾತು ಮುಂದುವರಿಸುತ್ತಾರೆ ನೀವು ಡೈರೆಕ್ಟ್ ಆಗಿ ಹೇಳಲಿಲ್ಲ. ಬದಲಾಗಿ ನೀವು ಹೇಳಿರುವ ಅರ್ಥ ಅದುವೇ ಎಂದು ಬಹಳ ದುಃಖದಿಂದ ಹೇಳುತ್ತಾಳೆ.

ಸ್ಪಂದನಾ ಮಾತು ಕೇಳಿ ದುಃಖದಲ್ಲಿ ಇರುವ ವಿಕ್ರಾಂತ್

ಸ್ಪಂದನಾ ಮಾತು ಕೇಳಿ ದುಃಖದಲ್ಲಿ ಇರುವ ವಿಕ್ರಾಂತ್

ಇದನ್ನು ಕೇಳಿದ ವಿಕ್ರಾಂತ್‌ಗೆ ಏನು ಹೇಳಬೇಕು ತಿಳಿಯದಾಗುತ್ತದೆ. ವಿಕ್ರಾಂತ್ ಅದೆಷ್ಟೇ ಸಮಾಧಾನ ಹೇಳಿದರು ಸ್ಪಂದನಾ ಅದ್ಯಾಕೋ ತನ್ನ ಮೊಂಡುವಾದ ಬಿಡುತ್ತಿಲ್ಲ. ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ. ಬಳಿಕ ವಿಕ್ರಾಂತ್‌ನನ್ನು ಬಿಟ್ಟು ಹೋಗುವ ನಿರ್ಧಾರ ಕೂಡ ಮಾಡಿ ಬಿಟ್ಟಳು. ವಿಕ್ರಾಂತ್ ಮಾತಿನಿಂದ ಸ್ಪಂದನಾ ಮನಸ್ಸೇ ಒಡೆದು ಹೋಗಿದೆ. ಸ್ಪಂದನಾ, ಮನೆ ಬಿಟ್ಟು ಹೋಗುವ ವಿಚಾರ ವಿಕ್ರಾಂತ್ ಬಳಿ ಪ್ರಸ್ತಾಪ ಮಾಡುವ ವೇಳೆ ವಿಕ್ರಾಂತ್, ಸ್ಪಂದನಾಗೆ ಮನೆ ಬಿಟ್ಟು ಹೋಗದ ಹಾಗೆ ಹೇಳುತ್ತಾನೆ. ಇದನ್ನು ಕೇಳಿದ ಸ್ಪಂದನಾ ಏನು ಆರ್ಡರ್ ಮಾಡುತ್ತಾ ಇದ್ದೀರಾ ಎಂದು ಕೊಂಚ ಜೋರಾಗಿ ಹೇಳುತ್ತಾಳೆ.

ಹೊರ ಹೋದ ವಿಕ್ರಾಂತ್

ಹೊರ ಹೋದ ವಿಕ್ರಾಂತ್

ತನ್ನ ಹಾಗೂ ಅಜಿತ್ ಬಗ್ಗೆ ಸಂಶಯ ಪಟ್ಟಿರುವುದರಿಂದ ನೀವು ನನ್ನ ಗಂಡನೇ ಅಲ್ಲ ಎನ್ನುವ ನಿರ್ಧಾರಕ್ಕೆ ಸ್ಪಂದನಾ ಬಂದು ಬಿಟ್ಟಿದ್ದಾಳೆ ಇದನ್ನೆಲ್ಲ ಕೇಳಿದ ವಿಕ್ರಾಂತ್‌ಗೆ ಏನು ಮಾಡುವುದು ಎಂದು ತಿಳಿಯದಾಗಿದೆ. ಬಳಿಕ ಅಲ್ಲಿಗೆ ಡಾಕ್ಟರ್ ಬಂದು ವಿಕ್ರಾಂತ್ ಅನ್ನು ಹೊರ ಹೋಗಲು ಹೇಳುತ್ತಾರೆ ಇದನ್ನು ಕೇಳಿದ ವಿಕ್ರಾಂತ್ ಡಾಕ್ಟರ್ ಬಳಿ, ಆಕೆಗೆ ನಾನು ಅಂದರೆ ಇಷ್ಟ ಇಲ್ಲ ನಾನು ಹೊರಗೆ ಹೋಗುತ್ತೇನೆ ಎಂದು ಹೇಳಿ ಹೊರಗೆ ಹೋಗುತ್ತಾನೆ. ವಿಕ್ರಾಂತ್ ಬಂದದ್ದನ್ನು ನೋಡಿದ ಆತನ ತಾಯಿ ಸ್ಪಂದನ ಬಗ್ಗೆ ವಿಚಾರಣೆ ಮಾಡುತ್ತಾಳೆ. ತಾನು ಕೂಡ ಸ್ಪಂದನಾಳನ್ನು ನೋಡಬೇಕು ಎಂದು ಹಠ ಹಿಡಿದು ಸ್ಪಂದನಾ ಬಳಿ ಹೋಗಿ ಮಾತನಾಡುತ್ತಾಳೆ ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Marali Manasagide written updated on 27th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X