Muddu Manigalu: ಸೃಷ್ಟಿಯ ಕನಸಿನ ಗೋಪುರ ಕಳಚಿದ ಶಾರ್ವರಿ; ಆಸ್ಪತ್ರೆಗೆ ಬೀಗ ಜಡಿದ ಅಧಿಕಾರಿಗಳು!
ಮುದ್ದು ಮಣಿಗಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಜಾಹ್ನವಿಗೆ ತನ್ನ ತಂದೆ ನಿಜವಾದ ತಂದೆ ಅಲ್ಲ ಎನ್ನುವ ಡೌಟ್ ಶುರು ಆದ ಹಾಗೆ ಕಾಣುತ್ತಿದೆ. ಆಕೆ ತನ್ನ ತಂದೆಯ ಬಳಿ ಬಂದು ನೀನೇ ನನ್ನ ನಿಜವಾದ ತಂದೆಯಾ ಎಂದು ಕೇಳಿದಾಗ ಆಕೆಯ ತಂದೆ ಶಾಕ್ ಆಗುತ್ತಾರೆ.
ಆಕೆ ತನ್ನ ತಂದೆ ಬಳಿ ಈ ವಿಚಾರ ಕೇಳಲು ಒಂದೇ ಕಾರಣ ಅದೇನೆಂದರೆ ಜಾಹ್ನವಿಯನ್ನು ನೋಡಿದ ಅಜ್ಜಿ ನೀನು ಈ ಮುಂಚೆ ಇಲ್ಲಿಯೇ ಇದ್ದೆ ಎಂದೆಲ್ಲ ಹೇಳುತ್ತ ಇದ್ದರೂ ಅದನ್ನು ಕೇಳಿಸಿಕೊಂಡ ಜಾಹ್ನವಿ ಈ ಅಜ್ಜಿ ಯಾಕೆ ಹೀಗೆ ಹೇಳುತ್ತ ಇದ್ದಾರೆ ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ತಂದೆಯ ಮೇಲೆಯೇ ಡೌಟ್ ಬರುತ್ತದೆ.
ಇನ್ನು ಮನೆಯ ಕೆಲಸದವರ ಬಳಿ ಜಾಹ್ನವಿ ಈ ರೀತಿ ಆಡುತ್ತಾ ಇರುವುದನ್ನು ತೋಡಿಕೊಳ್ಳುತ್ತಾರೆ. ಏನು ಮಾಡುವುದು ಎಂದು ತಿಳಿಯದೇ ತಲೆಗೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ. ಇನ್ನು ಜಾಹ್ನವಿ ಮಾತ್ರ ನನಗೆ ಈ ರೀತಿ ಎಲ್ಲಾ ಯಾಕೆ ನೆನಪು ಆಗುತ್ತಿದೆ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ.; ಅಷ್ಟು ಹೊತ್ತಿಗೆ ಆಕೆಯ ಮನೆಯ ಕೆಲಸದಾತ ಬಂದು ಅಮ್ಮಾವರೇ ನೀವು ಒಮ್ಮೆ ಮನೋವಿಜ್ಞಾನಿಯನ್ನು ಭೇಟಿ ಮಾಡಿ ಎಂದು ಹೇಳಿದಾಗ ಆಕೆಗೆ ಶಾಕ್ ಆಗುತ್ತದೆ.

ಜಾಹ್ನವಿಗೆ ಶಾಕ್ ಮೇಲೆ ಶಾಕ್
ಏನು ನನ್ನ ಲೂಸ್ ಅಂದುಕೊಂಡು ಇದ್ದೀರಾ ನಾನು ಯಾಕೆ ಅವರನ್ನು ಭೇಟಿ ಆಗಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ತನ್ನ ತಂದೆಯ ಬಳಿಯೂ ಅದನ್ನೇ ಹೇಳುತ್ತಾಳೆ. ನಿಮ್ಮಿಂದ ನಾನು ಇದೆಲ್ಲ ನಿರೀಕ್ಷೆ ಮಾಡಿಯೇ ಇರಲಿಲ್ಲ ಎಂದು ಬೇಸರ ಕೂಡ ವ್ಯಕ್ತ ಪಡಿಸುತ್ತಾಳೆ. ಇನ್ನು ಶಾರ್ವರಿ ವಕ್ರ ದೃಷ್ಟಿ ಸೃಷ್ಟಿ ಮೇಲೆ ಬಿದ್ದ ಹಾಗೆ ಕಾಣಿಸುತ್ತದೆ.

ಬೇಸರಗೊಂಡ ಜನ
ಸೃಷ್ಟಿ ಬೇರೆಯೇ ಕ್ಲಿನಿಕ್ ತೆರೆದು ಜನರ ಸೇವೆ ಮಾಡುತ್ತಾ ಇರುವ ವೇಳೆ ಒಮ್ಮಿಂದ ಒಮ್ಮೆಲೆ ಬಂದ ಅಧಿಕಾರಿಗಳು ಸೃಷ್ಟಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ನೀವು ಕೊಟ್ಟ ಮೆಡಿಸಿನ್‌ನಿಂದ ಒಬ್ಬಾಕೆಗೆ ಅಬಾರ್ಷನ್ ಆಗಿದೆ ಆ ಕಾರಣ ನೀವು ಈ ಕೂಡಲೇ ಈ ಕ್ಲಿನಿಕ್ ಮುಚ್ಚಬೇಕು ಎಂದು ಹೇಳಿದಾಗ ಸೃಷ್ಟಿಗೆ ಏನು ಮಾಡುವುದು ಎಂದು ತಿಳಿಯದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಲು ಜನರು ನೋಡುತ್ತಾ ಇರುತ್ತಾರೆ. ಯಾಕೆ ಏನಾಯಿತು ಇಷ್ಟು ಒಳ್ಳೆಯ ಆಸ್ಪತ್ರೆ ಮುಚ್ಚಿ ಹೋಗುತ್ತಾ ಇದೆಯಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ಅಲ್ಲಿ ಇರುವ ಅಧಿಕಾರಿಗಳು ಮಾತ್ರ ಸೃಷ್ಟಿ ಆಸ್ಪತ್ರೆಗೆ ಬೀಗ ಜಡಿದು ಅಲ್ಲಿಂದ ಹೋಗುತ್ತಾರೆ. ಸೃಷ್ಟಿಗೆ ದುಃಖ ಉಮ್ಮಳಿಸಿ ಬರುತ್ತದೆ. ಆದರೂ ಸಹಿಸಿಕೊಂಡು ಸುಮ್ಮನೆ ನಿಂತು ಬಿಡುತ್ತಾಳೆ.

ಭೂಮಿಯನ್ನು ತರಾಟೆಗೆ ತೆಗೆದುಕೊಂಡ ಶಾರ್ವರಿ
ಇನ್ನು ಶಾರ್ವರಿ ಸೋಫಾದ ಮೇಲೆ ಕುಳಿತುಕೊಂಡಿರುತ್ತಾಳೆ. ಈ ವೇಳೆ ಅಲ್ಲಿಗೆ ಬಂದ ಭೂಮಿಯನ್ನು ನೋಡಿ ಎಲ್ಲಿಗೆ ಹೋಗಿದ್ದೆ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾಳೆ. ಆದರೆ ಭೂಮಿ ಮೌನವಾಗಿರುತ್ತಾಳೆ. ಕೊನೆಗೆ ಶಾರ್ವರಿ ನೀನು ನನ್ನ ಹಿಂದೆಯೇ ಬರುತ್ತಿದ್ದೆ ಅಲ್ವಾ, ನಾನು ಇದೆಲ್ಲವನ್ನೂ ಗಮನಿಸಿಲ್ಲ ಎಂದು ಅಂದುಕೊಂಡೆ ಆದರೆ ನನಗೆ ಎಲ್ಲವೂ ಗೊತ್ತಾಗಿದೆ ಎಂದೆಲ್ಲ ಹೇಳಿದಾಗ ಭೂಮಿ ತಾಳ್ಮೆ ಕಟ್ಟೆ ಒಡೆದು ಹೋಗುತ್ತದೆ. ತನ್ನ ತಂದೆಯ ಮೇಲೆ ಕೆಟ್ಟ ಕಣ್ಣು ಹಾಕಿದ ಹೆಂಗಸಿನ ಮೇಲೆ ಪ್ರತೀಕಾರ ತೀರಿಸುವ ತವಕದಲ್ಲಿ ಉತ್ತರ ಹೇಳುತ್ತಾಳೆ. ಆದರೆ ಇದ್ಯಾವುದರ ಬಗ್ಗೆ ಶಾರ್ವರಿ ಗಮನ ಹರಿಸುವುದಿಲ್ಲ. ಆಕೆ ಪ್ರೇಮಿಗಳ ದಿನಾಚರಣೆಯ ಸಲುವಾಗಿ ತನ್ನ ಪ್ರೇಮಿಗಾಗಿ ಒಲವಿನ ಉಡುಗೊರೆಯನ್ನು ಭೂಮಿ ಮುಂದೆ ತೋರಿಸುತ್ತಾಳೆ. ಜೊತೆಗೆ ಆಕೆಯ ರಕ್ತದಲ್ಲಿ ಬರೆದ ಪತ್ರವನ್ನು ತೋರಿಸಿದಾಗ ಭೂಮಿ ಸಹನೆ ಕಟ್ಟೆ ಒಡೆಯುತ್ತದೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











