Muddu Manigalu: ಸ್ವಾಮೀಜಿ ಹೇಳಿದ ಭವಿಷ್ಯ ನಿಜ ಆಗುತ್ತಾ? ಮುದ್ದು ಮಣಿಗಳಿಗೆ ಆಕೆಯ ತಂದೆ ಸಿಕ್ಕಿಬಿಟ್ರಾ?

By Poorva

ಶಿವರಾತ್ರಿ ಹಬ್ಬದಂದು ಮುದ್ದುಮಣಿಗಳ ಆಸೆ, ಕನಸನ್ನು ಸಂಪೂರ್ಣಗೊಳ್ಳಲಿದೆ. ಸೃಷ್ಟಿ ಹಾಗೂ ಭೂಮಿಯ ಕನಸು ಎಂದು ನನಸಾಗಿ ಕಣ್ಣ ಮುಂದೆ ಬರಲಿದೆ ತನ್ನ ತಾಯಿಯನ್ನು ಯಾವತ್ತೋ ಕಳೆದುಕೊಂಡಿದ್ದೇವೆ, ಆದರೆ ಇನ್ನು ಮುಂದೆ ತಾಯಿ ಬರುವುದೇ ಇಲ್ಲ ಅಂದುಕೊಂಡಿದ್ದ ಇಬ್ಬರು ಮಕ್ಕಳಿಗೆ ತನ್ನ ತಾಯಿಯ ತದ್ರೂಪ ಇರುವ ಯುವತಿಯನ್ನು ನೋಡಿ ಆಶ್ಚರ್ಯ ಆಗುತ್ತದೆ. ಇದಕ್ಕಿಂತ ಮುಂಚೆ ಜಾಹ್ನವಿ ಬಳಿ ಸ್ವಾಮೀಜಿ ಬರುತ್ತಾರೆ.

ಜಾಹ್ನವಿ ಸ್ವಾಮೀಜಿ ಬಳಿ ಅದೆಷ್ಟು ಬಾರಿ ಕೇಳಿಕೊಂಡರೂ ಆವರು ಮಾತ್ರ ಜಾಹ್ನವಿಗೆ ಬಿಡಲೇ ಇಲ್ಲ. ಆಗ ಜಾಹ್ನವಿ ಬಳಿ ನನಗೆ ಜಾಗ ಕೊಡಿ ನಾನು ಹೋಗಬೇಕು ಎಂದಾಗ ಸ್ವಾಮೀಜಿ ಜಾಹ್ನವಿ ಬಳಿ ಹಿಂದಿನ ಜನ್ಮದ ನೆನಪನ್ನು ಮಾಡಿಕೊಳ್ಳಲು ಹೇಳುತ್ತಾರೆ. ಹಾಗೆಯೇ ಈಗಾಗಲೇ ಅನೇಕ ಬಾರಿ ಹೀಗೆ ಬೇರೆ ಸ್ವಾಮೀಜಿಗಳು ಹೇಳಿರುತ್ತಾರೆ. ಜಾಹ್ನವಿಗೆ ಕನಸಿನಲ್ಲಿ ಏನೇನೋ ಯೋಚನೆಗಳು ಬರುತ್ತಾ ಇರುತ್ತದೆ. ಹಿಂದಿನ ಜನುಮದ ಬಗ್ಗೆ ಏನಾದರೂ ಸ್ವಾಮೀಜಿ ಹೇಳುತ್ತ ಇರಬಹುದಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.

 Kannada serial Muddu Manigalu written update on 27th February

ಆದರೆ ಇದೆಲ್ಲದಕ್ಕೆ ಜಾಹ್ನವಿ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈ ಸ್ವಾಮೀಜಿ ಹಿಂದಿಯಲ್ಲಿ ಹೇಳುತ್ತ ಇರುವುದನ್ನು ಕೇಳಿದ ಜಾಹ್ನವಿಗೆ ಆಶ್ಚರ್ಯ ಆಗುತ್ತದೆ. ಮನದಲ್ಲಿ ತಳಮಳ ಹೆಚ್ಚಾಗುತ್ತದೆ. ನನ್ನಿಂದ ಏನು ಕೆಲಸ ಆಗಬೇಕಾಗಿದೆ ನಾನು ಯಾರಿಗೆ ಸಹಾಯ ಮಾಡಬೇಕಾಗಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುವ ವೇಳೆ ಸ್ವಾಮೀಜಿ ಅಲ್ಲಿಂದ ಹೋಗುತ್ತಾರೆ. ಅದನ್ನು ನೋಡಿದ ಜಾಹ್ನವಿ ಸ್ವಾಮೀಜಿಯನ್ನು ಎಷ್ಟೇ ಕರೆದರೂ ಅವರು ಮಾತ್ರ ಎನು ಹೇಳಿದರು ಕೇಳದೆ ಸುಮ್ಮನೆ ಇರುತ್ತಾರೆ.

ಇದನ್ನು ನೋಡಿದ ಜಾಹ್ನವಿ ಯೋಚನೆ ಮಾಡಿಕೊಂಡು ನಿಂತಿರುತ್ತಾಳೆ. ಶಿವರಾತ್ರಿಯ ದಿನ ಪವಾಡ ನಡೆಯುತ್ತದೆ ಎನ್ನುವುದಕ್ಕೆ ಇದೇ ನಿದರ್ಶನ. ಇನ್ನು ಭೂಮಿ ಹಾಗೂ ಸೃಷ್ಟಿ ಅದೇ ದೇವಾಲಯಕ್ಕೆ ಬರುತ್ತಾರೆ. ಬಳಿಕ ದೇವರ ದರ್ಶನವನ್ನು ಮಾಡಿ ದೀಪ ಬೆಳಗಿಸುತ್ತಾರೆ. ಸೃಷ್ಟಿ ತನ್ನ ಗಂಡ ಶಿವು ಜೊತೆ ಬಂದರೂ ಸೃಷ್ಟಿ ಮಾತ್ರ ಒಬ್ಬೊಂಟಿ ಆಗಿ ಬರುತ್ತಾಳೆ. ಬಂದು ದೇವರ ಮೂರ್ತಿಯನ್ನು ಮಣ್ಣಿನಲ್ಲಿ ಮಾಡುತ್ತಾ ಇರುವಾಗ ಜಾಹ್ನವಿ ತನ್ನ ಕುಟುಂಬದ ಜೊತೆ ದೇವಾಲಯಕ್ಕೆ ಆಗಮಿಸುತ್ತಾಳೆ.

ಇನ್ನು ದೇವಾಲಯಕ್ಕೆ ಮೊದಲು ಭೇಟಿ ನೀಡಿರುವುದು ಆಕೆ ಅತ್ತೆ ಮಾವ. ಅವರಿಬ್ಬರೂ ಎಲ್ಲಿ ಎಂದು ಹುಡುಕುತ್ತಾ ಇರಬೇಕಾದರೆ ಅತ್ತೆ ಎಂದು ಕರೆದ ಶಬ್ದ ಆಗುತ್ತದೆ. ತನ್ನ ತಾಯಿಯ ಧ್ವನಿಯನ್ನು ಕೇಳಿ ಸೃಷ್ಟಿ ಭೂಮಿ ಒಮ್ಮೆ ಅವಕ್ಕಾಗುತ್ತಾರೆ. ಯಾರು ಇರಬಹುದು ಹೀಗೆ ನಮ್ಮನ್ನು ಕರೆದಿದ್ದು ಅಮ್ಮನ ಧ್ವನಿ ಇದ್ದ ಹಾಗೆ ಇದೆಯಲ್ಲ ಎಂದೆಲ್ಲ ಯೋಚನೆ ಮಾಡಿಕೊಂಡು ಇರುತ್ತಾಳೆ. ಇನ್ನು ಜಾಹ್ನವಿ ದೇವಾಲಯದಲ್ಲಿ ದೇವರ ದರ್ಶನ ಪಡೆದು ದೇವರ ಬಳಿ ಬೇಡಿಕೊಳ್ಳುತ್ತಾಳೆ. ಶಿವ ರಾತ್ರಿ ಆದ ಕಾರಣ ದೇವಾಲಯಕ್ಕೆ ಸಹಸ್ರಾರು ಜನರು ಬರುತ್ತಾರೆ.

 Kannada serial Muddu Manigalu written update on 27th February

ಇನ್ನು ಸೃಷ್ಟಿ ಹಾಗೂ ದೃಷ್ಟಿ ಶಿವು ಜೈಲಿಂದ ಹೊರಗೆ ಬರಬೇಕು ಹಾಗೆ ಶ್ರವಣ್ ಆದಷ್ಟು ಬೇಗ ಹುಷಾರ್ ಆಗಿ ಇರಬೇಕು ಎನ್ನುವ ನಿಟ್ಟಿನಲ್ಲಿ ವ್ರತ ಮಾಡುತ್ತಾ ಇದ್ದಾರೆ. ಹಾಗೆಯೇ ಶಿವು ಜೈಲಿನಿಂದ ಬಿಡುಗಡೆ ಆಗಿ ಸೃಷ್ಟಿ ಮುಂದೆ ಬರುತ್ತಾನೆ. ಇದನ್ನು ಕಂಡ ಸೃಷ್ಟಿ ಬಹಳ ಖುಷಿ ಪಡುತ್ತಾಳೆ . ಬಳಿಕ ಇಬ್ಬರೂ ಸೇರಿ ದೇವರ ಪೂಜೆ ಮಾಡುತ್ತಾರೆ. ಇನ್ನು ಭೂಮಿ ಮಾತ್ರ ಒಂಟಿ ಆಗಿ ದೇವರ ಕೆಲಸಗಳನ್ನು ಮಾಡುತ್ತಾ ದೇವರ ಬಳಿ ಬೇಡಿಕೊಳ್ಳುತ್ತಾಳೆ. ತಾಯಿ ಇಲ್ಲದ ತಬ್ಬಲಿ ಮೇಲೆ ನಿನಗೆ ಯಾಕೆ ಅಷ್ಟು ಕೋಪ ಎಂದೆಲ್ಲ ಮಾತನಾಡುತ್ತಾ ಇರುತ್ತಾಳೆ. ಇನ್ನು ಜಾಹ್ನವಿ ಮುದ್ದು ಮಣಿಗಳಿಗೆ ಎಂದು ಕಾಣಸಿಗುತ್ತಾರೆ ಮುಂದೇನು ಕಾದು ನೋಡಬೇಕಿದೆ .

More from Filmibeat

English summary
Kannada serial muddu msnigalu written updated on 27th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X