Namma Lacchi: ರಿಯಾ ಮಾತಿಗೆ ಸುಮ್ಮನಾದ ಮನೆಮಂದಿ, ಸಂಗಮಪ್ಪನ ಮನೆ ಬಿಡಲು ನಿರ್ಧರಿಸಿದ ಲಚ್ಚಿ!
ನಮ್ಮ ಲಚ್ಚಿ ಧಾರವಾಹಿಯಲ್ಲಿ ಶಾಂತ ಹಾಗೂ ಆಕೆಯ ಗಂಡನ ಕಿತ್ತಾಟದಲ್ಲಿ ದೀಪಿಕಾ ಜೈಲು ಪಾಲಾಗಿದ್ದಾರೆ. ಲಚ್ಚಿಯನ್ನು ಹೇಗಾದರೂ ಮಾಡಿ ಈ ಮನೆಯಿಂದ ಕಳುಹಿಸಿ ಸುಗ್ಗಿಯನ್ನೂ ಈ ಮನೆಯ ಮಗಳಾಗಿ ಮೆರೆಸಬೇಕು ಎಂಬುವುದು ಶಾಂತ ಆಸೆ. ಇನ್ನೂ ಶಾಂತ ಗಂಡ ಎಂದು ಗೊತ್ತಿಲ್ಲದೆ ಮಾಡಿದ ಎಡವಟ್ಟು ಇದೀಗ ದೀಪಿಕಾಳನ್ನು ಜೈಲು ಪಾಲಾಗುವ ಹಾಗೆ ಮಾಡಿದೆ.
ದೀಪಿಕಾ ತಂದೆ ಎಷ್ಟೇ ತಿಪ್ಪರಲಾಗ ಹೊಡೆದರು ಆತನಿಂದ ತನ್ನ ಮಗಳ ರಕ್ಷಣೆ ಮಾಡಲು ಆಗಲಿಲ್ಲ. ಇನ್ನು ಶಾಂತ ದೀಪಿಕಾ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಲು ಕೆಲವು ಷರತ್ತುಗಳನ್ನು ಹಾಕುತ್ತಾಳೆ. ಏನೆಂದರೆ ನಾನು ಇಲ್ಲಿಯೇ ಕೆಲಸ ಮಾಡಲು ಅವಕಾಶ ಮಾಡಬೇಕು. ಹಾಗೆಯೇ ಲಚ್ಚಿಯನ್ನ ಈ ಮನೆಯಿಂದ ಹೊರಗೆ ಹಾಕಬೇಕು ಎಂಬುವುದು.

ಈ ಮಾತನ್ನು ಸಂಗಮ್‌ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಶಾಂತಳಿಗೆ ಮುಂಚೆಯಿಂದಲು ಹೇಗಾದರೂ ಮಾಡಿ ಲಚ್ಚಿಯನ್ನ ಮನೆಯಿಂದ ಹೊರಗೆ ಹಾಕಬೇಕು ಎಂಬುವುದೆ ಆಕೆಯ ಉದ್ದೇಶ ಎಂದು ಸಂಗಮ್‌ಗೆ ತಿಳಿಯುತ್ತಿಲ್ಲ. ಪಾಪ ಲಚ್ಚಿ ಮಾತ್ರ ಮೆತ್ತಗೆ ನನ್ನಿಂದ ಈ ರೀತಿ ನಿಮಗೆ ಕಷ್ಟ ಬೇಡ .. ದೀಪಿಕಾ ಅಮ್ಮವರಿಗೋಸ್ಕರ ನಾನು ಮನೆ ಬಿಟ್ಟು ಹೋಗಲು ರೆಡಿ ಇದ್ದೇನೆ.. ಎಂದು ಹೇಳುತ್ತಾಳೆ.
ನೋವಲ್ಲಿರುವ ಸಂಗಮ್‌ಗೆ ಲಚ್ಚಿ ಸಾಂತ್ವನ
ರಿಯಾ ಮಾತ್ರ ಯಾವುದೇ ಕಾರಣಕ್ಕೂ ಲಚ್ಚಿ ಈ ಮನೆ ಬಿಟ್ಟು ಹೋಗುವುದನ್ನು ನಾನು ಒಪ್ಪುವುದಿಲ್ಲ. ಅವನು ನನ್ನ ಜೊತೆಯೇ ಇರುತ್ತಾನೆ. ಅವನಿಗೆ ಏನು ಆಗಲು ನಾನು ಬಿಡುವುದು ಇಲ್ಲ ಎಂದು ಹೇಳಿದ್ದಾಳೆ.ಇದನ್ನು ಕೇಳಿದ ಲಚ್ಚಿ ಎನು ಮಾತನಾಡದೆ ಸುಮ್ಮನೆ ಇರುತ್ತಾರೆ. ಆದರೆ ದೀಪಿಕಾ ತಂದೆ ಮಾತ್ರ ಸಂಗಮ್ ಬಳಿ ಖಡಕ್ ಆಗಿ ಹೇಳುತ್ತಾರೆ.. ನಮಗೆ ನನ್ನ ಮಗಳು ಹಾಗೂ ನಿನ್ನ ಹೆಂಡತಿ ಮನೆಗೆ ಬರಬೇಕು ಎಂದಿದ್ದರೆ ನಾವು ಲಚ್ಚಿಯನ್ನ ಮನೆಯಿಂದ ಹೊರಗೆ ಹಾಕಲು ಬೇಕು ಎಂದು. ಇದನ್ನು ಕೇಳಿ ಸಂಗಮ್ ತುಂಬಾ ನೊಂದುಕೊಂಡಿದ್ದಾನೆ.

ದೀಪಿಕಾಗಾಗಿ ಮನೆ ಬಿಟ್ಟು ಹೊರಟ ಲಚ್ಚಿ
ಲಚ್ಚಿಯನ್ನ ಈ ಮನೆಯ ಮಗನ ಹಾಗೆ ನೋಡಿಕೊಂಡಿದ್ದೆವೆ. ಆದರೆ ಈಗ ಆತನನ್ನು ಹೊರಗೆ ಕಳಿಸುವುದು ಹೇಗೆ ಸಾಧ್ಯ.. ಆತ ನನ್ನೊಂದಿಗೆ ಸದಾ ಇರಬೇಕು ಎಂಬುವುದು ಸಂಗಮ್ ಮಾತು.. ಆದರೆ ಅದ್ಯಾವುದನ್ನೂ ಯಾರು ಕೇಳಿಸಿಕೊಳ್ಳಲು ರೆಡಿ ಇಲ್ಲ. ಯಾಕೆಂದರೆ ದೀಪಿಕಾ ಜೈಲಿನಿಂದ ಹೊರಬೇಕು. ಇದು ಎಲ್ಲರ ಆಸೆ ಕೂಡ. ಅದಕ್ಕಾಗಿ ಲಚ್ಚಿಯನ್ನು ಕಳೆದುಕೊಳ್ಳುವ ಅನಿವಾರ್ಯತೆ ಕೂಡ ಇದೆ ಎಂದರೆ. ಆದರೆ ಸಂಗಮ್ ಇದಕ್ಕೆಲ್ಲ ತಯಾರಾಗಬೇಕು. ಲಚ್ಚಿ ಕೂಡ ಮನೆ ಬಿಡಲು ತಯಾರಾಗಿದ್ದಾಳೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications