Namma Lacchi: ಸಂಗಮ್ ಮನೆಗೆ ಮರಳಿ ಬಂದ ಲಚ್ಚಿ, ಮನೆಮಂದಿಯ ಪ್ರಶ್ನೆಗೆ ಉತ್ತರಿಸುತ್ತಾಳಾ?

By Poorva

ನಮ್ಮ ಲಚ್ಚಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು, ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಲಚ್ಚಿ ಹುಡುಗ ಅಲ್ಲ ಹುಡುಗಿ ಎನ್ನುವ ಸತ್ಯ ಸಂಗಮ್‌ಗೆ ತಿಳಿದು ಹೋಗಿದೆ. ಇದೀಗ ಲಚ್ಚಿ ಸಂಗಮ್ ಮನೆ ಬಿಟ್ಟು ಬಂದಿದ್ದಾಳೆ. ಲಚ್ಚಿ ಮನೆ ಬಿಟ್ಟು ಹೋಗಿರುವುದನ್ನು ನೋಡಿದ ಸಂಗಮ್ ಲಚ್ಚಿಯನ್ನು ಹುಡುಕಿಕೊಂಡು ಹೋಗುತ್ತಾನೆ.

ಲಚ್ಚಿ ಅಂದರೆ ಸಂಗಮ್‌ಗೆ ಪ್ರಾಣ..ಲಚ್ಚಿಯನ್ನು ನೆನೆದು ಬಹಳ ನೋವು ಅನುಭವಿಸುತ್ತಿದ್ದಾನೆ. ಅಂತೂ ಇಂತೂ ಲಚ್ಚಿ ಸಂಗಮ್ ಕೈ ಗೆ ಸಿಗುತ್ತಾಳೆ. ಸಂಗಮ್ ಅಂದರೆ ಬಹಳ ಪ್ರೀತಿ ಲಚ್ಚಿಗೆ ಆದರೆ ಅದ್ಯಾವುದನ್ನೂ ಲಚ್ಚಿ ತೋರಿಸಿಕೊಳ್ಳುವುದು ಇಲ್ಲ. ಆದರೆ ಲಚ್ಚಿ ಮನೆಗೆ ಬರದೆ ಇರುವುದನ್ನು ಕಂಡ ಸಂಗಮ್ ತಾನು ಕೂಡ ಲಚ್ಚಿ ಮನೆಗೆ ಬರುವವರೆಗೆ ಎಲ್ಲಿಗೆ ಬರುವುದಿಲ್ಲ ಎಂದು ಯೋಚನೆ ಮಾಡುತ್ತಾನೆ.

kannada-serial-namma-lacchi

ಲಚ್ಚಿಗೆ ಸಂಗಮ್ ಅಂದರೆ ಬಹಳ ಇಷ್ಟ. ಸಂಗಮ್ ಚೆನ್ನಾಗಿ ಇರಬೇಕು ಎಂದುಕೊಂಡು ಇರುತ್ತಾಳೆ. ಇನ್ನೂ ಸಂಗಮ್ ಮಾತ್ರ ಲಚ್ಚಿಯ ಇಂಥಹ ದುಸ್ಥಿತಿಗೆ ಕಾರಣ ಎನು ಎಂಬುವುದನ್ನು ಯೋಚನೆ ಮಾಡುತ್ತಾ ಇರುತ್ತಾನೆ.

ತನ್ನ ನೋವನ್ನು ಯಾರ ಬಳಿಯೂ ಹೇಳಿಕೊಳ್ಳದ ಲಚ್ಚಿ

ಇನ್ನೂ ಸಂಗಮ್ ತಲೆಗೆ ಬಲವಾಗಿ ಪೆಟ್ಟುಕೊಡುತ್ತಾರೆ ಲಚ್ಚಿ ಗೆಳೆಯರು. ಇದನ್ನು ಕೇಳಿಸಿಕೊಂಡ ಲಚ್ಚಿ ಎನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಸಂಗಮಪ್ಪ ತಲೆಗೆ ಏಟು ಆಗಿದೆ ಎಂದು ತಿಳಿದು ಬಹಳ ಬೇಸರ ಪಟ್ಟುಕೊಂಡಿದ್ದಾಳೆ. ಆದರೆ ಇದೆಲ್ಲವನ್ನೂ ನೋಡಿದ ಸಂಗಮ್ ಮಾತ್ರ ಲಚ್ಚಿಗೆ ಮನೆಗೆ ಬಾ ಎಂದು ಗೋಗರೆಯತ್ತಾನೆ.

kannada-serial-namma-lacchi

ಲಚ್ಚಿ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ಕೊನೆಗೆ ಅದು ಹೇಗೋ ಲಚ್ಚಿ ಸಂಗಮ್ ಮನೆಗೆ ಹೋಗುತ್ತಾಳೆ. ಆಗ ಸಂಗಮ್ ಮಾತ್ರ ಲಚ್ಚಿ ಬಳಿ ನೇರವಾಗಿ ಕೇಳುತ್ತಾನೆ ಯಾಕೆ ಲಚ್ಚಿ ಏನಾಯಿತು.. ನಿನ್ನ ಈ ಪರಿಸ್ಥಿತಿಗೆ ಕಾರಣ ಯಾರು ಲಚ್ಚಿ ನಾನು ಮಾತ್ರ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೋರಾಗಿ ಹೇಳುತ್ತಾನೆ. ಆದರೆ ಲಚ್ಚಿ ಏನು ಹೇಳದೆ ಸುಮ್ಮನೆ ಆಗುತ್ತಾಳೆ.

ಲಚ್ಚಿ ನೋಡಿ ಮನೆಯವರಿಗೆ ಫುಲ್ ಖುಷ್

ಇನ್ನೂ ಲಚ್ಚಿ ಮನೆಗೆ ಬಂದಿರುವುದನ್ನು ನೋಡಿದ ಸಂಗಮ್ ಹಾಗೂ ಆತನ ಮನೆಯವರಿಗೆ ಬಹಳ ಖುಷಿ ಆಗುತ್ತದೆ. ಸಂಗಮ್ ಮಗಳು ಲಚ್ಚಿ ಎಂದು ತಿಳಿದರೆ ಮಾತ್ರ ಸಂಗಮ್‌ಗೆ ಅದೆಷ್ಟು ಆನಂದ ಆಗಬಹುದು. ಗಿರಿಜಾ ಮಗಳು ತಾನು ಎಂದು ಸತ್ಯ ಬಾಯಿ ಬಿಡುತ್ತಾಳ ಲಚ್ಚಿ ಕಾದು ನೋಡಬೇಕಿದೆ.

More from Filmibeat

English summary
Kannada serial Namma Lacchi written updated on 14th October .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X