Namma Lacchi: ಶಾಂತ ಮಾತಿಗೆ ಜಗ್ಗದೇ, ದೀಪಿಕಾಳನ್ನು ಬಿಡುಗಡೆ ಮಾಡಿಸಿ ಪ್ರೀತಿ ಗೆದ್ದ ಲಚ್ಚಿ

By Poorva

ನಮ್ಮ ಲಚ್ಚಿ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಇದೀಗ ಲಚ್ಚಿ ಶಾಂತಗೆ ಬುದ್ದಿ ಕಲಿಸಲು ಮುಂದಾಗಿದ್ದಾಳೆ. ಶಾಂತ ಅದೆಷ್ಟೇ ಲಚ್ಚಿಯನ್ನು ಬ್ಲಾಕ್ ಮೇಲ್ ಮಾಡಿದ್ರು ಲಚ್ಚಿ ಮಾತ್ರ ಆ ಬಗ್ಗೆ ತಲೇನೆ ಕೆಡಿಸಿಕೊಳ್ಳದೆ. ನನ್ನ ತಾಯಿ ಹಾಗೂ ಈ ಮನೆಯವರಿಗೆ ಏನು ಲಿಂಕ್ ಇದೆ ಎಂಬುದನ್ನು ಮೊದಲು ತಿಳಿಯಬೇಕು ಎಂದು ಹೇಳಿದಾಗ ಶಾಂತ ಮಾತೇ ಹೊರಡದೆ ಸುಮ್ಮನಿದ್ದಾಳೆ.

ಶಾಂತಗೆ ಲಚ್ಚಿ ಮೇಲೆ ಬಹಳ ಕೋಪ ಇದೆ. ಆದರೆ ನನ್ನ ಮಗಳನ್ನು ಈ ಮನೆಯ ರಾಣಿ ಮಾಡಬೇಕು ಎನ್ನುವ ಕನಸು ಕನಸಾಗಿಯೆ ಉಳಿಯುವ ಸಾಧ್ಯತೆ ಕೂಡ ಹೆಚ್ಚಿದೆ. ಇನ್ನೂ ಶಾಂತ ತಿಪ್ಪರಲಾಗ ಹೊಡೆದರು ಲಚ್ಚಿ ಅದ್ಯಾವುದನ್ನೂ ಕೇಳದೆ ನನ್ನ ಅಮ್ಮ ಹಾಗೂ ಈ ಮನೆಗೆ ಎನು ಸಂಬಂಧ ಎಂದು ಮನದಲ್ಲಿ ಯೋಚನೆ ಮಾಡುತ್ತಾ ಇದ್ದಾಳೆ.

Kannada serial Namma Lacchi written updated on 5th September

ಮನದಲ್ಲಿ ಬಹಳ ನೋವಿದ್ದರೂ ಲಚ್ಚಿ ಅದ್ಯಾವುದನ್ನೂ ತೋರಿಸಿಕೊಳ್ಳದೆ ತನ್ನ ಅತ್ತೆಯ ವಿರುದ್ಧವೇ ಸಮರ ಸಾರುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ. ಇನ್ನೂ ಶಾಂತ ಲಚ್ಚಿ ಕಾಲು ಹಿಡಿದುಕೊಂಡು ಬೇಡುತ್ತಾಳೆ. ಅತ್ತೆಯ ಮಾತು ಕೇಳು ಲಚ್ಚಿ ಎಂದು ಅಂಗಲಾಚಿ ಬೇಡಿಕೊಂಡು ಇರುತ್ತಾಳೆ. ಇದನ್ನು ನೋಡಿದ ಲಚ್ಚಿ ಏನು ಮಾತನಾಡದೆ ಸುಮ್ಮನಾತ್ತಾಳೆ.

ಶಾಂತಗೆ ಕಂಡೀಷನ್ ಹಾಕಿದ ಲಚ್ಚಿ!

ಲಚ್ಚಿ ಈಗ ಶಾಂತಗೆ ಕಂಡೀಷನ್ ಹಾಕುತ್ತಾಳೆ. ನಾನು ನನ್ನ ಅಮ್ಮನ ಬಗ್ಗೆ ಇಲ್ಲಿ ಕೇಳಬಾರದು ಎಂದು ಆದರೆ ನೀವು ನನಗೆ ಒಂದು ಕೆಲಸ ಮಾಡಿ ಕೊಡಲೇಬೇಕು. ಅದೇನೆಂದರೆ ನೀವು ದೀಪಿಕಾ ಅಮ್ಮ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಬೇಕು ಹಾಗೆಯೇ ಕೇಸನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಹೇಳುತ್ತಾಳೆ.

Kannada serial Namma Lacchi written updated on 5th September

ಶಾಂತ ಹಠಕ್ಕೆ ಜಗ್ಗದ ಲಚ್ಚಿ

ಇದನ್ನು ಕೇಳಿದ ಶಾಂತ ಮೊದಲು ಆಗುವುದೇ ಇಲ್ಲ ಎಂದು ಹಠ ಹಿಡಿದರೆ ಲಚ್ಚಿ ಕೂಡ ಹಾಗೆಯೇ ಹಠ ಹಿಡಿಯುತ್ತಾಳೆ.. ಇನ್ನೂ ಎಲ್ಲಾದರೂ ಲಚ್ಚಿ ಮನೆಯವರ ಮುಂದೆ ಬಾಯಿ ಬಿಟ್ಟರೆ ಬಹಳ ಕಷ್ಟ ಆಗುತ್ತದೆ ಎಂದು ತಿಳಿದ ಶಾಂತ ದೀಪಿಕಾ ವಿರುದ್ದ ಕೊಟ್ಟ ಕೇಸ್ ಅನ್ನು ವಾಪಸ್ ತೆಗೆದುಕೊಳ್ಳುತ್ತಾಳೆ.. ನಂತರ ದೀಪಿಕಾ ಬಿಡುಗಡೆ ಆಗುತ್ತದೆ.

ತನ್ನ ಬಿಡುಗಡೆಗೆ ಕಾರಣ ಲಚ್ಚಿ ಎಂದು ತಿಳಿದ ದೀಪಿಕಾ ಬಹಳ ಖುಷಿ ಪಡುತ್ತಾಳೆ.. ಮನೆಗೆ ಬಂದ ದೀಪಿಕಾ ಲಚ್ಚ ಗೆ ಎಷ್ಟೇ ಅವಮಾನ ಮಾಡಿದರು ಆಕೆಗೆ ಪ್ರೀತಿ ಕೊಡದೆ ಇದ್ದರೂ ಲಚ್ಚಿ ಮಾತ್ರ ತನ್ನ ಒಳಿತಿಗಾಗಿ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿ ಮನತುಂಬಿ ಬಂದಿದೆ.

ಲಚ್ಚಿಯನ್ನು ಬಾಚಿ ತಬ್ಬಿಕೊಂಡು ಕಣ್ಣೀರಿಟ್ಟ ದೀಪಿಕಾ

ಶಾಂತ ಮನವೊಲಿಸಿ ಆ ಜೈಲಿನಿಂದ ಬಿಡುಗಡೆ ಮಾಡಿದ ಲಚ್ಚಿಯತ್ತ ದೀಪಿಕಾಗೆ ಪ್ರೀತಿ ಮೂಡುತ್ತದೆ. ನೀನು ಇನ್ನೂ ಮೇಲೆ ನನ್ನ ಮಗ ಎಂದು ಲಚ್ಚಿಯನ್ನು ಬಾಚಿ ತಬ್ಬಿಕೊಂಡು ಅಳುತ್ತಾಳೆ. ತಾನು ಮಾಡದ ತಪ್ಪಿಗೆ ಎಷ್ಟೆಲ್ಲ ಕಷ್ಟ ಅನುಭವಿಸಬೇಕಿತ್ತು ಎಂದೆಲ್ಲ ಬಹಳ ಬೇಸರ ಮಾಡಿಕೊಂಡಿದ್ದಾಳೆ. ಲಚ್ಚಿ ಇಲ್ಲದೆ ಹೋಗಿದ್ದರೆ ಜೀವನದಲ್ಲಿ ನಾನು ಇನ್ನಷ್ಟು ಕಷ್ಟ ಅನುಭವಿಸಬೇಕಿತ್ತು ಎಂದು ಮರುಗುತ್ತಿದ್ದಾಳೆ. ಸದ್ಯ ಸಂಗಮ್ ಮನೆಯಲ್ಲಿ ಖುಷಿಯ ವಾತಾವರಣ ಮೂಡಿದೆ.

More from Filmibeat

English summary
Kannada serial Namma Lacchi written updated on 5th September.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X