ಮುದ್ದು ಮಣಿಗಳು: ದೃಷ್ಟಿ-ಭೂಮಿಕಾ ನಡುವೆ ಸಂವಾದ

By ಪೂರ್ವ

'ಮುದ್ದು ಮಣಿಗಳು' ಧಾರವಾಹಿ ಸಖತ್ ಆಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವಂತೆ ಮಾಡುತ್ತಿದೆ. ಮುದ್ದು ಮಣಿಗಳ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ದೀಪಾವಳಿ ಹಬ್ಬವು ಸಖತ್ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಆದರೆ ಅಕ್ಕ ತಂಗಿ ಇದೀಗ ಮಗು ವಿಚಾರಕ್ಕೆ ಪುನಃ ಕ್ಯಾತೆ ತೆಗೆದಿದ್ದಾರೆ. ಇದೀಗ ದೃಷ್ಟಿ ಭೂಮಿ ಬಳಿ ನೀನೆ ಮೊದಲು ಮಗುವಿಗೆ ತಾಯಿ ಆಗಬೇಕು ಬಳಿಕ ನಾನು ಆಗುತ್ತೇನೆ. ನಿನ್ನ ಮಗುವನ್ನು ಎತ್ತಿ ಆಡಿಸಬೇಕು ಎಂದು ಆಸೆ ಆಗಿದೆ ಹಾಗೆಯೇ ಆ ಮಗು ನನ್ನ ಅಮ್ಮ ಆಗಿರುತ್ತಾಳೆ.

ಅದಕ್ಕಾಗಿ ನೀನೆ ಮೊದಲು ತಾಯಿ ಆಗಬೇಕು ಎಂದು ಹೇಳಿದಾಗ ಭೂಮಿ ಮಾತ್ರ ಇಲ್ಲ ಅಕ್ಕ ನೀನೆ ಮೊದಲು ತಾಯಿ ಆಗಬೇಕು ಬಳಿಕ ನಿನ್ನ ಬೆನ್ನ ಹಿಂದೆ ನಾನು ತಾಯಿ ಆಗುತ್ತೇನೆ. ನಿನಗೆ ನಿನ್ನ ನಗು ಹೊಟ್ಟಿದಾಗ ತಾಯಿ ಹುಟ್ಟಿದ ಅನುಭವ ಆಗುತ್ತದೆ ಹಾಗೆಯೇ ಆಕೆ ನಿನ್ನ ಜೊತೆ ಇದ್ದಾ ಹಾಗೆಯೂ ಆಗುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದಾಗ ದೃಷ್ಟಿ ಕೊಂಚ ಅಳುತ್ತಾಳೆ ಆದರೆ ಭೂಮಿಗೆ ತಿಳಿಯಬಾರದು ಎಂದು ತನ್ನ ಕಣ್ಣೀರನ್ನು ಅದುಮಿ ಹಿಡಿದುಕೊಂಡು ನಗು ಮುಖ ತೋರುತ್ತಾಳೆ. ಬಳಿಕ ಭೂಮಿ ಹಿಂದೆ ದೃಷ್ಟಿ ಮನೆಯತ್ತ ಹೆಜ್ಜೆ ಹಾಕುತ್ತಾಳೆ.

ಖಾಸಗಿ ವಿಷಯ ಎಂದ ಭೂಮಿ

ಖಾಸಗಿ ವಿಷಯ ಎಂದ ಭೂಮಿ

ದೃಷ್ಟಿ ಹಾಗೂ ಭೂಮಿಯನ್ನು ಕಾಯುತ್ತಾ ಇದ್ದ ಶಿವು ಹಾಗೂ ಶ್ರವಣ್ ಅವರಿಬ್ಬರೂ ಬಂದ ವೇಳೆ ನೀವಿಬ್ಬರೂ ಇಲ್ಲಿಗೆ ಹೋಗಿದ್ದೀರಿ ಎಂದು ಕೇಳುತ್ತಾರೆ. ನಿಮ್ಮ ದಾರಿ ಕಾಯುತ್ತಿದ್ದೆವು ನಾವು. ನಿಮ್ಮಿಬ್ಬರದ್ದು ಪರ್ಸನಲ್ ವಿಷಯ ಏನಿರುತ್ತದೆ ಎಂದು ಹೇಳುತ್ತಾರೆ ಇದನ್ನು ಕೇಳಿದ ಭೂಮಿ, ಕೆಲವೊಂದು ಒಳ್ಳೆ ವಿಚಾರವನ್ನು ಪರ್ಸ್ನಲ್ ಆಗಿ ಮಾತನಾಡಬೇಕು ಎಂದು ನಗುತ್ತಾ ಹೇಳುತ್ತಾಳೆ. ಆದರೆ ಶಿವು ದೃಷ್ಟಿ ಮುಖ ನೋಡಿ ದೃಷ್ಟಿ ಯಾಕೆ ಹೀಗೆ ಇದ್ದೀಯಾ ಏನಾಯ್ತು ಎಂದು ಕೇಳಿದಾಗ ಸುಮ್ಮನೆ ಕುಳಿತು ಇರುವ ವೇಳೆ ಭೂಮಿ ಹೇಳುತ್ತಾಳೆ ಹೂ ಖುಷಿ ವಿಚಾರಣೆ. ನೀವು ನಿಧಾನಕ್ಕೆ ಹೇಳಿದರೆ ನಮಗೆ ತಿಳಿಯುವುದಿಲ್ಲ ಎಂದುಕೊಂಡು ಇದ್ದೀರಾ ಎಂದಾಗ ಶಿವು ನಾಚಿಕೊಳ್ಳುತ್ತಾನೆ.

ಭೂಮಿ ಮಾತಿಗೆ ಬೇಸರಿಸಿಕೊಂಡ ದೃಷ್ಟಿ

ಭೂಮಿ ಮಾತಿಗೆ ಬೇಸರಿಸಿಕೊಂಡ ದೃಷ್ಟಿ

ಆ ವೇಳೆ ಮಾತು ತಿರುಗಿಸಿದ ದೃಷ್ಟಿ ಹಬ್ಬದ ತಯಾರಿ ಬಗ್ಗೆ ಮಾತನಾಡುತ್ತಾಳೆ. ಬಳಿಕ ಎಲ್ಲರೂ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲು ಹೋಗುತ್ತಾರೆ. ದೀಪಾವಳಿ ಹಬ್ಬದಂದು ದೀಪ ಹಚ್ಚುವುದು ಎಂದರೆ ಎಲ್ಲಿಲ್ಲದ ಖುಷಿ. ಆಗ ಖುಷಿಯಿಂದ ಭೂಮಿ ಅಕ್ಕನ ಕಾಲು ಎಳೆಯುತ್ತಾ ಇರುತ್ತಾಳೆ. ನೋಡಿದ್ದೀಯಾ ಅಕ್ಕ ನೀನು ಆಗಲೇ ದೀಪ ಹಚ್ಚಲು ರೆಡಿ ಆಗುತ್ತಾ ಇದ್ದೀಯ. ನಮ್ಮ ಮನೆಗೆ ಬೆಳಕು ಆಗೋದನ್ನು ಈ ದೀಪ ಹಚ್ಚುವ ಮೂಲಕ ಶುರು ಮಾಡುತ್ತಾ ಇದ್ದೀಯಾ ಎಂದಾಗ ಭೂಮಿ ಬಳಿ ಶಿವು ಹೇಳುತ್ತಾನೆ. ಏನೇ ಭೂಮಿ ಬಾರ್ಡರ್ ದಾಟಿಕೊಂಡು ಹೋಗಿ ರಹಸ್ಯ ಕಾರ್ಯಾಚರಣೆ ಮಾಡಿದ ಹಾಗಿದೆ. ಏನು ವಿಚಾರ ಎಂಬುದನ್ನು ಹೇಳಿ ಎಂದು ಒತ್ತಾಯಿಸುತ್ತಾನೆ.

ದೀಪ ಹಚ್ಚಲು ಸೂಚನೆ ನೀಡಿದ ದೃಷ್ಟಿ

ದೀಪ ಹಚ್ಚಲು ಸೂಚನೆ ನೀಡಿದ ದೃಷ್ಟಿ

ಆಗ ದೃಷ್ಟಿಯನ್ನು ನೋಡಿ ಭೂಮಿ, ಎಲ್ಲಾ ಅಕ್ಕಾನೆ ಹೇಳುತ್ತಾಳೆ ಏನು ಅಕ್ಕ ನೀನು ಏಲ್ಲಾ ಹೇಳುತ್ತಿಯ ಅಲ್ವಾ ಎಂದಾಗ ದೃಷ್ಟಿ ಮಂಕಾಗಿ ನಿಲ್ಲುತ್ತಾಳೆ. ಬಳಿಕ ಎಲ್ಲರೂ ದೀಪ ಹಚ್ಚಲು ಹೋಗುತ್ತಾರೆ. ದೀಪಾವಳಿ ಹಬ್ಬವನ್ನು ದೀಪ ಹಚ್ಚುವ ಮೂಲಕ ಆಚರಣೆ ಮಾಡುತ್ತಾರೆ. ಆ ವೇಳೆ ಶಿವು ದೃಷ್ಟಿ ಬಳಿ ಕೇಳುತ್ತಾನೆ ದೃಷ್ಟಿ ಏನದು ಸ್ವೀಟ್ ನ್ಯೂಸ್ ಎಂದ್ದಾಗ ದೃಷ್ಟಿ ಸುಮ್ಮನಿರು ಶಿವು ಎಂದು ಹೇಳುತ್ತಾಳೆ.

ದೀಪಾವಳಿಯಂದು ಮಂಕಾಗಿರುವ ದೃಷ್ಟಿ

ದೀಪಾವಳಿಯಂದು ಮಂಕಾಗಿರುವ ದೃಷ್ಟಿ

ಆದರೆ ಶಿವುಗೆ ಮಾತ್ರ ಕುತೂಹಲ ತಡೆದುಕೊಳ್ಳಲು ಆಗುವುದಿಲ್ಲ. ದೃಷ್ಟಿ ಮಾತ್ರ ದೀಪ ನೋಡುತ್ತಾ ಮನದಲ್ಲಿ ವೇದನೆ ಪಟ್ಟುಕೊಳ್ಳುತ್ತಾಳೆ. ಭಗವಂತ, ದೀಪವು ನಿಂದೆ ಗಾಳಿಯೂ ನಿಂದೆ. ಬಾಳು ಕಟ್ಟಲು ಆಗಬಾರದು ಎಂದು ಕೇಳುತ್ತಾ ಇದ್ದೇನೆ. ಸತ್ಯನ ಕೇಳಿ ತಡೆದುಕೊಳ್ಳುವ ಶಕ್ತಿ ಶಿವುಗೆ ಖಂಡಿತ ಇಲ್ಲ ಎಂದುಕೊಳ್ಳುತ್ತಾರೆ. ಆದರೆ ಶಿವು ಮಾತ್ರ ಏನು ವಿಚಾರ ಎಂದು ಕೇಳುತ್ತಲೇ ಇರುತ್ತಾನೆ ಆಕೆಗೆ ದೃಷ್ಟಿ ಹಾಗೂ ನನಗೆ ಹುಟ್ಟುವ ಮಗುವಿನಲ್ಲಿ ತಾಯಿಯನ್ನು ಕಾಣುವ ಹಂಬಲ ವ್ಯಕ್ತ ಪಡಿಸುತ್ತಾ ಇರುತ್ತಾನೆ ಇದನ್ನು ಕೇಳಿದ ದೃಷ್ಟಿ ಮಾತ್ರ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ದೃಷ್ಟಿ ಬೇಸರ ಮಾಡಿಕೊಳ್ಳುತ್ತಾ ಇರುವುದರ ಹಿಂದೆ ಇರುವ ಕಾರಣ ಆದರೂ ಎನು ಎಂಬುವುದನ್ನು ತಿಳಿಯಬೇಕಿದೆ.

More from Filmibeat

English summary
Kannada serial Muddu Manigalu written updated on 30th October episode. Know more about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X