Namma Lacchi: ಸಂಗಮ್‌ನನ್ನೇ ಕಿಡ್ನಾಪ್ ಮಾಡಿಸಿದ ದೀಪಿಕಾ!, ಅಪ್ಪನನ್ನು ಹುಡುಕುತ್ತಾಳಾ ಲಚ್ಚಿ?

By Poorva

ನಮ್ಮ ಲಚ್ಚಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುವವರಿಗೆ ಖುಷಿ ನೀಡುತ್ತಿದೆ. ಇದೀಗ ಸಂಗಮ್ ಮನೆಗೆ ಜಾಜಿ ಬಂದಿದ್ದಾಳೆ. ಜಾಜಿ ಗಿರಿಜಾಳ ತದ್ರೂಪಿಯಾಗಿದ್ದಾಳೆ. ಆದ ಕಾರಣ ಸಂಗಮ್ ಗೆ ಗಿರಿಜಾಳನ್ನೇ ನೋಡಿದ ಹಾಗೆ ಆಗುತ್ತದೆ. ಹಾಗೆಯೇ ಜಾಜಿಯನ್ನು ಗಿರಿಜಾ ಎಂದು ತಿಳಿದುಕೊಂಡು ಸಂಗಮ್ ಜಾಜಿಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ.

ಮನೆಯಲ್ಲಿ ಜಾಜಿಯನ್ನ ನೋಡಿ ದೀಪಿಕಾಗೆ ಬಹಳ ಕೋಪ ಬರುತ್ತದೆ. ಗಿರಿಜಾ ರೂಪದಲ್ಲಿ ಜಾಜಿಯನ್ನು ನೋಡಿ ಆಕೆ ಗಿರಿಜಾ ಅಲ್ಲ ಆಕೆ ಬೇರೆಯವಳು ಗಿರಿಜಾ ನನ್ನ ಕಾರಿನ ಅಡಿಗೆ ಸಿಲುಕಿ ಸತ್ತು ಹೋಗಿದ್ದಾಳೆ ಎಂದು ತನ್ನ ತಾಯಿ ಬಳಿ ಹೇಳಿದಾಗ ಜೆಜೆಗೆ ಕೂಡ ಶಾಕ್ ಆಗುತ್ತದೆ. ಈಗ ಏನು ಮಾಡುವುದು ಎಂದೆಲ್ಲ ಯೋಚನೆ ಮಾಡುತ್ತಿರುತ್ತಾಳೆ.

Kannada serial Namma Lacchi written update in 2nd December

ಇನ್ನು ಜಾಜಿಯನ್ನ ಜೋರಾಗಿ ಕರೆದ ದೀಪಿಕಾ, ನಾನು ಯಾರು ಎಂಬುದನ್ನು ನಿನಗೆ ನಾನು ತೋರಿಸುತ್ತೇನೆ ಎಂದು ಹೇಳಿ ಜಾಜಿಯನ್ನ ಮನೆಯಿಂದ ಹೊರಗೆ ಹಾಕುತ್ತಾಳೆ. ಇದನ್ನ ನೋಡಿದ ಜಾಜಿ ಮಾತ್ರ ಜೋರಾಗಿ ಕಿರುಚಿಕೊಳ್ಳುತ್ತಾಳೆ. ಜಾಜಿ ಕಿರುಚಿಕೊಂಡಿರುವುದನ್ನ ಕೇಳಿಸಿಕೊಂಡ ಸಂಗಮ್ ಮನೆಯಿಂದ ಹೊರಗೆ ಬರುತ್ತಾರೆ. ಜಾಜಿಯನ್ನು ದೀಪಿಕಾ ಮನೆಯಿಂದ ಹೊರ ಹಾಕುವುದನ್ನು ನೋಡಿದ ಸಂಗಮ್ ಬಹಳ ಕೋಪಿಸಿಕೊಂಡು ಜಾಜಿ ಮನೆಯಲ್ಲಿ ಇರುವುದನ್ನು ನೋಡಲಾಗದವರು ಮನೇಬಿಟ್ಟು ಹೋಗಬಹುದು ಎಂದು ಹೇಳಿಬಿಡುತ್ತಾನೆ.

ಸಂಗಮ್ ಮಾತು ಕೇಳಿ ಮನೆಬಿಟ್ಟು ಹೋದ ದೀಪಿಕಾ

ಇದನ್ನು ಕೇಳಿಸಿಕೊಂಡ ದೀಪಿಕಾ ತನ್ನ ಮಗು ರಿಯಾ ಜೊತೆ ಮನೆ ಬಿಟ್ಟು ಹೋಗುತ್ತಾಳೆ. ಇನ್ನು ಮನೆ ಮಂದಿಗೆಲ್ಲ ಆತಂಕವಾಗುತ್ತದೆ . ದೀಪಿಕಾ ಎಲ್ಲಿಗೆ ಹೋದಳು ಎಂದು ತಿಳಿಯುತ್ತಾ ಇಲ್ಲ. ಜೊತೆಗೆ ಮಗಳನ್ನು ಕೂಡ ಕರೆದುಕೊಂಡು ಹೋಗಿದ್ದಾಳೆ ಎಂದೆಲ್ಲ ಬಹಳ ಹೆದರಿಕೊಂಡಿರುತ್ತಾರೆ. ಆ ವೇಳೆ ಸಂಗಮ್ ದೀಪಿಕಾಳನ್ನೂ ಮನೆಗೆ ಹೇಗಾದರೂ ಮಾಡಿ ಕರೆತರುತ್ತೇನೆ ಎಂದು ಹೋಗುತ್ತಾನೆ. ಹಾಗೆಯೇ ಕೊಟ್ಟ ಮಾತಿನ ಪ್ರಕಾರ ದೀಪಿಕಾ ಹಾಗೂ ರಿಯಾಳನ್ನ ಮನೆಗೆ ಕರೆದುಕೊಂಡು ಬಂದು ತನ್ನ ಮನದಲ್ಲಿರುವುದನ್ನು ಎಲ್ಲ ಹೇಳುತ್ತಾನೆ. ಇದನೆಲ್ಲ ಕೇಳಿಸಿಕೊಂಡ ದೀಪಿಕಾಗೆ ಏನು ಮಾಡಬೇಕೆಂದು ತಿಳಿಯದೆ ಸುಮ್ಮನಾಗುತ್ತಾಳೆ.

Kannada serial Namma Lacchi written update in 2nd December

ಸಂಗಮ್ ಮಾತಿಗೆ ಸುಮ್ಮನಾಗದ ದೀಪಿಕಾ

ದೀಪಿಕಾ ನೀನು ನನ್ನ ಬಳಿ ಏನು ಬೇಕು ಅದನ್ನು ಹೇಳು... ನೀನು ನನ್ನಿಂದ ಎನು ಬಯಸುತ್ತಿಯಾ ಆ ವಿಚಾರ ನನಗೆ ಗೊತ್ತಿಲ್ಲ . ಆದರೆ ನಾನು ಇನ್ನು ಮುಂದೆ ಯಾರ ಕೈ ಕೆಳಗೆ ಕೂಡ ಇರಲಾರೆ ಎಂದು ಜೋರಾಗಿ ಹೇಳುತ್ತಾರೆ. ಇದನ್ನೆಲ್ಲ ಕೇಳಿದ ದೀಪಿಕಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ರೌಡಿಗಳಿಗೆ ಸುಫಾರಿ ಕೊಟ್ಟು ಸಂಗಮ್ ನನ್ನು ಕಿಡ್ನಾಪ್ ಮಾಡಿಸುತ್ತಾಳೆ. ಈ ವಿಚಾರ ದೀಪಿಕಾ ಫೋನ್ ನಲ್ಲಿ ಮಾತನಾಡುತ್ತಾ ಇರುವ ವೇಳೆ ಲಚ್ಚಿ ಹಾಗೂ ಜೆಜೆ ಕೇಳಿಸಿಕೊಳ್ಳುತ್ತಾ ಇರುತ್ತಾರೆ. ದೀಪಿಕಾ ಮಾತು ಕೇಳಿ ಲಚ್ಚಿ ಬೆಚ್ಚಿ ಬೀಳುತ್ತಾಳೆ.

More from Filmibeat

English summary
Namma Lacchi serial 2nd December update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X