Muddu Manigalu: ಭೂಮಿ ಆರೋಗ್ಯದಲ್ಲಿ ಏರುಪೇರು; ಮುಂದೇನು ಮಾಡುತ್ತಾಳೆ ಜಾಹ್ನವಿ?
ಮುದ್ದು ಮಣಿಗಳು ಧಾರವಾಹಿ ನೋಡುಗರಲ್ಲಿ ಇನ್ನೂ ಕೂತೂಹಲ ಮೂಡುವ ಹಾಗೆ ಮಾಡುತ್ತಿದೆ. ಇದೀಗ ಲಕ್ಷ್ಮಿಯ ರೂಪದಲ್ಲಿ ಇರುವ ಜಾಹ್ನವಿ ಯಾರು ಎನ್ನುವುದು ಶಾರ್ವರಿಗೆ ತಿಳಿದು ಹೋಗಿದೆ. ಆ ಕಾರಣದಿಂದಾಗಿ ಶಾರ್ವರಿ ಕೊಂಚ ಚೇತರಿಸಿಕೊಳ್ಳುತ್ತಿರುವ ವೇಳೆ ಅಲ್ಲಿಗೆ ಜಾಹ್ನವಿ, ಭೂಮಿ ಹಾಗೂ ದೃಷ್ಟಿ ಬರುತ್ತಾರೆ.
ಜಾಹ್ನವಿಯನ್ನು ನೋಡಿ ಶಾರ್ವರಿಗೆ ಬಹಳ ಭಯ ಆಗುತ್ತದೆ. ಯಾಕೆಂದರೆ ಆಕೆ ಥೇಟ್ ಲಕ್ಷ್ಮೀ ತದ್ರೂಪಿಯೇ. ಇನ್ನು ಜಾಹ್ನವಿ ಶಾರ್ವರಿ ಬಳಿಗೆ ಹೋಗುತ್ತಾಳೆ. ಆಕೆ ಹತ್ತಿರ ಬರುತ್ತಿದ್ದ ಹಾಗೆಯೇ ಕೊಂಚ ದೂರ ಹೋಗಲು ಶಾರ್ವರಿ ನೋಡುತ್ತಾ ಇರುವ ವೇಳೆ ಜಾಹ್ನವಿ ನಗುತ್ತಾ ದೃಷ್ಟಿ ಬಳಿ ದೃಷ್ಟಿ ಇದೀಗ ಶಾರ್ವರಿ ಮೇಡಂ ಬಿಪಿ ಕೊಂಚ ಜಾಸ್ತಿ ಆಗಿರಬೇಕು ಚೆಕ್ ಮಾಡಿ ನೋಡು ಎಂದು ಹೇಳುತ್ತಾಳೆ.

ಇದನ್ನು ಕೇಳಿದ ಜಾಹ್ನವಿಗೆ ಕೋಪ ಬರುತ್ತದೆ. ಹಾಗೆಯೇ ಗಾಬರಿಯೂ ಆಗುತ್ತದೆ. ಆ ಬಳಿಕ ಶಾರ್ವರಿಗೆ ಲಕ್ಷ್ಮಿ ಮರು ಜನ್ಮ ಎತ್ತಿ ಬಂದಿದ್ದಾಳೆ, ಆಕೆಯೇ ಜಾಹ್ನವಿ ಎಂಬುವುದು ತಿಳಿಯುತ್ತದೆ. ಆ ಬಳಿಕ ಶಾರ್ವರಿ ಭೂಮಿ ಹಾಗೂ ದೃಷ್ಟಿ ಮೇಲೆ ಕಣ್ಣು ಇಟ್ಟಿರುತ್ತಾರೆ. ಆಕೆಗೆ ಭೂಮಿ ಯಾವಾಗ ಗರ್ಭಿಣಿ ಎಂದು ತಿಳಿಯುತ್ತದೋ ಆ ವೇಳೆಯಿಂದ ಹೇಗಾದರೂ ಮಾಡಿ ಆಕೆಯ ಮಗುವನ್ನು ಸಾಯಿಸಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.
ಊಟ ಎಲ್ಲಾ ಮಾಡಿದ ಬಳಿಕ ಮಾತ್ರೆ ತೆಗೆದುಕೊಳ್ಳುತ್ತಾಳೆ. ಆ ಬಳಿಕ ಆಕೆಗೆ ಹೊಟ್ಟೆ ನೋವು ಶುರು ಆಗುತ್ತದೆ. ಭೂಮಿಗೆ ಈ ಮೊದಲಿಗೆ ಬಹಳ ಅನುಮಾನ ಕಾಡಿರುತ್ತದೆ. ಯಾಕೆಂದರೆ ಆಕೆ ಮಾತ್ರೆಯನ್ನು ಓಪನ್ ಮಾಡಿರಲಿಲ್ಲ. ಅಲ್ಲಿ ನೋಡಿದರೆ ಮಾತ್ರೆ ಓಪನ್ ಆಗಿತ್ತು ಇದನ್ನು ನೋಡಿದ ಭೂಮಿ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾಳೆ. ಬಳಿಕ ಆ ಮಾತ್ರೆಯನ್ನು ನುಂಗಿಬಿಡುತ್ತಾಳೆ.
ಇನ್ನು ಭೂಮಿ ನರಳಾಟ ನೋಡಿ ಶಾರ್ವರಿ ತನ್ನ ಪ್ಲಾನ್ ಸಕ್ಸಸ್ ಆಯಿತು ಎಂದು ಬಹಳ ಖುಷಿ ಪಟ್ಟರೆ, ಭೂಮಿ ನರಳಾಟ ಕೇಳಿ ದೃಷ್ಟಿ ಬಹಳ ಆತಂಕ ವ್ಯಕ್ತ ಪಡಿಸುತ್ತಾಳೆ. ಭೂಮಿ ಆರೋಗ್ಯ ಹದಗೆಟ್ಟು ಹೋಗಿದೆ, ಈ ಸಮಯದಲ್ಲಿ ಗಂಡ ಹತ್ತಿರ ಇದ್ದು ಆರೋಗ್ಯ ವಿಚಾರಣೆ ಮಾಡುತ್ತಾ ಇದ್ದರೆ ಅದಕ್ಕಿಂತ ಉತ್ತಮವಾದುದು ಬೇರೆ ಇನ್ನೇನೂ ಇಲ್ಲ. ಇನ್ನು ಶ್ರವಣ್ ಆರೋಗ್ಯದಲ್ಲಿ ಕೊಂಚ ಗುಣ ಮುಖ ಆಗಿರುವ ಕಾರಣ ಆತ ಮನೆಗೆ ಬರುತ್ತಾನೆ.

ಇನ್ನು ಶಾರ್ವರಿ ಮಾತ್ರ ಹೇಗೆ ಇವರನ್ನೆಲ್ಲ ಮಟ್ಟ ಹಾಕುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ದೃಷ್ಟಿ ಗಂಡ ಶಾರ್ವರಿ ಜೊತೆ ಸೇರಿದ ಹಾಗೆ ನಾಟಕವಾಡಿ ಎಲ್ಲರ ಮನ ಮೆಚ್ಚಿಸುತ್ತಾ ಇರುತ್ತಾನೆ. ಆದರೆ ಇನ್ನೂ ಆತನ ನಾಟಕ ಶಾರ್ವರಿ ಮುಂದೆ ಬಯಲಾಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ಜಾಹ್ನವಿ ತಂದೆ ಮದುವೆ ಆಗು ಎಂದೆಲ್ಲ ಆಕೆಯನ್ನು ಪೀಡಿಸುತ್ತಾ ಇರುತ್ತಾನೆ. ಆದರೆ ಜಾಹ್ನವಿ ಮಾತ್ರ ಇಷ್ಟರವರೆಗೆ ತುಟಿ ಕಚ್ಚಿ ಕುಳಿತುಕೊಂಡು ಇರುತ್ತಾಳೆ. ಆದರೆ ಭೂಮಿಗೆ ಯಾವಾಗ ಹುಷಾರಿಲ್ಲ ಎಂದು ತಿಳಿಯಿತೋ ಆಗ ಜಾಹ್ನವಿ ತಂದೆಯ ಮಾತು ಕೇಳದೆ ಸೀದಾ ಹೋಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











