For Quick Alerts
  ALLOW NOTIFICATIONS  
  For Daily Alerts

  ಮಲೆನಾಡಲ್ಲಿ ಅರಳುತ್ತಾ ಸ್ಪಂದನ ವಿಕ್ರಾಂತ್ ಪ್ರೀತಿ

  By ಪೂರ್ವ
  |

  ವಿಕ್ರಾಂತ್, ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದ ಸ್ಪಂದನಾಳನ್ನು ನೋಡಿ ಬಹಳ ದುಃಖ ಪಡುತ್ತಾನೆ. ತನ್ನನ್ನು ಬಿಟ್ಟು ಹೋಗಬೇಡ ಎಂದು ಮನದಲ್ಲಿ ಹೇಳಿಕೊಳ್ಳುತ್ತಾ ಇರುತ್ತಾನೆ. ಆದರೆ ಸ್ಪಂದನಾ, ವಿಕ್ರಾಂತ್ ಮುಖ ನೋಡಿ ಕಣ್ಣೀರ ಧಾರೆ ಸುರಿಸುತ್ತಾರೆ. ವಿಕ್ರಾಂತ್ ಮನದಲ್ಲಿ ಸ್ಪಂದನ ಮಾಡಿದ ಸಹಾಯವನ್ನು ನೆನಪಿಸುತ್ತಾ ಇರುತ್ತಾನೆ.

  ಸ್ಪಂದನಾ ಏನೆಲ್ಲಾ ಸಹಾಯ ಮಾಡಿದಳು ತನಗೆ ಆರೋಗ್ಯ ಸರಿ ಇಲ್ಲದ ವೇಳೆ ಕೈ ಕಾಲುಗಳನ್ನು ಆಕೆಯೇ ತೊಳೆಯುತ್ತಾ ಇದ್ದಳು ಹೀಗೆ ಹಲವು ಕೆಲಸಗಳನ್ನು ಮಾಡಿದ್ದಾಳೆ ಎಂದುಕೊಳ್ಳುತ್ತಲೆ ತಾನು ಅವಳನ್ನು ಇದೀಗ ಪ್ರೀತಿ ಮಾಡುತ್ತಿರುವ ವಿಚಾರವೂ ಆತನಿಗೆ ಮನವರಿಕೆ ಆಗುತ್ತದೆ. ಈ ವೇಳೆ ಮನದಲ್ಲಿ ಸ್ಪಂದನಾ ಹೀಗನ್ನುತ್ತಾರೆ ಏಷ್ಟು ಚೆನ್ನಾಗಿ ಇತ್ತು ವಿಕ್ರಾಂತ್ ಸರ್ ಯಾಕೆ ಹೀಗೆ ಹಾಳು ಮಾಡಿ ಬಿಟ್ಟಿರಿ ಎಂದು ಹೇಳುತ್ತಾಳೆ.

  ಆದರೆ ವಿಕ್ರಾಂತ್ ಮಾತ್ರ ನನಗೆ ಒಂದೇ ಒಂದು ಅವಕಾಶ ಕೊಡು ಆಗಿದ್ದನ್ನೆಲ್ಲ ಸರಿ ಮಾಡಿ ಕೊಡುತ್ತೇನೆ. ಸ್ಪಂದನಾ ಎಂದು ಬೇಡಿಕೊಳ್ಳುತ್ತಾರೆ. ಈ ವೇಳೆ ವಿಕ್ರಾಂತ್ ಹೆಗಲ ಮೇಲೆ ಯಾರೋ ಕೈ ಇಟ್ಟ ಅನುಭವ ಆಗುತ್ತದೆ ಹಿಂದಿರುಗಿ ನೋಡಿದಾಗ ಅದು ರಾಜು ಆಗಿರುತ್ತಾನೆ. ರಾಜುವನ್ನು ತಬ್ಬಿಕೊಂಡ ವಿಕ್ರಾಂತ್ ಜೋರಾಗಿ ಅಳುತ್ತಾನೆ. ರಾಜು, ವಿಕ್ರಾಂತ್ ಬಳಿ ಏನೋ ಇದೆಲ್ಲ, ಯಾವಾಗ ಇಷ್ಟೆಲ್ಲ ನಡೆಯಿತು? ಯಾಕಾಗಿ ನಡೆಯಿತು? ಎಂದು ಕೇಳಿದಾಗ ವಿಕ್ರಾಂತ್ ಅಳುತ್ತಾ ಇದಕ್ಕೆಲ್ಲ ನಾನೇ ಕಾರಣ ನನ್ನಿಂದಲೇ ಈ ರೀತಿ ಆಯಿತು ಎಂದು ಬಹಳ ಬೇಸರದಿಂದ ಹೇಳುತ್ತಾನೆ.

  ರಾಜು ಬಳಿ ದುಃಖ ತೋಡಿಕೊಂಡ ವಿಕ್ರಾಂತ್

  ರಾಜು ಬಳಿ ದುಃಖ ತೋಡಿಕೊಂಡ ವಿಕ್ರಾಂತ್

  ಮನದಲ್ಲಿ ಅವಳ ಮೇಲಿದ್ದ ಪ್ರೀತಿ ಪೊಸೆಸಿವ್‌ನೆಸ್ ಆಗಿ ಬದಲಾದ ಕಾರಣ ಅವಳು ಈ ಸ್ಥಿತಿಯಲ್ಲಿ ಇದ್ದಾಳೆ ಎಂದು ಜೋರಾಗಿ ಅಳುತ್ತಾನೆ ವಿಕ್ರಾಂತ್. ಇದನ್ನು ನೋಡಿದ ರಾಜು ಬೇಸರ ಪಟ್ಟುಕೊಳ್ಳುತ್ತಾನೆ. ಎಲ್ಲಾ ವಿಚಾರಕ್ಕೂ ಒಂದು ಉತ್ತರ ಇದ್ದೆ ಇರುತ್ತದೆ. ಸಮಸ್ಯೆಗೆ ನಾವು ಪರಿಹಾರ ಕಂಡುಕೊಳ್ಳಬೇಕು ಅಷ್ಟೇ. ಈಗಲೂ ಕಾಲ ಮಿಂಚಿಲ್ಲ. ನಿನ್ನ ಮನದಲ್ಲಿ ಇರುವ ವಿಚಾರ ಸ್ಪಂದನಾಗೆ ಹೇಳು ಎಂದು ಸಲಹೆ ಕೊಡುತ್ತಾನೆ.

  ಬೇಗನೆ ಚೇತರಿಸಿಕೊಂಡ ಸ್ಪಂದನಾ

  ಬೇಗನೆ ಚೇತರಿಸಿಕೊಂಡ ಸ್ಪಂದನಾ

  ಇದನ್ನು ಕೇಳಿದ ವಿಕ್ರಾಂತ್ ಬಹಳ ದುಃಖದಿಂದ 'ಎಲ್ಲಾ ಮುಗಿದು ಹೋಯಿತು ರಾಜು. ಸ್ಪಂದನಾಗೆ ನನ್ನ ಮುಖ ನೋಡಲು ಇಷ್ಟ ಇಲ್ಲ ಹೇಗೆ ಹೇಳಲಿ ಇದೆಲ್ಲ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ಇನ್ನು ಸ್ಪಂದನಾ, ಬೇಗ ಚೇತರಿಸಿಕೊಳ್ಳುತ್ತಾಳೆ ಇದನ್ನು ನೋಡಿದ ಡಾಕ್ಟರ್ ಗೆ ಬಹಳ ಆಶ್ಚರ್ಯ ಆಗುತ್ತದೆ. ವಿಕ್ರಾಂತ್ ಮುಖ ನೋಡದ ಸ್ಪಂದನಾ ಬಳಿಗೆ ಬಂದ ವಿಕ್ರಾಂತ್ ಹೇಳುತ್ತಾನೆ. ಸ್ಪಂದನಾ ಇವತ್ತು ನಿನ್ನ ಡಿಸ್ಚಾರ್ಜ್ ಎಂದು ಹೇಳುತ್ತಾನೆ.

  ವಿಕ್ರಾಂತ್ ಜೊತೆ ಸ್ಪಂದನಾಗೆ ಆರತಿ

  ವಿಕ್ರಾಂತ್ ಜೊತೆ ಸ್ಪಂದನಾಗೆ ಆರತಿ

  ಬಳಿಕ ಡಾಕ್ಟರ್ ಮೆಡಿಸಿನ್ ಚೀಟಿ ಕೊಟ್ಟು ಅಲ್ಲಿಂದ ತೆರಳುತ್ತಾರೆ. ಮನೆಗೆ ಬಂದ ಸ್ಪಂದನಾಳನ್ನು ಬಹಳ ಪ್ರೀತಿಯಿಂದ ಕ್ಷೇಮ ಸಮಾಚಾರ ವಿಚಾರಣೆ ಮಾಡುತ್ತಾರೆ. ಸ್ಪಂದನಾಗೆ ಆರತಿ ಮಾಡುವ ವೇಳೆ ವಿಕ್ರಾಂತ್ ಅನ್ನು ನಿಲ್ಲಿಸಿ ಆರತಿ ಮಾಡುತ್ತಾರೆ. ಆದರೆ ವಿಕ್ರಾಂತ್ ಅದೆಷ್ಟೇ ಬೇಡ ಎಂದರು ವಿಕ್ರಾಂತ್ ದೊಡ್ಡಮ್ಮ ಮಾತ್ರ ನೀನು ಬಹಳ ನೋವು ಅನುಭವಿಸಿದ್ದೀಯಾ ವಿಕ್ರಾಂತ್ ಹೋಗಿ ಸ್ಪಂದನ ಪಕ್ಕಾ ನಿಲ್ಲು ಎಂದು ಹೇಳುತ್ತಾಳೆ ಇದನ್ನು ಕೇಳಿದ ವಿಕ್ರಾಂತ್ ಸ್ಪಂದನ ಪಕ್ಕಾ ನಿಲ್ಲುತ್ತಾನೆ.

  ಇಬ್ಬರೂ ಮಲೆನಾಡಿಗೆ ಟ್ರಿಪ್‌ಗೆ ತೆರಳಿದ್ದಾರೆ

  ಇಬ್ಬರೂ ಮಲೆನಾಡಿಗೆ ಟ್ರಿಪ್‌ಗೆ ತೆರಳಿದ್ದಾರೆ

  ಈ ವೇಳೆ ದೊಡ್ಡಮ್ಮ ನನ್ನು ಬಿಗಿದಪ್ಪಿ ಅಳುತ್ತಾಳೆ ಸ್ಪಂದನಾ. ದಿನ ಕಳೆದ ಹಾಗೆಯೇ ವಿಕ್ರಾಂತ್ ಪ್ರೀತಿ ಬಲೆಗೆ ಬಿದ್ದ ಸ್ಪಂದನ ಮಲೆನಾಡಿನ ಸೊಬಗನ್ನು ನೋಡಲು ಹೊರಟು ನಿಂತಿದ್ದಾರೆ. ಇದೀಗ ಸ್ಪಂದನ ವಿಕ್ರಾಂತ್ ಬಳಿ ಮನೆಯರಿಗೆ ಎನು ಹೇಳೋಣ ಎಂದು ಹೇಳುತ್ತ ಇರುತ್ತಾಳೆ ಇದನ್ನು ಕೇಳಿದ ವಿಕ್ರಾಂತ್ ನಗುತ್ತಾ ಮನೆಯವರ ವಿಚಾರ ನನಗೆ ಬಿಟ್ಟು ಬಿಡು ನೀನು ಒಪ್ಪಿಗೆ ಕೊಟ್ಟಿದೆ ಬಹಳ ದೊಡ್ಡದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಮನೆಯವರಿಗೆ ನೆಪ ಹೇಳಿ ಟ್ರಿಪ್ ಗೆ ಹೊರಡುತ್ತಾರೆ. ಸುಂದರವಾದ ಮಲೆನಾಡ ತಪ್ಪಲಲ್ಲಿ ಸ್ಪಂದನ ಜೊತೆ ಬಹಳ ಮನ ಬಿಚ್ಚಿ ಮಾತನಾಡುತ್ತಾನೆ ವಿಕ್ರಾಂತ್ . ಇನ್ನಾದರೂ ತನ್ನ ಪ್ರೀತಿಯನ್ನು ಸ್ಪಂದನ ಬಳಿ ಹೇಳಿಕೊಳ್ಳುತ್ತಾನ ವಿಕ್ರಾಂತ್ ಕಾದು ನೋಡಬೇಕಿದೆ.

  English summary
  Kannada serial Marali Manasagide written updated on 4th December episode. Know more about it.
  Monday, December 5, 2022, 22:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X