Namma Lacchi: ಲಚ್ಚಿ ಜೊತೆ ಸ್ನೇಹಾ ಬೆಳೆಸಿದ ರಿಯಾ; ನಿದ್ದೆಯಲ್ಲಿ ಅಮ್ಮನನ್ನು ನೆನೆದ ಲಚ್ಚಿಗೆ ಇನ್ನಾದರೂ ನ್ಯಾಯ ಸಿಗುತ್ತಾ?
ನಮ್ಮ ಲಚ್ಚಿ ಧಾರವಾಹಿ ಬಹಳ ಅದ್ಭುತವಾಗಿ ಮೂಡಿಬಂದಿದೆ. ಇದೀಗ ರಿಯಾ ಹಾಗೂ ಕಚ್ಚಿಯ ಸಂಬಂಧ ಸ್ನೇಹಾ ವಾಗಿ ಪರಿವರ್ತನೆ ಆಗುತ್ತಿದೆ. ರಿಯಾ ಗೆ ಇದೀಗ ಲಚ್ಚಿ ಅಂದರೆ ಬಹಳ ಇಷ್ಟ. ಆಕೆ ಅಮ್ಮನ ಜೊತೆ ಬಹಳ ಕೋಪಿಸಿಕೊಂಡು ಬಂದಿದ್ದಾಳೆ.
ಅದು ಕೇವಲ ರಿಯ ಹಾಗೂ ಲಚ್ಚಿ ರೂಲ್ಸ್ ಮಾಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ರಿಯ ಗೆ ಸರಿಯಾಗಿ ಬಯ್ಯುತ್ತಲೆ ಇರುತ್ತಾಳೆ. ಇದನ್ನೆಲ್ಲ ಕೇಳಿ ರಿಯಾ ಮುನಿಸಿಕೊಂಡು ಹೋಗಿದ್ದಾಳೆ. ಅನ್ನ..ನೀರು ಬಿಟ್ಟು ರಿಯ ಕುಳಿತಿದ್ದಾಳೆ. ಆದರೆ ರಿಯಾ ಹತ್ತಿರ ದೀಪಿಕಾ ಆಗಲಿ ಜೆಜೆ ಆಗಲಿ ಬರಲೇ ಇಲ್ಲ....ಆ ವೇಳೆ ಕೈಯಲ್ಲಿ ಊಟ ಹಿಡಿದು ಬಂದಿದ್ದು ಲಚ್ಚಿ.

ಲಚ್ಚಿ ಯನ್ನು ನೋಡಿದ ರಿಯಾ ಗೆ ಕೊಂಚ ಖುಷಿ ಆಗುತ್ತದೆ. ಇನ್ನೂ ಆಕೆ ಲಚ್ಚಿ ಮಾತನ್ನು ಯಾವತ್ತೂ ತೆಗೆದು ಹಾಕುವುದು ಇಲ್ಲ ಕೂಡ. ಇನ್ನೂ ರಿಯಾ ಬಳಿ ಬಂದ ಲಚ್ಚಿ.. ರಿಯಾ ಳನ್ನು ಸಮಾಧಾನ ಮಾಡಲು ಬರುತ್ತಾಳೆ..ಆಗ ರಿಯ ತನ್ನ ಮನದಲ್ಲಿ ಇರುವ ದುಃಖವನ್ನು ತೋಡಿಕೊಂಡು ಇರುತ್ತಾಳೆ ಆ ವೇಳೆ ಲಚ್ಚಿ ಮಾತ್ರ ಮೆತ್ತಗೆ ಹೇಳುತ್ತಾಳೆ. ಇದೀಗ ನೀನು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರೆ ನನ್ನನ್ನು ಯಾರಾದರೂ ಗುರುತಿಸುತ್ತಾರೆ
ಅದಕ್ಕೆ ಅಂತಹ ಘಟನೆಗಳು ಯಾವುದು ಆಗುವುದು ಬೇಡ ಎಂಬುವುದಕ್ಕೆ ದೀಪಿಕಾ ಅಮ್ಮ ಹೇಳಿರಬೇಕು.. ರಿಯಾ ನೀನು ಆ ರೀಲ್ಸ್ ಅನ್ನು ಡಿಲೀಟ್ ಮಾಡಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ರಿಯ ಸರಿ ಲಚ್ಚಿ ನೀನು ಹೇಳುತ್ತ ಇದ್ದೀಯಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡು ಇದ್ದೇನೆ ಎಂದು ಹೇಳುತ್ತಾಳೆ. ಆ ಬಳಿಕ ಸಾಮಾಜಿಕ ಜಾಲತಾಣ ಕ್ಕೆ ಅಪ್ಲೋಡ್ ಆಗಿದ್ದ ವಿಡಿಯೋವನ್ನು ಡಿಲೀಟ್ ಮಾಡಿ ... ಲಚ್ಚಿ ಬಳಿ ಹೇಳುತ್ತಾಳೆ
ಲಚ್ಚಿ ನೋಡು .. ರಿಲ್ಸ್ ಡಿಲೀಟ್ ಮಾಡಿದೆ ಎಂದು ಹೇಳಿದಾಗ ಲಚ್ಚಿ ಗೆ ಬಹಳ ಖುಷಿ ಆಗುತ್ತದೆ ಆ ಬಳಿಕ ರಿಯಾಗೆ ಒಂದೊಂದೇ ತುತ್ತು ಮಾಡಿ ಊಟ ಮಾಡಿಸುತ್ತಾರೆ. ಇನ್ನೂ ಅವರಿಬ್ಬರ ಅನ್ಯೋನ್ಯ ಅಷ್ಟರ ಮಟ್ಟಿಗೆ ಹೆಚ್ಚಾಗುತ್ತದೆ. ಇನ್ನೂ ರಿಯ ಜೊತೆ ಮಾತನಾಡುತ್ತಾ ಲಚ್ಚಿ ಹೇಳುತ್ತಾಳೆ ನಾನು ಚಂದ್ರ ನ ಬಳಿ ಯಾವತ್ತೂ ಮಾತನಾಡುತ್ತಾ ಇರುತ್ತೇನೆ ಹೀಗಾದಾಗ ಮನಸ್ಸಿಗೆ ಬಹಳ ಖುಷಿ ಸಿಗುತ್ತದೆ ಎಂದೆಲ್ಲ ಹೇಳುತ್ತಾಳೆ
ಇದೆಲ್ಲವನ್ನೂ ಕೇಳಿದ ರಿಯಾ ಹೇಳುತ್ತಾಳೆ ಲಚ್ಚಿ ನೀನು ನನ್ನ ರೂಂ ನಲ್ಲಿ ಇನ್ನೂ ಮುಂದೆ ಮಲಗು ಎಂದು ಹೇಳುತ್ತಾರೆ ಇದನ್ನು ಕೇಳಿದ ಲಚ್ಚಿ ಮಾತ್ರ ಸರಿ ಎಂದು ಒಪ್ಪಿಗೆ ನೀಡುತ್ತಾನೆ. ಇನ್ನೂ ಲಚ್ಚಿ ಗೆ ಮಾತ್ರ ರಾತ್ರಿ ಇಡೀ ಎಸಿ ಯ ಹೊಡೆತಕ್ಕೆ ನಿದ್ದೆಯೇ ಬರುವುದು ಇಲ್ಲ. ಆಕೆ ಚಳಿಯಿಂದ ನಡುಗಿ ಹೋಗಿರುತ್ತಾರೆ. ಇದನ್ನು ನೋಡಿದ ರಿಯಾ ಏಸಿಯನ್ನು ಬಂದ್ ಮಾಡಿ ಬಿಡುತ್ತಾಳೆ.
ಇನ್ನೂ ರಾತ್ರಿ ಇಡೀ ಗಿರಿಜಮ್ಮ ಎಂದೆಲ್ಲ ಲಚ್ಚಿ ಕನವರಿಸುತ್ತಾ ಇರುತ್ತಾಳೆ ಇದೆಲ್ಲವನ್ನೂ ಕೇಳಿದ ರಿಯ ಮಾತ್ರ ಇದೆಲ್ಲವನ್ನೂ ತಂದೆಯ ಬಳಿ ಹೇಳಬೇಕು ಎಂದು ಮನದಲ್ಲಿ ನಿರ್ಧಾರ ಮಾಡಿಕೊಂಡು ಇರುತ್ತಾಳೆ.


Click it and Unblock the Notifications











