Muddumanigalu: ಜಾಹ್ನವಿ ಮದುವೆ ಚಿಂತೆಯಲ್ಲಿ ಮುಳುಗಿದ ಶಿವು :ತಂದೆ ಮಾತಿಗೆ ಒಪ್ಪುತ್ತಾಳಾ ಜಾಹ್ನವಿ?
ಜಾಹ್ನವಿ 'ಮುದ್ದುಮಣಿಗಳು' ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಜಾಹ್ನವಿ ಮದುವೆಯ ಚಿಂತೆ ಆಕೆಯ ತಂದೆಗೆ ಕಾಡುತ್ತಿದೆ ನನ್ನ ಮಗಳು ಒಳ್ಳೆಯ ಹುಡುಗನನ್ನು ಮದುವೆ ಆಗಬೇಕು ಎನ್ನುವ ಹಂಬಲ. ಎಲ್ಲಾ ತಂದೆ ತಾಯಿಗೆ ಕೂಡ ಇರುತ್ತದೆ.
ಮದುವೆ ಆಗಲು ಜಾಹ್ನವಿಗೆ ಇಷ್ಟ ಇಲ್ಲ
ಹಾಗೆಯೇ ಜಾಹ್ನವಿ ತಂದೆಗೆ ಕೂಡ ಒಂದು ರೀತಿಯ ಭಯ ಕಾಡುತ್ತಾ ಇದೆ. "ಏನು ಮಾಡುವುದು ನನ್ನ ಮಗಳು ಹಿಂದಿನ ಜನುಮ ಅದು ಇದು ಎಂದು ತಲೆ ಕೆಡಿಸಿಕೊಂಡು ಇದ್ದಾಳೆ. ಆಕೆ ಯಾರನ್ನು ಮದುವೆ ಆಗುವ ಸ್ಥಿತಿಯಲ್ಲಿ ಕೂಡ ಇಲ್ಲ" ಎಂದು ಯೋಚನೆ ಮಾಡುತ್ತಾ ಇರುವಾಗ ಶಿವು ಎಂಟ್ರಿ ಆಗುತ್ತೆ . ಶಿವು ಬಂದು ಜಾಹ್ನವಿ ತಂದೆಯ ಬಳಿ ಮಾತನಾಡುತ್ತಾನೆ.

ಅಂಕಲ್ ಏನು ಮಾಡುತ್ತಾ ಇದ್ದೀರಾ ಎಂದಾಗ ಜಾಹ್ನವಿ ತಂದೆ ಕೊಂಚ ಸಿಡಿಮಿಡಿಗೊಳ್ಳುತ್ತಾರೆ. ಇದನ್ನು ಕೇಳಿದ ಜಾಹ್ನವಿ ತಂದೆ ಮಾತ್ರ ಮಗಳು ಮದುವೆ ಆಗುತ್ತಿಲ್ಲ ನಾನು ಆ ಟೆನ್ಶನ್‌ನಲ್ಲಿ ಇದ್ದರೆ ನಿಮ್ಮದೊಂದು ಎಂದು ಮೆತ್ತಗೆ ಹೇಳುತ್ತಾರೆ. ಆಗ ಶಿವು ಜಾಹ್ನವಿ ನೋಡಲು ಬಂದ ಹುಡುಗನ ನಂಬರ್ ಕೊಡಲು ಜಾಹ್ನವಿ ಹೇಳಿದ್ದಾರೆ ಎಂದಾಗ ತಂದೆಗೆ ಹೋದ ಜೀವ ಮತ್ತೆ ಬಂದ ಹಾಗೆ ಆಗುತ್ತದೆ.
ಹುಡುಗನನ್ನು ನೋಡಲು ಒಪ್ಪಿದ ಜಾಹ್ನವಿ
ಆತ ಬಹಳ ಲಘು ಬಗೆಯಿಂದ ಫೋನ್ ನಂಬರ್ ಕೊಡುತ್ತಾನೆ. ಆಗ ಶಿವು "ಏನು ತಲೆ ಕೆಡಿಸಿಕೊಳ್ಳಬೇಡಿ ಆದದ್ದು ಆಗುತ್ತದೆ" ಎಂದು ಹೇಳುತ್ತಾನೆ. ಜಾಹ್ನವಿ ತಂದೆ ಮಾತ್ರ ಖುಷಿಯಲ್ಲಿ ಕುಣಿದಾಡುವುದು ಒಂದೇ ಬಾಕಿ. ಶಿವು ಜಾಹ್ನವಿ ತಂದೆಯ ಬಳಿ ಇದಕ್ಕೆಲ್ಲ ದೃಷ್ಟಿ ಕಾರಣ ಎಂದು ಹೇಳಿ, ಅಲ್ಲಿಂದ ನೇರವಾಗೀ ದೃಷ್ಟಿ ಬಳಿ ಶಿವು ಹೋಗುತ್ತಾನೆ. ಬಳಿಕ ಜಾಹ್ನವಿಗೆ ಆಕೆಯ ಹುಡುಗನ ಜೊತೆ ಮಾತನಾಡಲು ಫೋನ್ ನಂಬರ್ ತಂದು ದೃಷ್ಟಿ ಕೈಯಲ್ಲಿ ಇಟ್ಟು ಹೋಗುತ್ತಾನೆ.

ಇನ್ನು ದೃಷ್ಟಿ ಜಾಹ್ನವಿ ಬಳಿ ಬಂದು ಆಕೆ ಮದುವೆ ಆಗುತ್ತಾ ಇರುವ ಹುಡುಗನ ನಂಬರ್ ಕೊಡುತ್ತಾಳೆ. ಇನ್ನು ಜಾಹ್ನವಿ ಆಕೆಯ ಹುಡುಗನನ್ನು ಮೀಟ್ ಮಾಡಿ ಮನೆಗೆ ಬರುತ್ತಾಳೆ. ಎಲ್ಲರೂ ಬಹಳ ಖುಷಿಯಲ್ಲಿ ಇದ್ದರು. ಜಾಹ್ನವಿ ಮದುವೆಗೆ ಒಪ್ಪಿಗೆ ಸೂಚಿಸಿ ಬಿಟ್ಟಳು ಎಂದು ಬಹಳ ಖುಷಿ ಪಡುತ್ತಿದ್ದರು. ಆದರೆ ಜಾಹ್ನವಿ ಮಾತ್ರ ಹುಡುಗನಿಗೆ ಆಕೆಯ ಪೂರ್ವ ಜನುಮದ ಕಥೆಯನ್ನು ಹೇಳಿ ಬಂದಿರುತ್ತಾಳೆ. ಇತ್ತ ಹಾಗೆಯೇ ಆಕೆ ಪೂರ್ವ ಜನುಮದ ಸುದ್ದಿಯನ್ನು ಹೇಳುವುದು ತಪ್ಪು ಎನ್ನುವುದು ಶಿವು ಹಾಗೂ ದೃಷ್ಟಿ ಇಬ್ಬರ ವಾದ ಕೂಡ ಹೌದು.
ಇನ್ನು ಶಾರ್ವರಿಗೆ ಶ್ರವಣ್ ಭಯ ಪಡುತ್ತಾನೆ. ಶಿವು ಮಾತ್ರ ಶ್ರವಣ್‌ನಲ್ಲಾದ ಬದಲಾವಣೆಯನ್ನು ಕಂಡು ಏನು ಅಂತೆಲ್ಲ ವಿಚಾರಣೆ ಮಾಡುತ್ತಿದ್ದಾನೆ. ಆದರೆ, ಶ್ರವಣ್ ಮಾತ್ರ ಏನೂ ಹೇಳದೆ ಬಹಳ ಬೇಸರ ಪಟ್ಟುಕೊಂಡು ಇರುತ್ತಾನೆ. ಆ ವೇಳೆ ಶಾರ್ವರಿ ಕಂಡು ಇನ್ನಷ್ಟು ಭಯ ಆಗುತ್ತದೆ. ಆಗ ಕೂಡ ಶಿವು ಶ್ರವಣ್ ಬಳಿ ಕಾರಣ ಕೇಳುತ್ತಾನೆ.


Click it and Unblock the Notifications











