Muddu Manigalu: ಲಕ್ಷ್ಮಿಯ ತದ್ರೂಪ ಜಾಹ್ನವಿ ಎಂದು ಶಾರ್ವರಿಗೆ ತಿಳಿಯುತ್ತಾ?

By ಪೂರ್ವ

ಮುದ್ದುಮಣಿಗಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಭೂಮಿ ಶಾರ್ವರಿ ಬಳಿ ಜೋರಾಗಿಯೇ ಮಾತನಾಡುತ್ತಾ ಇರುತ್ತಾಳೆ. ಜೊತೆಗೆ ಸವಾಲು ಹಾಕುತ್ತಾಳೆ. ಆದರೆ ಇದೆಲ್ಲವನ್ನೂ ಕೇಳಿಸಿಕೊಂಡ ಶಾರ್ವರಿ ಭೂಮಿ ವಿರುದ್ದ ಕಿಡಿ ಕಾರುತ್ತ ಇರುತ್ತಾಳೆ. ನನ್ನ ಮನೆಯಿಂದ ಹೊರ ಹೋಗು ಎಂದು ಭೂಮಿಗೆ ಶಾರ್ವರಿ ಹೇಳಿದಾಗ ಅದನ್ನ ಕೇಳಿಸಿಕೊಂಡ ಭೂಮಿ ಆಕೆಯ ಮನೆಯಿಂದ ಹೋದಾಗ ಕೋಪಗೊಂಡ ಶಾರ್ವರಿ ಶಿವುನನ್ನು ಜೋರಾಗಿ ಕರೆಯುತ್ತಾಳೆ.

ಆ ಕ್ಷಣ ಶಿವು ಆ ಮನೆಯಲ್ಲಿ ಇರುವುದಿಲ್ಲ. ಆತ ಬೇರೆ ಕೆಲಸದ ಮೇಲೆ ಹೋಗಿರುತ್ತಾನೆ. ಇನ್ನು ಶಾರ್ವರಿ ಮನದಲ್ಲಿ ಯೋಚನೆ ಮಾಡುತ್ತಾಳೆ. ಭೂಮಿ ಏನೋ ಮನದಲ್ಲಿ ದೊಡ್ಡ ಪ್ಲಾನ್ ಮಾಡಿಕೊಂಡೆ ಬಂದಿದ್ದಾಳೆ. ಆದರೆ ಏನು ಹೇಳದೆ ಸುಮ್ಮನೆ ಇರುತ್ತಿದ್ದಾಳೆ ಎಂದು ಹೇಳಿಕೊಂಡು ಈ ಬಾರಿ ನಾನು ಬಹಳ ಜಾಗರೂಕತೆಯಿಂದ ಇರಬೇಕು ಇಲ್ಲವಾದರೆ ಬಹಳ ಕಷ್ಟ ಇದೆ ಎಂದು ಎಂದುಕೊಳ್ತಾಳೆ.

 Kannada serial Muddu Manigalu written update on 27th March

ಇನ್ನು ಶಿವು ಶಾರ್ವರಿ ಮಾತು ಕೇಳಿ ಸೃಷ್ಟಿಗೆ ಕೊಡಬಾರದ ನೋವು ಕೊಡುತ್ತಾನೆ. ಆದರೆ ಹಬ್ಬದ ದಿನ ಆಕೆಗೆ ಉಡುಗೊರೆಗಳ ಮೇಲೆ ಉಡುಗೊರೆ ಸಿಕ್ಕಿದಾಗ ಸೃಷ್ಟಿ ಬಹಳ ಖುಷಿ ಪಡುತ್ತಾಳೆ. ಆದರೆ ಶಿವು ಎದುರಿಗೆ ಇಲ್ಲದೆ ಇರುವಾಗ ಸೃಷ್ಟಿ ಬಹಳ ಖುಷಿ ಪಡುತ್ತಾ ಇರುತ್ತಾಳೆ. ಅದೇ ಶಿವು ಎದುರಿಗೆ ಬಂದರೆ ಮಾತ್ರ ಐ ಹೇಟ್ ಯು ಎಂದು ಹೇಳುತ್ತ ಸುಮ್ಮನೆ ಇರುತ್ತಾಳೆ. ಹುಸಿ ಕೋಪ ಮಾಡಿಕೊಳ್ತಾಳೆ.

ಇನ್ನು ಶಿವು ಸೃಷ್ಟಿ ಬಳಿ ತನ್ನ ತಪ್ಪಿನ ಅರಿವಾಗಿ ಬೇಡಿಕೊಳ್ಳುತ್ತಾನೆ. ಸೃಷ್ಟಿ ನನ್ನ ಕ್ಷಮಿಸು ಎಂದು ಹೇಳುತ್ತ ಇರುತ್ತಾನೆ. ಬಳಿಕ ಆಕೆಗೆ ಸೀರೆಯನ್ನು ಕೊಡುತ್ತಾನೆ. ಇನ್ನು ಭೂಮಿ ಗರ್ಭಿಣಿ ಎಂಬ ವಿಚಾರ ಯಾರಿಗೂ ತಿಳಿದೇ ಇಲ್ಲ, ಆದರೆ ಆಕೆ ಒಬ್ಬೊಂಟಿಯಾಗಿ ಮಾತನಾಡುತ್ತಾ ಇರುವುದನ್ನು ಶಾರ್ವರಿ ಏಜೆಂಟ್ ಕದ್ದು ಕೇಳಿಸಿಕೊಂಡಿರುತ್ತಾಳೆ. ಆಕೆಯ ಬಳಿ ಎಷ್ಟೇ ರಿಕ್ವೆಸ್ಟ್ ಮಾಡಿಕೊಂಡರೂ ಆಕೆ ಮಾತ್ರ ಅದನ್ನು ಕೆಲಿಸಿಕೊಳ್ಳದೇ ಯಾರ ಮಾತನ್ನೂ ಲೆಕ್ಕಿಸದೆ ಶಾರ್ವರಿ ಬಳಿ ಹೇಳಲು ಹೋದಾಗ ಕಾಲು ಮುರಿದುಕೊಳ್ಳುತ್ತಾಳೆ.

ಇನ್ನು ಶಿವು ಮತ್ತು ಸೃಷ್ಟಿ ಬಹಳ ರೊಮ್ಯಾಂಟಿಕ್ ಆಗಿ ಇರುತ್ತಾರೆ. ಶಿವು ಸೃಷ್ಟಿಗೆ ಸೀರೆಯನ್ನು ಉಡಿಸುತ್ತ ಇರುತ್ತಾನೆ. ಇದರಿಂದ ಸೃಷ್ಟಿಗೆ ನಾಚಿಕೆ ಆದರೂ ಸೃಷ್ಟಿ ನಾಚಿ ನೀರಾಗಿದ್ದಳು. ಆ ಬಳಿಕ ಅಲ್ಲಿಗೆ ಜಾಹ್ನವಿ ಬರುತ್ತಾಳೆ. ಜಾಹ್ನವಿ ಬರುತ್ತಾ ಇದ್ದ ಹಾಗೆಯೇ ಸೃಷ್ಟಿ ಅಡಗಿ ಕುಳಿತುಕೊಳ್ತಾಳೆ. ಆ ಕೂಡಲೇ ಜಾಹ್ನವಿ ನಾನು ಏನು ನೋಡಿಲ್ಲ ಎಂದು ಓಡಿ ಹೋಗುತ್ತಾಳೆ. ಇನ್ನು ಶಾರ್ವರಿಯನ್ನು ಸಖತ್ ಆಗಿ ಆಟ ಆಡಿಸುತ್ತಾ ಇದ್ದಾಳೆ ಜಾಹ್ನವಿ.

 Kannada serial Muddu Manigalu written update on 27th March

ರಾತ್ರಿ ಹೊತ್ತಿನಲ್ಲಿ ಡೋರ್ ಪಟಾರ್ ಎಂದು ಹಾಕುವ ಹಾಗೆ ಸೌಂಡ್ ಬರುತ್ತಾ ಇರುತ್ತದೆ. ನಿದ್ದೆಯಿಂದ ಎದ್ದ ಶಾರ್ವರಿ ಮೆತ್ತಗೆ ನಾನು ಡೋರ್ ಕ್ಲೋಸ್ ಮಾಡಿದ್ದೆ, ಆದರೆ ಅದು ಹೇಗೆ ಕ್ಲೋಸ್ ಆಯಿತು ಎಂದು ಎದ್ದು ನೋಡುತ್ತಾಳೆ. ಇನ್ನು ಜಾಹ್ನವಿ ಹಾಗೂ ಸೃಷ್ಟಿ ಗುರಿ ಒಂದೇ ಶಾರ್ವರಿ ಹುಚ್ಚಿ ಆಗಿ ಓಡಾಡಿಕೊಂಡು ಇರಬೇಕು, ಆಕೆಗೆ ಎಲ್ಲೂ ನೆಮ್ಮದಿ ಸಿಗಬಾರದು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ. ಸೃಷ್ಟಿಗೆ ಯಾಕೆ ಶಾರ್ವರಿ ಮೇಲೆ ಕೋಪ ಎಂದರೆ ತನ್ನ ತಾಯಿಯ ದುರಂತ ಅಂತ್ಯಕ್ಕೆ ಶಾರ್ವರಿ ಕಾರಣ ಆ ಕಾರಣಕ್ಕೆ ಸೃಷ್ಟಿಗೆ ಬಹಳ ಕೋಪ. ಜೊತೆಗೆ ಅಕ್ಕ ತಂಗಿ ಇದ್ದಾಗ ಅವರಿಬ್ಬರನ್ನು ಬೇರೆ ಬೇರೆ ಮಾಡಿದ್ದಾಳೆ. ಆ ಕೋಪ ಕೂಡ ಶಾರ್ವರಿ ಮೇಲೆ ಇದೆ. ಮುಂದೇನು ಕಾದು ನೋಡಬೇಕಿದೆ .

More from Filmibeat

English summary
Kannada serial muddu msaigalu written updated on 27th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X