Namma Lacchi: ಸಂಗಮ್ ಬಳಿ ಓಡಿ ಬಂದ ಲಚ್ಚಿ, ತಂದೆಯ ಬಳಿ ನಿಜ ಹೇಳಲು ಒದ್ದಾಡಿದ ಮಗಳು!

By Poorva

ನಮ್ಮ ಲಚ್ಚಿ ಧಾರಾವಾಹಿ ಕುತೂಹಲವನ್ನ ಹೆಚ್ಚು ಹೆಚ್ಚು ಮಾಡುತ್ತಿದ್ದು ಅಭಿಮಾನಿಗಳು ಮಾತ್ರ ಲಚ್ಚಿಯ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ಸಂಪಿಗೆ ಹಳ್ಳಿಗೆ ಸಂಗಮ್, ಲಚ್ಚಿ, ಸಂಗಮ್ ಅಣ್ಣ ಹೋಗುತ್ತಾರೆ. ಅಲ್ಲಿ ಒಬ್ಬ ನಾಟಕಗಾರ್ತಿಯನ್ನೂ ಗಿರಿಜಾ ಎಂದು ತಪ್ಪು ತಿಳಿದ ಸಂಗಮ್ ಗಿರಿಜಾ ಸ್ಥಿತಿ ಕಂಡು ಬೇಸರ ಪಟ್ಟುಕೊಂಡಿದ್ದಾನೆ.

ಇತ್ತ ಗಿರಿಜಾ ತರಹ ಇರುವ ಯುವತಿಯನ್ನು ಕಂಡ ಲಚ್ಚಿ ಮತ್ತು ಸಂಗಮ್‌ಗೆ ಶಾಕ್ ಆಗುತ್ತದೆ. ನನ್ನ ಅವ್ವ ಬದುಕಿ ಇದ್ದಾಳೆ ಎನ್ನುವ ಶಾಕ್ ನಲ್ಲಿ ಲಚ್ಚಿಗೆ ಮಾತೇ ಬಾರದ ಹಾಗೆ ಆಗುತ್ತದೆ. ಆಕೆಗೆ ಮಾತನಾಡಲು ಆಗದೆ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ. ಇನ್ನು ಲಚ್ಚಿಗೆ ಒಂದು ನಿಜ ವಿಚಾರ ತಿಳಿದಿದೆ. ಸಂಗಮ್ ನನ್ನ ತಂದೆ. ಆತ ನನ್ನ ಜೀವನದ ಸೂಪರ್ ಸ್ಟಾರ್ ಎಂದು ಲಚ್ಚಿಗೆ ತಿಳಿದರೂ, ಅದೆಲ್ಲವನ್ನೂ ಹೇಳಲು ಬಂದರೆ ಆಕೆಯ ಧ್ವನಿಯನ್ನೇ ಕಿತ್ತುಕೊಂಡು ಬಿಟ್ಟಿದ್ದಾನೆ ದೇವರು.

Kannada serial Namma Lacchi written on 26th November

ಇನ್ನೂ ಸಂಗಮ್ ಲಚ್ಚಿ ಧ್ವನಿಗೆ ಏನಾಗಿದೆ ಎಂದು ತಿಳಿಯಲು ಸಂಗಮ್ ಲಚ್ಚಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಆದರೆ ಅಲ್ಲಿ ಡಾಕ್ಟರ್ ಹೇಳುತ್ತಾರೆ ಲಚ್ಚಿಗೆ ಇನ್ನೂ ಮೇಲೆ ಧ್ವನಿಯೇ ಬರುವುದಿಲ್ಲ ಎಂದು. ಡಾಕ್ಟರ್ ಮಾತನ್ನು ಹೇಳಿದಾಗ ಸಂಗಮ್ ಬಹಳ ನೋವು ಅನುಭವಿಸುತ್ತಾನೆ.

ಲಚ್ಚಿಗೆ ಮಾತೇ ಇಲ್ಲ.... ನೋವಿನಲ್ಲಿ ಸಂಗಮ್

ಇನ್ನು ಸಂಗಮ್ ಆತನ ಅಣ್ಣನ ಬಗ್ಗೆ ಬಹಳ ಕೋಪ ಇರುತ್ತದೆ. ನನ್ನ ಅಣ್ಣನಿಂದ ಆಗಿಯೇ ನನಗೆ ಇಷ್ಟೆಲ್ಲ ಕಷ್ಟ ಆಗಿರುವುದು ಎಂದೆಲ್ಲ ಕೋಪ ಮಾಡಿಕೊಂಡಿದ್ದಾನೆ . ಇನ್ನು ಗಿರಿಜಾ ತದ್ರೂಪಿ ಪಕ್ಕದಲ್ಲಿ ನಿಂತು ಇದೆಲ್ಲ ನೋಡುತ್ತಾ ಇರುತ್ತಾಳೆ. ಇಲ್ಲಿ ಏನು ನಡೆಯುತ್ತಾ ಇದೆ ಎನ್ನುವ ವಿಚಾರ ಆಕೆಗೆ ತಿಳಿಯದಂತೆ ಆಗಿ ಹೋಗುತ್ತದೆ. ನನ್ನನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಅಂದುಕೊಂಡಿದ್ದಾಳೆ.

ಸಂಗಮ್ ಮಾತಿಗೆ ಮೌನವಾದ ನಾಟಕಗಾರ್ತಿ

ಇನ್ನು ಇದಕ್ಕೆಲ್ಲ ಮುಂಚೆ ಸಂಗಮ್ ಮಾತ್ರ ಗಿರಿಜಾ ತದ್ರೂಪಿ ಇರುವವಳ ಬಳಿ ಮಾತನಾಡುತ್ತಾ ಇರುತ್ತಾನೆ. ಆ ವೇಳೆ ಅಲ್ಲಿಗೆ ಬಂದ ಸಂಗಮ್ ಅಣ್ಣ ಲಚ್ಚಿ ಬಗ್ಗೆ ಮಾತನಾಡುತ್ತಾ ಇರುತ್ತಾನೆ ಇದನ್ನು ಕೇಳಿಸಿಕೊಂಡ ಸಂಗಮ್‌ಗೆ ಎನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಅತ್ತಿಂದ ಇತ್ತ ನೋಡುತ್ತಾ ಇರುವಾಗ ಲಚ್ಚಿ ಓಡಿ ಬರುತ್ತಾಳೆ .

Kannada serial Namma Lacchi written on 26th November

ಲಚ್ಚಿಯನ್ನು ಮುದ್ದಾಡಿದ ಸಂಗಮ್

ತನ್ನ ಬಳಿ ಓಡಿ ಬಂದ ಲಚ್ಚಿಯನ್ನು ಕಂಡು ಸಂಗಮ್ ಮುದ್ದಾಡುತ್ತಾ ಇರುತ್ತಾನೆ. ಆದರೆ ಲಚ್ಚಿ ಗೆ ಮಾತ್ರ ಅವರೇ ನನ್ನ ತಂದೆ ಎಂದು ತಿಳಿದಿರುವ ಕಾರಣ ಬಹಳ ಖುಷಿಯಾಗಿದ್ದಾಳೆ. ಜೊತೆಗೆ ಸಂಗಮ್ ಜೊತೆಗೆ ಇದ್ದ ಕ್ಷಣವನ್ನು ಮೆಲುಕು ಹಾಕಿಕೊಳ್ಳುತ್ತಾ ಇರುತ್ತಾಳೆ.

More from Filmibeat

English summary
Namma Lacchi serial written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X