Lacchi: ಲಚ್ಚಿಯನ್ನು ಮನೆಗೆ ಕರೆದುಕೊಂಡ ಬಂದ ಸಂಗಮ್; ದೀಪಿಕಾಗೆ ಶಾಕ್, ರಿಯ ಮನದಲ್ಲಿ ಆತಂಕ
ಲಚ್ಚಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಲಚ್ಚಿ ಮನೆ ಬಿಟ್ಟು ಹೋಗಿದ್ದಳು. ಸಂಗಮ್ ಹೇಗೋ ಆಕೆಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಲಚ್ಚಿ ಮನೆ ಬಿಟ್ಟು ಹೋಗಿರುವ ಬಗ್ಗೆ ಸಂಗಮ್‌ಗೆ ಏನು ಹೇಳದೆ ದೀಪಿಕಾ ಮುಚ್ಚಿಟ್ಟಿದ್ದಳು. ಆದರೆ ಸಂಗಮ್ ಲಚ್ಚಿ ಕಾಣಿಸದೆ ಇರುವುದನ್ನು ನೋಡಿ ಹುಡುಕಾಡುತ್ತಾನೆ.
ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಲಚ್ಚಿಯನ್ನ ನೋಡಿದ ಮನೆಯವರು ಎಲ್ಲರೂ ಖುಷಿ ಪಟ್ಟರೆ, ರಿಯಾ, ದೀಪಿಕಾ ಹಾಗೂ ಆಕೆಯ ತಾಯಿಗೆ ಶಾಕ್ ಆಗುತ್ತದೆ. ಲಚ್ಚಿ ಮನೆ ಬಿಟ್ಟು ಹೋಗಿದ್ದಳು, ಆದರೆ ಸಂಗಮ್ ಕೈಗೆ ಹೇಗೆ ಸಿಕ್ಕಳು ಎನ್ನುವುದು ಮಾತ್ರ ದೀಪಿಕಾಗೆ ಪ್ರಶ್ನೆ ಆಗಿದೆ.

ಇದೀಗ ಮನೆಗೆ ಲಚ್ಚಿಯನ್ನು ಕರೆದುಕೊಂಡು ಬಂದಿದ್ದಾರೆ. ಲಚ್ಚಿ ಮುಖ ನೋಡಿದ ರಿಯಾ ಮೂಗು ಮುರಿದರೆ ದೀಪಿಕಾ ಶಾಕ್ ನಲ್ಲಿ ಇದ್ದಾಳೆ. ಸಂಗಮ್ ದೀಪಿಕಾಳ ಎದುರಿಗೆ ಬಂದು ಹೇಳುತ್ತಾಳೆ. ಮಗಳ ಹಿಂದೆ ಹಾಡುವವರನ್ನು ಕರೆದುಕೊಂಡು ಬಂದಿದ್ದೇನೆ ಆತ ಯಾವತ್ತಿದ್ದರೂ ನಾನು ಹೇಳಿದ ಹಾಗೆಯೇ ಇರುತ್ತಾನೆ. ನೀನು ಏನು ಮಾಡಲು ಕೂಡ ಸಾಧ್ಯ ಇಲ್ಲ ಎನ್ನುವ ಹಾಗೆ ಮಾತನಾಡಿದಾಗ ದೀಪಿಕಾ ಕೋಪದಿಂದ ಹೇಳುತ್ತಾಳೆ. ನೀವು ಯಾರು ಅವನನ್ನು ಕರೆದುಕೊಂಡು ಬರಲು ಎಂದೆಲ್ಲ ಹೇಳಿದಾಗ ಸಂಗಮ್ ಹೇಳುತ್ತಾನೆ. ಆತನ ತಂದೆ ಇದ್ದ ಹಾಗೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ದೀಪಿಕಾಗೆ ಬಹಳ ಕೋಪ ಬರುತ್ತದೆ.
ಆಕೆ ಸಂಗಮ್ ಮಾತಿಗೆ ಕೋಪಗೊಂಡ ದೀಪಿಕಾ ನೀವು ಹೇಗೆ ಈ ಮಾತುಗಳನ್ನು ಹೇಳುತ್ತೀರಿ, ಆ ರೀತಿಯ ಮಾತುಗಳನ್ನು ನಾನು ಇನ್ನೊಮ್ಮೆ ಕೇಳಲು ಇಷ್ಟ ಪಡುವುದಿಲ್ಲ ಎಂದು ಜೋರಾಗಿ ಹೇಳಿದಾಗ ಸಂಗಮ್ ಕೂಡ ಒಂದು ಮಾತು ಹೇಳುತ್ತಾನೆ. ನನಗೆ ಲಚ್ಚಿ ಬಹಳ ಮುಖ್ಯ ಆಕೆಯನ್ನು ನನ್ನಿಂದ ದೂರ ಮಾಡಲು ಹೊರಟರೆ ನಾನು ನಿಮ್ಮಿಂದ ದೂರ ಹೋಗಬೇಕಾಗುತ್ತದೆ ಎಂದು ಜೋರಾಗಿ ಹೇಳುತ್ತಾನೆ.
ಆ ಬಳಿಕ ಅಲ್ಲಿಂದ ದೀಪಿಕಾ ಹಾಗೂ ಆಕೆಯ ತಾಯಿ ಹೋಗುತ್ತಾರೆ. ಇನ್ನು ಸಂಗಮ್ ತನ್ನ ಅಣ್ಣನ ಬಳಿ ತನ್ನ ಬಾಳಿನಲ್ಲಿ ನಡೆಯುತ್ತಿರುವ ವಿಚಾರವನ್ನು ಬಹಳ ಬೇಸರದಿಂದ ಹೇಳುತ್ತಾನೆ. ರಿಯಾ ಕೂಡ ಈ ರೀತಿ ಆಡುತ್ತಿದ್ದಾರೆ. ಅಮ್ಮ ಕೂಡ ಅದೇ ರೀತಿ. ಬಹಳ ಬೇಸರ ಕೂಡ ಆಗುತ್ತಿದೆ. ರಿಯಾ ತಪ್ಪು ಮಾಡಿದ ವೇಳೆ ತಿದ್ದಿ ಬುದ್ದಿ ಹೇಳದೆ ಆಕೆಗೆ ಸರಿಯಾಗಿ ನಡೆದುಕೊಳ್ಳಲಿ ಬರುವುದಿಲ್ಲ.
ನಮಗೂ ಬುದ್ದಿ ಹೇಳಲು ಬಿಡುವುದಿಲ್ಲ. ಬಹಳ ಬೇಸರ ಆಗುತ್ತದೆ. ರಿಯಾ ನನ್ನ ಅರ್ಥ ಮಾಡಿಕೊಂಡು ಬಂದರೆ ಆಕೆಗೆ ಬಹಳ ಒಳ್ಳೆಯದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟ ಪಡುತ್ತಾಳೆ ಎಂದು ಹೇಳುತ್ತಾನೆ. ಇನ್ನು ರಿಯಾ ಲಚ್ಚಿಯನ್ನು ಆಕೆಯ ರೂಮ್ ನಲ್ಲಿ ಮಲಗಲು ಬಿಡುವುದಿಲ್ಲ. ಕೊನೆಗೆ ತಂದೆಯ ನೆನಪಾಗಿ ರೂಮಿನ ಒಳಗಡೆ ಬೆಡ್ ಕೆಳಗೆ ಮಲಗಲು ಹೇಳುತ್ತಾಳೆ. ರಿಯಾ ಹೇಳಿದ್ದನ್ನು ಕೇಳಿದ ಲಚ್ಚಿ ಬೆಡ್ ಕೆಳಗೆ ಮಲಗುತ್ತಾಳೆ. ಲಚ್ಚಿ ಗೊರಕೆ ಕೇಳಿದ ರಿಯಾಗೆ ಏನು ಮಾಡುವುದು ಎಂದು ತಿಳಿಯದೇ ಕೋಪಾಗೊಂಡಿದ್ದಾಳೆ.


Click it and Unblock the Notifications











