Namma Lacchi : ಗೋಪಾಲನನ್ನು ನೋಡಿ ನಡುಗಿದ ದೀಪಿಕಾ, ಸಂಗಮ್- ಲಚ್ಚಿಗೆ ತಿಳಿಯುತ್ತಾ ನಿಜಾಂಶ?
ನಮ್ಮ ಲಚ್ಚಿ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡಿದೆ. ಇದೀಗ ಲಚ್ಚಿ ಮಾವ ಗೋಪಾಲನಿಗೆ ಹಳೆಯದೆಲ್ಲ ಮರುಕಳಿಸುವ ಹಾಗೆ ಕಾಣುತ್ತಿದೆ. ಲಚ್ಚಿ ತನ್ನ ಮಾವನಿಗೆ ಹಳೆಯದೆಲ್ಲ ನೆನಪಾಗಲಿ ಎಂದು ಮಾವನನ್ನು ಹಳ್ಳಿಗೆ ಕರೆದುಕೊಂಡು ಹೋಗುತ್ತಾನೆ. ಇದಕ್ಕೆ ಸಂಗಮ್ ಬಹಳ ಪ್ರೋತ್ಸಾಹ ಕೊಡುತ್ತಾನೆ. ಆದರೆ ದೀಪಿಕಾಗೆ ಮಾತ್ರ ಬಹಳ ಭಯ. ಯಾಕೆಂದರೆ ಲಚ್ಚಿ ತಾಯಿ ಗಿರಿಜಾ ಸಾವಿಗೆ ದೀಪಿಕಾ ನೇರ ಹೊಣೆ ಆಗಿರುತ್ತಾರೆ.
ಆದರೆ, ದೀಪಿಕಾಗೆ ಬಹಳ ಭಯ. ಯಾಕೆಂದರೆ ಎಲ್ಲಿ ಗಿರಿಜಾ ಅಣ್ಣನಿಗೆ ಹಳೆಯದೆಲ್ಲ ನೆನಪಾಗಿ ಬಿಡುತ್ತದೋ ಎನ್ನುವ ಭಯ ಬಹಳಷ್ಟು ಕಾಡುತ್ತಿದೆ. ಇದೀಗ ಮನೆ ಮಂದಿ ಎಲ್ಲಾ ಸೇರಿ ಕಬ್ಬಡ್ಡಿ ಆಡುತ್ತಾ ಇರುತ್ತಾರೆ ಇದೆಲ್ಲವನ್ನೂ ಗಮನಿಸುತ್ತಾ ಇದ್ದ ಲಚ್ಚಿ ಮಾವನಿಗೆ ದೀಪಿಕಾ ಕಾಣಿಸುತ್ತಾಳೆ.

ಆತನಿಗೆ ದೀಪಿಕಾ ಕಾಣಿಸುತ್ತ ಇರುವಾಗ ಆತನಿಗೆ ತನ್ನ ತಂಗಿ ಗಿರಿಜಾ ನೆನಪಾಗಿ ಬಿಡುತ್ತದೆ. ಆತ ಒಮ್ಮೆಲೆ ಕುಳಿತಲ್ಲಿಂದ ಎದ್ದು ನೇರವಾಗಿ ದೀಪಿಕಾ ಬಳಿ ಹೋಗಿ ನನ್ನ ತಂಗಿ ಎಂದೆಲ್ಲ ಹೇಳುತ್ತ ಇರುತ್ತಾನೆ. ಇದನ್ನು ನೋಡಿದ ಮನೆ ಮಂದಿಗೆ ಬಹಳ ಶಾಕ್ ಆಗುತ್ತದೆ. ಅರೆರೆ ಇದೇನು ಮಾವ ನೇರವಾಗಿ ದೀಪಿಕಾ ಅಮ್ಮನ ಬಳಿ ಹೋಗುತ್ತಾ ಇದ್ದಾರಲ್ಲ.. ಇವರಿಗೆ ಮೊದಲೇ ದೀಪಿಕಾ ಅಮ್ಮ ಯಾರು ಎಂದು ಗೊತ್ತಿತ್ತಾ ಎನ್ನುವ ಗೊಂದಲಕ್ಕೆ ಲಚ್ಚಿ ಒಳಗಾಗುತ್ತಾಳೆ.
ಕುಸಿದು ಬಿದ್ದ ಲಚ್ಚಿ ಮಾವ
ಆ ಬಳಿಕ ಲಚ್ಚಿ ಮಾವ ಒಮ್ಮೆಲೆ ಕುಸಿದು ಬೀಳುತ್ತಾರೆ. ಇದನ್ನು ನೋಡಿದ ಲಚ್ಚಿ ಮೆತ್ತಗೆ ದೀಪಿಕಾ ಬಳಿ ಬಂದು ಹೇಳುತ್ತಾರೆ. ದೀಪಿಕಾ ಅಮ್ಮ ನಾನು ಹೀಗೆ ಕೇಳುತ್ತಿನಿ ಎಂದು ಬೇಸರ ಪಡಬೇಡಿ. ನಿಮಗೂ ಈ ಮಾವನಿಗು ಹಾಗೆಯೇ ಮಾವನ ತಂಗಿಗೆ ಹೇಗೆ ಪರಿಚಯ ಎಂದಾಗ ದೀಪಿಕಾ ಭಯಗೊಂಡ ತಬ್ಬಿಬ್ಬು ಆಗುತ್ತಾಳೆ. ಆಕೆಯ ಮುಖ ನೋಡಿದ ಲಚ್ಚಿ ಮಾತ್ರ ಇಲ್ಲಿ ಏನೋ ಇದೆ ಎಂಬುವುದು ಮಾತ್ರ ಅರಿತುಕೊಂಡು ಅಲ್ಲಿಂದ ಹೋಗುತ್ತಾಳೆ.

ಗಿರಿಜಾ ನೆನಪಾಗಿ ಕಣ್ಣೀರಿಟ್ಟ ಸಂಗಮ್
ಇನ್ನೂ ಸಂಗಮ್ ತನ್ನ ಹಳೆಯ ಪ್ರೇಯಸಿ ಗಿರಿಜಾ ನೆನಪಲ್ಲಿ ಇರುತ್ತಾನೆ. ಗಿರಿಜಾ ನೆನಪಾಗಿ ತನ್ನ ಅಣ್ಣನ ಬಳಿಗೆ ಬರುತ್ತಾನೆ ಸಂಗಮ್. ಅಣ್ಣ ನನ್ನ ಗಿರಿಜಾ ಹೇಗಿದ್ದಾಳೆ ಆಕೆ ಚೆನ್ನಾಗಿ ಇದ್ದಾಳಲ್ಲ...? ನೀನೇ ಹೇಳಿದೆ ಗಿರಿಜಾಗೆ ಇನ್ನೊಂದು ಮದುವೆ ಆಯಿತು. ಆಕೆ ಖುಷಿಯಾಗಿ ಇದ್ದಾಳೆ ಎಂದು. ಆದರೆ ನನಗೆ ಇದೀಗ ಗಿರಿಜಾನ ನೋಡಬೇಕು ಅನ್ನಿಸುತ್ತಿದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಂಗಮ್ ಅಣ್ಣ ಕೊಂಚ ಬೇಸರ ಪಟ್ಟುಕೊಂಡಿದ್ದಾನೆ.
ಸಂಗಮ್ ಸ್ಥಿತಿ ಕಂಡು ಬೇಸರ ಪಟ್ಟ ಅಣ್ಣ
ಗಿರಿಜಾ ಇಲ್ಲ ಇನ್ನೂ ಆಕೆ ನೆನಪು ಮಾತ್ರ ಎಂದು ಈ ವಿಚಾರವನ್ನು ಇವನಿಗೆ ಹೇಗೆ ಹೇಳಲಿ ಎಂದು ಸಂಗಮ್ ಅಣ್ಣ ಸುಮ್ಮನೆ ನಿಂತುಕೊಂಡು ಇರುವಾಗ ಸಂಗಮ್ ಅಳುತ್ತಾ ಹೇಳುತ್ತಾನೆ ಅಣ್ಣ ನಾನು ಗಿರಿಜಾಳನ್ನು ನೋಡಬೇಕು .. ಆಕೆಯನ್ನು ದೂರದಿಂದ ನೋಡಿ ಖುಷಿ ಪಡುತ್ತೇನೆ. ಅವಳ ಗಂಡನ ಜೊತೆ ಖುಷಿಯಾಗಿ ಇರುವುದನ್ನು ನೋಡಿ ಕಣ್ಣು ತುಂಬಿಸಿಕೊಳ್ಳುತ್ತೇನೆ ಎಂದು ಅಳುತ್ತಾನೆ. ಆದರೆ ಅವನ ಅಣ್ಣ ನಿಜ ವಿಚಾರ ಹೇಳಿದರೆ ಸಂಗಮ್ ಸ್ಥಿತಿ ಬಹಳ ಕೆಟ್ಟದಾಗುತ್ತದೆ ಎಂದು ಯೋಚನೆ ಮಾಡುತ್ತಾನೆ.


Click it and Unblock the Notifications











