Muddu Manigalu: ಸ್ವಾಮೀಜಿ ಹೇಳಿದ ಪ್ರಕಾರ ಜಾಹ್ನವಿಗೆ ಹಿಂದಿನ ಜನ್ಮದ ನೆನಪಾಗುತ್ತಾ?

By Poorva

ಮುದ್ದು ಮಣಿಗಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಜಾಹ್ನವಿಗೆ ಪುನರ್ಜನ್ಮದ ನೆನಪಾಗಲು ಶುರು ಆಗಿದೆ. ಲಕ್ಷ್ಮೀ ಮುಂಚೆ ಇದ್ದ ಕಾಲೋನಿಗೆ ಬಂದ ವೇಳೆ ಜಾಹ್ನವಿಗೆ ಅದೇನೋ ನೆನಪಾದಂತೆ ಅನಿಸುತ್ತದೆ. ಆದರೆ ಇದೇನು ನನಗೆ ಇಷ್ಟೊಂದು ನೆನಪಾಗುತ್ತಿದೆ, ನಾನು ಇಲ್ಲಿ ಬಂದ ಹಾಗೆ ಅನ್ನಿಸುತ್ತಿದೆ ಎಂದೆಲ್ಲಾ ಮಾತನಾಡಿಕೊಳ್ಳುತ್ತಿರುತ್ತಾಳೆ. ಇನ್ನು ಎಲ್ಲರ ಜೊತೆ ಬಹಳ ಖುಷಿ ಆಗಿರುವ ಜಾಹ್ನವಿಗೆ ಒಮ್ಮಿಂದ ಒಮ್ಮೆಲೆ ಏನೋ ನೆನಪಾಗಿ ಡಲ್ ಆಗಿ ಬಿಡುತ್ತಾಳೆ.

ದೃಷ್ಟಿ ಬಹಳ ಕೋಪ ಮಾಡಿಕೊಂಡು ಬರುತ್ತಾಳೆ. ಶಾರ್ವರಿ ದೃಷ್ಟಿ ಮುಂದೆ ಬಹಳ ದರ್ಪದಿಂದ ಮಾತನಾಡುತ್ತಾಳೆ. ಇದನ್ನು ಕೇಳಿಸಿಕೊಂಡ ದೃಷ್ಟಿಗೆ ಬಹಳ ಕೆಟ್ಟ ಕೋಪ ಬರುತ್ತದೆ. ತನ್ನೆಲ್ಲ ಆಸೆ ಕನಸನ್ನು ಬುಡಮೇಲು ಮಾಡಿದ ಶಾರ್ವರಿ ಕೆನ್ನೆಗೆ ಬಲವಾಗಿ ಹೊಡೆಯುತ್ತಾಳೆ. ದೃಷ್ಟಿ ಹೊಡೆತಕ್ಕೆ ನಲುಗಿದ ಶಾರ್ವರಿ ಕೋಪಮಾಡಿಕೊಂಡು ಜೋರಾಗಿ ನನಗೆ ನೀನು ಹೊಡೆಯಲು ಬಂದಿದ್ದೀಯಾ ಎನ್ನುತ್ತಾಳೆ. ಬಳಿಕ ದೃಷ್ಟಿಗೆ ಹೊಡೆಯಲು ಬಂದಾಗ ಭೂಮಿ ಶಾರ್ವರಿಯನ್ನು ತಡೆಯುತ್ತಾಳೆ.

ದೃಷ್ಟಿ ಮಾತಿಗೆ ಕವಡೆ ಕಿಮ್ಮತ್ತಿನ ಬೆಲೆ ಕೊಡದೆ ಆಕೆಯನ್ನು ಹೊರಗೆ ಹೋಗಲು ಹೇಳುತ್ತಾಳೆ. ಆದರೆ ದೃಷ್ಟಿ ಮಾತ್ರ ನ್ಯಾಯ ಸಿಗದೆ ಮನೆ ಬಿಟ್ಟು ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಾಳೆ. ಇದನ್ನು ಕಂಡ ಭೂಮಿ ದೃಷ್ಟಿ ಕೆನ್ನೆಗೆ ಬಲವಾಗಿ ಹೊಡೆಯುತ್ತಾಳೆ, ಜೊತೆಗೆ ಕೊಂಚ ಜೋರಾಗಿ ಮಾತನಾಡುತ್ತಾಳೆ. ಇಲ್ಲಿಂದ ಹೊರಟು ಹೋಗು ದೃಷ್ಟಿ ನಾವು ಈಗ ಬಹಳ ಚೆನ್ನಾಗಿದ್ದೇವೆ ಅದಕ್ಕೂ ಕಲ್ಲು ಹಾಕಬೇಡ ಹಾಗೆಯೇ ನಾವು ಈಗ ಬೇರೆಯವರ ಹಂಗಿನಲ್ಲಿ ಇದ್ದೇವೆ ಅರ್ಥಮಾಡಿಕೊ ದಯಮಾಡಿ ಇಲ್ಲಿಂದ ಹೋಗು ಎಂದು ಹೇಳುತ್ತಾಳೆ.

ಭೂಮಿ ಮಾತಿಗೆ ಕಣ್ಣೀರಿಟ್ಟ ದೃಷ್ಟಿ

ಭೂಮಿ ಮಾತಿಗೆ ಕಣ್ಣೀರಿಟ್ಟ ದೃಷ್ಟಿ

ಇದನ್ನು ಕೇಳಿದ ದೃಷ್ಟಿ ಹೊರಡಲು ಅನುವಾಗುತ್ತಾ ಇರುವಾಗ ಶಾರ್ವರಿ ದೃಷ್ಟಿಯನ್ನು ಕರೆದು ನನಗೆ ಬೇಡದ ವಸ್ತು ಇಲ್ಲಿದೆ ಅದನ್ನು ನಾನು ಇಲ್ಲಿ ಇಟ್ಟುಕೊಳ್ಳಲು ಇಷ್ಟ ಪಡುವುದಿಲ್ಲ ಅದನ್ನು ಇಲ್ಲಿಂದ ತೆಗೆದುಕೊಂಡು ಹೋಗು ಎಂದು ಹೇಳುತ್ತಾಳೆ. ಇದನ್ನು ಕೇಳಿದ ದೃಷ್ಟಿ ಅಲ್ಲಿಯೇ ನಿಂತುಕೊಂಡಿರುತ್ತಾಳೆ. ಶಾರ್ವರಿ ಆಕೆಯ ಕೆಲಸದವಳಿಗೆ ಹೇಳಿ ಒಳಗೆ ಇರುವ ಫೋಟೋವನ್ನು ತೆಗೆದುಕೊಂಡು ಬರಲು ಹೇಳುತ್ತಾಳೆ.

ತಂದೆ ತಾಯಿ ಫೋಟೋ ಹಿಡಿದು ಮನೆಯಿಂದ ಹೊರಟ ದೃಷ್ಟಿ

ತಂದೆ ತಾಯಿ ಫೋಟೋ ಹಿಡಿದು ಮನೆಯಿಂದ ಹೊರಟ ದೃಷ್ಟಿ

ಆ ಫೋಟೋ ನೋಡಿದ ಶಾರ್ವರಿ ಅದನ್ನು ಜೋರಾಗಿ ನೆಲದ ಮೇಲೆ ಬಿಸಾಡುತ್ತಾಳೆ. ಆ ಫೋಟೋದಲ್ಲಿ ಅಪ್ಪ ಅಮ್ಮನನ್ನು ನೋಡಿದ ದೃಷ್ಟಿಗೆ ಬಹಳ ಬೇಸರ ಆಗುತ್ತದೆ. ಅಳುತ್ತಾ ಅಲ್ಲಿಂದ ಆ ಫೋಟೋ ತೆಗೆದುಕೊಂಡು ಹೋಗುತ್ತಾಳೆ.

ಜಾಹ್ನವಿಗೆ ಭವಿಷ್ಯ ಹೇಳಿದ ಸ್ವಾಮೀಜಿ

ಜಾಹ್ನವಿಗೆ ಭವಿಷ್ಯ ಹೇಳಿದ ಸ್ವಾಮೀಜಿ

ಜಾಹ್ನವಿಗೆ ಒಬ್ಬರು ಸ್ವಾಮೀಜಿ ಸಿಗುತ್ತಾರೆ. ಅವರು ಜಾಹ್ನವಿ ಮುಖ ನೋಡಿ ನೋಡು ತಾಯಿ ನೀನು ಈ ಜನ್ಮದಲ್ಲಿ ಮಾಡಬೇಕಾದ ಕೆಲಸ ಇನ್ನು ಇದೆ ಅದಕ್ಕಾಗಿ ಎರಡನೇ ಜನ್ಮದ ಅವತಾರ ಎತ್ತಿದ್ದೀಯ, ನಿನಗಾಗಿ ನಿನ್ನ ಮಕ್ಕಳು ಈಗಲೂ ಹಾತೊರೆಯುತ್ತಾರೆ ಅದನ್ನು ಅರ್ಥ ಮಾಡಿಕೋ, ನಾನು ಹೇಳುತ್ತ ಇರುವುದು ನಿನಗೆ ಸುಳ್ಳು ಎನಿಸಬಹುದು ಆದರೆ ನಾನು ಸುಳ್ಳು ಹೇಳುತ್ತಿಲ್ಲ ನಿಜ ವಿಚಾರವನ್ನು ನಿಮ್ಮ ಮುಂದೆ ಹೇಳುತ್ತ ಇದ್ದೇನೆ, ನಾನು ಹೇಳಿದ ದಾರಿಯಲ್ಲಿ ಮುಂದೆ ಸಾಗಿ ನೋಡಿ ಆಗ ಎಲ್ಲವೂ ಸರಿಯಾಗುತ್ತದೆ, ಹಲವು ವಿಚಾರಗಳು ನಿನಗೆ ತಿಳಿಯುತ್ತಾ ಹೋಗುತ್ತದೆ ಎಂದೆಲ್ಲ ಹೇಳುತ್ತಾರೆ. ಆದರೆ ಜಾಹ್ನವಿ ಅಷ್ಟಾಗಿ ತಲೆ ಕೆಡಿಸಕೊಳ್ಳುವುದಿಲ್ಲ. ಇದೆಲ್ಲ ಸುಳ್ಳು ನಾನು ಇದನ್ನೆಲ್ಲ ನಂಬುವುದಿಲ್ಲ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಕೆಲವೊಂದು ಬಾರಿ ಜಾಹ್ನವಿಗೆ ದ್ವಂದ್ವ ಯೋಚನೆ ಬರುತ್ತದೆ. ನನಗೆ ಹಳೆಯದೆಲ್ಲ ಏನೋ ನೆನಪಾಗುತ್ತ ಇರುತ್ತದೆ ಅಲ್ವಾ ಅದೇ ಕಾರಣಕ್ಕಾಗಿ ಇರಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಮುಂದೇನು ಕಾದು ನೋಡಬೇಕಿದೆ

More from Filmibeat

English summary
Kannada serial muddu msnigalu written updated on 13th February
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X