twitter
    For Quick Alerts
    ALLOW NOTIFICATIONS  
    For Daily Alerts

    ಸಕ್ಸಸ್ ಆಯ್ತು ಚಂದ್ರಲೇಖಾ ಪ್ಲಾನ್! ಚಂದ್ರಲೇಖಾ ಪಾಲಾದ ಪೆಂಡೆಂಟ್

    By ಪೂರ್ವ
    |

    ಪೆಂಡೆಂಟ್ ಬಗ್ಗೆ ಚಂದ್ರಲೇಖಾ ಏನೇ ಯೋಜನೆ ಹಾಕಿದರು ಅದು ಫಲಿಸುತ್ತಿಲ್ಲ. ಆಕೆಯ ಯೋಜನೆಗೆ ಪ್ರತಿ ಯೋಜನೆಯನ್ನು ವಿಕ್ರಾಂತ್ ಮೊದಲೇ ಮಾಡಿರುತ್ತಾರೆ. ಇನ್ನು ಸ್ಪಂದನಾಗೆ ಪ್ರೀತಿಯಿಂದ ಗಿಫ್ಟ್ ಕೊಡುತ್ತಾನೆ ವಿಕ್ರಾಂತ್. ಆದರೆ ಅದನ್ನು ನಿರಾಕರಿಸುವ ಸ್ಪಂದಾನಳನ್ನು ನೋಡಿದ ವೈಷ್ಣವಿ ಹೇಳುತ್ತಾಳೆ ಸ್ಪಂದನಾ ವಿಕ್ರಾಂತ್ ಅಷ್ಟು ಪ್ರೀತಿಯಿಂದ ತಂದ ಗಿಫ್ಟ್ ಅನ್ನೂ ನಿರಾಕರಿಸಬಾರದು, ಯಾಕೆ ಎಂದರೆ ನಮಗೆ ಯಾರಾದ್ರೂ ಪ್ರೀತಿಯಿಂದ ನೀಡಿದ ಗಿಫ್ಟ್ ಅನ್ನು ನಿರಾಕರಣೆ ಮಾಡಿದರೆ ಗಿಫ್ಟ್ ಕೊಟ್ಟವರಿಗೆ ಅವಮಾನ ಮಾಡಿದ ಹಾಗೆ. ನಿನಗೆ ಅಷ್ಟು ಅರ್ಥ ಆಗುವುದಿಲ್ಲವೇ ಎಂದು ಹೇಳುತ್ತಾಳೆ.

    ಇದನ್ನು ನೋಡಿದ ಸ್ಪಂದನಾ ಹೇಳುತ್ತಾಳೆ, ವೈಶು ಅಕ್ಕ ನಾನೇನು ದಾರೀಲಿ ಹೋಗುವವರಿಗೆ ಇದನ್ನು ನೀಡುತ್ತಿಲ್ಲ. ನಾನು ಕೊಡುತ್ತಿರುವುದು ದೊಡ್ಡ ಅತ್ತೆಗೆ ಅವರಿಗೆ ಕೊಟ್ಟರೆ ಮನೆ ವಸ್ತು ಮನೆಯಲ್ಲಿ ಇದ್ದ ಹಾಗೆ ಆಗುತ್ತದೆ. ಇದರಿಂದ ಯಾರಿಗೂ ಏನೂ ಸಮಸ್ಯೆ ಆಗುವುದಿಲ್ಲ, ಎಂದು ಗಿಫ್ಟ್ ನೀಡುತ್ತಾಳೆ. ಇದನ್ನು ನೋಡಿದ ಚಂದ್ರಲೇಖಾ ಹೇಳಿದ ಮಾತೇ ಕೇಳುವುದಿಲ್ಲ ಅಲ್ವಾ ನೀನು. ಬೇಡ ಅಮ್ಮ ನೀನೇ ಹಾಕಿಕೋ ಎಂದು ನಗುತ್ತಾ ಹೇಳುತ್ತಾಳೆ. ಅದಕ್ಕೆ ಸ್ಪಂದನ ಒತ್ತಾಯ ಪೂರ್ವಕವಾಗಿ ಪ್ಲೀಸ್ ದೊಡ್ಡ ಅತ್ತೆ ಇದನ್ನು ತೆಗೆದುಕೊಳ್ಳಿ ಎನ್ನುತ್ತಾಳೆ.

    ಆಗ ಅಲ್ಲಿ ಕುಳಿತಿದ್ದ ಸ್ಪಂದನಾಳ ಮಾವ, 'ಇದನ್ನೆಲ್ಲ ಮಾಡಿ ನೀನು ಏನು ಪ್ರೂವ್ ಮಾಡಬೇಕು ಎಂದು ಇದ್ದೀಯಾ. ನಿನ್ನ ಮನಸು ದೊಡ್ಡದು ಅಂತಾನಾ ಅಥವಾ ಅತ್ತಿಗೆ ಬಗ್ಗೆ ತುಂಬಾ ಕರುಣೆ ಇದೆ ಎಂದು ಈ ರೀತಿ ನಡೆದುಕೊಳ್ಳುತ್ತಿದ್ದಿಯಾ? ಎಂದು ಅನುಮಾನ ವ್ಯಕ್ತ ಪಡಿಸುತ್ತಾರೆ. ಇದನ್ನು ಕೇಳಿದ ಸ್ಪಂದನಾಗೆ ಬಹಳ ಬೇಸರ ಮೂಡುತ್ತದೆ. ಬಳಿಕ ಮಾತು ಮುಂದುವರಿಸಿದ ಮಾವ ಹೇಳುತ್ತಾರೆ. ನಿನಗೆ ಮಾತ್ರ ಗಿಫ್ಟ್ ತಂದುಕೊಟ್ಟಿದ್ದು ವಿಕ್ಕಿದ್ದು ತಪ್ಪು. ಹೌದು ಇವಳಿಗೆ ಒಬ್ಬಳಿಗೆ ಗಿಪ್ಟ್ ಯಾಕೆ ಕೊಟ್ಟೆ ಎಂದು ವಿಕ್ರಾಂತ್ ಬಳಿ ಕೇಳುತ್ತಾನೆ.

    ಮನೆ ಮಂದಿಯಿಂದ ವಿಕ್ರಾಂತ್ ಗೆ ಕ್ಲಾಸ್

    ಮನೆ ಮಂದಿಯಿಂದ ವಿಕ್ರಾಂತ್ ಗೆ ಕ್ಲಾಸ್

    ಇದನ್ನು ಕೇಳಿದ ವಿಕ್ರಾಂತ್ ಬಾಯಲ್ಲಿ ಮಾತೇ ಹೊರಡುವುದಿಲ್ಲ. ಎಲ್ಲರೂ ವಿಕ್ರಾಂತ್ ಮಾಡಿದ್ದು ಬಹು ದೊಡ್ಡ ತಪ್ಪು ಅನ್ನುವ ಹಾಗೆ ಮಾತನಾಡುತ್ತಾರೆ. ಆದರೆ ಸ್ಪಂದನಾಗೆ ಬೇಸರ ಆದರೆ ವಿಕ್ರಾಂತ್ ಗೆ ಅವಮಾನ ಆಗುತ್ತದೆ. ತನ್ನ ತಂದೆಗೆ ತನ್ನದೇ ಧಾಟಿಯಲ್ಲಿ ಉತ್ತರ ನೀಡಿದ ವಿಕ್ರಾಂತ್ ಹೇಳುತ್ತಾನೆ ಕೆಲವೊಂದನ್ನು ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಬೇಕು. ಯಾವತ್ತೂ ಹಳೆಯ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಲು ಆಗುವುದಿಲ್ಲ. ಸ್ಪಂದನಾಗೆ ಏನೋ ಕೊಡಬೇಕು ಎಂದು ಮನಸಾಯಿತು. ಅದಕ್ಕೆ ತಂದುಕೊಟ್ಟೆ ಅಷ್ಟೇ. ಇಷ್ಟು ಸಣ್ಣ ವಿಚಾರವನ್ನು ದೊಡ್ಡದು ಮಾಡುವ ಅಗತ್ಯ ಏನಿದೆ? ಇದರಲ್ಲಿ ನನ್ನ ತಪ್ಪೇನಿದೆ ಎನ್ನುತ್ತಾನೆ.

    ವಿಕ್ರಾಂತ್ ಮೇಲೆ ಮನೆ ಮಂದಿ ಸಿಟ್ಟು

    ವಿಕ್ರಾಂತ್ ಮೇಲೆ ಮನೆ ಮಂದಿ ಸಿಟ್ಟು

    ಆಗ ಮಧ್ಯೆ ಬಾಯಿ ಹಾಕಿದ ವೈಷ್ಣವಿ ಹೇಳುತ್ತಾಳೆ, ಇದರಲ್ಲಿ ಏನೂ ತಪ್ಪಿಲ್ಲ ವಿಕ್ಕಿ, ಅವರು ಹಳಬರು ಅಲ್ವಾ ಅದಕ್ಕೆ ನಿನ್ನ ಹೊಸ ವಿಚಾರಗಳು ಅರ್ಥ ಆಗಲ್ಲ ಎಂದಾಗ ಕೋಪಗೊಂಡ ವಿಕ್ಕಿ ಆಯ್ತು ಹಾಗಾದರೆ ಎಲ್ಲರಿಗೂ ಒಂದೊಂದು ಪೆಂಡೆಂಟ್ ತೆಗೆದುಕೊಂಡು ಬರುತ್ತೇನೆ ಎಂದಾಗ ಚಂದ್ರಲೇಖಾ ವಿಚಲಿತ ಗೊಂಡು ಬೇಡ ಎಂದು ಹೇಳಿ ಬಿಡುತ್ತಾಳೆ. ಈ ವೇಳೆ ಸ್ಪಂದನಾ, ದೊಡ್ಡ ಅತ್ತೆಗೆ ಆ ಪೆಂಡೆಂಟ್ ಅನ್ನು ಹಾಕುತ್ತಾಳೆ. ಸ್ಪಂದನಾ, ವೈಷ್ಣವಿಗೆ ತಾಂಟ್ ಕೊಡುತ್ತಾ ವೈಷ್ಣವಿ ಅಕ್ಕ ನೀವು ಇನ್ನೊಂದು ಪೆಂಡೆಂಟ್ ತರಿಸುವ ಅಗತ್ಯ ಇಲ್ಲ ಎಂದು ಹೇಳುತ್ತಾಳೆ. ಬಳಿಕ ಎಲ್ಲರ ಬಳಿ ಊಟ ಮಾಡಲು ವಿನಂತಿ ಮಾಡುತ್ತಾಳೆ. ಇದನ್ನೆಲ್ಲ ನೋಡಿದ ವಿಕ್ರಾಂತ್ ಗೆ ಬೇಸರ ಆಗುತ್ತದೆ.

    ಸಿಟ್ಟು ಮಾಡಿಕೊಂಡ ವಿಕ್ರಾಂತ್

    ಸಿಟ್ಟು ಮಾಡಿಕೊಂಡ ವಿಕ್ರಾಂತ್

    ವಿಕ್ರಾಂತ್ ಸರ್ ನೀವು ಊಟ ಮಾಡಿ ಎಂದಾಗ ಹಸಿವಿಲ್ಲ ಎಂದು ಎದ್ದು ಹೊರ ನಡೆಯುತ್ತಾನೆ. ಇದನ್ನು ನೋಡಿದ ವೈಷ್ಣವಿ ಪುನಃ ಹೇಳುತ್ತಾಳೆ. ವಿಕ್ಕಿ ನೀಡಿದ ಒಂದು ಗಿಫ್ಟ್ ನಿಮಗೆ ಪ್ರೀತಿಯಿಂದ ನೀಡಿದ್ದಾರೆ. ಆದರೆ ನೀನು ಅವನ ಮನಸ್ಸಿಗೆ ಬಹಳ ಬೇಸರ ಮಾಡಿದ್ದೀಯಾ ಎಂದೆಲ್ಲ ಹೇಳಿದರು ಸ್ಪಂದನಾಗೆ ವಿಕ್ರಾಂತ್ ಫೀಲಿಂಗ್ ಅರ್ಥ ಆಗಲೇ ಇಲ್ಲ. ವೈಷ್ಣವಿಗೆ ದಬಾಯಿಸಿ ಬಾಯಿ ಮುಚ್ಚಿಸಿ ಬಿಡುತ್ತಾಳೆ. ಇದನ್ನು ನೋಡಿದ ವೈಷ್ಣವಿ ಮಾತ್ರ ಸುಮ್ಮನೆ ಇರುತ್ತಾಳೆ. ವಿಕ್ರಾಂತ್ ಮಹಡಿ ಮೇಲೆ ಹೋಗಿ. ತನ್ನ ಗೆಳೆಯನೊಟ್ಟಿಗೆ ಮಾತನಾಡಲು ತೊಡಗುತ್ತಾನೆ.

    ರಾಜುಗೆ ಕರೆ ಮಾಡಿದ ವಿಕ್ರಾಂತ್

    ರಾಜುಗೆ ಕರೆ ಮಾಡಿದ ವಿಕ್ರಾಂತ್

    ನಾನು ಸ್ಪಂದನಾಗೆ ಪ್ರೀತಿಯಿಂದ ಗಿಫ್ಟ್ ತಂದಿದ್ದೆ ಆದರೆ ಅದೆಲ್ಲ ವೆಸ್ಟ್ ಆಗೋಯ್ತು ಆಕೆ ಅದನ್ನು ದೊಡಮ್ಮಗೆ ಕೊಟ್ಟಳು. ಮನೆಯವರು ಎಲ್ಲರೂ ಕೂಡಿ ನನಗೆ ಲೆಕ್ಚರ್ ಕೊಡುತ್ತಿದ್ದಾರೆ ಎಂದು ಆತನ ಬಳಿ ತನ್ನ ಮನದ ವೇದನೆಯನ್ನು ತೋಡಿಕೊಳ್ಳುತ್ತಾರೆ. ರಾಜು ಅವಳ ಮುಖ ಬಾವ ನೋಡಿ ನನಗೆ ತಿಳಿಯಿತು ಆ ಪೆಂಡೆಂಟ್ ಆಕೆಗೆ ಎಷ್ಟು ಇಷ್ಟ ಆಗಿದೆ ಎಂದು ಆದರೆ ದೊಡಮ್ಮನಿಗೆ ಕೊಟ್ಟು ಬಿಟ್ಟಳು. ಆದರೆ ಅವರಿಗೆ ಯಾಕೆ ಕೊಡಬೇಕಿತ್ತು ಎಂದು ಹುಸಿ ಮುನಿಸು ಹೊರಹಾಕುತ್ತಾರೆ.

    English summary
    Kannada serial Marali Manasagide written updated on 31th October episode. Know more about it.
    Monday, October 31, 2022, 18:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X