ವಿಕ್ರಾಂತ್ ವೈಷ್ಣವಿ ನೋಡಿ ಸ್ಪಂದನ ಮನದಲ್ಲಿ ಅನುಮಾನ

By ಪೂರ್ವ

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ಮರಳಿ ಮನಸ್ಸಾಗಿದೆ. ಮರಳಿ ಮನಸಾಗಿದೆ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇಬ್ಬರ ನಡುವೆ ಸಿಲುಕಿ ಒದ್ದಾಡುತ್ತಿರುವ ಒಬ್ಬ ವ್ಯಕ್ತಿಯ ಕಥೆ ಇದು. ಇದೀಗ ವೈಷ್ಣವಿ, ಸಾಹಿತ್ಯ ಹಾಗೂ ಆಕೆಯ ಮಗಳು ಹರಿಣಿಯನ್ನು ಒಂದು ಮಾಡಿದ್ದಾಳೆ. ಇದರಿಂದ ಖುಷಿ ಗೊಂಡ ಮನೆ ಮಂದಿ ವೈಷ್ಣವಿಯನ್ನು ಹೊಗಳಿದ್ದೇ ಹೊಗಳಿದ್ದು, ವಿಕ್ರಾಂತ್ ಕೂಡ ಶಮಂತ್ ಹೆಂಡತಿ ವೈಶು ಈ ರೀತಿ ಎಲ್ಲಾ ಒಳ್ಳೆಯ ಕೆಲಸ ಮಾಡಿದಳು ಅಲ್ವಾ ಎಂದು ಖುಷಿ ಪಡುತ್ತಾನೆ.

ವೈಶೂಗೆ ಸ್ಪಂದನ ಅಂದರೆ ಅತಿಯಾದ ಕೋಪ ಉಕ್ಕಿ ಬರುತ್ತದೆ. ಇತ್ತ ಮನೆ ಮಂದಿ ಸಾಹಿತ್ಯ ಬಳಿ ಬಂದು ವೈಶೂಗೆ ಧನ್ಯವಾದ ಹೇಳುವಂತೆ ಹೇಳುತ್ತಾರೆ ಆದರೆ ಈ ವೇಳೆ ಸಾಹಿತ್ಯ ಮಾತನಾಡಿದ ಮಾತು ಕೇಳಿ ವೈಷುಗೆ ಬಹಳ ಬೇಸರ ಆಗುತ್ತದೆ. ಸಾಹಿತ್ಯ ಹೀಗೆ ಹೇಳುತ್ತಾಳೆ ನನ್ನ ಹಾಗೂ ನನ್ನ ಮಗಳನ್ನು ಒಂದು ಮಾಡಿದ್ದು ವಿಕ್ರಾಂತ್ ಹಾಗೂ ಸ್ಪಂದನ ಎಂದು ಹೇಳುತ್ತಾಳೆ ಇದನ್ನು ಕೇಳಿದ ವೈಶೂಗೆ ಶಾಕ್ ಆಗುತ್ತದೆ. ತಾನು ಮಾಡಿದ ಕೆಲಸವೆಲ್ಲ ನೀರಲ್ಲಿ ಹೋಮ ಆಗಿ ಹೋಯಿತಾ ಹಾಗಾದರೆ ಎಂದು ಬೇಸರಪಟ್ಟುಕೊಳ್ಳುತ್ತಾಳೆ.

ಸಾಹಿತ್ಯ ಮಗಳು ಹರಿಣಿ ಹುಟ್ಟುಹಬ್ಬ ಆಚರಣೆ ಮಾಡಲು ಎಲ್ಲರೂ ಸಿದ್ಧತೆಗಳನ್ನು ಮಾಡುತ್ತಾ ಇರುತ್ತಾರೆ. ಈ ವೇಳೆ ಹರಿಣಿ, ಕೇಕ್ ಮುಟ್ಟಲು ಬಂದಾಗ ಆಕೆಯ ದೊಡ್ಡಮ್ಮ ಒಂದು ಕೈಗೆ ಪೆಟ್ಟು ಕೊಟ್ಟು ಹೇ ಈಗ ತಿನ್ನಬೇಡ ಕೇಕ್ ಕಟ್ ಆದ ಬಳಿಕ ಕೇಕ್ ತಿನ್ನಬೇಕು ಎಂದು ಹೇಳುತ್ತಾರೆ. ಬಳಿಕ ಬರ್ತ್ ಡೆ ಸೆಲೆಬ್ರೇಟ್ ಮಾಡಲು ಎಲ್ಲರನ್ನು ಹುಟ್ಟು ಹಬ್ಬ ಆಚರಣೆ ಮಾಡಲು ಜೋರಾಗಿ ಕರೆಯುತ್ತಾರೆ. ಬಳಿಕ ವೈಷ್ಣವಿ ಜೊತೆ ಮಾತನಾಡುತ್ತಿದ್ದರು ಎಲ್ಲಾ ಹುಟ್ಟು ಹಬ್ಬ ಆಚರಣೆ ಮಾಡಲು ಹೋದರು ಇದನ್ನೆಲ್ಲ ನೋಡಿದ ವೈಷ್ಣವಿಗೆ ಅತಿಯಾದ ಕೋಪ ಬರುತ್ತದೆ.

ವೈಷ್ಣವಿಯನ್ನು ಸಮಾಧಾನ ಪಡಿಸಿದ ವಿಕ್ರಾಂತ್

ವೈಷ್ಣವಿಯನ್ನು ಸಮಾಧಾನ ಪಡಿಸಿದ ವಿಕ್ರಾಂತ್

ಆಕೆ ಹುಟ್ಟು ಹಬ್ಬ ಆಚರಣೆ ಮಾಡಲು ತೆರಳದೆ ಕೋಪದಿಂದ ಸ್ವಲ್ಪ ದೂರ ಹೋಗಿ ನಿಲ್ಲುತ್ತಾಳೆ ಇದನ್ನೆಲ್ಲ ನೋಡಿದ ವಿಕ್ರಾಂತ್‌ಗೆ ವೈಷ್ಣವಿ ಮನಸ್ಥಿತಿ ಅರ್ಥ ಆಗುತ್ತದೆ ಬೇಸರ ಮಾಡಿಕೊಳ್ಳಬೇಡ ವೈಷ್ಣವಿ ಎಲ್ಲಾ ಸರಿ ಹೋಗುತ್ತದೆ. ನೀನು ಕಷ್ಟ ಪಟ್ಟಿದ್ದಿಯಾ ಅದಕ್ಕೆ ಸರಿಯಾದ ಪ್ರತಿಫಲ ನಿನಗೆ ಸಿಕ್ಕೆ ಸಿಗುತ್ತದೆ ಆಕೆಗೆ ಅಷ್ಟಾಗಿ ಏನು ತಿಳಿಯುತ್ತಿಲ್ಲ. ಅದಕ್ಕೆ ಹಾಗೆ ಹೇಳುತ್ತಿದ್ದಾಳೆ. ಅವಳೇ ಒಂದು ದಿನ ನಿನ್ನನ್ನು ಅರ್ಥ ಮಾಡಿಕೊಳ್ಳುತ್ತಾಳೆ ನೋಡುತ್ತೀರಿ ಎಂದು ಹೇಳುತ್ತಾರೆ ಆಗ ಸ್ಪಂದನ ಕೋಪದಿಂದ ನಾನು ಏನೇ ಕೆಲಸ ಮಾಡಿದರೂ ಆ ಕ್ರೆಡಿಟ್ ಎಲ್ಲ ಸ್ಪಂದನೆಗೆ ಹೋಗುತ್ತೆ ಮನೆಯವರಿಗೆ ಎಲ್ಲಾ ಸ್ಪಂದನ ಮರಳು ಮಾಡಿದ್ದಾಳೆ ಅನ್ನಿಸುತ್ತದೆ ಹಾಗೆಯೇ ಸಾಹಿತ್ಯಳನ್ನ ಕೂಡ ಸ್ಪಂದನ ಮರಳು ಮಾಡಿದ್ದಾಳೆ ಎಂದು ಕೋಪದಿಂದ ಹೇಳುತ್ತಾಳೆ.

ವಿಕ್ರಾಂತ್‌ಗೆ ಕಿರಿ-ಕಿರಿ

ವಿಕ್ರಾಂತ್‌ಗೆ ಕಿರಿ-ಕಿರಿ

ಇದನ್ನೆಲ್ಲ ಕೇಳಿದ ವಿಕ್ರಾಂತ್ ಕೊಂಚ ಬೇಸರಿಸಿಕೊಂಡು ಬಳಿಕ ಸುಮ್ಮನಾಗುತ್ತಾನೆ. ಬಳಿಕ, ವೈಷ್ಣವಿ ಬಾ ನೀನು ಆಕೆಯ ದೊಡ್ಡ ಅತ್ತೆ . ಶಮಂತಾ ಈಗ ನಮ್ಮ ಜೊತೆ ಇಲ್ಲ. ನೀನಾದರೂ ಬಾ ಎಂದು ಹೇಳಿದ ವೇಳೆ ವೈಷ್ಣವಿ ಇನ್ನೂ ಜೋರಾಗಿ ಕಿರಿಚುತ್ತಾ ಇರುತ್ತಾಳೆ ಶಮಂತ್ ಅಂದರೆ ನನಗೆ ಯಾರು ಗೊತ್ತಿಲ್ಲ ಆತನ ಹೆಸರು ಎತ್ತ ಬೇಡ ಎಂದು ಖಡಕ್ ಆಗಿ ಹೇಳುತ್ತಾರೆ. ಬಳಿಕ ಇದನ್ನೆಲ್ಲ ಕೇಳಿದ ವಿಕ್ಕಿ ಸುಮ್ಮಗೆ ಅಲ್ಲಿಂದ ಹೊರಟು ಬರುತ್ತಾನೆ ಇದನ್ನು ನೋಡಿದ ವೈಷ್ಣವಿ ಹಿಂದೆಯಿಂದ ಓಡಿಕೊಂಡು ಬರುತ್ತಾಳೆ. ಇನ್ನು ಹುಟ್ಟು ಹಬ್ಬದ ಆಚರಣೆ ಮುಗಿದು ಹೋದ ಬಳಿಕ ವೈಷ್ಣವಿ ವಿಕ್ಕಿ ಬೆನ್ನು ಬಿಡುವ ಹಾಗೆ ಕಾಣುತ್ತಿಲ್ಲ. ವೈಷ್ಣವಿಗೆ ತನ್ನ ತಪ್ಪಿನ ಅರಿವಾಗುತ್ತದೆ.

ವಿಕ್ಕಿ ಬಳಿ ತನ್ನ ದುಃಖ ತೋಡಿಕೊಂಡ ವೈಶು

ವಿಕ್ಕಿ ಬಳಿ ತನ್ನ ದುಃಖ ತೋಡಿಕೊಂಡ ವೈಶು

ಬಳಿಕ ವಿಕ್ಕಿ ಜೊತೆ ಹೇಳುತ್ತಾಳೆ ಏನು ವಿಕ್ಕಿ ನಿನಗೆ ನನ್ನ ಮೇಲೆ ಕೋಪಾನ ಎಂದು ಕೇಳುತ್ತಾ ಇರುತ್ತಾಳೆ ಅದಕ್ಕೆ ವಿಕ್ರಾಂತ್ ಹೇಳುತ್ತಾನೆ ವೈಶೂ ಸ್ವಲ್ಪ ಸುಸ್ತಾಗಿದೆ ರೆಸ್ಟ್ ಮಾಡಬೇಕು ಅದಕ್ಕೆ ಹೋಗುತ್ತಾ ಇದ್ದೇನೆ ಎಂದು ಹೇಳುತ್ತಾ ಇರುತ್ತಾನೆ. ಆಗ ವೈಶೂ ಹೇಳುತ್ತಾಳೆ ಸಾರಿ ತೊಂದರೆ ಕೊಟ್ಟೆ ಎಂದು ಅನ್ನಿಸುತ್ತದೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ವಿಕ್ಕಿ ಬಳಿಕ ಅಲ್ಲಿಂದ ಹೊರಡಲು ಅನುವಾಗುತ್ತಾನೆ. ಆಗ ವಿಕ್ರಾಂತ್ ಅನ್ನು ತಡೆದ ವೈಷ್ಣವಿ ನಿನಗೆ ನನ್ನ ಬಳಿ ಮಾತನಾಡಲು ಇಷ್ಟ ಇಲ್ವಾ ನನಗೆ ಗೊತ್ತು ನನ್ನ ಕಂಡರೆ ನಿನಗೆ ಚೂರು ಇಷ್ಟ ಇಲ್ಲ, ಯಾವಾಗಲೂ ನನ್ನ ಮೇಲೆ ಕೋಪ ಮಾಡಿಕೊಂಡು ಇರುತ್ತಿಯಾ ಅಲ್ವಾ? ಎಂದೆಲ್ಲ ಹೇಳುವಾಗ ವಿಕ್ಕಿ ಹೇಳುತ್ತಾನೆ ಈಗ ನಾನು ಹಾಗೇನಾದರೂ ಹೇಳಿದ್ನಾ ಎಂದು.

ಸ್ಪಂದನಾಳನ್ನು ನೋಡಿ ವಿಕ್ರಾಂತ್-ವೈಷ್ಣವಿ ಶಾಕ್

ಸ್ಪಂದನಾಳನ್ನು ನೋಡಿ ವಿಕ್ರಾಂತ್-ವೈಷ್ಣವಿ ಶಾಕ್

ಆಗ ವೈಶ್ಣವಿ ಹೇಳುತ್ತಾಳೆ, 'ನಾನು ಇಷ್ಟ ಇಲ್ಲ ಎಂಬುವುದನ್ನು ಬಾಯಿಬಿಟ್ಟು ಹೇಳಬೇಕಾ ನಿನ್ನ ಮುಖ ನೋಡಿದಾಗ ತಿಳಿಯುತ್ತದೆ. ನನ್ನ ಮೇಲೆ ಇರುವ ಪ್ರೀತಿ ಸತ್ತು ಹೋಗಿದೆ ಎಂದು ಮುಖ ನೋಡಿದರೆ ಗೊತ್ತಾಗುತ್ತದೆ. ನನ್ನ ಮುಂದೆ ನಿಂತಿರುವುದು ಹಳೆ ವಿಕ್ಕಿ ಅಲ್ಲ ಬದಲಾಗಿರುವ ಹೊಸ ವಿಕ್ಕಿ. ಎಂದಾಗ ಸಿಟ್ಟು ಗೊಂಡ ವಿಕ್ರಾಂತ್ ಹೌದು ಏನಿವಾಗ ಎಂದು ಹೇಳುತ್ತಾನೆ ಇದರಿಂದ ಶಾಕ್ ಆಗುತ್ತಾಳೆ ವೈಷ್ಣವಿ. ಇನ್ನು ಇವರು ಈ ರೀತಿ ಎಲ್ಲಾ ಮಾತನಾಡುವಾಗ ಅಲ್ಲಿಗೆ ಸ್ಪಂದನ ಬರುತ್ತಾಳೆ. ವಿಕ್ರಾಂತ್ ಹಾಗೂ ವೈಷ್ಣವಿ ಸ್ಪಂದನ ಬಂದಾಗ ಮಾತು ನಿಲ್ಲಿಸುತ್ತಾರೆ. ಇದರಿಂದ ಇಬ್ಬರ ನಡವಳಿಕೆ ಕೊಂಚ ಬೇರೆ ರೀತಿ ಕಾಣುತ್ತದೆ ಸ್ಪಂದನಾಗೆ. ಮುಂದೇನು ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Kannada serial Marali Manasagide written updated on 2th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X