ದೃಷ್ಟಿ-ಸೃಷ್ಟಿ ಮಧ್ಯ ಬಂದ ಶಾರ್ವರಿ: ಮುಂದೇನು ಮಾಡುತ್ತಾರೆ ಅಕ್ಕ-ತಂಗಿ?

By ಪೂರ್ವ

'ಮುದ್ದು ಮಣಿಗಳು' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಗೆಲ್ಲುತ್ತಿದೆ. ಇದೀಗ ಶಿವುಗೆ ಕೆಲಸ ಸಿಕ್ಕಿತು ಎಂದು ಖುಷಿಯಿಂದ ಮನೆಗೆ ಓಡೋಡಿ ಬರುತ್ತಾನೆ. ಖುಷಿಯಿಂದ ಮನೆಯವರಿಗೆ ಎಲ್ಲರಿಗೂ ಸ್ವೀಟ್ ತಿನ್ನಿಸುತ್ತಾನೆ. ದೃಷ್ಟಿಯನ್ನು ತಬ್ಬಿಕೊಂಡು ಮನೆ ತುಂಬಾ ಸುತ್ತುತ್ತಾ 'ನನಗೆ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಸಿಕ್ಕಿದೆ' ಎನ್ನುತ್ತಾನೆ ಇದನ್ನು ಕೇಳಿದ ಎಲ್ಲರೂ ಖುಷಿ ಪಡುತ್ತಾರೆ. ದೃಷ್ಟಿಯನ್ನು ಎತ್ತಿ ಸುತ್ತಿಸುತ್ತಿರುವ ವೇಳೆ ಇದನ್ನು ನೋಡಿದ ಪರಮೇಶಿ, ಪೂರ್ವಿ, ಶಿವುನ ಕಿಂಡಲ್ ಮಾಡುತ್ತಾನೆ. ಇದನ್ನು ಕೇಳಿ ಶಿವು ನಾಚಿ ನೀರಾಗುತ್ತಾನೆ.

ಆ ವೇಳೆ ಟ್ರಾವೆಲ್ ಏಜೆನ್ಸಿ ಅವರೇ ಕರೆ ಮಾಡಿ, ನಿಮಗೆ ಕೆಲಸ ಇಲ್ಲ, ಒಂದು ಗಾಡಿ ಇತ್ತು ಆದರೆ ಅದು ಬೇರೆಯವರಿಗೆ ಬುಕ್ ಆಗಿದೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಶಿವುಗೆ ಆಘಾತ ಆಗುತ್ತದೆ ತಾನು ಕೆಲಸವನ್ನು ಇನ್ನೇನು ಶುರು ಮಾಡಬೇಕು ಅಂದುಕೊಳ್ಳುತ್ತಾ ಇರುವ ವೇಳೆ ಈ ರೀತಿ ಅಚಾತುರ್ಯ ಆಗಿ ಹೋಯಿತಲ್ಲ ಎಂದು ಯೋಚನೆ ಮಾಡುತ್ತಾನೆ. ಈ ವಿಚಾರವನ್ನು ಅಲ್ಲಿ ಯಾರ ಬಳಿಯೂ ಹೇಳದೆ ಅಲ್ಲಿಂದ ರೂಮಿನ ಒಳಗೆ ಹೋಗುತ್ತಾನೆ ಇದನ್ನು ಕಂಡ ದೃಷ್ಟಿ ಆತನನ್ನು ಹಿಂಬಾಲಿಸುತ್ತಾಳೆ.

ನಡೆದ ಎಲ್ಲಾ ವಿಚಾರವನ್ನು ಆಕೆಯ ಬಳಿ ಹೇಳುತ್ತಾನೆ. ಆದರೆ ದೃಷ್ಟಿ, ಶಿವುಗೆ ಆ ವೇಳೆಯಲ್ಲಿ ಸಾಂತ್ವನ ಹೇಳಿ ಶಿವುಗೆ ಉತ್ತಮ ಐಡಿಯಾ ಕೊಟ್ಟು ಆತನನ್ನೇ ಕಾರು ಖರೀದಿಸಲು ಹೇಳಿ ಅದಕ್ಕೆ ನೀವೇ ಡ್ರೈವ್ ಮಾಡಬಹುದು ಅಲ್ವಾ ಎಂದು ಶಿವು ಬಳಿ ಹೇಳಿದಾಗ, ಕಾರು ತೆಗೆಯಲು ಕೈಯಲ್ಲಿ ಬಿಡಿ ಗಾಸು ಇಲ್ಲ ಹೇಗೆ ನಾನು ಕಾರು ಖರೀದಿಸಲಿ ಎಂದು ಹೇಳುವ ಪ್ರಶ್ನೆಗೆ ದಿಟ್ಟವಾಗಿ ಉತ್ತರಿಸಿದ ದೃಷ್ಟಿ ಅರಶಿನ ದಾರವನ್ನು ನನ್ನ ಕುತ್ತಿಗೆಗೆ ಕಟ್ಟಿ ನಾನು ಕತ್ತಲ್ಲಿದ್ದ ಮಾಂಗಲ್ಯವನ್ನು ಕೊಡುತ್ತೇನೆ ಎಂದು ಹೇಳುತ್ತಾಳೆ.

ಕತ್ತಲ್ಲಿ ಇದ್ದ ಮಾಂಗಲ್ಯ ಕೊಟ್ಟ ದೃಷ್ಟಿ

ಕತ್ತಲ್ಲಿ ಇದ್ದ ಮಾಂಗಲ್ಯ ಕೊಟ್ಟ ದೃಷ್ಟಿ

ಆದರೆ ಈ ಮಾತಿಗೆ ಒಪ್ಪದ ಶಿವು ದೃಷ್ಟಿ ಮಾತನ್ನು ತಿರಸ್ಕರಿಸುತ್ತಾನೆ. ಬಳಿಕ ದೃಷ್ಟಿ ಒತ್ತಾಯ ಪೂರ್ವಕವಾಗಿ ಅರಶಿನ ದಾರವನ್ನು ಕಟ್ಟಿಸಿಕೊಂಡು ಚಿನ್ನದ ಮಾಂಗಲ್ಯ ಸರವನ್ನು ಕೊಡುತ್ತಾನೆ ಇದನ್ನು ನೋಡಿದ ಶಿವು ಗೆ ಬಹಳ ಬೇಸರ ಆಗುತ್ತದೆ. 'ನಿನಗೆ ನಾನು ಇನ್ನಷ್ಟು ಬಂಗಾರವನ್ನು ತಂದು ಕೊಡುತ್ತೇನೆ. ನನ್ನ ಕೆಲಸ ಉತ್ತಮವಾಗಿ ಮಾಡಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ' ಎಂದು ಹೇಳುತ್ತಾನೆ. ಇದನ್ನು ಕೇಳಿ ದೃಷ್ಟಿಗೆ ಖುಷಿ ಆಗುತ್ತದೆ. ಬಳಿಕ ಹೊಸ ಕಾರು ಖರೀದಿಸಲು ಹೋಗುತ್ತಾನೆ.

ಕತ್ತಲ್ಲಿ ಚಿನ್ನದ ಸರ ಇಲ್ಲದನ್ನು ನೋಡಿ ಪ್ರಶ್ನೆ ಮಾಡಿದ ಪೂರ್ವಿ

ಕತ್ತಲ್ಲಿ ಚಿನ್ನದ ಸರ ಇಲ್ಲದನ್ನು ನೋಡಿ ಪ್ರಶ್ನೆ ಮಾಡಿದ ಪೂರ್ವಿ

ಇನ್ನು ದೃಷ್ಟಿ ಮಾತ್ರ ಶಿವುಗೆ ಕಾಯುತ್ತಾ ಇರುತ್ತಾಳೆ. ಆದರೆ ಪೂರ್ವಿ, ದೃಷ್ಟಿ ಕತ್ತಲ್ಲಿ ಚಿನ್ನದ ಸರ ಇಲ್ಲದನ್ನು ಗಮನಿಸಿ ಆಕೆಯ ಬಳಿ ಕೇಳಲು ಮುಂದಾದಾಗ ಶಿವು ಕಾರಿನ ಹಾರ್ನ್ ಸದ್ದು ಮಾಡುತ್ತಾ ಬರುತ್ತಾನೆ. ಇದನ್ನು ನೋಡಿದ ದೃಷ್ಟಿ ಮನೆ ಜೊತೆಗೆ ಓಡುತ್ತಾಳೆ. ಶಿವು ತಂದ ಹೊಸ ಕಾರನ್ನು ಬಹಳ ಆದರದಿಂದ ಸ್ವಾಗತ ಮಾಡುತ್ತಾಳೆ. ಜೊತೆಗೆ ಸೃಷ್ಟಿಗೆ ಕರೆ ಮಾಡಿ ದೇವಾಲಯದಲ್ಲಿ ಕಾರಿಗೆ ಪೂಜೆ ಇದೆ ಆ ಕಾರಣ ನೀವು ಬರಲೇ ಬೇಕು ಎಂದು ಹೇಳುತ್ತಾಳೆ. ದೇವಾಲಯಕ್ಕೆ ತೆರಳಿದ ದೃಷ್ಟಿ ಶಿವು ಸೃಷ್ಟಿ ಗೆ ಕಾಯುತ್ತಾರೆ.

ಸೃಷ್ಟಿ-ದೃಷ್ಟಿಗೆ ಕಾರು ಅಪಘಾತ?

ಸೃಷ್ಟಿ-ದೃಷ್ಟಿಗೆ ಕಾರು ಅಪಘಾತ?

ಸೃಷ್ಟಿ ಬಾರದೆ ಪೂಜೆ ಮಾಡುವುದು ಬೇಡ ಎಂದು ಹೇಳುತ್ತಾಳೆ. ಇದನ್ನು ಒಪ್ಪಿದ ಶಿವು, ಸೃಷ್ಟಿಗಾಗಿ ಕಾಯುತ್ತಾರೆ. ಸೃಷ್ಟಿ ಮನೆಯಲ್ಲಿ ದೃಷ್ಟಿಯನ್ನು ಕಾಣುವುದಕ್ಕೆ ಲಘು ಬಗೆಯಿಂದ ಕೆಲಸಮಾಡಿ ತನ್ನ ಗಂಡನ ಜೊತೆ ಕಾರಿನಲ್ಲಿ ದೇವಾಲಯಕ್ಕೆ ಬರುತ್ತಾಳೆ. ಶಿವು ಹಾಗೂ ಆತನ ತಮ್ಮ ಶತ್ರುಗಳ ತರ ಆಡುವುದರಿಂದ ಒಬ್ಬರಿಗೊಬ್ಬರು ಮುಖ ನೋಡದೆ ನಿಂತಿರುತ್ತಾರೆ. ಇದನ್ನು ನೋಡಿದ ದೃಷ್ಟಿ, ಸೃಷ್ಟಿ ಸುಮ್ಮನಾಗುತ್ತಾರೆ. ಆದರೆ ಸೃಷ್ಟಿಯನ್ನು ನೋಡಿದ ದೃಷ್ಟಿ ದೇವಾಲಯದ ಬಳಿಯಿಂದ ಓಡಿಕೊಂಡು ಬರುತ್ತಾಳೆ ಇದನ್ನು ನೋಡಿದ ಸೃಷ್ಟಿ ಕೂಡ ಬರುತ್ತಾಳೆ. ಆ ವೇಳೆ ವೇಗವಾಗಿ ಬಂದ ಕಾರು ನೋಡಿ ದೃಷ್ಟಿ ಶಾಕ್ ಆಗುತ್ತಾಳೆ. ಹಾಗಾದರೆ ಆ ವೇಗದ ಕಾರಿನಲ್ಲಿ ಬಂದದ್ದಾದರೂ ಯಾರು? ಕಾದು ನೋಡಬೇಕಿದೆ.

More from Filmibeat

English summary
Kannada serial Muddu Manigalu written updated on 27th November episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X