For Quick Alerts
  ALLOW NOTIFICATIONS  
  For Daily Alerts

  ಭೂಮಿಯನ್ನು ಕೊಲ್ಲಿಸಲು ಹೊರಟ ಅಹಲ್ಯಾ; ವರ್ಕ್ ಆಗುತ್ತಾ ಅಹಲ್ಯಾ ಪ್ಲಾನ್?

  By Poorva
  |

  ಶ್ರವಣ್ ನಿನ್ನ ತಾಯಿ ಒಳ್ಳೆಯವಳು ಅಲ್ಲ ಆಕೆ ಕೆಟ್ಟವಳು ಎಂದು ದೃಷ್ಟಿ ಎಷ್ಟು ಹೇಳಿದರೂ ಶ್ರವಣ್ ಮಾತ್ರ ಇಲ್ಲ ನನ್ನ ತಾಯಿ ಒಳ್ಳೆಯವರು, ನೀನು ನನ್ನ ತಾಯಿ ಬಗ್ಗೆ ಮಾತನಾಡುತ್ತಿಯಾ ಎಂದು ಕೋಪ ಮಾಡಿಕೊಳ್ಳುತ್ತಾನೆ. ಶಿವು ಕೂಡ ಹೌದು ದೃಷ್ಟಿ ಹೇಳುತ್ತ ಇರುವುದು ನಿಜ ಎಂದು ಹೇಳುತ್ತಾನೆ. ಇದನ್ನು ನೋಡಿದ ಶ್ರವಣ್ ಮಾತ್ರ ಕುಪಿತಗೊಂಡು ಏನೋ ನಮ್ಮ ತಾಯಿ ಬಗ್ಗೆ ಇಷ್ಟು ಹಗುರ ಮಾತನಾಡುತ್ತಿಯಾ ಎಂದು ಕಾಲರ್ ಪಟ್ಟಿ ಹಿಡಿಯುತ್ತಾನೆ.

  ಇದನ್ನು ಕಂಡ ದೃಷ್ಟಿ ಶ್ರವಣ್ ಶಿವುವನ್ನು ಯಾಕೆ ಹಿಡಿದು ಎಳೆಯುತ್ತಾ ಇದ್ದೀರಾ ಇಷ್ಟು ದಿನ ಶಿವು ಅನಾಥವಾಗಿ ಬೇಳೆಯೋದಕ್ಕೆ ನಿಮ್ಮ ತಾಯಿ ಕಾರಣ ಎಂದು ಜೋರಾಗಿ ಹೇಳುತ್ತಾಳೆ. ಇದನ್ನು ಕೇಳಿ ಶ್ರವಣ್ ಗೆ ಶಾಕ್ ಆಗಿ ಶಿವು ಕೊರಳ ಪಟ್ಟಿ ಬಿಡುತ್ತಾನೆ. ಈ ವೇಳೆ ಸೃಷ್ಟಿ ಹೌದು ಶ್ರವಣ್ ಅವರೇ ಕೊಲೆ ಮಾಡಿದ್ದು ಎಂದು ಜೋರಾಗಿ ಹೇಳುತ್ತಾಳೆ.

  ಇದನ್ನು ಕೇಳಿದ ಶ್ರವಣ್ ಸೀದಾ ಮನೆಗೆ ಬಂದು ರೂಮ್ ನಲ್ಲಿ ಬೆಡ್ ಮೇಲೆ ಕುಳಿತುಕೊಳ್ಳುತ್ತಾನೆ. ದೃಷ್ಟಿ ಮಾತನಾಡಿದ ಪ್ರತಿ ವಿಚಾರವನ್ನು ಶ್ರವಣ್ ನೆನಪು ಮಾಡಿಕೊಳ್ಳುತ್ತಾ ಇರುತ್ತಾನೆ. ಆಗ ಭೂಮಿ ಅಲ್ಲಿಗೆ ಬಂದು ಶ್ರವಣ್ ನೀರು ಬೇಕಾ ಎನು ಬೇಕು ಎಂದು ಕೇಳಿದಾಗ ಶ್ರವಣ್ ಮಾತ್ರ ಅಮ್ಮ ಕೆಟ್ಟವಳು ಎಂಬ ವಿಚಾರವನ್ನು ಇನ್ನೂ ಒಪ್ಪಿಕೊಳ್ಳಲು ರೆಡಿ ಇಲ್ಲ. ಇಲ್ಲ ನನ್ನ ಅಮ್ಮ ಒಳ್ಳೆಯವಳು ಎನ್ನುತ್ತಾನೆ.

  ಭೂಮಿ ಮಾತಿಗೂ ಸುಮ್ಮನಿರದ ಶ್ರವಣ್

  ಭೂಮಿ ಮಾತಿಗೂ ಸುಮ್ಮನಿರದ ಶ್ರವಣ್

  ಇದಕ್ಕೆ ಪ್ರತಿಕ್ರಿಯಿಸುವ ಭೂಮಿ ನಾನು ಮೊದಲಿಗೆ ಇದನ್ನು ಯಾವುದನ್ನು ನಂಬಲಿಲ್ಲ ಆದರೆ ಆವತ್ತಿನಿಂದ ಅತ್ತೆ ಬಿಹೇವಿಯರ್ ನೋಡುತ್ತಾ ಬಂದೆ ಆಗ ತಿಳಿಯಿತು ಎಂದು ಹೇಳುತ್ತಾಳೆ. ಶ್ರವಣ್ ಭೂಮಿ ಮೇಲೆ ಕಿರುಚುತ್ತಾ ಇರುತ್ತಾನೆ. ಆದರೆ ಭೂಮಿ ಒಂದು ಮನವಿ ಮಾಡಿಕೊಂಡಳು. ಆತುರ ಬಿದ್ದು ಮತ್ತೆ ಶಿವು ಜೊತೆ.... ಎಂದಾಗ ಭೂಮಿ ಮಾತನ್ನು ಶ್ರವಣ್ ಅರ್ಧದಿಂದಲೇ ಮಾತನ್ನು ತಡೆಯುತ್ತಾನೆ.

  ಅತ್ತೆಗೆ ಎದುರು ಮಾತನಾಡಿದ ಭೂಮಿ

  ಅತ್ತೆಗೆ ಎದುರು ಮಾತನಾಡಿದ ಭೂಮಿ

  ಇನ್ನು ಹಾಲ್‌ಗೆ ಬಂದ ಶ್ರವಣ್‌ಗೆ ಭೂಮಿ ತಿಂಡಿ ಬಡಿಸುತ್ತ ಇರುತ್ತಾಳೆ. ಈ ವೇಳೆ ಕಾಲ್ ಬರುತ್ತದೆ. ಕರೆ ಸ್ವೀಕರಿಸಿದ ಭೂಮಿ ಮಾತನಾಡಿ ಕರೆ ಕಟ್ ಮಾಡಿ ಬಂದು ಮಾವನ ಬಳಿ ಜನುಮದ ಜೋಡಿ ಎನ್ನುವ ರಿಯಾಲಿಟಿ ಶೋ ಮಾವ.. ನಾವು ಹೋಗೋಣ ಅಂತ ಅಂದಾಗ ಮಧ್ಯ ಪ್ರವೇಶಿಸಿದ ಅಹಲ್ಯಾ ಬೇಡ ಎಂದು ಹೇಳುತ್ತಾಳೆ ಇದನ್ನು ಕೇಳಿದ ಭೂಮಿ ಗಟ್ಟಿಯಾಗಿ ಅತ್ತೆಯನ್ನು ಪ್ರಶ್ನೆ ಮಾಡಿದಾಗ ಆಗಲ್ಯಗೆ ಶಾಕ್ ಆಗುತ್ತೆ. ಆದರೆ ಅಮ್ಮನ ವಿರುದ್ದ ಮಾತನಾಡಿದ್ದಕ್ಕೆ ಶ್ರವಣ್ ಗೆ ಕೋಪ ನೆತ್ತಿಗೇರಿ ಹೋಗುತ್ತದೆ. ಭೂಮಿಗೆ ಇದೀಗ ನಿಜ ವಿಚಾರ ತಿಳಿದಿದೆ. ಅಹಲ್ಯಾ ಇಷ್ಟು ದಿನ ಮಾಡಿದ ಆಟ ಭೂಮಿ ಮುಂದೆ ಬಯಲಾಗಿದೆ. ಇನ್ನೂ ಶಾರ್ವರಿ ಭೂಮಿ ರೂಮ್ ಗೆ ಬಂದು ಭೂಮಿಯನ್ನು ಕೊಲ್ಲುವ ಸಂಚು ಮಾಡುತ್ತಾಳೆ. ಇದನ್ನು ನೋಡಿದ ಭೂಮಿ ಆ ದಿನ ಸುಮ್ಮನೆ ಇರುತ್ತಾಳೆ. ಭೂಮಿ ಬಳಿ ಅಹಲ್ಯ ದುಡ್ಡಿಗಾಗಿ ಪೀಡಿಸುತ್ತಾಳೆ. ಆಗ ಭೂಮಿ ಆ ಹಣವನ್ನು ಕೊಡಲು ಹಿಂದೇಟು ಹಾಕುತ್ತಾರೆ. ಇದನ್ನು ನೋಡಿದ ಅಹಲ್ಯ ಕೋಪದಿಂದ ಕೆರಳಿ ಕೆಂಡ ಕಾರುತ್ತಾಳೆ..

  ಅತ್ತೆಯ ಗುಟ್ಟು ಬಯಲು ಮಾಡಿದ ಸೊಸೆ

  ಅತ್ತೆಯ ಗುಟ್ಟು ಬಯಲು ಮಾಡಿದ ಸೊಸೆ

  ದುಡ್ಡು ಕೊಡು ಎಂದಾಗ ಭೂಮಿ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಮಾಡುತ್ತಾಳೆ ಇದನ್ನು ಕೇಳಿದ ಅಹಲ್ಯಾ ಮಾತ್ರ ದುಡ್ಡು ಎಲ್ಲಿದೆ ಹೇಳು ನನ್ನ ಪಿತ್ತ ನೆಟ್ಟಿಗೆರಿಸಬೇಡ ನಾನು ಸರಿ ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಭೂಮಿ ತುಂಬಾ ದಿನದ ಹಿಂದೆಯೇ ನೀವು ಸರಿ ಇಲ್ಲ ಎಂಬುವುದು ನನಗೆ ತಿಳಿದಿದೆ. ಆಸ್ತಿಗೋಸ್ಕರ ದುಡ್ಡಿಗೋಸ್ಕರ ನೀವು ಏನೇನು ಮಾಡಿದಿರಿ ಅದೆಲ್ಲ ನನಗೆ ತಿಳಿದಿದೆ ಎಂದು ಜೋರಾಗಿ ಕಿರುಚುತ್ತ ಇರುತ್ತಾಳೆ.. ಇದನ್ನು ಕೇಳಿ ಶಾಕ್ ಆದ ಅಹಲ್ಯಾ ಏನು ಗೊತ್ತು ನಿನಗೆ ಎಂದಾಗ ಭೂಮಿ ನೀವು ನನ್ನ ಕೊಲ್ಲುವ ಪ್ರಯತ್ನ ಮಾಡಿದ್ದು ನನಗೆ ತಿಳಿದಿದೆ ಎಂದು ಹೇಳಿದಾಗ ಅಹಲ್ಯಾಗೆ ಶಾಕ್ ಆಗುತ್ತದೆ.

  ಅಹಲ್ಯಾಳನ್ನು ದೇವಾಲಯಕ್ಕೆ ಕರೆದ ಭೂಮಿ

  ಅಹಲ್ಯಾಳನ್ನು ದೇವಾಲಯಕ್ಕೆ ಕರೆದ ಭೂಮಿ

  ಇನ್ನು ಚೇತರಿಸಿಕೊಂಡ ಅಹಲ್ಯಾ ಸುಮ್ಮನಾಗುತ್ತಾಳೆ. ಆದರೆ ಮಾತು ಮುಂದುವರೆಸಿದ ಭೂಮಿ ಅತ್ತೆ ನಾಳೆ ದೇವಾಲಯಕ್ಕೆ ಬರುತ್ತಿರಾ ಎಂದು ಕೇಳಿದಾಗ ಇಲ್ಲಮ್ಮ ನೀವು ಹೋಗಿ ನನಗೆ ಸಮಯ ಇಲ್ಲ, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಭೂಮಿ ಅದೇನು ಅಷ್ಟು ಇಂಪಾರ್ಟೆಂಟ್ ಕೆಲಸ, ಯಾವುದಾದರೂ ಕೆಲಸ ಮಾಡಲು ಶುರು ಮಾಡಿದ್ದಿರಾ, ಮನೆಯಲ್ಲಿ ಎಲ್ಲರೂ ಸಂಪಾದನೆ ಮಾಡುತ್ತಾ ಇದ್ದೇವೆ ನೀವು ಏನಾದರೂ ಶುರು ಮಾಡಿಕೊಂಡರೇನೋ ಎಂದು ಹೇಳಿದಾಗ ಅಹಲ್ಯಾ ಭಯದಲ್ಲಿ ಬೆವರು ಇಳಿಯುತ್ತದೆ. ಇನ್ನು ಅಲ್ಲಿಂದ ಭೂಮಿ ತೆರಳುತ್ತಾಳೆ...

  English summary
  Kannada serial muddu msnigalu written update on 26th December
  Monday, December 26, 2022, 18:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X