Neenaadhena: ಗಂಡನ ಸ್ವಭಾವದಲ್ಲಿ ಆದ ಬದಲಾವಣೆ ಕಂಡು ಆಶ್ಚರ್ಯಪಟ್ಟ ವೇದಾ

By Poorva

ನೀನಾದೆ ನಾ ಧಾರಾವಾಹಿ ಬಹಳ ಮನೋಜ್ಞವಾಗಿ ಮೂಡಿ ಬರುತ್ತಿದೆ. ಇದೀಗ ವಿಕ್ರಮ್‌ ತನ್ನ ಸ್ವಭಾವದಲ್ಲಿ ಕೊಂಚ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದಾನೆ. ವೇದಾ ಮಾತಿನ ಪ್ರಕಾರ ನಡೆದುಕೊಳ್ಳುತ್ತಿದ್ದಾಳೆ. ವಿಕ್ರಮ್‌ನನ್ನು ಹೇಗಾದರೂ ಮಾಡಿ ಬದಲಾಯಿಸಬೇಕು ಆತನ ಮುಂಗೋಪವನ್ನ ಕಡಿಮೆ ಮಾಡಬೇಕು, ಹಾಗೆಯೇ ಕುಟುಂಬದ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದೆಲ್ಲಾ ವೇದಾ ಮನದಲ್ಲಿ ಯೋಚನೆ ಮಾಡುತ್ತಾಳೆ.

ಆ ಪ್ರಕಾರವಾಗಿ ವಿಕ್ರಮ್‌ನನ್ನ ಬದಲಾಯಿಸುತ್ತಿದ್ದಾಳೆ. ಇದೀಗ ವಿಕ್ರಮ್‌ ತಾಯಿ ವೇದಾ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಮೊದಲೆಲ್ಲ ವೇದಾಳನ್ನು ಕಂಡರೆ ಬಹಳ ಪ್ರೀತಿ. ಆದರೆ ಇದೀಗ ವೇದಾಗೆ ಸವಾಲು ಓಡ್ಡುತ್ತಾ ಇದ್ದಾರೆ. ವೇದಾಳ ಮೇಲೆ ಆಕೆಯ ಅತ್ತೆಗೆ ಬಹಳಷ್ಟು ಪ್ರೀತಿ ಇದೆ. ಆದರೆ ಅದನ್ನ ತೋರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ವೇದ ಅತ್ತೆ ಇದ್ದಾರೆ .

Kannada serial Neenaadhena written update in 2nd December

ಹಾಗೆ ವಿಕ್ರಮ್‌ ಜೊತೆ ಆಣೆ ಪ್ರಮಾಣ ಕೂಡ ಮಾಡಿಸಿಕೊಂಡಿರುತ್ತಾರೆ. ವೇದಾಳನ್ನ ಹೆಂಡತಿ ಎಂದು ಸ್ವೀಕಾರ ಮಾಡಬಾರದು ಎಂದು ತನ್ನ ಮಗನ ಜೊತೆಯೇ ಪ್ರಮಾಣವನ್ನು ಕೂಡ ತೆಗೆದುಕೊಂಡಿರುತ್ತಾರೆ. ಇದೀಗ ವೇದಾ ಅತ್ತೆಯ ಮನಸ್ಸನ್ನು ಹೇಗಾದರೂ ಗೆದ್ದೇ ಗೆಲ್ಲುತ್ತೇನೆ ಎಂದುಕೊಂಡು ವಿಕ್ರಮ್‌ ಮನೆಯಲ್ಲಿ ಇದ್ದಾಳೆ.

ಶೈಲೂ ಮಾತಿಗೆ ಬೆದರಿದ ಮಕ್ಕಳು

ವಿಕ್ರಂ ಮನೆಗೆ ಮೇಷ್ಟ್ರನ್ನು ಕೇಳಿಕೊಂಡು ಇಬ್ಬರು ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಅಂದೇ ಮಧ್ಯಾಹ್ನ ಗಣಿತ ಪರೀಕ್ಷೆ ಇರುತ್ತದೆ ಇನ್ನು ಗಣಿತದಲ್ಲಿ ಕೊಂಚ ಪ್ರಮಾಣದ ಸಂಶಯವಿರುವುದರಿಂದ ಮೇಷ್ಟ್ರ ಬಳಿ ಕೇಳಿ ಪರಿಹಾರ ಮಾಡಿಕೊಂಡು ಪರೀಕ್ಷೆಗೆ ಹೋಗೋಣ ಎಂದು ಇಬ್ಬರು ವಿದ್ಯಾರ್ಥಿಗಳು ಬಂದಿರುತ್ತಾರೆ. ಈ ವಿದ್ಯಾರ್ಥಿಗಳ ಬಳಿ ಶೈಲೂ ಮಾತ್ರ ಬಹಳ ನಿಷ್ಠೂರವಾಗಿ ನಡೆದುಕೊಳ್ಳುತ್ತಾಳೆ .ಇದನ್ನು ನೋಡಿದ ವೇದಾ, ಶೈಲೂ ಅಕ್ಕ ಅವರು ಮಾವನನ್ನ ನೋಡಲು ಬಂದಿದ್ದಾರೆ. ಅವರಿಗೆ ಗಣಿತದಲ್ಲಿ ಏನೋ ಡೌಟ್ ಇದೆ ಅದಕ್ಕೆ ಮಾವನನ್ನು ನೋಡಲು ಬಂದಿದ್ದಾರೆ ಎಂದು ಹೇಳುತ್ತಾಳೆ.

Kannada serial Neenaadhena written update in 2nd December

ಮಕ್ಕಳ ಪರವಾಗಿ ನಿಂತ ವೇದಾ

ಆಗ ಶೈಲೂ, ಮಾವ ಬರುವುದು ಮಧ್ಯಾಹ್ನವಾಗುತ್ತದೆ . ಮಾವ ಮನೆಯಲ್ಲಿ ಕೂಡ ಇಲ್ಲ ಎನ್ನುತ್ತಾಳೆ. ಶೈಲೂ ಮಾತಿಗೆ ಎದುರಾಡಿದ ವೇದಾ ತಾನೆ ಮಕ್ಕಳಿಗೆ ಹೇಳಿಕೊಡುವುದಾಗಿ ಮನೆ ಒಳಗೆ ಕರೆದುಕೊಂಡು ಬಂದು ಗಣಿತ ಪುಸ್ತಕವನ್ನು ತೆರೆದು ನೋಡಿದಾಗ ಆಕೆಗೆ ಅದು ಅರ್ಥವಾಗುವುದಿಲ್ಲ. ಅದನ್ನು ನೋಡಿದ ಶೈಲೂ ಗಣಿತಶಾಸ್ತ್ರದ ಬಗ್ಗೆ ನಿಮಗೆ ಏನು ಗೊತ್ತಿಲ್ಲ ಅಂತ ಅಂದರು ನೀವು ಯಾಕೆ ದೊಡ್ಡ ಜನರ ಹಾಗೆ ನಡೆದುಕೊಳ್ಳುತ್ತಿದಿರಿ ಎಂದು ವೇದಾಗೆ ತಿವಿದು ಮಾತನಾಡುತ್ತಾಳೆ.

ವಿಕ್ರಮ್ ಮಾತಿಗೆ ಬೆರಗಾದ ವೇದಾ

ಅಷ್ಟರಲ್ಲಿ ಅಲ್ಲಿಗೆ ವಿಕ್ರಂ ಬರುತ್ತಾನೆ ಮಕ್ಕಳನ್ನು ನೋಡಿದಾಗ ಏನು ಮಕ್ಕಳೇ ಇಲ್ಲಿಗೆ ಬಂದಿದ್ದೀರಾ ಎಂದು ಕೇಳಿದಾಗ ಗಣಿತಶಾಸ್ತ್ರದಲ್ಲಿ ಸ್ವಲ್ಪ ಸಂಶಯವಿದೆ ಎಂದು ಹೇಳುತ್ತಾರೆ. ಆ ಬಳಿಕ ಆ ಮಕ್ಕಳಿಗೆ ಏನೆಲ್ಲ ಸಂಶಯ ಬಂದಿದೆಯೋ... ಅದೆಲ್ಲವನ್ನು ಬಗೆಹರಿಸುತ್ತಾನೆ. ತನ್ನ ಗಂಡನ ಚಾಕಚಕ್ಯತೆಯನ್ನ ನೋಡಿದ ವೇದಾ ಇಷ್ಟೊಂದು ಉತ್ಸಾಹದಲ್ಲಿದ್ದ ಯುವಕ ರೌಡಿ ಶೀಟರ್ ಆಗಿದ್ದು ಯಾಕೆ ಎಂದು ವೇದಾ ಯೋಚನೆ ಮಾಡುತ್ತಿರುತ್ತಾಳೆ.

More from Filmibeat

English summary
Neenaadhena serial 2nd December update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X