Namma Lacchi: ಶಾಂತಳ ಆಸೆಗೆ ಕುಳ್ಳಿ ಇಟ್ಟ ಲಚ್ಚಿ: ಆಪತ್ಬಾಂದವನಾಗಿ ಬಂದ ಸಂಗಮ್
ರಿಯಾ ಹಾಗೂ ಲಚ್ಚಿಯನ್ನು ಮಾರಾಟ ಮಾಡಲು ಶಾಂತ ಕರೆದುಕೊಂಡು ಹೋಗುತ್ತಾಳೆ. ಆದರೆ ವಿಚಾರ ಲಚ್ಚಿ ಹಾಗೂ ತಿಳಿದಿರುವುದಿಲ್ಲ. ಆ ಬಳಿಕ ಲಚ್ಚಿಗೆ ತಿಳಿಯುತ್ತದೆ. ನನ್ನನ್ನು ಹಾಗೂ ರಿಯಾಳನ್ನು ಈ ಶಾಂತವ್ವ ಸುಮ್ಮನೆ ಬಿಡುವುದಿಲ್ಲ. ಯಾಕೆ ಏನಾದರೂ ಮಾಡಿ ನಮ್ಮಿಬ್ಬರನ್ನ ಮಾರಾಟ ಮಾಡಿ ಬಿಡುತ್ತಾಳೆ ಎಂದು ಆಕೆಗೆ ಅದೇಗೋ ಯೋಚನೆ ಬಂದಿತ್ತು.
ಶಾಂತ ಬಳಿಗೆ ರೌಡಿ ಬರುತ್ತಾನೆ. ಆ ಗೂಂಡಾಗಳನ್ನು ನೋಡಿದ ಲಚ್ಚಿ ಹಾಗೂ ರಿಯಾ ಬಹಳ ಭಯದಿಂದ ನಡುಗುತ್ತಾರೆ. ಇನ್ನು ಲಚ್ಚಿ ಅದೇಗೋ ಆ ಗೂಂಡಾಗಳಿಗೆ ಮಣ್ಣು ಮುಕ್ಕಿಸಿ ಬಿಡುತ್ತಾಳೆ. ಆ ಬಳಿಕ ರಿಯಾಳನ್ನು ಕರೆದುಕೊಂಡು ಲಚ್ಚಿ ಓಡಿ ಹೋಗುತ್ತಾಳೆ.

ಇದನ್ನೆಲ್ಲ ನೋಡಿದ ಶಾಂತ ನಾನು ಅದೆಷ್ಟು ಕಷ್ಟಪಟ್ಟು ಅವರಿಬ್ಬರನ್ನ ಕರೆದುಕೊಂಡು ಬಂದೆ. ಇದೀಗ ನಿಮ್ಮವರಿಗೆ ಅವರಿಬ್ಬರನ್ನ ಹಿಡಿಯುವ ಕೆಲಸ ಕೂಡ ಆಗುತ್ತಿಲ್ಲ ಎಂದು ರೌಡಿಗಳಿಗೆ ಬೈಯುತ್ತಾಳೆ. ರೌಡಿಗಳು ಏನು ಮಾತನಾಡದೇ ಅವರಿಬ್ಬರನ್ನ ಹುಡುಕುತ್ತಿರುತ್ತಾರೆ. ರಿಯಾ ಹಾಗೂ ಲಚ್ಚಿ ತಪ್ಪಿಸಿಕೊಂಡು ಅಡಗಿ ಕುಳಿತುಕೊಳ್ಳುತ್ತಾರೆ. ಆಗ ಅಲ್ಲಿಗೆ ಬಂದ ಗುಂಡಾಗಳು ಎಷ್ಟೇ ಹುಡುಕಿದರೂ ಅವರಿಗೆ ಸಿಗುವುದಿಲ್ಲ. ಕೊನೆಗೆ ರಿಯಾಳ ಮೂರ್ಖತನದಿಂದಾಗಿ ಲಚ್ಚಿ ಕೂಡ ಅಪಾಯಕ್ಕೆ ಸಿಲುಕುವ ಪರಿಸ್ಥಿತಿ ಬರುತ್ತದೆ.
ಸಂಗಮ್ ಬರುವಿಕೆಗಾಗಿ ಕಾಯುತ್ತಿದ್ದ ಲಚ್ಚಿ
ಲಚ್ಚಿ ತನ್ನ ಇಷ್ಟ ದೇವತೆಗಳಲ್ಲಿ ಪ್ರಾರ್ಥನೆ ಮಾಡುತ್ತಾಳೆ. ಹೇಗಾದರೂ ಮಾಡಿ ಸಂಗಮ್ ಬರಲಿ ಎಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಾಗ ಸಂಗಮ್ ಕಾರಿನಲ್ಲಿ ಅಲ್ಲಿಗೆ ಬರುತ್ತಾನೆ. ಇದನ್ನು ನೋಡಿದ ಲಚ್ಚಿಗೆ ಬಹಳ ಖುಷಿಯಾಗುತ್ತದೆ. ಸಂಗಮ್‌ನ ನೋಡಿದ ಶಾಂತಗೆ ಬಹಳ ಭಯವಾಗುತ್ತದೆ.

ಗೂಂಡಾಗಳಿಗೂ ಭಯ
ಇತ್ತ ಗೂಂಡಾಗಳಿಗೆ ಕೂಡ ಸಂಗಮ್ ಬಂದೆ ಬಿಟ್ಟನಾ? ಎಂದು ಆಶ್ಚರ್ಯ ಹಾಗೂ ಶಾಕ್ ಕೂಡ ಆಗುತ್ತದೆ. ಇನ್ನು ಶಾಂತಗೆ ಏನು ಮಾಡಬೇಕೆಂದು ತಿಳಿಯದೆ ಬಹಳ ಭಯಪಟ್ಟುಕೊಂಡು ಇರುತ್ತಾಳೆ. ಇತ್ತ ಲಚ್ಚಿ ಹಾಗೂ ರಿಯಾ ತಮ್ಮ ತಂದೆಯ ಬಳಿಗೆ ಬರುತ್ತಾರೆ. ಆದರೆ ಗೂಂಡಾಗಳು ಮಾತ್ರ ಸಂಗಮ್ ಹಾಗೂ ಆತನ ಅಣ್ಣನ ಜೊತೆ ಜಗಳ ಆಡುತ್ತಾರೆ. ಇವರಿಬ್ಬರು ಆ ಗೂಂಡಾಗಳಿಗೆ ಚೆನ್ನಾಗಿ ಬೆಂಡೆತ್ತಿ ಬಿಡುತ್ತಾರೆ.
ಸಂಕಷ್ಟದಿಂದ ಪಾರಾದ ರಿಯಾ, ಲಚ್ಚಿ
ಶಾಂತ ಕೈಯಿಂದ ರಿಯಾ ಹಾಗೂ ಲಚ್ಚಿಯನ್ನು ಕಾಪಾಡುತ್ತಾನೆ ಸಂಗಮ್. ಇನ್ನು ದೀಪಿಕಾ ಮಾತ್ರ ರಿಯಾಳನ್ನು ಕಳೆದುಕೊಂಡು ಕಂಗಾಲಾಗಿ ಹೋಗಿರುತ್ತಾಳೆ. ನನ್ನ ಮಗಳು ನನ್ನ ಕೈ ಸೇರಲೇಬೇಕು. ಹಾಗಾಗಿ ನಾನು ಏನೆಲ್ಲ ಮಾಡಿದ್ದೆ. ಆದರೆ ಇದೀಗ ಮನೆ ಕೆಲಸಕ್ಕೆ ಬಂದಾಕೆ ನನ್ನ ಮಗಳನ್ನೇ ಕರೆದುಕೊಂಡು ಹೋಗಿದ್ದಾಳೆ ಎಂದು ಗೋಳಾಡುತ್ತಾ ಇರುತ್ತಾಳೆ.


Click it and Unblock the Notifications











