Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೆಮ್ಮದಿ ಕೆಡಿಸಿದ ಹೆಣ್ಣನ್ನು ಹುಡುಕಲು ಹೊರಟ ಮುದ್ದುಮಣಿಗಳು
ಅಹಲ್ಯಾ ಸ್ವಭಾವದ ಬಗ್ಗೆ ಆಕೆಯ ಕೆಟ್ಟ ಗುಣಗಳ ಬಗ್ಗೆ ಮನೆ ಮಂದಿಗೆ ಎಲ್ಲರಿಗೂ ತಿಳಿಯಿತು. ಎನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುವ ವೇಳೆ ಅಲ್ಲಿಗೆ ಪೊಲೀಸ್ ಬಂದಿದ್ದರು. ಅದನ್ನು ನೋಡಿದ ಶ್ರವಣ್ ಧಿಗ್ಬ್ರಾಂತಗೊಳ್ಳುತ್ತಾನೆ. ಇನ್ನು ಪೊಲೀಸರ ಬಳಿ ಇದ್ದ ಶಾರ್ವರಿ ಮಾತನಾಡಿದ ವಿಡಿಯೋವನ್ನು ಅಹಲ್ಯಾ ಗಂಡನಿಗೆ ತೋರಿಸುತ್ತಾರೆ. ಇದನ್ನು ನೋಡಿದ ಆಕೆಯ ಗಂಡನಿಗೆ ಅಹಲ್ಯಾ ಬಗ್ಗೆ ಬೇಸರ ಮೂಡುತ್ತದೆ.
ಬಳಿಕ ಯಾರು ಈ ವಿಡಿಯೋ ಮಾಡಿದ್ದು ಎಂಬ ಪ್ರಶ್ನೆ ಬಂದಾಗ ಅದು ಭೂಮಿ ಎಂದು ತಿಳಿಯುತ್ತದೆ. ಅಹಲ್ಯಾ ಕೋಪ ನೆತ್ತಿಗೇರಿತು. ಭೂಮಿ ಕಪಾಳಕ್ಕೆ ಬಾರಿಸಲು ಬಂದಾಗ ಸೃಷ್ಟಿ ಅಹಲ್ಯಾಳನ್ನು ತಡೆದು ಆಕೆಯ ಕೆನ್ನೆಗೆ ಹೊಡೆಯುತ್ತಾಳೆ. ಇದನ್ನೆಲ್ಲ ನೋಡಿದ ಶ್ರವಣ್ ಬೇಸರಗೊಳ್ಳುತ್ತಾನೆ. ಇನ್ನು ಅಹಲ್ಯಾ ಗಂಡ ಪೊಲೀಸರ ಬಳಿ ಅಹಲ್ಯಳನ್ನು ಎಳೆದುಕೊಂಡು ಹೋಗಲು ಹೇಳುತ್ತಾನೆ.
ಇದನ್ನು ನೋಡಿದ ಅಹಲ್ಯಾಗೆ ಗಂಡ ನನ್ನನ್ನು ಪೊಲೀಸರಿಗೆ ಒಪ್ಪಿಸಿಬಿಟ್ಟನಲ್ಲ ಎಂದು ಶಾಕ್ ಆಗುತ್ತದೆ. ಬಳಿಕ ಪೊಲೀಸರು ಅಹಲ್ಯಾಗೆ ಕೋಳ ತೊಡಿಸಿ ಕರೆದುಕೊಂಡು ಹೋಗುತ್ತಾರೆ. ಶ್ರವಣ್ ಹಾಗೂ ಶಿವು ತಂದೆಗೆ ಮಕ್ಕಳಿಬ್ಬರನ್ನೂ ನೋಡಿ ಬಹಳ ದುಃಖ ಆಗುತ್ತದೆ. ಯಾಕೆ ಹೀಗೆಲ್ಲ ಆಯಿತು ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾ ಇರುತ್ತಾರೆ. ಬಳಿಕ ಇಬ್ಬರನ್ನೂ ತಬ್ಬಿಕೊಂಡು ಜೋರಾಗಿ ಅಳುತ್ತಾರೆ. ಇತ್ತ ಶ್ರವಣ್ ಮನೆಗೆ ಬರುತ್ತಾನೆ. ಬಂದು ಸೋಫಾದ ಮೇಲೆ ಕುಳಿತು ಆಗಿದ್ದನ್ನೆಲ್ಲ ಯೋಚನೆ ಮಾಡುತ್ತಿರುತ್ತಾನೆ. ಬಳಿಕ ಅಲ್ಲಿಗೆ ಬಂದ ಭೂಮಿ ಶ್ರವಣ್‌ಗೆ ನಿಜ ಹೇಳುತ್ತಾಳೆ.

ಶ್ರವಣ್‌ಗೆ ನಿಜ ಹೇಳಿದ ಭೂಮಿ
ಈ ಮನೆಯಲ್ಲಿ ಆಗುತ್ತಿದ್ದ ಒಂದೊಂದು ಸಮಸ್ಯೆಗೆ ಅತ್ತೆ ಕಾರಣವಾಗಿದ್ದರಿಂದ ಈ ಮನೆ ಒಳ್ಳೆಯದಕ್ಕೆ ನಾನು ಇದನ್ನು ಮಾಡಲೇಬೇಕಿತ್ತು ಎಂದು ಹೇಳುತ್ತಾಳೆ. ಇದನ್ನೆಲ್ಲಾ ಕೇಳಿದ ಶ್ರವಣ್ ಬಹಳ ನೊಂದುಕೊಳ್ಳುತ್ತಾನೆ. ನನ್ನ ಅಮ್ಮನನ್ನು ಎಷ್ಟೆಲ್ಲ ನಂಬಿದ್ದೆ ಆದರೆ ನನ್ನ ತಾಯಿ ಹೀಗೆಲ್ಲ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಅಳುತ್ತಾನೆ. ಭೂಮಿ ಶ್ರವಣ್‌ನನ್ನು ಸಮಾಧನಿಸುತ್ತ ಇರುತ್ತಾಳೆ ದಯಮಾಡಿ ಅಳಬೇಡ ನಾನು ನಿಮಗೆ ಅಮ್ಮನ ಕೊರತೆ ಬಾರದ ಹಾಗೆ ನೋಡಿಕೊಳ್ಳುತ್ತಾ ಇರುತ್ತೇನೆ ಎಂದು ಹೇಳುತ್ತಾಳೆ.

ಭೂಮಿ ಮಾವನ ಕೋಪ ಮಿತಿ ಮೀರಿದೆ
ಬೆಳಗ್ಗೆ ಭೂಮಿ ಎದ್ದು ಮನೆ ಎಲ್ಲಾ ಸ್ವಚ್ಚ ಮಾಡುತ್ತಾ ಇರುವಾಗ ಅಹಲ್ಯಾ ಫೋಟೋಗೆ ಹಾರ ಹಾಕಿ ಇಡಲಾಗಿತ್ತು. ಇದನ್ನು ನೋಡಿದ ಭೂಮಿಗೆ ಶಾಕ್ ಆಗುತ್ತೆ. ಮಾವನೇ ಇದೆಲ್ಲ ಮಾಡಿದ್ದು ಎಂದು ತಿಳಿಯುತ್ತದೆ. ಶ್ರವಣ್ ಭೂಮಿಯನ್ನು ಕರೆದುಕೊಂಡು ಬರುವ ವೇಳೆ ಅಹಲ್ಯಾ ಫೋಟೋವನ್ನು ಬಚ್ಚಿಡುತಾಳೆ. ಶ್ರವಣ್ ಹೋದ ಬಳಿಕ ಆ ಫೋಟೊವನ್ನು ಹೊರಗೆ ತೆಗೆಯುತ್ತಾ ಇರುತ್ತಾಳೆ. ಈ ವೇಳೆ ಭೂಮಿ ಮಾವ ಒಬ್ಬಳಿಗೆ ಶಿಕ್ಷೆ ಕೊಡಿಸಿ ದೊಡ್ಡವಳಾದ ನೀನು ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸಬೇಡ, ನಿಮ್ಮ ಆಸ್ಪತ್ರೆಯನ್ನು ಕಿತ್ತುಕೊಂಡ ಹೆಂಗಸು ಯಾರು ಅದನ್ನು ತಿಳಿದುಕೋ ಅವಳಿಗೆ ಕೂಡ ಅಹಲ್ಯಾಗೆ ಆದ ಶಿಕ್ಷೆ ಆಗಬೇಕು, ಆದರೆ ಈ ಹೋರಾಟದಲ್ಲಿ ನೀನು ಮುದ್ದುಮಣಿಯಾದರೆ ಸಾಲದು ವಜ್ರದ ಗಣಿ ಆಗಬೇಕು ಎಂದು ಹೇಳುತ್ತಾರೆ.

ತಂದೆಯ ಅಸ್ತಿತ್ವ ಉಳಿಸಲು ಹೊರಟ ಭೂಮಿ ಹಾಗೂ ಸೃಷ್ಟಿ
ಅಷ್ಟೇ ಅಲ್ಲದೇ ನಿಮ್ಮ ಅಪ್ಪ ಅಮ್ಮನ ಅಸ್ತಿತ್ವ ಉಳಿಸಿಕೊಳ್ಳಿ ಎಂದು ಹೇಳುತ್ತಾರೆ. ಈ ಮಾತು ಭೂಮಿಗೆ ಕೂಡ ಇದು ಸರಿ ಎನಿಸುತ್ತದೆ. ತನ್ನ ತಂದೆ ಕಟ್ಟಿಸಿದ ಆಸ್ಪತ್ರೆ ಇದೀಗ ನಮ್ಮ ಪಾಲಿಗೆ ಇಲ್ಲ ಎಂದರೆ ಎನು ಅರ್ಥ, ನನಗೆ ನಮ್ಮ ಅಮ್ಮ ಅಪ್ಪ ಇದ್ದ ಆಸ್ಪತ್ರೆಯನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ, ಹೇಗೆ ಅಪ್ಪ ಅಮ್ಮನ ಋಣ ತೀರಿಸುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಭೂಮಿ ಅಕ್ಕ ಸೃಷ್ಟಿಗೆ ಕರೆ ಮಾಡುತ್ತಾಳೆ.

ಅಕ್ಕನ ಬಳಿ ಮನದ ದುಗುಡ ಹೇಳಿದ ಭೂಮಿ
ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ ಎಂಬ ಪ್ರಶ್ನೆ ಎದುರಾದಾಗ ಭೂಮಿ ಮಾವ ಬಹಳ ನೊಂದುಕೊಂಡಿದ್ದಾರೆ, ಹಾಗೆಯೇ ಕೋಪ ಕೂಡ ಮಾಡಿಕೊಂಡಿದ್ದಾರೆ. ಅತ್ತೆಯ ಫೋಟೋಗೆ ಹಾರ ಹಾಕಿದರು. ಅಕ್ಕ ಆ ಹಾಸ್ಪಿಟಲ್ ಕೈ ತಪ್ಪಿ ಹೋಗುವುದಕ್ಕೆ ಆ ಅಹಲ್ಯಾ ಎಷ್ಟು ಕಾರಣನೋ ಆ ಹೆಂಗಸು ಅಷ್ಟೇ ಕಾರಣ ಅದನ್ನು ಬಿಡಬೇಡಿ ಎಂದು ಹೇಳುತ್ತಾ ಇರುತ್ತಾಳೆ. ಇನ್ನು ಸೃಷ್ಟಿ ಹಾಗೂ ಭೂಮಿಗೆ ಆ ಹೆಂಗಸು ಯಾರು ಎಂದು ತಿಳಿಯುತ್ತಾ ಕಾದು ನೋಡಬೇಕಿದೆ