Namma Lacchi: ಎಲ್ಲರ ಎದುರು ಹಾಡಿದ ರಿಯಾ: ಸಂಗಮ್ ಮಾತಿಗೆ ದಂಗಾದ ದೀಪಿಕಾ
'ಲಚ್ಚಿ' ಧಾರಾವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಲಚ್ಚಿ ಗಂಟಲು ಬಹಳ ಕೆಟ್ಟು ಹೋಗಿದೆ. ಆಕೆಗೆ ಹಾಡಲು ಆಗೇದೆ ಏನು ಮಾಡುವುದು ಎಂದು ತಿಳಿಯುತ್ತಿರಲಿಲ್ಲ. ಸಂಗೀತಾ ನಿರ್ದೇಶಕರೊಬ್ಬರು ರಿಯಾ ಹಾಡು ಕೇಳಲು ಬರ್ತಿದ್ದಾರೆ. ಆದರೆ ಲಚ್ಚಿಗೆ ಹೀಗೆ ಆಗಿರುವುದನ್ನು ನೋಡಿದ ದೀಪಿಕಾಗೆ ಬಹಳ ಭಯ ಆಗುತ್ತದೆ. ರಿಯಾಗೆ ಹಾಡಲು ಆಗಲ್ಲ ಎಂದು ಟೆನ್ಷನ್‌ನಲ್ಲಿದ್ದಾಳೆ.
ಲಚ್ಚಿಗೆ ಗಂಟಲು ಸರಿ ಹೋಗಲು ಏನೆಲ್ಲ ಕೊಡಬೇಕು ಅದೆಲ್ಲವನ್ನೂ ಕೊಡುತ್ತಾಳೆ ದೀಪಿಕಾ. ಆದರೆ ಲಚ್ಚಿ ಧ್ವನಿ ಸರಿ ಹೋಗದ್ದನ್ನು ಕಂಡು ಮಾತ್ರ ಬಹಳ ಕೋಪಗೊಂಡು ಇರುತ್ತಾಳೆ. ಇನ್ನು ಅಲ್ಲಿಗೆ ಬಂದ ಸಂಗಮ್ ಅತ್ತಿಗೆ ಲಚ್ಚಿಗೆ ಗಂಟಲು ಕೆಟ್ಟಿರುವುದನ್ನು ನೋಡಿ ಬಹಳ ಶಾಕ್ ಆಗುತ್ತದೆ. ಬಳಿಕ ಆಕೆಯನ್ನು ಚೆನ್ನಾಗಿ ನೋಡಿಕೊಂಡು ಇರುವ ವೇಳೆ ದೀಪಿಕಾ ಹೇಳುತ್ತಾಳೆ ಕೆಮ್ಮು ಹೋಗಲು ಏನಾದರು ಮೆಡಿಸಿನ್ ಇದ್ದರೆ ಹೇಳುತ್ತೀರಾ ಅವಳಿಗೆ ಅವಳ ಧ್ವನಿ ಸರಿ ಹೋಗಬೇಕು ಎಂದು ಹೇಳಿದಾಗ ಸಂಗಮ್ ಅತ್ತಿಗೆಗೆ ದೀಪಿಕಾ ವರ್ತನೆ ವಿಚಿತ್ರ ಕಾಣುತ್ತದೆ.

ಇನ್ನೂ ದೀಪಿಕಾ ಮಾತ್ರ ಬಹಳ ಪ್ಲಾನ್ ಮಾಡಿ ಇರುತ್ತಾಳೆ. ಎಲ್ಲರಿಗೂ ಜೂಸ್‌ನಲ್ಲಿ ನಿದ್ದೆ ಬರುವ ಮಾತ್ರೆ ಹಾಕಿರುತ್ತಾಳೆ. ಆದರೆ ದೀಪಿಕಾ ತಾಯಿ ಬಂದು ಅದೆಲ್ಲವನ್ನೂ ಚೆಲ್ಲಿ ಅಲ್ಲಿಂದ ಹೋಗುತ್ತಾಳೆ. ಈ ವಿಚಾರ ದೀಪಿಕಾಗೆ ತಿಳಿದೇ ಇಲ್ಲ. ಆಕೆ ರಿಯಾಳನ್ನು ಸಮಾಧಾನ ಮಾಡುತ್ತಾ ಇರುತ್ತಾಳೆ. ಹಾಗೆಯೇ ಆಕೆಯನ್ನು ಚೆನ್ನಾಗಿ ರೆಡಿ ಮಾಡುತ್ತಾ ಇರುವಾಗ ದೀಪಿಕಾ ತಾಯಿ ಬರುತ್ತಾಳೆ. ಎಲ್ಲರೂ ಅಲ್ಲಿ ಕಾಯುತ್ತಾ ಇದ್ದಾರೆ ಬೇಗ ಬನ್ನಿ ಎಂದು ಹೇಳುತ್ತಾಳೆ. ಆಗ ದೀಪಿಕಾ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಹಾಕಿರುವುದು ಹೇಳುತ್ತಾಳೆ.
ದೀಪಿಕಾ ಮಾತಿಗೆ ಭಯ ಪಟ್ಟುಕೊಂಡು ತಾಯಿ
ಇದನ್ನು ಕೇಳಿದ ದೀಪಿಕಾ ತಾಯಿ ಬಹಳ ಭಯ ಪಟ್ಟುಕೊಂಡು ಇರುತ್ತಾಳೆ. ಇದನ್ನು ನೋಡಿದ ದೀಪಿಕಾಗೆ ತಿಳಿಯುತ್ತದೆ ಅಮ್ಮ ಏನೋ ಎಡವಟ್ಟು ಮಾಡಿ ಇರಬೇಕು ಎಂದು. ಆದರೂ ತಲೆ ಕೆಡಿಸಿಕೊಳ್ಳದೇ ಅದಕ್ಕೆ ಇನ್ನೊಂದು ಉಪಾಯ ಮಾಡುತ್ತಾಳೆ. ಲಚ್ಚಿ ಹಾಡಿದ ಆಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾಳೆ. ಅದನ್ನೇ ಪ್ಲೆ ಮಾಡಬೇಕು ಎಂದು ಅಂದುಕೊಂಡು ಅದಕ್ಕೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಾಳೆ. ಇನ್ನು ರಿಯಾಳನ್ನು ಕರೆದುಕೊಂಡು ದೀಪಿಕಾ ಎಲ್ಲರ ಮುಂದೆ ಹಾಡು ಹಾಡಿಸುತ್ತ ಇರುತ್ತಾರೆ.
ರಿಯಾ ಹಾಡಿದ್ದನ್ನು ನೋಡಿ ಖುಷಿ ಪಟ್ಟ ಸಂಗಮ್
ರಿಯಾ ಹಾಡುತ್ತಾ ಇರುವುದನ್ನು ನೋಡಿ ಎಲ್ಲರಿಗೂ ಬಹಳ ಖುಷಿ ಆಗುತ್ತದೆ . ಬಹಳ ಆನಂದದಿಂದ ಹಾಡನ್ನು ಕೇಳುತ್ತಾ ಇರುತ್ತಾರೆ. ಆದರೆ ಮೊದ ಮೊದಲು ಬಹಳ ಖುಷಿಯಿಂದ ಹಾಡು ಕೇಳುತ್ತಾನೆ ಸಂಗಮ್. ಆದರೆ ಕೊನೆ ಕೊನೆಗೆ ಯಾಕೋ ಸಂಗಮ್ ಹಾಡುವುದನ್ನು ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ರಿಯಾ ಹಾಡು ಹಾಡಿದ ಬಳಿಕ ಅಲ್ಲಿಗೆ ಬಂದ ಸಂಗಮ್ ರಿಯಾ ನಾನು ಲಾಸ್ಟ್ ಟೈಮ್ ಹಾಡಿದ ಹಾಡು ಹಾಡುತ್ತಿಯಾ ಎನ್ನುತ್ತಾನೆ. ಆಗ ರಿಯಾ ಕೊಂಚ ಗಲಿಬಿಲಿಗೊಳ್ಳುತ್ತಾಳೆ.

ರಿಯಾಗೆ ಸಮಾಧಾನ ಮಾಡಿದ ದೀಪಿಕಾ
ಇನ್ನೂ ದೀಪಿಕಾ ಮಾತ್ರ ರಿಯಾಗೆ ಕಣ್ಣು ಸನ್ನೆಯಲ್ಲೇ ಸಮಾಧಾನ ಮಾಡುತ್ತಾಳೆ. ಇನ್ನು ಸಂಗಮ್ ಬೇಡಿಕೆಯಂತೆ ಹಾಡು ಹಾಡುತ್ತಾಳೆ. ಮ್ಯೂಸಿಕ್ ಡೈರೆಕ್ಟರ್‌ಗೆ ಬಹಳ ಖುಷಿ ಆಗುತ್ತದೆ. ಅವರು ಹೋದ ಬಳಿಕ ಸಂಗಮ್ ಮಾತ್ರ ಕೊಂಚ ಜೋರಾಗಿ ದೀಪಿಕಾ ಬಳಿ ಬಂದು ಈ ಹಾಡು ಹಾಡಿದ್ದು ಯಾರು ಎಂದು ಕೇಳಿದಾಗ ಎಲ್ಲರೂ ಭಯದಿಂದ ಒಮ್ಮೆ ನಡುಗಿ ಬಿಡುತ್ತಾರೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











