Namma Lacchi: ಮಾವನನ್ನು ಕರೆದುಕೊಂಡು ಹಳ್ಳಿಗೆ ಬಂದ ಲಚ್ಚಿ, ಗೋಪಾಲನ ಆರೋಗ್ಯದಲ್ಲಿ ಚೇತರಿಕೆ ಕಂಡು ಖುಷಿ ಪಟ್ಟ ಸಂಗಮ್

By Poorva

ನಮ್ಮ ಲಚ್ಚಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಗೋಪಾಲನಿಗೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಎಲ್ಲಾ ಮರೆತೇ ಹೋಗಿದೆ. ಆದರೂ ಲಚ್ಚಿ ನನ್ನ ಮಾವ ಸರಿ ಹೋಗಬೇಕು ಅವರಿಗೆ ಹಳೆಯದೆಲ್ಲ ನೆನಪಿಗೆ ಬರಬೇಕು ಆ ರೀತಿ ಮಾಡಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ನನ್ನ ಜೀವನಕ್ಕೆ ಮಾವ ಬಹಳ ಸಹಕಾರಿ ಆಗಿದ್ದರು. ಆದ್ರೆ ಇದೀಗ ಇದೀಗ ಮಾವನ ಸ್ಥಿತಿಯೇ ಅತಂತ್ರವಾಗಿದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಶಾಂತ ಮಾತ್ರ ಮನದಲ್ಲಿ ದೇವರ ಬಳಿ ಪ್ರಾರ್ಥನೆ ಮಾಡುತ್ತಾ ಇರುತ್ತಾಳೆ. ನನ್ನ ಗಂಡ ಹುಷಾರು ಆಗದೆ ಹೋಗಲಿ. ಬೇಗ ಚೇತರಿಕೆ ಆದರೆ ಖಂಡಿತವಾಗಿಯೂ ಸಂಗಮ್‌ಗೆ ನಿಜ ಹೇಳುವ ಎಲ್ಲಾ ಲಕ್ಷಣ ಕಾಣುತ್ತಿದೆ ಎಂದು ಯೋಚನೆ ಮಾಡುತ್ತಿರುತ್ತಾಳೆ.

kannada-serial-namma-lacchi

ಇನ್ನೂ ಲಚ್ಚಿ ತನ್ನ ಮಾವನ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾಳೆ. ಆದರೆ ಸಂಗಮ್ ಲಚ್ಚಿ ಬಳಿ ಪ್ರಶ್ನೆ ಮಾಡುತ್ತಾನೆ. ಏನು ಲಚ್ಚಿ ಯೋಚನೆ ಮಾಡುತ್ತಿದ್ದಿಯಾ ಎಂದೆಲ್ಲ ಪ್ರಶ್ನೆ ಮಾಡುತ್ತಾನೆ ಆಗ ಲಚ್ಚಿ ಹೇಳುತ್ತಾಳೆ ಮಾವನನ್ನು ಊರಿಗೆ ಕರೆದುಕೊಂಡು ಹೋದರೆ ಅವರಿಗೆ ಹಳೆಯ ನೆನಪು ಬರಬಹುದು ಎಂದು.

ಲಚ್ಚಿ ಉಪಾಯಕ್ಕೆ ಸಾಥ್ ನೀಡಿದ ಸಂಗಮ್

ಮಾವ ಹುಟ್ಟಿ ಬೆಳೆದಿರುವುದು ಹಳ್ಳಿಯಲ್ಲಿ ಹಳ್ಳಿಯ ವಾತಾವರಣಕ್ಕೆ ಅವರನ್ನು ಕರೆದುಕೊಂಡು ಹೋದರೆ ಅವರಲ್ಲಿ ಏನಾದರು ಚೇತರಿಕೆ ಕಾಣಬಹುದು ಎಂದೆಲ್ಲ ಹೇಳುತ್ತಾಳೆ. ಆಗ ಸಂಗಮ್ ಲಚ್ಚಿ ಹೇಳುತ್ತ ಇರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳುತ್ತಾನೆ. ಹಾಗೆಯೇ ಸುಗ್ಗಿಯ ತಂದೆ ಬೇಗ ಗುಣಮುಖ ಆಗಲಿ ಎನ್ನುವುದು ನನ್ನ ಆಶಯ ಎಂದು ಹೇಳುತ್ತಾಳೆ ಇದನ್ನು ಕೇಳಿದ ಸಂಗಮ್ ಗೆ ಇನ್ನೂ ಬೇಸರ ಆಗುತ್ತದೆ.

kannada-serial-namma-lacchi

ಗೋಪಾಲನ ಸ್ಥಿತಿ ಕಂಡು ಲಚ್ಚಿ ಬೇಸರ

ಇನ್ನೂ ಗೋಪಾಲನ ಸ್ಥಿತಿ ಕಂಡು ಲಚ್ಚಿ ಮರುಗುತ್ತಾ ಇರುತ್ತಾಳೆ. ಮಾವ ನೀವು ಹೇಗಾದರೂ ಸರಿ ಹೋಗಬೇಕು ನಾನು ನಿಮ್ಮನ್ನು ಹಳ್ಳಿಗೆ ಕರೆದುಕೊಂಡು ಹೋಗಿ ನೀವು ಆರೋಗ್ಯದಲ್ಲಿ ಚೇತರಿಕೆ ಆಗುವ ಹಾಗೆ ಮಾಡುತ್ತೇನೆ ಎಂದು ಮನದಲ್ಲಿ ಅಂದುಕೊಂಡಿದ್ದಾಳೆ. ಗೋಪಾಲನನ್ನು ಸಂಗಮ್ ಹಳ್ಳಿಗೆ ಕರೆದುಕೊಂಡು ಹೋಗುತ್ತಾನೆ. ಜೊತೆಗೆ ಶಾಂತ, ಸುಗ್ಗಿ, ಲಚ್ಚಿ ಮನೆ ಮಂದಿಯೆಲ್ಲ ಗೋಪಾಲನ ಮನೆಗೆ ಹೋಗುತ್ತಾರೆ.

ಶಾಂತಗೆ ಶುರುವಾದ ಆತಂಕ

ಹಳ್ಳಿಯಲ್ಲಿ ಹಾಲು ಮಾರುವವರ ಕ್ಯಾನ್ ನೋಡಿ ಗೋಪಾಲ ರಿಯಾಕ್ಟ್ ಮಾಡುತ್ತಾರೆ ಅದನ್ನು ನೋಡಿದ ಎಲ್ಲರಿಗೂ ಶಾಕ್ ಆಗುತ್ತದೆ ಹಾಗೆಯೇ ಲಚ್ಚಿ ಮತ್ತು ಸಂಗಮ್ ಗೆ ಬಹಳ ಖುಷಿ ಆಗುತ್ತದೆ. ತನ್ನ ಮಾವ ಈ ಹಳ್ಳಿಯಲ್ಲಿ ಇದ್ದರೆ ಬಹಳ ಖುಷಿಯಾಗಿ ಇರುತ್ತಾರೆ ಎನ್ನುವುದು ಲಚ್ಚಿ ನಂಬಿಕೆಯಾಗಿತ್ತು. ಲಚ್ಚಿ ಉಪಾಯ ವರ್ಕ್ ಆಗಿದ್ದನ್ನು ನೋಡಿದ ಸಂಗಮ್ ಖುಷಿ ಪಟ್ಟಿದ್ದಾನೆ.

More from Filmibeat

English summary
Kannada serial namma lacchi written update on 17th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X