Namma Lacchi: ನಡೆಯದ ಶಾಂತ ಪ್ಲ್ಯಾನ್, ದೀಪಿಕಾ ಕೊಟ್ಟ ಶಾಕ್‌ಗೆ ನಡುಗಿದ ಶಾಂತ!
ನಮ್ಮ ಲಚ್ಚಿ ಧಾರವಾಹಿಯಲ್ಲಿ ಶಾಂತ ದೀಪಿಕಾಳನ್ನೆ ಬ್ಲಾಕ್ ಮೇಲ್ ಮಾಡಲು ಹೊರಟಿದ್ದಾಳೆ. ಆದರೆ ದೀಪಿಕಾ ಮೊದಲಿಗೆ ಕೊಂಚ ಶಾಕ್ ಆದರೂ ಆ ಬಳಿಕ ಸುಧಾರಿಸಿಕೊಂಡು ಶಾಂತಾಗೆ ತಾನೇ ಶಾಕ್ ನೀಡಿದ್ದಾಳೆ. ರಿಯಾ ಹಾಗೂ ಲಚ್ಚಿ ವಿಚಾರವನ್ನು ಎಲ್ಲರ ಎದುರು ಬಾಯಿ ಬಿಡುತ್ತೇನೆ ಎಂದು ಶಾಂತ ಬ್ಲಾಕ್ಮೇಲ್ ಮಾಡುತ್ತಾ ಇದ್ದಾಳೆ.
ಆಗ ದೀಪಿಕಾ ಮಾತ್ರ ಮೊದಲಿಗೆ ಏನು ಮಾತನಾಡದೆ ಇದ್ದು, ಆ ಬಳಿಕ ಶಾಂತನನ್ನು ಹೀಗೆಯೇ ಮಾತನಾಡಲು ಬಿಟ್ಟರೆ ನಮಗೆ ಉಳಿಗಾಲ ಇಲ್ಲ ಎಂಬುವುದು ತಿಳಿಯುತ್ತದೆ.. ಇನ್ನೂ ಶಾಂತ ದೀಪಿಕಾ ಹಾಗೂ ಆಕೆಯ ತಾಯಿ ಬಳಿ, ನೀವು ನನ್ನ ಮಾತನ್ನು ಕೇಳಲೇ ಬೇಕು .ಅದರ ಹೊರತಾಗಿ ನಿಮಗೆ ಬೇರೆ ಯಾವುದೇ ಆಪ್ಷನ್ ಇಲ್ಲ ಎಂದಾಗ ದೀಪಿಕಾ ಏನು ಮಾತನಾಡದೆ ಕೋಪಗೊಳ್ಳುತ್ತಾಳೆ.

ದೀಪಿಕಾ ಮೇಲೆ ಎಗರಡಿದ ಶಾಂತ
ಶಾಂತಾಳನ್ನು ಮಾತನಾಡಲು ಬಿಟ್ಟು ಸುಮ್ಮನಿದ್ದ ದೀಪಿಕಾ ಬಳಿಕ, "ಅಮ್ಮ ನಮ್ಮ ಹಣವನ್ನು ಕಳ್ಳತನ ಮಾಡಿದ್ದು ..ಹಾಗೆಯೇ ಕಿಚನ್ ನಲ್ಲಿ ಗ್ಯಾಸ್ ಲೀಕ್ ಮಾಡಿದ್ದು ಯಾರು ಎಂಬುವುದನ್ನು ಸಿಸಿ ಕ್ಯಾಮರಾದಲ್ಲಿ ನೋಡಿ .. ಯಾರೇ ಇದ್ದರೂ ಅವರನ್ನು ಒಳಗೆ ತಳ್ಳಲಿ ನಾವು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ " ಎಂದು ಹೆದರಿಸುತ್ತಾಳೆ.
"ಆ ಬಳಿಕ ಜೈಲಿನಲ್ಲಿ ಕಂಬಿ ಎಣಿಸುತ್ತಾ ಇರಲಿ" ಎಂದು ಹೇಳುತ್ತಾಳೆ.. ಇದನ್ನು ಕೇಳಿದ ಶಾಂತ ನಡುಗಿ ಹೋಗುತ್ತಾಳೆ.. ಶಾಂತ ಮುಖ ನೋಡಿದ ದೀಪಿಕಾ ಬಹಳ ಕಿರಿ ಕಿರಿ ಮಾಡುತ್ತಾಳೆ.. ಇನ್ನೂ ದೀಪಿಕಾ ತಾಯಿ ಸಿಸಿ ಕ್ಯಾಮರಾ ಚೆಕ್ ಮಾಡಲು ಹೊರಡುತ್ತಾಳೆ. ಇದನ್ನು ನೋಡಿದ ಶಾಂತ ಇಬ್ಬರ ಕಾಲಿಗೆ ಬೀಳುತ್ತಾಳೆ.. ಕ್ಷಮೆ ಕೇಳುತ್ತಾಳೆ.

ದೀಪಿಕಾ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಶಾಂತ
ಶಾಂತ ಕಾಲಿಗೆ ಬಿದ್ದದ್ದನ್ನು ನೋಡಿದ ದೀಪಿಕಾ ಹಾಗೂ ಆಕೆಯ ತಾಯಿ, ಈ ಎಲ್ಲಾ ಕೆಲಸ ಮಾಡಿದವಳು ಶಾಂತ ಎಂದು ತಿಳಿಯುತ್ತದೆ. ಇನ್ನೂ ಶಾಂತಳನ್ನು ಬಿಡುವುದು ಬೇಡಾ ಎಂದು ದೀಪಿಕಾ ತಾಯಿ ಹೇಳಿದರು. ದೀಪಿಕಾ ಮಾತ್ರ ಆಕೆಯನ್ನು ಕ್ಷಮಿಸುತ್ತಾರೆಳೆ. ಇನ್ನೂ ಲಚ್ಚಿಯನ್ನ ಹೇಗಾದರೂ ಮಾಡಿ ಸಾಯಿಸಿ ಬಿಡಬೇಕು ಎಂದು ಶಾಂತ ಹೊಂಚು ಹಾಕುತ್ತ ಇರುತ್ತಾಳೆ.
ಲಚ್ಚಿ ಮೇಲೆ ಕೋಪಗೊಂಡ ಶಾಂತ
ಆದರೆ ಈ ಬಗ್ಗೆ ಶಾಂತ ಲಚ್ಚಿ ಬಳಿ ಏನು ಮಾತನಾಡದೆ ಸುಮ್ಮನಿದ್ದು ಬಿಡುತ್ತಾಳೆ.. ಇತ್ತ, ಲಚ್ಚಿ ಜೊತೆ ರಿಯಾ ಬಹಳ ಹತ್ತಿರ ಆಗಿ ಬಿಡುತ್ತಾಳೆ.. ಲಚ್ಚಿ ಹೇಳುವ ಎಲ್ಲಾ ಮಾತನ್ನೂ ರಿಯಾ ಕೇಳುತ್ತಾಳೆ.. ಲಚ್ಚಿ ಮತ್ತು ರಿಯಾ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಾರೆ.. ದಿನ ಹೋದ ಹಾಗೆ ಲಚ್ಚಿ ಮತ್ತು ರಿಯಾ ಸ್ನೇಹ ಗಾಢವಾಗುತ್ತಿದೆ.
ಇದನ್ನೆಲ್ಲ ನೋಡಿದ ಶಾಂತ ಮಿಗೆ ಬಹಳ ಕಿರಿ ಕಿರಿ ಆಗುತ್ತದೆ.. ಶಾಂತಳ ಯಾವ ಮಾತನ್ನು ಆ ಮನೆಯವರು ಕೇಳಲೂ ರೆಡಿ ಇಲ್ಲ.. ಶಾಂತ ಜೊತೆ ಯಾರು ಅಷ್ಟಾಗಿ ಮಾತಾಡುವುದು ಇಲ್ಲ.. ಕಾರಣ ಆಕೆ ಮಾತನಾಡುವುದೇ ಲಚ್ಚಿ ಬಗ್ಗೆ ನೆಗೆಟಿವ್ ಆಗಿ. ಹೀಗಾಗಿ ಶಾಂತ ಮಾತಿಗೆ ಯಾರು ಮನ್ನಣೆ ಕೊಡುತ್ತಿಲ್ಲ.


Click it and Unblock the Notifications











